ಎರಡು ದಶಕಗಳ ನಂತರ ಕನ್ನಡ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಬಿಟೌನ್‍ಗೆ: ಶಕೀಲಾ ಪಾತ್ರದಲ್ಲಿ ಬಿಟೌನ್ ಬ್ಯೂಟಿ ರಿಚಾ ಛಡ್ಡಾ..!

news18
Updated:August 28, 2018, 7:47 PM IST
ಎರಡು ದಶಕಗಳ ನಂತರ ಕನ್ನಡ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಬಿಟೌನ್‍ಗೆ: ಶಕೀಲಾ ಪಾತ್ರದಲ್ಲಿ ಬಿಟೌನ್ ಬ್ಯೂಟಿ ರಿಚಾ ಛಡ್ಡಾ..!
  • News18
  • Last Updated: August 28, 2018, 7:47 PM IST
  • Share this:
ಓಂ ಸಕಲೇಶಪುರ, ನ್ಯೂಸ್ 18 ಕನ್ನಡ

ಶಕೀಲಾ ಅಂದ್ರೇನೇ ಸೌಂದರ್ಯ... ಸೌಂದರ್ಯ ಅಂದ್ರೇನೇ ಶಕೀಲಾ ಅದೆಂಥ ಮಾದಕ ಸೌಂದರ್ಯ ಅನ್ನೋದನ್ನ ಮತ್ತೊಮ್ಮೆ ವಿವರಿಸಿ ಹೇಳಬೇಕಿಲ್ಲ. ಮಾದಕತೆಯ ಮರೆಯಲಾಗದ ಬ್ರ್ಯಾಂಡ್ ಅದು. ಕನ್ನಡದಲ್ಲೂ ಕಿಕ್ ಕೊಟ್ಟ ಈ ಮದನಾರಿಯ ಬದುಕು ಮಾತ್ರ ಹೇಳಿಕೊಳ್ಳಲಾಗದ ದುರಂತಗಳ ಸರಮಾಲೆ. ಅಂತಹ ಬದುಕನ್ನು ತೆರೆಯ ಮೇಲೆ ತರುತ್ತಿರೋದು ನಿರ್ದೇಶಕ ಇಂದ್ರಜಿತ್ ಲಂಕೇಶ್. ಇವತ್ತು ಈ ಚಿತ್ರದ ಆಸಕ್ತಿಕರ ವಿಷಯಗಳ ಕುರಿತು ಮಾತುಕತೆ ನಡೆದಿತ್ತು.

ಶಕೀಲಾ ಅನ್ನೋ ಹೆಸರು ಕೇಳಿದರೆ ಸಾಕು ಯಾರೇ ಆದರೂ ಒಂದು ಬಾರಿ ಹುಬ್ಬೇರಿಸದೇ ಇರಲ್ಲ. ಅಂತಹ ಶಕೀಲಾ ಬದುಕಿನ ಪುಟಗಳನ್ನು ತೆರೆಯ ಮೇಲೆ ಮೂಡಿಸುತ್ತಿದ್ದಾರೆ ಇಂದ್ರಿತ್ ಲಂಕೇಶ್.ಇಲ್ಲಿ ಶಕೀಲಾ ಪಾತ್ರ ಮಾಡುತ್ತಿರೋ ರಿಚಾ ಛಡ್ಡಾ ಮತ್ತು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳುತ್ತಿರೋ ಏಸ್ತರ್ ನರೋನ್ಹ ಮತ್ತು ರಾಷ್ಟ್ರ ಪ್ರಶಸ್ತಿ ಗೆದ್ದಿರೋ ನಟ ಪಂಕಜ್ ತ್ರಿಪಾಠಿ ಇಲ್ಲಿ ಮುಖ್ಯಪಾತ್ರದಲ್ಲಿದ್ದಾರೆ.

ಇಷ್ಟಕ್ಕೂ ಈ ಸಿನಿಮಾಗೆ ದೊಡ್ಡ ತಯಾರಿಯೇ ನಡೆದಿದೆ. ಮೊದಲಿಗೆ ಶಕೀಲಾ ಮನೆಗೆ ಹೋಗಿ ಕೆಲವು ದಿನಗಳ ಕಾಲ ಅಲ್ಲಿ ಶಕೀಲಾ ಜೊತೆ ಬೆರೆತು ಮಾತನಾಡಿದ್ದಾರೆ. ಅವರ ಕಷ್ಟಗಳನ್ನು ಬದುಕಿನ ವಿವಿಧ ಮಜಲುಗಳನ್ನು ಅವರ ಬಾಯಿಂದಲೇ ಕೇಳಿಕೊಂಡು ಪಾತ್ರಕ್ಕೆ ಹೊಂದಿಕೊಂಡಿದ್ದಾರಂತೆ.

ಅಂದಹಾಗೆ 'ಶಕೀಲಾ' ಅನ್ನೋ ಈ ಚಿತ್ರ ಬಾಲಿವುಡ್ ಸಿನಿಮಾ, ಕನ್ನಡ ನಿರ್ದೇಶಕನೊಬ್ಬ ಎರಡು ದಶಕಗಳ ನಂತರ ಬಾಲಿವುಡ್ ಸಿನಿಮಾ ನಿರ್ದೇಶನ ಮಾಡುತ್ತಿರೋದು ದೊಡ್ಡ ನಿರೀಕ್ಷೆಯ ಭಾರವೂ ಇಂದ್ರಜಿತ್ ಮೇಲಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಇಂದ್ರಜಿತ್ 'ಶಕೀಲಾ' ಚಿತ್ರದ ಬಗ್ಗೆ ಸಂಪೂರ್ಣ ಗಮನ ಕೊಟ್ಟಿದ್ದಾರಂತೆ. ಇಲ್ಲಿ ಶಕೀಲಾ ಇಲ್ಲಿಯ ವರೆಗೂ ಹೇಳಿಕೊಂಡಿರದ ಹಲವು ನೋವಿನ ಕಥೆಗಳಿವೆಯಂತೆ, ಅವರ ಜೀವನದ ಅಂತಹದ್ದೊಂದು ಘಟನೆಯನ್ನು ಇಂದ್ರಜಿತ್ ಹಂಚಿಕೊಂಡರು.

ಮುಳುಗಡೆಯಾಗಿರುವ ನೆರೆಯ ರಾಜ್ಯ ಕೇರಳದ ನಟ ರಾಜೀವ್ 'ಶಕೀಲಾ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ಕೇರಳದ ಪ್ರವಾಹವನ್ನು ಕಂಡು ಆಗಸ್ಟ್ 17ರಂದು ನಿರ್ಧರಿಸಿದ್ದ ತಮ್ಮ ಮದುವೆಯನ್ನೇ ಮುಂದಕ್ಕೆ ಹಾಕಿದ ಈ ನಟನ ಬಗ್ಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ನಂತರ ನಟ ರಾಜೀವ್ ಕೇರಳದಲ್ಲಿ ಪರಿಹಾರ ಕಾರ್ಯದಲ್ಲೂ ತೊಡಗಿಕೊಂಡಿದ್ದರು. ಕೇರಳದ ಪರಿಸ್ಥಿತಿ ಮತ್ತು ಅನುಭವನಗಳ ಬಗ್ಗೆ ಅವರು ಮಾತನಾಡಿದರು.

ಇಂದ್ರಜಿತ್ ಲಂಕೇಶ್ ಬಾಲಿವುಡ್ ಚಿತ್ರವನ್ನೇ ಮಾಡುತ್ತಿದ್ದರೂ ಕನ್ನಡದ ನಟನಟಿಯರನ್ನ ಮತ್ತು ಕಲಾವಿದರಿಗೆ ಅವಕಾಶ ನೀಡಿದ್ದಾರೆ. ಕನ್ನಡದ ಖ್ಯಾತ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಕೈಚಳಕ ತೋರಿಸಿದರೆ, ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ 'ಶಕೀಲಾ' ಸಿನಿಮಾದ ಕೌಟುಂಬಿಕ ಭಾಗದ ಸಂಪೂರ್ಣ ಚಿತ್ರೀಕರಣವನ್ನು ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಚಿತ್ರವನ್ನು ಎರಡರಿಂದ ಮೂರು ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದ್ದಾರೆ ನಿರ್ದೇಶಕರು. 
First published: August 28, 2018, 7:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading