ಆಡಿಯೋ ವಿವಾದದ ನಡುವೆಯೇ ಸಿನಿಮಾದ ಶೂಟಿಂಗ್ ಸ್ಪಾಟ್‍ನಲ್ಲಿ ಕಾಣಿಸಿಕೊಂಡ ಸಂದೇಶ್..!

ಸಂದೇಶ್ ತಮ್ಮ ಬ್ಯಾನರ್​ನಲ್ಲಿ ನಿರ್ಮಿಸುತ್ತಿರುವ ಸಿನಿಮಾದತ್ತ ಗಮನ ಹರಿಸಿದ್ದಾರೆ. ಚಿತ್ರದ ಹೆಸರು ಶ್ರೀ ಕೃಷ್ಣ @ ಜಿಮೇಲ್.ಕಾಮ್. ವಿಶೇಷ ಅಂದರೆ ತಮ್ಮದೇ ಸಂದೇಶ್ ಪ್ರಿನ್ಸ್ ಹೋಟೆಲ್‍ನಲ್ಲಿಯೇ ಇತ್ತೀಚೆಗಷ್ಟೇ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಹೊಡೆದಿದ್ದಾರೆ.

ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾದ ನಿರ್ಮಾಪಕ ಸಂದೇಶ್​ ಎನ್​

ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾದ ನಿರ್ಮಾಪಕ ಸಂದೇಶ್​ ಎನ್​

  • Share this:
ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಪುತ್ರ ಸಂದೇಶ್. ಎನ್ ಅವರದು ಎನ್ನಲಾದ ಆಡಿಯೋ ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್‍ವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ನಟ ದರ್ಶನ್ ಸಪ್ಲೈಯರ್​ ಮೇಲೆ ಹಲ್ಲೆ ಮಾಡಿರುವುದರ ಬಗ್ಗೆ ಹಾಗೂ ನಟ ದರ್ಶನ್‍ರ ಪಟಾಲಂ ಕುರಿತು ಹಲವು ಮಾಹಿತಿಯನ್ನು ಸಂದೇಶ್ ಆ ಆಡಿಯೋದಲ್ಲಿ ಹಂಚಿಕೊಂಡಿರುವಂತೆ ಬಿಂಬಿಸಲಾಗಿತ್ತು. ಆದರೆ ಆ ಆಡಿಯೋ ನನ್ನದಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು ಸಂದೇಶ್. ಮತ್ತೊಂದೆಡೆ ಹೋಟೆಲ್‍ಗೆ ಮೈಸೂರು ಪೊಲೀಸರು ತೆರಳಿ ಸಿಸಿಟಿವಿ ಡಿವಿಆರ್ ಪಡೆದು ತನಿಖೆ, ವಿಚಾರಣೆಗೆ ಮುಂದಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಸತ್ಯಾಸತ್ಯತೆ ಹೊರಗೆ ಬರಲಿದೆ.

ಇನ್ನು, ಆ ತಲೆಬಿಸಿಯ ನಡುವೆಯೂ ಸಂದೇಶ್ ತಮ್ಮ ಬ್ಯಾನರ್​ನಲ್ಲಿ ನಿರ್ಮಿಸುತ್ತಿರುವ ಸಿನಿಮಾದತ್ತ ಗಮನ ಹರಿಸಿದ್ದಾರೆ. ಚಿತ್ರದ ಹೆಸರು ಶ್ರೀ ಕೃಷ್ಣ @ ಜಿಮೇಲ್.ಕಾಮ್. ವಿಶೇಷ ಅಂದರೆ ತಮ್ಮದೇ ಸಂದೇಶ್ ಪ್ರಿನ್ಸ್ ಹೋಟೆಲ್‍ನಲ್ಲಿಯೇ ಇತ್ತೀಚೆಗಷ್ಟೇ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಹೊಡೆದಿದ್ದಾರೆ. ಕಳೆದ ಎಂಟು ದಿನಗಳಿಂದ ಮೇಲುಕೋಟೆ ಹಾಗೂ ಮೈಸೂರು ಸುತ್ತಮುತ್ತ ನಿರ್ದೇಶಕ ನಾಗಶೇಖರ್ ಮತ್ತು ತಂಡ ಹಾಡಿನ ಶೂಟಿಂಗ್‍ನಲ್ಲಿ ತೊಡಗಿತ್ತು. ಒಟ್ಟು 90 ದಿನಗಳ ಶೂಟಿಂಗ್ ಪೂರ್ಣಗೊಳಿಸಿ ಚಿತ್ರತಂಡ ತೆರೆ ಎಳೆದಿದೆ.
ಶ್ರೀ ಕೃಷ್ಣ @ ಜಿಮೇಲ್.ಕಾಮ್ ಚಿತ್ರಕ್ಕೆ ಲವ್ ಮಾಕ್ಟೇಲ್​ ಚಿತ್ರದ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿದ್ದು, ಅವರಿಗೆ ಭಾವನಾ ನಾಯಕಿಯಾಗಿದ್ದಾರೆ. ಖುದ್ದು ನಾಗಶೇಖರ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಂದನ್ ಗೌಡ ಶ್ರೀ ಕೃಷ್ಣ @ ಜಿಮೇಲ್.ಕಾಮ್ ಚಿತ್ರದ ಎರಡನೇ ಹೀರೋ. ಉಳಿದಂತೆ ಹಿರಿಯ ದತ್ತಣ್ಣ, ಹಾಸ್ಯ ನಟರಾದ ಸಾಧು ಕೋಕಿಲ, ಚಿಕ್ಕಣ್ಣ, ಸಾತ್ವಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ: Shwetha Srivatsav: ಬಕ್ರೀದ್​ ಹಬ್ಬದ ವಿಶೇಷ ಫೋಟೋಶೂಟ್​ನಲ್ಲಿ ಮಗಳ ಜೊತೆ ಪೋಸ್​ ಕೊಟ್ಟ ಶ್ವೇತಾ ಶ್ವೇತಾ ಶ್ರೀವಾತ್ಸವ

ಹಾಗೇ ಈ ಚಿತ್ರಕ್ಕೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀ ಕೃಷ್ಣ @ ಜಿಮೇಲ್.ಕಾಮ್ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಕವಿರಾಜ್ ಸಾಹಿತ್ಯ ನೀಡಿದ್ದಾರೆ. ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣವಿದ್ದು, ದೀಪು ಎಸ್. ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾನಿರ್ದೇಶನವಿದೆ.

Sandesh N, Sri Krishna at Gmail.com movie, Mysuru, Darling Krishna, ಸಂದೇಶ್​ ಎನ್​, ಶ್ರೀ ಕೃಷ್ಣ @ ಜಿಮೇಲ್.ಕಾಮ್ ಸಿನಿಮಾ, ಕೃಷ್ಣ, ಸಂದೇಶ್​ ಇನ್​ ಹೋಟೆಲ್​, , Producer Sandesh attended Sri Krishna at Gmail dot com movie shooting htv ae
ಶ್ರೀ ಕೃಷ್ಣ @ ಜಿಮೇಲ್.ಕಾಮ್ ಸಿನಿಮಾ ಚಿತ್ರೀಕರಣಕ್ಕೆ ತೆರೆ


ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರ ಡೆಬ್ಯೂ ಸಿನಿಮಾ ಅಮರ್ ಕೂಡ ಸಂದೇಶ್ ನಾಗರಾಜ್ ನಿರ್ಮಾಣ ಹಾಗೂ ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬಂದಿತ್ತು. ಅದರ ಬೆನ್ನಲ್ಲೇ ಈಗ ರೊಮ್ಯಾಂಟಿಕ್ ಕಾಮಿಡಿ ಶ್ರೀ ಕೃಷ್ಣ @ ಜಿಮೇಲ್.ಕಾಮ್ ಮೂಲಕ ಇದೇ ಕಾಂಬಿನೇಷನ್ ಮತ್ತೆ ವಾಪಸ್ಸಾಗಿದೆ.

ಇದನ್ನೂ ಓದಿ: ಕೋಟಿಗೊಬ್ಬ 3 ಚಿತ್ರದ ರಿಲೀಸ್ ಬಗ್ಗೆ ಖುಷಿಯಿಂದ ಹಂಚಿಕೊಂಡ ಕಿಚ್ಚ ಸುದೀಪ್​

ಇನ್ನು ಸದ್ಯ ಹಲ್ಲೆ ಪ್ರಕರಣದಿಂದ ನಟ ದರ್ಶನ್ ಮತ್ತು ನಿರ್ಮಾಪಕ, ಉದ್ಯಮಿ ಸಂದೇಶ್ ನಾಗರಾಜ್ ಸದ್ಯ ದೂರಾಗಿದ್ದರೂ, ನಟ ದರ್ಶನ್ ಸಿನಿಮಾ ಬೆಳವಣಿಗೆಯಲ್ಲಿ ಸಾಥ್ ನೀಡಿದ್ದವರು ಸಂದೇಶ್ ನಾಗರಾಜ್ ಎಂಬುದನ್ನು ಮರೆಯುವಂತಿಲ್ಲ. ದರ್ಶನ್ ನಟಿಸಿರುವ ಯಾಕೆಂದರೆ ಪ್ರಿನ್ಸ್, ವಿರಾಟ್, ಅಂಬರೀಷ, ಒಡೆಯ ಹಾಗೂ ಅಮರ್ ಚಿತ್ರಗಳನ್ನು ನಿರ್ಮಿಸಿದ್ದಾರೆ.
Published by:Anitha E
First published: