ರಾಕಿಂಗ್ ಸ್ಟಾರ್ ಯಶ್ (Rocking Star Yash) ಹಾಗೂ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಅವರನ್ನು ಕನ್ನಡ ಸಿನಿಮಾರಂಗ ಮರೆಯೋಕೆ ಸಾಧ್ಯವಿಲ್ಲ. ಇಬ್ಬರು ಸೇರಿ ಕೆಜಿಎಫ್ (KGF) ಮೂಲಕ ಮಾಡಿದ ಮ್ಯಾಜಿಕ್ ಅಂತಿಂತದ್ದಲ್ಲ. ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಬಾಲಿವುಡ್ (Bollywood) ಅಂಗಳದಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುವ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದವರು. ಬೇರೆ ಕನ್ನಡ ಸಿನಿಮಾ ಬಾಲಿವುಡ್ ಮಟ್ಟದಲ್ಲಿ ಸದ್ದು ಮಾಡಿದ್ದು ತೀರಾ ಕಡಿಮೆ, ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದ ಸಿನಿಮಾ ಅಂದ್ರೆ ಕೆಜಿಎಫ್, ಕೆಜಿಎಫ್ ಪಾರ್ಟ್ 2 (KGF Part 2) ಸಹ ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲೂ ಕಮಾಲ್ ಮಾಡಿತ್ತು. ಇದೀಗ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಂದೂರು (Vijay Kiragandur) ಕೆಜಿಎಫ್ ಪಾರ್ಟ್ 3 ಅಷ್ಟೇ ಅಲ್ಲ ಕೆಜಿಎಫ್ ಪಾರ್ಟ್ 5 ಕೂಡ ಬರುತ್ತೆ ಎಂದು ಹೇಳಿದ್ದಾರೆ.
2025ಕ್ಕೆ ಸೆಟ್ಟೇರಲಿದೆ ಕೆಜಿಎಫ್ ಪಾರ್ಟ್ -3
‘ಕೆಜಿಎಫ್ 2’ ಕ್ಲೈಮ್ಯಾಕ್ಸ್ನಲ್ಲಿ ರಾಕಿ (ಯಶ್) ಸಮುದ್ರದಲ್ಲಿ ಮುಳುಗುತ್ತಾನೆ. ಎಲ್ಲರು ಮೃತಪಟ್ಟಿದ್ದಾನೆ ಎಂದು ಊಹಿಸಿದ್ದರು. ಕ್ಲೈಮಾಕ್ಸ್ನಲ್ಲೇ ಪ್ರಶಾಂತ್ ನೀಲ್ ಕೆಜಿಎಫ್ 3 ಸುಳಿವು ಕೊಟ್ಟಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ವಿಜಯ್ ಕಿರಂಗದೂರ್ ಆತ ಭಾರತದಲ್ಲಿ ಮಾಡಿದ ಕೃತ್ಯಗಳ ಲೆಕ್ಕವಷ್ಟೇ ಸರ್ಕಾರಕ್ಕೆ ಸಿಕ್ಕಿರುತ್ತದೆ. ವಿದೇಶದಲ್ಲೂ ಆತ ಒಂದಷ್ಟು ಕೃತ್ಯಗಳನ್ನು ಮಾಡಿದ್ದ. ‘ಕೆಜಿಎಫ್ 3’ ಚಿತ್ರದಲ್ಲಿ ಈ ವಿಚಾರ ಹೈಲೈಟ್ ಆಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾ ಸೆಟ್ಟೇರೋದು 2025ರಲ್ಲಿ. ರಿಲೀಸ್ ಆಗೋದು 2026ರಲ್ಲಿ ಎಂದು ವಿಜಯ್ ಅವರು ಕೋಯಿಮೋಯಿ ಸೈಟ್ಗೆ ಮಾಹಿತಿ ನೀಡಿದ್ದಾರೆ.
ಕೆಜಿಎಫ್ ಪಾರ್ಟ್ 5 ಕೂಡ ಬರುತ್ತೆ
‘ಕೆಜಿಎಫ್ 3 ಸಿನಿಮಾದ ಪ್ರೀ ಪ್ರೊಡೆಕ್ಷನ್ ಕೆಲಸ ಆರಂಭವಾಗಿಲ್ಲ. ಆದ್ರೆ ಕೆಜಿಎಫ್ ಪಾರ್ಟ್ 3 ಪಕ್ಕಾ ಎಂದು ವಿಜಯ್ ಕಿರಂಗದೂರ್ ಹೇಳಿದ್ದಾರೆ. ಇನ್ನು ಕೆಜಿಎಫ್ ಪಾರ್ಟ್ 3 ಬಳಿಕ ಕೆಜಿಎಫ್ ಸೀರಿಸ್ನಲ್ಲಿ ಐದು ಪಾರ್ಟ್ಗಳು ಬರಬಹುದು ಎಂದು ನಿರ್ಮಾಪಕರು ಹೇಳಿದ್ದಾರೆ. ಕೆಜಿಎಫ್ ಸೀರಿಸ್ ಹೀಗೆ ಮುಂದಿವರಿಯುತ್ತಾ? ಹಾಗಾದ್ರೆ ಕೆಜಿಎಫ್ ಪಾರ್ಟ್ 5 ಬರೋದಕ್ಕೆ ಎಷ್ಟು ವರ್ಷಬೇಕು ಎಂದು ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ.
ಕೆಜಿಎಫ್ ಸೀರಿಸ್ನಲ್ಲಿ ಬದಲಾಗ್ತಾರಂತೆ ಹೀರೋ
ಕೆಜಿಎಫ್ 1, ಕೆಜಿಎಫ್ 2 ನಲ್ಲಿ ರಾಕಿ ಭಾಯ್ ಆಗಿ ಮಿಂಚಿದ್ದ ಯಶ್ ಕೆಜಿಎಫ್ 3ನಲ್ಲೂ ಅವರೇ ಇರ್ತಾರೆ ಎನ್ನಲಾಗ್ತಿದೆ. ಆದ್ರೆ ಮುಂದಿನ ಕೆಜಿಎಫ್ ಸರಣಿಯಲ್ಲಿ ಯಶ್ ನಾಯಕರಾಗಿರೋದಿಲ್ಲ. ಯಶ್ ಬದಲು ನಾಯಕನ ಪಾತ್ರವನ್ನು ಬೇರೆಯವರು ನಿರ್ವಹಿಸಲಿದ್ದಾರೆ ಎಂದು ನಿರ್ಮಾಪಕ ವಿಜಯ್ ಕಿರಂದೂರು ಹೇಳಿದ್ದಾರೆ.
ನಾಯಕನ ಬದಲಾವಣೆ ಫಿಕ್ಸ್
ಜೇಮ್ಸ್ ಬಾಂಡ್ ಸಿನಿಮಾಗಳ ರೀತಿ ಬಾಂಡ್ ಪಾತ್ರವನ್ನು ಬೇರೆಯವರು ಮಾಡಿದ ಹಾಗೇ ‘ಕೆಜಿಎಫ್’ ಸೀರಿಸ್ನ ರಾಕಿಭಾಯ್ ಪಾತ್ರವನ್ನು ಬೇರೆಯವರು ಮಾಡಬಹುದು. ಹೀರೋಗಳು ಬದಲಾಗುತ್ತಿರುತ್ತಾರೆ ಎಂದು ನಿರ್ಮಾಪಕ ವಿಜಯ್ ಕಿರಂದೂರು ಹೇಳಿದ್ದು, ಪ್ರೇಕ್ಷಕರಲ್ಲಿ ಕೆಜಿಎಫ್ ಸೀರಿಸ್ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್!
ಏಪ್ರಿಲ್ 14ರಂದು 2022ರಲ್ಲಿ ತೆರೆಕಂಡ ಕೆಜಿಎಫ್ 2 ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿದ್ದು, ಅನೇಕ ಸಿನಿಮಾಗಳ ದಾಖಲೆಯನ್ನು ಉಡೀಸ್ ಮಾಡಿದೆ. 1400 ಕೋಟಿ ಕಲೆಕ್ಷನ್ ಮಾಡಿ ಕೆಜಿಎಫ್ ಸಿನಿಮಾ ಇತಿಹಾಸ ನಿರ್ಮಿಸಿದೆ. ಕೆಜಿಎಫ್ ಸಿನಿಮಾ ಮೂಲಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ