• Home
  • »
  • News
  • »
  • entertainment
  • »
  • National Award: 'ತಲೆದಂಡ' ಮೂಲಕ ಪರಿಸರ ಸಂರಕ್ಷಣೆ ಸಂದೇಶ ಕೊಟ್ಟು ಹೋದ ಸಂಚಾರಿ ವಿಜಯ್! ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಡೈರೆಕ್ಟರ್ ಪ್ರವೀಣ್ ಕೃಪಾಕರ್

National Award: 'ತಲೆದಂಡ' ಮೂಲಕ ಪರಿಸರ ಸಂರಕ್ಷಣೆ ಸಂದೇಶ ಕೊಟ್ಟು ಹೋದ ಸಂಚಾರಿ ವಿಜಯ್! ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ ಡೈರೆಕ್ಟರ್ ಪ್ರವೀಣ್ ಕೃಪಾಕರ್

ಕನ್ನಡದ ತಲೆದಂಡ ಹಾಗೂ ಡೊಳ್ಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ  ಗೌರವ

ಕನ್ನಡದ ತಲೆದಂಡ ಹಾಗೂ ಡೊಳ್ಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗೌರವ

ಅತ್ಯದ್ಭುತ ಅನಿಸೋ ಪಾತ್ರಗಳನ್ನ ನಿರ್ವಹಿಸುತ್ತಲೇ ಜನರ ಮನದಲ್ಲಿ ಉಳಿದು ಹೋಗಿರೋ ಸಂಜಾರಿ ವಿಜಯ್, ತಲೆದಂಡ ಸಿನಿಮಾದಲ್ಲಿ ಎಲ್ಲರ ಹೃದಯ ಕದ್ದೇ ಬಿಟ್ಟರು. ಪರಿಸರ ಕಾಳಜಿ ಇರೋ ತಲೆದಂಡ ಕಥೆಯಲ್ಲಿ ಕುನ್ನೇಗೌಡ (ಕುನ್ನ) ಹೆಸರಿನ ಪಾತ್ರದ ಮೂಲಕವೇ ಸಂಚಾರಿ ವಿಜಯ್ ಅಭಿನಯಸಿದ್ದರು.

  • Share this:

ಸ್ಯಾಂಡಲ್​ವುಡ್​ ನ (Sandalwood) ಕನ್ನಡ ಸಿನಿಮಾಗಳು ತನ್ನದೇ ರೀತಿಯಲ್ಲಿ ಸಾಮಾಜಿಕ ಕಳಕಳಿಯನ್ನೂ ಹೊಂದಿರುತ್ತವೆ. ನಾನು ಅವನಲ್ಲ ಅವಳು ಸಿನಿಮಾ ಖ್ಯಾತಿಯ ದಿವಂಗತ ನಟ ಸಂಚಾರಿ ವಿಜಯ್ (Sanchari Vijay) ಅಭಿನಯದ ತಲೆದಂಡ (Taledanda) ಚಿತ್ರಕ್ಕೂ ಅತ್ಯುತ್ತಮ ಪರಿಸರ ಕಾಳಜಿ ಇರೋ ಸಿನಿಮಾ ಅಂತಲೇ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಚಿತ್ರಕ್ಕೆ ಪ್ರಶಸ್ತಿ ನೀಡಿದ್ದಾರೆ. ಈ ಚಿತ್ರದ ಜೊತೆಗೆ ಕನ್ನಡದ ಡೊಳ್ಳು ಸಿನಿಮಾ ಕೂಡ ಪ್ರಶಸ್ತಿ ಪಡೆದಿದೆ. ಡೊಳ್ಳು ಕುಣಿತದ ಬಗ್ಗೇನೆ ಇರೋ ಈ ಚಿತ್ರಕ್ಕೂ 68 ನೇ ರಾಷ್ಟ್ರೀಯ ಪ್ರಶಸ್ತಿ ಬಂದಿರೋದು ವಿಶೇಷ. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ ಪವನ್ ಒಡೆಯರ್ (Pavan Wadeyar) ಪ್ರಶಸ್ತಿ ಸ್ವೀಕರಿಸಿ ಖುಷಿ ಪಟ್ಟಿದ್ದಾರೆ.


ಕನ್ನಡದ ನಟ ಸಂಚಾರಿ ವಿಜಯ್ ಅಭಿನಯಕ್ಕೆ ಯಾರೂ ಸೋಲದವ್ರೇ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರನ್ನ ಬಿಟ್ಟು ಹೋದ್ರು ಅನ್ನೋ ನೋವು ಎಲ್ಲರಲ್ಲೂ ಇದೆ. ಆದರೆ ಅವರ ಸಿನಿಮಾಗಳಲ್ಲಿಯ ಅಭಿನಯದ ಈಗಲೂ ಜೀವಂತವಾಗಿಯೇ ಇದೆ.


Director Praveen Krupakar Received Award For his Taledanda Movie
ಸಂಚಾರಿ ವಿಜಯ್ ಅಭಿನಯದ ತಲೆದಂಡ ಚಿತ್ರಕ್ಕೆ ಪರಿಸರ ಸಂರಕ್ಷಣೆ ಅತ್ಯುತ್ತಮ ಚಿತ್ರ ಪ್ರಶಸ್ತಿ


ನಾನು ಅವನಲ್ಲ ಅವಳು ಸಿನಿಮಾದಲ್ಲಿ ಸಂಚಾರಿ ವಿಜಯ್ ಅದ್ಭುತವಾಗಿಯೇ ಅಭಿನಯಿಸಿದ್ದರು. ಅದಕ್ಕೇ ಅಲ್ವೇ? ಇವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿರೋದು. ಅದೇ ನಟನ ಸಿನಿಮಾಗಳ ಪಟ್ಟಿಯಲ್ಲಿ ಪುಕ್ಸಟ್ಟೆ ಲೈಫು ಸಿನಿಮಾದಲ್ಲೂ ಸಂಚಾರಿ ವಿಜಯ್ ಅಭಿನಯ ಸೂಪರ್ ಬಿಡಿ.


ಪರಿಸರ ಸಂರಕ್ಷಣೆ ಸಂದೇಶ ಕೊಟ್ಟು ಹೋದ ಸಂಚಾರಿ ವಿಜಯ್ 


ಅತ್ಯದ್ಭುತ ಅನಿಸೋ ಪಾತ್ರಗಳನ್ನ ನಿರ್ವಹಿಸುತ್ತಲೇ ಜನರ ಮನದಲ್ಲಿ ಉಳಿದು ಹೋಗಿರೋ ಸಂಜಾರಿ ವಿಜಯ್, ತಲೆದಂಡ ಸಿನಿಮಾದಲ್ಲಿ ಎಲ್ಲರ ಹೃದಯ ಕದ್ದೇ ಬಿಟ್ಟರು. ಪರಿಸರ ಕಾಳಜಿಯನ್ನೆ ಇರೋ ತಲೆದಂಡ ಕಥೆಯಲ್ಲಿ ಕುನ್ನೇಗೌಡ (ಕುನ್ನ) ಹೆಸರಿನ ಪಾತ್ರದ ಮೂಲಕವೇ ಸಂಚಾರಿ ವಿಜಯ್ ಅಭಿನಯಸಿದ್ದರು.


ಸಂಚಾರಿ ವಿಜಯ್ "ತಲೆದಂಡ" ಚಿತ್ರದ ಪ್ರಶಸ್ತಿ ಸ್ವೀಕರಿಸಿದ ಡೈರೆಕ್ಟರ್ ಪ್ರವೀಣ್ ಕೃಪಾಕರ್


ಸಂಚಾರಿ ವಿಜಯ್ ಅಭಿನಯದ ಈ ಚಿತ್ರದಲ್ಲಿ ವಿಜಯ್, ಪೆದ್ದು ಯುವಕನಂತೇನೆ ಕಾಣಿಸಿಕೊಂಡರು. ಇಂತಹ ಈ ಚಿತ್ರ ಪರಿಸರ ಸಂರಕ್ಷಣೆಯನ್ನ ಜಾಗೃತಿಯನ್ನ ತನ್ನದೇ ರೀತಿಯಲ್ಲಿಯೇ ಮೂಡಿಸಿತು. ಹಾಗೇನೆ ಈ ಚಿತ್ರಕ್ಕೆ ಪರಿಸರ ಸಂರಕ್ಷಣೆಯ ಅತ್ಯುತ್ತಮ ಸಿನಿಮಾ ಅಂತಲೇ ರಾಷ್ಟ್ರೀಯ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.


ಇದನ್ನೂ ಓದಿ: Ponniyin Selvan 1: ಪೊನ್ನಿಯಿನ್ ಸೆಲ್ವನ್​​ನಲ್ಲಿ ರಜನಿ-ಕಮಲ್ ಹಾಸನ್​ ಯಾಕಿಲ್ಲ? ಏನಂತಾರೆ ಮಣಿರತ್ನಂ?


ತಲೆದಂಡ ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ್ ಹಾಗೂ ಡಾಕ್ಟರ್ ಹೇಮಾಮಾಲಿನಿ ಕೃಪಾಕರ್ ತಮ್ಮ ಚಿತ್ರಕ್ಕೆ ಬಂದ ಪ್ರಶಸ್ತಿಯನ್ನ ಸ್ವೀಕರಿಸಿದರು. ಈ ವೇಳೆ ಸಂಚಾರಿ ವಿಜಯ್ಇದ್ದಿದ್ದರೇ ಅದೆಷ್ಟು ಖುಷಿ ಪಡ್ತಿದ್ದರೋ ಏನೋ.


ಕನ್ನಡದ ಡೊಳ್ಳು ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೌರವ
ಡೊಳ್ಳು ಸಿನಿಮಾ ಕೂಡ ವಿಶೇಷವಾದ ಸಿನಿಮಾನೇ ಆಗಿದೆ. ಡೊಳ್ಳು ಕುಣಿತದ ಮೇಲೆನೆ ನಿರ್ಮಾಣಗೊಂಡಿದ್ದ ಈ ಚಿತ್ರ ಒಳ್ಳೆ ಕಥೆಯನ್ನೆ ಒಳಗೊಂಡಿತ್ತು. ನಶಿಸಿ ಹೋಗುತ್ತಿರೋ ಡೊಳ್ಳು ಕುಣಿತದ ಕಲೆಯ ಕುರಿತು ಈ ಚಿತ್ರ ನಿರ್ಮಾಣಗೊಂಡಿತ್ತು.


ಚಲನ ಚಿತ್ರೋತ್ಸವದಲ್ಲೂ ಹೆಚ್ಚಿಗೆ ಪ್ರಶಂಸೆ ಪಡೆದ ಡೊಳ್ಳು ಸಿನಿಮಾಕ್ಕೆ 68 ನೇ ರಾಷ್ಟ್ರೀಯ ಪ್ರಶಸ್ತಿಯ ಗೌರವ ಕೂಡ ಬಂದಿದೆ. ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.


Director Praveen Krupakar Received Award For his Taledanda Movie
ಕನ್ನಡದ ಡೊಳ್ಳು ಚಿತ್ರಕ್ಕೆ ರಾಷ್ಟ್ರೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ


ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕ ಪವನ್ ಒಡೆಯರ್ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಆ ಕ್ಷಣದ ವಿಶೇಷ ವೀಡಿಯೋವನ್ನ ಪವನ್ ಒಡೆಯರ್ ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ.


ಪ್ರಶಸ್ತಿ ಸ್ವೀಕರಿಸಿ ಖುಷಿ ಹಂಚಿಕೊಂಡ ಪವನ್ ಒಡೆಯರ್, ಇದು ನನ್ನ ಜೀವನದ ಮೊಟ್ಟ ಮೊದಲ ರಾಷ್ಟ್ರೀಯ ಪ್ರಶಸ್ತಿ ಅಂತಲೂ ಹೆಮ್ಮೆ ಪಟ್ಟಿದ್ದಾರೆ. ಹೀಗೆ ತಮ್ಮ ಮೊದಲ ನಿರ್ಮಾಣದ ಚಿತ್ರಕ್ಕೆ ಪ್ರಶಸ್ತಿ ಬಂದಿರೋದು ಖುಷಿ ತಂದಿದೆ ಅಂತಲೂ ಹೇಳೋಕೆ ಮರೆತಿಲ್ಲ.


ಇದನ್ನೂ ಓದಿ: Bhoomi Shetty Film: ಕನ್ನಡದ ಬಿಗ್ ಬಾಸ್ ಕಿನ್ನರಿಗೆ ಕೆಂಡದ ಸೆರಗಿನ ಕಿಚ್ಚು, ಮಹಿಳಾ ಪ್ರಧಾನ ಚಿತ್ರದಲ್ಲಿ ಭೂಮಿ ಶೆಟ್ಟಿ


ಹೀಗೆ ಕನ್ನಡದ ಎರಡು ಸಿನಿಮಾಗಳು ತಮ್ಮದೇ ವಿಶೇಷ ವಿಷಯಗಳಿಂದ ರಾಷ್ಟ್ರೀಯ ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ಕನ್ನಡದ ಎರಡು ಸಿನಿಮಾಕ್ಕೆ ಎರಡು ಪ್ರಶಸ್ತಿ ಬಂದಿರೋದು ಅಷ್ಟೇ ಹೆಮ್ಮೆ ವಿಷಯವೇ ಆಗಿದೆ.

First published: