Kishore Pathikonda: ಕಿಶೋರ್ ಪತ್ತಿಕೊಂಡ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು? ಹೇಗಿದ್ದಾರೆ ಜೇಮ್ಸ್ ಸಿನಿಮಾ ನಿರ್ಮಾಪಕ?

Sandalwood: ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಆಸ್ಪತ್ರೆಗೆ ಬಂದು ಕಿಶೋರ್ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.  

ಕಿಶೋರ್ ಪತ್ತಿಕೊಂಡ

ಕಿಶೋರ್ ಪತ್ತಿಕೊಂಡ

  • Share this:
ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ ಜೇಮ್ಸ್ (James) ಬಿಡುಗಡೆ 100 ದಿನಗಳು ಯಶಸ್ವಿ ಪ್ರದರ್ಶನ ಕಂಡಿದೆ. ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸ್ಯಾಂಡಲ್ ವುಡ್ನ ಪ್ರಸಿದ್ದ ನಿರ್ಮಾಪಕ (Kishore Pathikonda) ಅವರ ಆರೋಗ್ಯದಲ್ಲಿ ಮೊನ್ನೆ ಏರುಪೇರಾದ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮಾಹಿತಿ ನೀಡಿದ್ದು, ಸದ್ಯ ಅವರಿಗೆ ಪ್ರಜ್ಞೆ ಬಂದಿದೆ. ಚಿಕಿತ್ಸೆಗೆ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಶ್ರಾಂತಿ ಅಗತ್ಯ ಎಂದ ವೈದ್ಯರು

ಮಾಧ್ಯಮಗಳ ಜೊತೆ ಮಾತನಾಡಿದ ವೈದ್ಯರು, ಆಸ್ಪತ್ರೆಗೆ ಬಂದಂತೆ ಕಿಶೋರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇಮಿಡಿಯೇಟ್ ಸರ್ಜರಿ ಮಾಡಲಾಗಿದೆ. ಸದ್ಯ ಅವರಿಗೆ ಪ್ರಜ್ಞೆ ಬಂದಿದೆ. ಚಿಕಿತ್ಸೆಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಒಂದು ವಾರ ಕಾಲ ಐಸಿಯುನಲ್ಲೇ ಇರಬೇಕಾಗುತ್ತದೆ. ವೆಂಟಿಲೇಟರ್ ತೆಗೆಯಲು ನೋಡಿದ್ವಿ ಆದರೆ ಸದ್ಯಕ್ಕೆ ಆಗುವುದಿಲ್ಲ ಎಂದಿದ್ದಾರೆ. ತುಂಬಾ ರೆಸ್ಟ್ ಲೆಸ್​ ಆಗಿರೋದರಿಂದ ಈ ರೀತಿ ಆಗಿದೆ. ಅವರಿಗೆ ತುಂಬಾ ವಿಶ್ರಾಂತಿಯ ಅಗತ್ಯವಿದೆ. ಲೆಫ್ಟ್ ಬ್ರೈನ್ ಆಗಿರೋದ್ರಿಂದ ಮಾತನಾಡೋದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಫಿಸಿಯೋಥೆರಪಿ ಮಾಡಿದರೆ ಸರಿಯಾಗುತ್ತದೆ. ಸ್ಟ್ರೋಕ್ ನಿಂದ ರೈಟ್ ಸೈಡ್ ಸ್ವಾಧೀನಕ್ಕೆ ಬರುವುದು ಸದ್ಯಕ್ಕೆ ಕಷ್ಟ ಎಂದಿದ್ದಾರೆ.

ಅಲ್ಲದೇ, ಈಗಲೂ ಕೂಡ ಕಿಶೋರ್ ಪರಿಸ್ಥಿತಿ  ಸ್ವಲ್ಪ ಗಂಭೀರವೇ ಇದೆ ಇನ್ನು ಒಂದು ವಾರ ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಯಲಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಆಸ್ಪತ್ರೆಗೆ ಬಂದು ಕಿಶೋರ್ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.  ನಿನ್ನೆ ಕೂಡ ನಟ ಹಾಗೂ ಪುನೀತ್ ಸಹೋದರಿಯ ಮಗ ಧಿರೆನ್​ ರಾಮ್​ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಕಿಶೋರ್ ಅವರ ಆರೋಗ್ಯ ಪರಿಸ್ಥಿಯನ್ನು ವಿಚಾರಿಸಿದ್ದರು.

ಇದನ್ನೂ ಓದಿ: ಜುಲೈ 6 ಕಿಚ್ಚನ ಬದುಕಿನ ವಿಶೇಷ ದಿನ, ಸುದೀಪ್ ಗೆ ಕಿಚ್ಚ ಅನ್ನೋ ಬಿರುದು ಬಂದಿದ್ದು ಹೇಗೆ ಅನ್ನೋ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ

ಆ ಸಮಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಧೀರೆನ್​, ‘ಕಿಶೋರ್ ಅವರಿಗೆ ಬಿ ಪಿ ಏರುಪೇರ್ ಆಗಿತ್ತು. ನಿನ್ನೆ ಮನೆಯಲ್ಲಿ ಬಿಪಿ ವೇರಿಯೇಷನ್ ಆದ ಹಿನ್ನಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಮೆದುಳಿನ ಸರ್ಜರಿ ಆಗಿದೆ ಮೆಡಿಕೇಷನ್ ನಡಿತಿದೆ. ಸದ್ಯ ಕಿಶೋರ್​ ಅವರು ಪ್ರಜ್ಞಾಹೀನರಾಗಿದ್ದು, ಟ್ರಿಂಟ್ ಮೆಂಟ್ ನಡಿತಿದ್ದು, 24 ಗಂಟೆಗಳಲ್ಲಿ ಗೊತ್ತಾಗುತ್ತೆ. ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯುತ್ತದೆ. ಅಲ್ಲದೇ ಕಿಶೋರ್​ ಅವರು ಔಟ್ ಆಫ್ ಡೇಂಜರ್ ಎಂದು ವೈದ್ಯರು ಹೇಳಿದ್ದಾರೆ ಎಂದು ತಿಳಿಸಿದ್ದರು.

ಶತದಿನೋತ್ಸವ ಆಚರಿಸಿದ ‘ಜೇಮ್ಸ್‘:

ಹೌದು, ಪುನೀತ್ ರಾಜ್​ಕುಮಾರ್ ಅಭಿನಯದ ಕೊನೆಯ ಚಿತ್ರ ‘ಜೇಮ್ಸ್‘ ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಂಡಿತ್ತು. ಅಲ್ಲದೇ ಚಿತ್ರವು 100 ದಿನಗಳನ್ನು ಕಂಪ್ಲಿಟ್​ ಮಾಡುವ ಮೂಲಕ ಶತದಿನೋತ್ಸವ ಆಚರಿಸಿತ್ತು. ಜೇಮ್ಸ್ ಸಿನಿಮಾದ ಬಿಡುಗಡೆಯನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದರು. ಕರ್ನಾಟಕ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯಗಳಲ್ಲಿ ಸಹ ಜೇಮ್ಸ್ ಬಿಡುಗಡೆಯಾಗಿತ್ತು. ಆಂಧ್ರ ಮತ್ತು ತೆಲಂಗಾಣದಲ್ಲಿ 300 ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಜೇಮ್ಸ್ ರಿಲೀಸ್ ಆಗಿತ್ತು.

ಇದನ್ನೂ ಓದಿ: ಥೈಲ್ಯಾಂಡ್​ನಲ್ಲಿ ಶಾನ್ವಿ ಶ್ರೀವಾಸ್ತವ್ ಹಾಟ್​ ಪೋಸ್​, ಮಾಸ್ಟರ್ ಪೀಸ್​ ನೀವು ಅಂದ ಫ್ಯಾನ್ಸ್

ಅಪ್ಪು ಅಭಿನಯದ ಜೇಮ್ಸ್, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ದಾಖಲೆ ಬರೆದಿದ್ದು, ಜೇಮ್ಸ್ ಸ್ಯಾಟಲೈಟ್ ರೈಟ್ಸ್ ಕನ್ನಡದಲ್ಲಿ ಬರೋಬ್ಬರಿ 13.80 ಕೋಟಿಗೆ ಮಾರಾಟವಾಗಿದೆ. ಈ ಹಿಂದೆ ರಾಕಿಂಗ್ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 6 ಕೋಟಿಗೆ ಮಾರಾಟವಾಗಿ ದಾಖಲೆ ಮಾಡಿತ್ತು. ಮೂಲಗಳ ಪ್ರಕಾರ ವಿವಿಧ ಭಾಷೆಗಳು ಸೇರಿ 80 ಕೋಟಿಗೆ ಟಿವಿ ರೈಟ್ಸ್ ಗೆ ಸೇಲಾಗಿದೆ ಎನ್ನಲಾಗಿದೆ.
Published by:Sandhya M
First published: