ಬಾಲಿವುಡ್​ಗೆ ಎಂಟ್ರಿ ಕೊಟ್ಟ ಪೃಥ್ವಿ ಅಂಬರ್​: ಹಿಂದಿ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾದ ದಿಯಾ ಖ್ಯಾತಿಯ ನಟ..!

ನೆಟ್ರಿಕ್ಸ್​ ಎಂಟರ್​ಟೈನ್​ಮೆಂಟ್​ ಪ್ರೈ. ಲಿ. ನಿರ್ಮಾಣದಲ್ಲಿ ಕನ್ನಡದ ದಿಯಾ ಚಿತ್ರದ ಹಿಂದಿ ರಿಮೇಕ್​ ಸಿದ್ಧಗೊಳ್ಳುತ್ತಿದೆ. ಈ ಚಿತ್ರದಲ್ಲಿ ನಾಯಕನಾಗಿ ಅಂದರೆ ಅದೇ ಆದಿ ಪಾತ್ರದಲ್ಲಿ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ.

 ಪೃಥ್ವಿ ಅಂಬರ್

ಪೃಥ್ವಿ ಅಂಬರ್

  • Share this:
ಕನ್ನಡ ದಿಯಾ ಸೇರಿದಂತೆ ತುಳು ಚಿತ್ರಗಳಲ್ಲಿ ನಟಿಸಿರುವ ದೇಸಿ ಪ್ರತಿಭೆ ಪೃಥ್ವಿ ಅಂಬರ್​. ಲಾಕ್​ಡೌನ್​ಗೂ ಮುನ್ನ ತೆರೆಕಂಡು ಯಶಸ್ವಿ ಪ್ರದರ್ಸನ ಕಂಡ ಸಿನಿಮಾದ ನಾಯಕ ಪೃಥ್ವಿ ಅಂಬರ್​. ಈ ಚಿತ್ರದಲ್ಲಿನ ಅಭಿನಯದಿಂದಾಗಿ ಕನ್ನಡ ಸಿನಿಪ್ರೇಕ್ಷಕರ ಮನಸ್ಸಿನಲ್ಲಿ ತಮ್ಮದೇ ಆದ ಸ್ಥಾನ ಸಂಪಾದಿಸಿಕೊಂಡಿರುವ ಪೃಥ್ವಿ ಅಂಬರ್​ ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಪೃಥ್ವಿ ಈಗ ಬಾಲಿವುಡ್​ಗೂ ಕಾಲಿಟ್ಟಿದ್ದಾರೆ. ಹೌದು, ಈಗಾಗಲೇ ಪೃಥ್ವಿ ಅಭಿನಯಿಸುತ್ತಿರುವ ಹಿಂದಿ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಅಷ್ಟಕ್ಕೂ ಕನ್ನಡದ ಈ ಪ್ರತಿಭೆಗೆ ಯಾವ ಹಿಂದಿ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಅಂತ ಯೋಚಿಸುತ್ತಿದ್ದೀರಾ..? ಅದಕ್ಕೂ ಉತ್ತರ ಇಲ್ಲಿದೆ. ದಿಯಾ ಸಿನಿಮಾ ಹಿಂದಿಗೆ ರಿಮೇಕ್​ ಆಗುತ್ತಿರುವ ವಿಷಯ ಗೊತ್ತೇ ಇದೆ. ಮುಂಬೈನ ಮೂಲದ  ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಕನ್ನಡದ ದಿಯಾ ಸಿನಿಮಾವನ್ನು ಹಿಂದಿಗೆ ರಿಮೇಕ್​ ಮಾಡುತ್ತಿದೆ. 

ನೆಟ್ರಿಕ್ಸ್​ ಎಂಟರ್​ಟೈನ್​ಮೆಂಟ್​ ಪ್ರೈ. ಲಿ. ನಿರ್ಮಾಣದಲ್ಲಿ ಕನ್ನಡದ ದಿಯಾ ಚಿತ್ರದ ಹಿಂದಿ ರಿಮೇಕ್​ ಸಿದ್ಧಗೊಳ್ಳುತ್ತಿದೆ. ಈ ಚಿತ್ರದಲ್ಲಿ ನಾಯಕನಾಗಿ ಅಂದರೆ ಅದೇ ಆದಿ ಪಾತ್ರದಲ್ಲಿ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ. ಈ ಸಿನಿಮಾದ ಕುರಿತಾಗಿ ನ್ಯೂಸ್​ 18 ಕನ್ನಡದ ಜೊತೆ ಮಾತನಾಡಿರುವ ನಟ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಈಗಾಗಲೇ ಈ ಚಿತ್ರದ ಚಿತ್ರೀಕರಣ ಲಕ್ನೋದಲ್ಲಿ ಆರಂಭವಾಗಿದೆ. ಕಳೆದ ಕೆಲವು ದಿನಗಳಿಂದ ಪೃಥ್ವಿ ಲಕ್ನೋದಲ್ಲೇ ಇದ್ದಾರೆ. ಪವಿತ್ರಾ ಲೋಕೇಶ್​ ನಿರ್ವಹಿಸಿದ್ದ ಆದಿ ತಾಯಿಯ ಪಾತ್ರವನ್ನು ಹಿಂದಿಯಲ್ಲಿ ಮೃನಾಲ್​ ಕುಲಕರ್ಣಿ ಮಾಡುತ್ತಿದ್ದಾರೆ. ನಾಯಕಿಯಾಗಿಅಂದರೆ ದಿಯಾ ಪಾತ್ರದಲ್ಲಿ ಹೊಸ ಪ್ರತಿಭೆ ಮಾಧುರಿ ಎಂಬುವರು ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದಂದು ಅಪ್ಪ-ಅಮ್ಮನ ಪಾದಗಳ ಫೋಟೋ ಹಂಚಿಕೊಂಡ ದುನಿಯಾ ವಿಜಯ್​..!

ಇನ್ನು ದಿಯಾ ಪಾತ್ರದ ಮೊದಲ ಪ್ರೇಮಿಯ ಪಾತ್ರದಲ್ಲಿ ಹಿಂದಿ ಕಿರುತೆರೆಯ ಕಲಾವಿದ ಉಜ್ವಲ್ ನಟಿಸುತ್ತಿದ್ದಾರೆ. ಇನ್ನು ಪೃಥ್ವಿ ಅವರ ಕೈಯಲ್ಲಿ ಶಿವಣ್ಣ, ಧನಂಜಯ್​ ಅಭಿನಯದ ಶಿವಪ್ಪ ಚಿತ್ರ, ಶುಗರ್​ಲೆಸ್​, ಲೈಫ್​ ಇಸ್​ ಬ್ಯೂಟಿಫುಲ್​ ಚಿತ್ರಗಳಿವೆ.
ಶಿವಪ್ಪ ಸಿನಿಮಾದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನು ಸ್ವಲ್ಪ ಭಾಗದ ಶೂಟಿಂಗ್​ ಬಾಕಿ ಇದೆ. ಲೈಫ್​ ಇಸ್​ ಬ್ಯೂಟಿಫುಲ್​, ಶುಗರ್​ಲೆಸ್​ ಸಿನಿಮಾಗಳ ಚಿತ್ರೀಕರಣ ಸಂಪೂರ್ಣವಾಗಿ ಮಗಿದಿದ್ದು, ಇದರ ರಿಲೀಸ್ ದಿನಾಂಕ ಸದ್ಯದಲ್ಲೇ ಪ್ರಕಟವಾಗಲಿದೆ. ಇವುಗಳನ್ನು ಹೊರತುಪಡಿಸಿ, ಫಾರ್ ರಿಜಿಸ್ಟ್ರೇಷನ್​ ಅನ್ನೋ ಹೊಸ ಸಿನಿಮಾದ ಮೊದಲ ಹಂತದ ಶೂಟಿಂಗ್​ ಸಹ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ ನಟ ಪೃಥ್ವಿ.
Published by:Anitha E
First published: