Pruthvi Ambaar: 'ದೂರದರ್ಶನ'ದಲ್ಲಿ ಹಳ್ಳಿ ಹೈದನಾದ ಪೃಥ್ವಿ ಅಂಬರ್, ಹೇಗಿದೆ ನೋಡಿ ಸಿಂಪಲ್ ಹುಡುಗನ ಲುಕ್

1980 ನೇ ಇಸವಿಯ ಕಾಲಘಟ್ಟದಲ್ಲಿ ನಡೆಯುವ ಕಥೆಯೊಂದನ್ನು ಆಧರಿಸಿದ ಸಿನಿಮಾ ಇದು. ಈ ಸಿನಿಮಾವನ್ನು ಸುಖೇಶ್ ಶೆಟ್ಟಿ ಅವರು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ, ಪೃಥ್ವಿ ಅಂಬರ್ ಅವರು ಹಳ್ಳಿಯ ಸಾಧಾರಣ ಹುಡುಗನೊಬ್ಬನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ದೂರದರ್ಶನ ಸಿನೆಮಾದಲ್ಲಿ ಹಳ್ಳಿ ಹೈದನಾಗಿ ಪೃಥ್ವಿ ಅಂಬರ್

ದೂರದರ್ಶನ ಸಿನೆಮಾದಲ್ಲಿ ಹಳ್ಳಿ ಹೈದನಾಗಿ ಪೃಥ್ವಿ ಅಂಬರ್

  • Share this:
ತುಳು ಸಿನಿಮಾ ರಂಗದ (Tulu cinema) ಜನಪ್ರಿಯ ನಟ (Actor), ಕರಾವಳಿ ಹುಡುಗ ಪೃಥ್ವಿ ಅಂಬರ್ (Pruthvi Ambaar), ದಿಯಾ ಸಿನಿಮಾದ (Dia Cinema) ಯಶಸ್ಸಿನ ನಂತರ ಎಲ್ಲೂ ಕಾಣಿಸುತ್ತಿಲ್ಲವಲ್ಲ? ಕನ್ನಡ ಸಿನಿಮಾಗಳಲ್ಲಿ (Kannada Cinema) ಅವಕಾಶ ಸಿಗಲಿಲ್ಲವೇ? ಎಂದು ಆಲೋಚಿಸುತ್ತಿರುವ ಮಂದಿಯಲ್ಲಿ ನೀವೂ ಕೂಡ ಒಬ್ಬರಾಗಿದ್ದರೆ, ನಿಮ್ಮ ಆ ಆಲೋಚನೆ ಖಂಡಿತಾ ತಪ್ಪು. ದಿಯಾ ಸಿನಿಮಾದಲ್ಲಿನ ಅವರ ನಟನೆ ಜನರಿಗೆ ಎಷ್ಟು ಇಷ್ಟವಾಗಿತ್ತೆಂದರೆ, ಆ ಸಿನಿಮಾದ ಬಳಿಕ ಪೃಥ್ವಿ ಅವರನ್ನು ಬಹಳಷ್ಟು ಸಿನಿಮಾದ ಅವಕಾಶಗಳು ಹುಡುಕಿಕೊಂಡು ಬಂದಿವೆ. ಪೃಥ್ವಿ ಅವುಗಳಲ್ಲಿ ತಮಗೆ ಇಷ್ಟವಾಗುವ ಮತ್ತು ತಮಗೆ ಹೊಂದುವಂತಹ ಸಿನಿಮಾ ಪ್ರಾಜೆಕ್ಟ್ ಗಳಿಗೆ (Project) ಸಹಿ ಹಾಕಿದ್ದಾರೆ ಕೂಡ. ಆ ಸಿನಿಮಾಗಳಲ್ಲಿ ದೂರದರ್ಶನ ಕೂಡ ಒಂದು.

1980 ನೇ ಇಸವಿಯ ಕಥೆಯೊಂದನ್ನು ಆಧರಿಸಿದ ಸಿನಿಮಾ
1980 ನೇ ಇಸವಿಯ ಕಾಲಘಟ್ಟದಲ್ಲಿ ನಡೆಯುವ ಕಥೆಯೊಂದನ್ನು ಆಧರಿಸಿದ ಸಿನಿಮಾ ಇದು. ಈ ಸಿನಿಮಾವನ್ನು ಸುಖೇಶ್ ಶೆಟ್ಟಿ ಅವರು ನಿರ್ದೇಶಿಸುತ್ತಿದ್ದಾರೆ. ಸುಖೇಶ್ ಅವರಿಗಿದು ಚೊಚ್ಚಲ ನಿರ್ದೇಶನದ ಸಿನಿಮಾ. ಈ ಮೊದಲು ಸುಖೇಶ್ ಶೆಟ್ಟಿ ಅವರು, ಟ್ರಂಕ್ ಸಿನಿಮಾಗೆ ಸಂಭಾಷಣೆ ಬರಹಗಾರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ, ಪೃಥ್ವಿ ಅಂಬರ್ ಅವರು ಹಳ್ಳಿಯ ಸಾಧಾರಣ ಹುಡುಗನೊಬ್ಬನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ಬೇರೆ ಸಿನಿಮಾದಲ್ಲಿ ಆಫರ್ ಗಳು ಇದ್ರೂ ಇದೇ ಸಿನೆಮಾದ ಆಯ್ಕೆ
“ನನಗೆ ಸಾಕಷ್ಟು ಕಮರ್ಶಿಯಲ್ ಸಿನಿಮಾ ಆಫರ್ ಗಳು ಬರುತ್ತಿವೆ ಮತ್ತು ಅವುಗಳನ್ನು ಗಮನಿಸುತ್ತಾ ಅನಂದಿಸುತ್ತಿರುವಾಗ, ದೂರದರ್ಶನದ ಕಡೆ ಆಕರ್ಷಿತನಾದೆ, ಅದಕ್ಕೆ ಕಾರಣ ಆ ಸಿನಿಮಾದ ಭಾವಪೂರ್ಣ ಚಿತ್ರ ಕಥೆ. ಪಶ್ಚಿಮ ಘಟ್ಟದ ಸಣ್ಣ ಹಳ್ಳಿಯೊಂದರಲ್ಲಿನ ಜೀವನ, ದೂರದರ್ಶನದ ಪ್ರವೇಶದ ಬಳಿಕ ಹೇಗೆ ಬದಲಾಗುತ್ತದೆ ಎಂಬುವುದು ಈ ಸಿನಿಮಾದ ಕಥೆ” ಎಂದು ತಮ್ಮ ಮುಂದಿನ ಸಿನಿಮಾದ ಕುರಿತು ಮಾಹಿತಿ ನೀಡಿದ್ದಾರೆ ಪೃಥ್ವಿ ಅಂಬರ್.

ಇದನ್ನೂ ಓದಿ: Vaishnavi Gowda: ರಾ ರಾ ರಕ್ಕಮ್ಮ ಎಂದು ಹೆಜ್ಜೆ ಹಾಕಿದ ವೈಷ್ಣವಿ ಗೌಡ - ಕಾಮೆಂಟ್​ಗಳ ಮಳೆ ಸುರಿಸಿದ ಅಭಿಮಾನಿಗಳು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿತ್ರೀಕರಿಸಿದ ಚಿತ್ರ
ಈ ಸಿನಿಮಾವನ್ನು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಂಬ ಸಣ್ಣ ಪಟ್ಟಣದಲ್ಲಿ ಚಿತ್ರೀಕರಿಸಲಾಗಿದೆ. ಪುತ್ತೂರು ತನ್ನ ಅಡಿಕೆ ತೋಟಗಳಿಗೆ ಹೆಸರುವಾಸಿಯಾಗಿದೆ. “ಕರ್ನಾಟಕದಲ್ಲಿನ ಹೆಚ್ಚಿನ ಸ್ಥಳಗಳು ಈಗಾಗಲೇ ಆಧುನೀಕರಣಗೊಂಡಿವೆ ಮತ್ತು ಕೆಲವು ಸ್ಥಳಗಳು ಇನ್ನೂ ಕೂಡ ಹಳೆಕಾಲದ ವೈಬ್ ಅನ್ನು ಹೊಂದಿವೆ. ಪುತ್ತೂರು ಅದನ್ನು ಉಳಿಸಿಕೊಂಡಿದೆ.

ಸಿನೆಮಾದ ಬಗ್ಗೆ ನಟ ಹೇಳಿದ್ದು ಹೀಗೆ
ನಗರಗಳಲ್ಲಿ ಕಾಣ ಸಿಗುವಂತಹ ಮೊಬೈಲ್ ಟವರ್‍ಗಳು ಮತ್ತು ವಾಯರುಗಳ ಕ್ರಿಸ್‍ಕ್ರಾಸಿಂಗ್‍ನಂತಹ ಆಧುನಿಕ ಅಂಶಗಳ ಸ್ಪರ್ಶವೇ ಇಲ್ಲದ ಸ್ಥಳಗಳು ಮತ್ತು ಅನೇಕ ಸೆಪಿಯಾ- ಟೋನ್ ಮನೆಗಳನ್ನು ನೀವು ಅಲ್ಲಿ ಕಾಣಬಹುದು. ಇಂದಿಗೂ ಸ್ಥಳೀಯರಿಂದ ಪ್ರೋತ್ಸಾಹ ಪಡೆಯುತ್ತಿರುವ ಸಣ್ಣ ಹೊಟೇಲ್‍ಗಳು ಮತ್ತು ಸಣ್ಣಪುಟ್ಟ ಅಂಗಡಿಗಳು ಅಲ್ಲಿ ಇವೆ. ನಮಗೆ ಅಂತಹ ವಾತಾವರಣ ಬೇಕಿತ್ತು. ನಾನು 40 ದಿನಗಳ ಒಳಗೆ ಈ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದೇವೆ” ಎಂದು ಪ್ರಥ್ವಿ ಹೇಳಿದ್ದಾರೆ.

ಇದನ್ನೂ ಓದಿ: Rocking Star Yash: ರಾಕಿ ಭಾಯ್ ಅಬ್ಬರಕ್ಕೆ ಬಾಲಿವುಡ್ ಶೇಕ್, ಧಾಕಡ್ ನಂತರ ಮತ್ತೊಂದು ಸಿನೆಮಾ ಫ್ಲಾಪ್

“ಆಗಿನ ಕಾಲದಲ್ಲಿ ರೂಢಿಯಲ್ಲಿ ಇದ್ದಂತೆ, ಸರಳ ಬಟ್ಟೆಗಳನ್ನು ಧರಿಸಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಖುಷಿ ಕೊಟ್ಟಿತು. ಈ ಕಥೆಯ ನೈಜ ಮತ್ತು ಪರಿಕಲ್ಪಿತ ಘಟನೆಗಳೆರಡರ ಮಿಶ್ರಣವಾಗಿದೆ. ಇಡೀ ಸಿನಿಮಾದ ಚಿತ್ರೀಕರಣ ಒಂದು ತೃಪ್ತಿಕರ ಅನುಭವ ನೀಡಿತು, ಏಕೆಂದರೆ ನಾವು 80 ರ ದಶಕವನ್ನು ಅಧಿಕೃತವಾಗಿ ಬಿಂಬಿಸುವ ಒಂದು ಜಗತ್ತನ್ನು ಸೃಷ್ಟಿಸಿದ್ದೆವು. ನಮಗೆ ಆ ಕಾಲಕ್ಕೆ ಹಿಂದೆ ಹೊದಂತಹ ಅನುಭವ ಆಯಿತು ಮತ್ತು ಅದರ ಪ್ರತಿಯೊಂದು ಕ್ಷಣವನ್ನು ಇಷ್ಟಪಟ್ಟೆ” ಎಂದು ದೂರದರ್ಶನ ಸಿನಿಮಾದ ಚಿತ್ರೀಕರಣದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ ಪೃಥ್ವಿ ಅಂಬರ್.

ದೂರದರ್ಶನ ಸಿನಿಮಾದಲ್ಲಿ ಉಗ್ರಂ ಮಂಜು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಸಿನಿಮಾ ರಂಗದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ವಾಸುಕಿ ವೈಭವ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
Published by:Ashwini Prabhu
First published: