ಸ್ಯಾಂಡಲ್​ವುಡ್​ಗೆ ಸವಿಯಲು ಸಿಗಲಿದೆ ಹೊಸ ರುಚಿ: Raghavendra Stores ಸಿನಿಮಾ ಬಗ್ಗೆ ವಿಜಯ್ ಕಿರಗಂದೂರು ಹೇಳಿದ್ದು ಹೀಗೆ..!

ರಾಘವೇಂದ್ರ ಸ್ಟೋರ್ಸ್​ ಸಿನಿಮಾದ ಪೋಸ್ಟರ್ ಗಮನಿಸಿದರೆ ಇದೊಂದು ಹೋಟೆಲ್ ಕುರಿತಾದ ಕಥೆ ಅನ್ನೋದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಜಗ್ಗೇಶ್ ಅವರು ಬಾಣಸಿಗನಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾದ ಚಿತ್ರೀಕರಣ ನವೆಂಬರ್ 22ರಿಂದ ಆರಂಭವಾಗಲಿದೆ.

ರಾಘವೇಂದ್ರ ಸ್ಟೋರ್ಸ್​ ಸಿನಿಮಾದ ಪೋಸ್ಟರ್​ನಲ್ಲಿ ನಟ ಜಗ್ಗೇಶ್​

ರಾಘವೇಂದ್ರ ಸ್ಟೋರ್ಸ್​ ಸಿನಿಮಾದ ಪೋಸ್ಟರ್​ನಲ್ಲಿ ನಟ ಜಗ್ಗೇಶ್​

  • Share this:
ಕನ್ನಡದ ನಟರ ಜೊತೆಗೆ ಪರಭಾಷಾ ಸ್ಟಾರ್​ ಕಲಾವಿದರೊಂದಿಗೆ ಸಿನಿಮಾ ಮಾಡುತ್ತಿರುವ ಹೊಂಬಾಳೆ ಫಿಲಂಸ್​ ನಿನ್ನೆಯಷ್ಟೆ ತಮ್ಮ ಬ್ಯಾನರ್​ ಅಡಿ ನಿರ್ಮಿಸುತ್ತಿರುವ 12ನೇ ಸಿನಿಮಾವನ್ನು ಲಾಂಚ್ ಮಾಡಿದೆ. ಕನ್ನಡದಲ್ಲಿ ಹಿಟ್ ಸಿನಿಮಾಗಳನ್ನು ಕೊಡುವ ಮೂಲಕ ಸಾಕಷ್ಟು ಪ್ರತಿಭೆಗಳನ್ನು ಪರಿಚಯಿಸುವ ಮೂಲಕ ಸಿನಿಪ್ರಿಯರನ್ನು ರಂಜಿಸುವುದರಲ್ಲಿ ನಿರತವಾಗಿದೆ ಹೊಂಬಾಳೆ ಫಿಲಂಸ್ (Hombale Films)​. ಇನ್ನು ಸಂತೋಷ್​ ಆನಂದ್​ ರಾಮ್ ಅವರು ಮತ್ತೆ ಹೊಂಬಾಳೆ ಸಿನಿಮಾದ ಜತೆ ಕೈ ಜೋಡಿಸಿದ್ದಾರೆ. ನವರಸ ನಾಯಕ ಜಗ್ಗೇಶ್​ (Jaggesh) ಅವರು ವಿಭಿನ್ನ ಪಾತ್ರದಲ್ಲಿ ರಂಜಿಸಲಿದ್ದಾರೆ. ಸಂತೋಷ್ ಆನಂದ್ ರಾಮ್​  (Santhosh Ananddram) ಅವರ ನಿರ್ದೇಶನದಲ್ಲಿ ಜಗ್ಗೇಶ್​ ನಟಿಸುತ್ತಿರುವ ರಾಘವೇಂದ್ರ ಸ್ಟೋರ್ಸ್​  (Raghavendra Stores) ಸಿನಿಮಾದ ಟೈಟಲ್​ ಹಾಗೂ ಫಸ್ಟ್​ ಲುಕ್​ (Title and First Look Poster) ಪೋಸ್ಟರ್​ ನಿನ್ನೆ ಮಧ್ಯಾಹ್ನ ರಿಲೀಸ್​ ಆಗಿದ್ದು, ಸಾಕಷ್ಟು ಕುತೂಹಲ ಕೆರಳಿಸುವಂತಿದೆ. 

ಇನ್ನು ಸಂತೋಷ್​ ಆನಂದ್ ರಾಮ್​ ಹಾಗೂ ಜಗ್ಗೇಶ್​ ಅವರ ಕಾಂಬಿನೇಶನ್​ ಸುದ್ದಿ ಸಿನಿಮಾದ ಪೋಸ್ಟರ್ ರಿಲೀಸ್​ ಮೂಲಕ ಹೊರ ಬೀಳುತ್ತಿದ್ದಂತೆಯೇ ಅಭಿಮಾನಿಗಳ ಜೊತೆಗೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಥ್ರಿಲ್ ಆಗಿದ್ದಾರೆ. ಹೌದು, ಈ ಸಿನಿಮಾಗೆ ಶುಭ ಹಾರೈಸುತ್ತಾ ಮೆಚ್ಚುಗೆ ಸಹ ಸೂಚಿಸುತ್ತಿದ್ದಾರೆ. ನಟ ಧನಂಜಯ್, ರಿಷಭ್ ಶೆಟ್ಟಿ ಸೇರಿದಂತೆ ತುಂಬಾ ಜನರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ.

ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಿನಿಮಾ ಕುರಿತಾಗಿ ಕೊಂಚ ಮಾಹಿತಿ ಹಂಚಿಕೊಂಡಿದ್ದಾರೆ. ರಾಘವೇಂದ್ರ ಸ್ಟೋರ್ಸ್’ ಮೂಲಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕನ್ನಡ ಚಲನಚಿತ್ರ ರಂಗಕ್ಕೆ ಹೊಸ ರುಚಿ ಸವಿಯಲು ನೀಡುತ್ತಾರೆ ಎಂಬ ನಂಬಿಕೆ ನನಗಿದೆ. ಹಿರಿಯ ನಟ ಜಗ್ಗೇಶ್ ನಮ್ಮೊಂದಿಗೆ ಸೇರಿಕೊಂಡಿದ್ದು ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕನಿಗೆ ಹಾಸ್ಯದ ಕಚಗುಳಿ ಇಡುವುದು ಖಂಡಿತ ಎಂದು ಟ್ವೀಟ್​ ಮಾಡಿದ್ದಾರೆ.ರಾಘವೇಂದ್ರ ಸ್ಟೋರ್ಸ್​ ಸಿನಿಮಾದ ಪೋಸ್ಟರ್ ಗಮನಿಸಿದರೆ ಇದೊಂದು ಹೋಟೆಲ್ ಕುರಿತಾದ ಕಥೆ ಅನ್ನೋದು ಮೇಲ್ನೋಟಕ್ಕೆ ಅರ್ಥವಾಗುತ್ತದೆ. ಜಗ್ಗೇಶ್ ಅವರು ಬಾಣಸಿಗನಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾದ ಚಿತ್ರೀಕರಣ ನವೆಂಬರ್ 22ರಿಂದ ಆರಂಭವಾಗಲಿದೆ. ಸಾಲು ಸಾಲು ಚಿತ್ರ ಘೋಷಿಸಿರುವ ಹೊಂಬಾಳೆ ಫಿಲಂಸ್​ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ ಮೊದಲ ಚಿತ್ರ ‘ನಿನ್ನಿಂದಲೇ’.

2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ‘ನಿನ್ನಿಂದಲೇ’ ಚಿತ್ರ ತೆರೆಗೆ ಬಂದಿತ್ತು. ಬಳಿಕ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಮಾಸ್ಟರ್‌ ಪೀಸ್’ ಚಿತ್ರವನ್ನು ಹೊಂಬಾಳೆ ಫಿಲಂಸ್​ ನಿರ್ಮಿಸಿತ್ತು. 2017ರಲ್ಲಿ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ ‘ರಾಜಕುಮಾರ’ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಯ್ತು. ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ‘ರಾಜಕುಮಾರ’ ಚಿತ್ರವೂ ಒಂದು ಎನಿಸಿಕೊಂಡಿತು.

ಹೊಂಬಾಳೆ ಫಿಲಂಸ್​ ಇತ್ತೀಚೆಗಷ್ಟೆ ತಮ್ಮ ಬ್ಯಾನರ್​ನ 11ನೇ ಸಿನಿಮಾ ಕಾಂತಾರವನ್ನು ಪ್ರಕಟಿಸಿದೆ. ಈ ಸಿನಿಮಾದಲ್ಲಿ ನಾಯಕನಾಗಿರುವ ರಿಷಭ್​ ಶೆಟ್ಟಿ ಅವರೇ ಈ ಚಿತ್ರದ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದ ಪೋಸ್ಟರ್​ ನೋಡಿದರೆ ಸಾಕು ಇದು ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದ ಕುರಿತು ಎಂದು ಅರ್ಥವಾಗುತ್ತದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹೊತ್ತಿಸಿದ ವಿಜಯ್ ಕಿರಗಂದೂರು: 11ನೇ ಸಿನಿಮಾ ಪ್ರಕಟಿಸಿದ ಹೊಂಬಾಳೆ ಫಿಲಂಸ್​..!

ಈ ಸಿನಿಮಾದ ಮುಹೂರ್ತ ಸಹ ಇತ್ತೀಚೆಗಷ್ಟೆ ರಿಷಭ್ ಶೆಟ್ಟಿ ಅವರ ಊರಿನಲ್ಲಿ ನೆರವೇರಿತು.ಉಳಿದಂತೆ ಹೊಂಬಾಳೆ ಈಗಾಗಲೇ ಪುನೀತ್​ ರಾಜ್​ ಕುಮಾರ್​, ಪವನ್ ಕುಮಾರ್​ ಜತೆ ದ್ವಿತ್ವ ಸಿನಿಮಾ ಮಾಡುತ್ತಿದೆ. ಈ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ರಿಚರ್ಡ್​ ಆಂಟನಿ ಚಿತ್ರದ ಪೋಸ್ಟರ್ ಸಹ ರಿಲೀಸ್ ಆಗಿದೆ.

ಹೊಂಬಾಳೆ ಫಿಲಂಸ್​ ನಿರ್ಮಾಣದ ಸಲಾರ್​ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಕೆಜಿಎಫ್​ ಚಾಪ್ಟರ್ 2 ರಿಲೀಸ್​ ಬಗ್ಗೆ ಚಿತ್ರತಂಡ ಇನ್ನೂ ಯಾವ ಅಪ್ಡೇಟ್​ ಸಹ ಕೊಟ್ಟಿಲ್ಲ.
Published by:Anitha E
First published: