Harnaaz Sandhu: ಮೊದಲ ಸಿನಿಮಾದಲ್ಲೇ ವಿಶ್ವ ಸುಂದರಿಗೆ ಎದುರಾಯ್ತು ಸಂಕಷ್ಟ! ಹರ್ನಾಜ್ ಕೌರ್ ಸಂಧು ವಿರುದ್ಧ ಮೊಕದ್ದಮೆ

ಪಂಜಾಬಿಯ 'ಬೈ ಜಿ ಕುಟ್ಟಾಂಗೇ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸಂಧು, ಸಿನಿಮಾದ ಪ್ರಚಾರಕ್ಕೆ ಹೋಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದ ಪ್ರಚಾರದಲ್ಲಿ ಭಾಗಿಯಾಗದ ಸಂಧು ವಿರುದ್ಧ ಸಂತೋಷ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋ ಚಿತ್ರದ ನಿರ್ಮಾಪಕಿ ಉಪಾಸನಾ ಸಿಂಗ್ ಮೂಲಕ ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದೆ.

ಹರ್ನಾಜ್ ಸಂಧು

ಹರ್ನಾಜ್ ಸಂಧು

  • Share this:
ವಿಶ್ವ ಸುಂದರಿ (Miss World) ಪಟ್ಟ ಗೆದ್ದ ನಂತರ ಸಿನಿಮಾರಂಗ ಪ್ರವೇಶಿಸಿದ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು (Miss Universe Harnaz Sandhu) ಮೊದಲ ಚಿತ್ರದಲ್ಲಿಯೇ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದು, ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಂಜಾಬಿಯ 'ಬೈ ಜಿ ಕುಟ್ಟಾಂಗೇ' ಚಿತ್ರದಲ್ಲಿ (Bai Ji Kuttange Movie) ನಾಯಕಿಯಾಗಿ ನಟಿಸಿರುವ ಸಂಧು, ಸಿನಿಮಾದ ಪ್ರಚಾರಕ್ಕೆ ಹೋಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರದ ಪ್ರಚಾರದಲ್ಲಿ (Film Protion) ಭಾಗಿಯಾಗದ ಸಂಧು ವಿರುದ್ಧ ಸಂತೋಷ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋ ಚಿತ್ರದ ನಿರ್ಮಾಪಕಿ ಉಪಾಸನಾ ಸಿಂಗ್ ಮೂಲಕ ಚಂಡೀಗಢ (Chandigarh) ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದೆ.

ಸಿನಿಮಾ ಪ್ರಚಾರಕ್ಕಾಗಿ ಸಹಿ ಮಾಡಿದ ಒಪ್ಪಂದವನ್ನು ಸಂಧು ಗೌರವಿಸಲಿಲ್ಲ ಎಂದು ಸಂಧು ವಿರುದ್ಧ ಉಪಾಸನಾ ಸಿಂಗ್ ಗಂಭೀರವಾಗಿ ಆರೋಪಿಸಿ ತಮ್ಮ ವಕೀಲರಾದ ಕರಣ್ ಸಚ್ದೇವ್ ಮತ್ತು ಇರ್ವಿನೀತ್ ಕೌರ್ ಮೂಲಕ ಸಿವಿಲ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ಕುರಿತು ಇಂದು ವಿಚಾರಣೆ ನಡೆಯುವ ಸಾಧ್ಯತೆಗಳಿವೆ.

1 ಕೋಟಿ ರೂಪಾಯಿ ನಷ್ಟ ಕೋರಿ ಮೊಕದ್ದಮೆ
ವಿಶ್ವ ಸುಂದರಿ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ನಿರ್ದಿಷ್ಟ ಪರಿಹಾರ ಕಾಯಿದೆ, 2018 ರ ಸೆಕ್ಷನ್ 10 ರ ಅಡಿಯಲ್ಲಿ ದಾಖಲಿಸಲಾಗಿದೆ. ಪ್ರತಿವಾದಿಯು ತಮ್ಮ ನಡುವಿನ ಒಪ್ಪಂದದ ಪ್ರಕಾರ ತನ್ನ ಜವಾಬ್ದಾರಿಗಳನ್ನು ನಿರ್ವಹಿಸದಿದ್ದಕ್ಕಾಗಿ ನಷ್ಟವನ್ನು ಕ್ಲೈಮ್ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು, ವಕೀಲ ಕರಣ್ ಸಚ್ದೇವ್ ಅವರ ಮೂಲಕ ಹರ್ನಾಜ್‌ನಿಂದ 1 ಕೋಟಿ ರೂಪಾಯಿ ನಷ್ಟವನ್ನು ಕೋರಿದ್ದಾರೆ.

ಚಿತ್ರತಂಡದ ನಿಯಮಗಳನ್ನು ಮೀರಿರುವ ಆರೋಪ
ಆಗಸ್ಟ್ 19 ರಂದು ಬಿಡುಗಡೆಯಾಗಲಿರುವ ಪಂಜಾಬಿ ಚಿತ್ರ 'ಬೈ ಜಿ ಕುಟ್ಟಾಂಗೇ' ಚಿತ್ರದಲ್ಲಿ ಸಂಧು ನಾಯಕಿಯಾಗಿ ನಟಿಸಿದ್ದಾರೆ. ಮೊದಲಿನ ಒಪ್ಪಂದದಂತೆ ಸಿನಿಮಾದ ಪ್ರಚಾರದಲ್ಲಿ ಇವರು ಭಾಗಿಯಾಗಬೇಕಿತ್ತು. ಚಿತ್ರೀಕರಣಕ್ಕೂ ಮುನ್ನ ಹರ್ನಾಜ್ ಕೌರ್ ಸಂಧು ಸಂತೋಷ್ ಎಂಟರ್‌ಟೈನ್‌ಮೆಂಟ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರದಲ್ಲಿ ಕಂಪನಿಯ ಕಾನೂನು ಪ್ರಕಾರ ನಡೆದುಕೊಳ್ಳುವುದಾಗಿ ಒಪ್ಪಿಗೆ ಸೂಚಿಸಿ ಸಹಿ ಹಾಕಿದ್ದರು. ಕಾನೂನಿನ ಪ್ರಕಾರ, ಸಂಧು ಪ್ರಚಾರದಲ್ಲಿ ತೊಡಗಬೇಕಿತ್ತು, ಆದರೆ ಆಕೆ ನಿಯಮಗಳನ್ನು ಗೌರವಿಸಲಿಲ್ಲ ಎಂದು ಸಿಂಗ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: Aamir Khan: ಬಾಲಿವುಡ್ ಸಿನಿಮಾಗಳು ಸದ್ದು ಮಾಡದಿರಲು ಆಮಿರ್ ಖಾನ್ ಕಾರಣವಂತೆ, ಕರಣ್ ಜೋಹರ್ ಹೀಗೆ ಅಂದಿದ್ಯಾಕೆ?

ದೂರಿನ ಪ್ರಕಾರ, 2021 ರಲ್ಲಿ ಹರ್ನಾಜ್ ಅವರು ಮಿಸ್ ದಿವಾ 2021 ಮತ್ತು ಮಿಸ್ ಯೂನಿವರ್ಸ್ 2021 ರ ಎರಡು ಸೌಂದರ್ಯ ಸ್ಪರ್ಧೆಗಳನ್ನು ಗೆದ್ದರು. ಈ ಪ್ರಶಸ್ತಿಗಳಿಂದ ಹರ್ನಾಜ್ ಖ್ಯಾತಿ ಗಳಿಸಿದ್ದರಿಂದ ಚಿತ್ರತಂಡ ಮೇ 27, 2022ರಂದು ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದರು. ಈ ದಿನಾಂಕವನ್ನು ಹರ್ನಾಜ್ ಗೆ ತಿಳಿಸಿ ಆಕೆಯ ಶೆಡ್ಯೂಲ್ ಗೆ ತಕ್ಕಂತೆ ಮುಂದಿನ ಯೋಜನೆಗಳನ್ನು ಹಾಕಿಕೊಳ್ಳಲಾಗಿತ್ತು. ಚಿತ್ರದ ಬಿಡುಗಡೆಯ ದಿನಾಂಕ ಮೊದಲು 27-05-2022 ಆಗಿತ್ತು. ಪ್ರಚಾರಕ್ಕಾಗಿ ಅವರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಈ ದಿನಾಂಕವನ್ನು 19-08 2022 ಕ್ಕೆ ಬದಲಾಯಿಸಲಾಗಿದೆ. ಆದರೂ ಅವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಉಪಾಸನಾ ಸಿಂಗ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಿರ್ದೇಶಕರು ಮತ್ತು ಚಲನಚಿತ್ರ ಹಣಕಾಸುದಾರರು ಹರ್ನಾಜ್ ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರು ಮತ್ತು ಚಿತ್ರದ ಪ್ರಚಾರಕ್ಕಾಗಿ ಪೋಸ್ಟರ್ ಅನ್ನು ಅವರೊಂದಿಗೆ ಹಂಚಿಕೊಂಡರು, ಆದರೆ ಅವರು ತಮ್ಮ ಸಂದೇಶಗಳಿಗೆ ಒಮ್ಮೆಯೂ ಉತ್ತರಿಸಲಿಲ್ಲ ಎಂದು ದೂರಿನಲ್ಲಿ ಸವಿವರವಾಗಿ ಉಪಾಸನ್ ಸಿಂಗ್ ಉಲ್ಲೇಖಿಸಿದ್ದಾರೆ.

ಇದೇ ಆಗಸ್ಟ್ 19ಕ್ಕೆ ಬೈ ಜಿ ಕುಟ್ಟಾಂಗೇ ಚಿತ್ರ ರಿಲೀಸ್
ಚಿತ್ರ ತಂಡದ ಒಪ್ಪಂದ, ನಿಯಮಗಳಿಗೆ ತಕ್ಕಂತೆ ನಡೆದುಕೊಳ್ಳದ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ತಮ್ಮ ಜವಾಬ್ದಾರಿಗಳನ್ನು ಮರೆತಿದ್ದಾರೆ ಎಂದು 'ಬೈ ಜಿ ಕುಟ್ಟಾಂಗೇ' ಚಿತ್ರ ತಂಡ ಆರೋಪಿಸಿದೆ.

ಇದನ್ನೂ ಓದಿ: Defamation Case: ಜಾನಿ ಡೆಪ್​​ಗೆ 10 ಮಿಲಿಯನ್ ಡಾಲರ್ ಪಾವತಿಸಲು ತೀರ್ಪು ಬಂದ ನಂತರ ಅಂಬರ್ ಹಾರ್ಡ್ ಮಾಡಿದ್ದೇನು?

'ಬೈ ಜಿ ಕುಟ್ಟಾಂಗೇ' ಚಿತ್ರವು ಇದೇ ಆಗಸ್ಟ್ 19ರಂದು ಬಿಡುಗಡೆಯಾಗಲಿದ್ದು ದೇವ್ ಕರೌಡ್, ನಾನಕ್ ಸಿಂಗ್, ಹರ್ನಾಜ್ ಸಂಧು, ಉಪಾಸನಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಸಂತೋಷ್ ಎಂಟರ್ಟೈನ್ಮೆಂಟ್ ಸ್ಟುಡಿಯೋಸ್ ನಿರ್ಮಿಸಿದೆ. ಸ್ಮೀಪ್ ಕಾಂಗ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಪ್ರಚಾರಕ್ಕೆ ಹೋಗದೆ ತಪ್ಪಿಸಿಕೊಂಡು, ವಿಶ್ವ ಸುಂದರಿ ಪಟ್ಟ ಗೆದ್ದ ಸಂಧು ಚಿತ್ರರಂಗದಲ್ಲಿ ಬೆಳೆಯುವ ಆಸೆಗೆ ಮೊದಲೇ ವಿಘ್ನ ತಂದುಕೊಂಡಿದ್ದು ವಿಪರ್ಯಾಸವೇ ಸರಿ.
Published by:Ashwini Prabhu
First published: