Jote Joteyali: ವಿಷ್ಣುವರ್ಧನ್ ಅಳಿಯ ಅನಿರುದ್ಧ್‌ಗೆ ಕನ್ನಡ ಕಿರುತೆರೆಯಿಂದ ಬಹಿಷ್ಕಾರ? ಜೊತೆ ಜೊತೆಯಲಿ ಏನಾಯ್ತು?

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರಧಾರಿ ಬದಲಾಗ್ತಾರಾ? ಧಾರಾವಾಹಿಯಿಂದ ಅನಿರುದ್ಧ್‌ರನ್ನು ಹೊರಹಾಕಲಾಗುತ್ತೆ ಎನ್ನುವ ಮಾತು ಕೇಳಿ ಬರುತ್ತಿದೆ. ಕಿರುತೆರೆಯಿಂದಲೇ ಅನಿರುದ್ಧ್ ಬ್ಯಾನ್ ಆಗ್ತಿದ್ದಾರೆ ಅಂತಾನೂ ಹೇಳಲಾಗುತ್ತಿದೆ. ಹಾಗಾದ್ರೆ ಜೊತೆ ಜೊತೆಯಲ್ಲಿ ಇರೋದಿಲ್ವಾ ಅನಿರುದ್ಧ್? ಇಲ್ಲಿವೆ ಎಲ್ಲ ಪ್ರಶ್ನೆಗಳಿಗೆ ಉತ್ತರ...

ನಟ ಅನಿರುದ್ಧ್

ನಟ ಅನಿರುದ್ಧ್

  • Share this:
ಕನ್ನಡ ಕಿರುತೆರೆಯಲ್ಲಿ (Kannada TV) ಹೊಸ ದಾಖಲೆ (New Records) ಬರೆದ ಧಾರಾವಾಹಿ (Serial) ಜೊತೆ ಜೊತೆಯಲಿ (Jote Joteyali). ಪ್ರಸಾರ ಆರಂಭವಾಗಿ ಬಹಳಷ್ಟು ಕಾಲ ನಂಬರ್ ಒನ್ (Number one) ಸ್ಥಾನದಲ್ಲೇ ಜೊತೆ ಜೊತೆಯಲಿ ಧಾರಾವಾಹಿ ಭದ್ರವಾಗಿ ಕುಳಿತಿತ್ತು. ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಈ ಧಾರಾವಾಹಿ ವೀಕ್ಷಕರ ಮನದಲ್ಲಿ ಅಚ್ಚಳಿಯದೇ ಕುಳಿತಿದೆ. ಆರ್ಯವರ್ಧನ್ (Aryavardhan), ಅನು ಸಿರಿಮನೆ (Anu Sirimane) ನಡುವಿನ ವಯಸ್ಸಿಗೆ ಮೀರಿದ ಪ್ರೀತಿ (Love) ಈ ಧಾರಾವಾಹಿಯ ಹೈಲೆಟ್. ಇದ್ರಲ್ಲಿ ಆರ್ಯವರ್ಧನ್ ಆಗಿ ಜನಮನ ಸೆಳೆದವರು ನಟ ಅನಿರುದ್ಧ್ (Actor Aniruddh). ಖ್ಯಾತ ನಟ, ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರ ಅಳಿಯನಾದ ಅನಿರುದ್ಧ್ ಅವರ ಸಿನಿ ಕರಿಯರ್‌ಗೆ ಬ್ರೇಕ್ ನೀಡಿದ್ದು ಇದೇ ಧಾರಾವಾಹಿ. ಅವರ ಖಡಕ್ ಲುಕ್, ಬಿಳಿ ಗಡ್ಡ ನೋಡಿ ಅದೆಷ್ಟೋ ಹುಡುಗಿಯರು ಇಂಥದ್ದೇ ಹುಡುಗ ಬೇಕು ಅಂತ ಕನಸು ಕಂಡಿದ್ದಾರೋ ಗೊತ್ತಿಲ್ಲ. ಇದೀಗ ಜೊತೆ ಜೊತೆಯಲಿ ಧಾರಾವಾಹಿ ಹಾಗೂ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ (Shocking News) ಒಂದು ಇದೆ.

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಔಟ್!

ಹೌದು, ಹೀಗೊಂದು ಬ್ರೇಕಿಂಗ್ ನ್ಯೂಸ್ ಇದೀಗ ಬರುತ್ತಿದೆ. ಜೊತೆ ಜೊತೆಯಲಿ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ ನಟ ಅನಿರುದ್ಧ್ ಹೊರ ಬರುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಅನಿರುದ್ಧ್ ಲೈಫ್‌ಗೆ ತಿರುವು ನೀಡಿದ ಧಾರಾವಾಹಿಯಿಂದಲೇ ಅವರು ಶೀಘ್ರವೇ ನಿರ್ಗಮಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಅನಿರುದ್ಧ್‌ರನ್ನು ತೆಗೆದು ಹಾಕಲು ನಿರ್ಧರಿಸಿದರಾ ನಿರ್ಮಾಪಕರು?

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ತೆಗೆದು ಹಾಕಲು ಧಾರಾವಾಹಿ ನಿರ್ಮಾಪಕರೂ ಆಗಿರುವ ಆರೂರು ಜಗದೀಶ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇದು ಪಕ್ಕಾ ಆದರೆ ಮುಂದಿನ ದಿನಗಳಲ್ಲಿ ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಹೊರ ಹೋಗಿಲಿದ್ದಾರೆ.

ಇದನ್ನೂ ಓದಿ: Paaru: ಸಂಕಷ್ಟದಲ್ಲಿ ಸಿಲುಕಿದ ಅಖಿಲಾಂಡೇಶ್ವರಿ ಪುತ್ರ ಪ್ರೀತು, ಕಾಪಾಡಲು ಬಂದ್ರಾ ವೀರಯ್ಯ ದೇವ?

ಅನಿರುದ್ಧ್ ಹೊರಹಾಕಲು ಕಾರಣವೇನು?

ಅನಿರುದ್ಧ್ ಮೇಲೆ ಸತತ ಆರೋಪಗಳು ಕೇಳಿ ಬಂದಿವೆ ಎನ್ನಲಾಗಿದೆ. ಮುಖ್ಯವಾಗಿ ಧಾರಾವಾಹಿ ಜನಪ್ರಿಯವಾದಂತೆ ಅನಿರುದ್ಧ್ ವರಸೆಗಳು ಬದಲಾದವು ಅಂತ ಬಲ್ಲವರು ಹೇಳುತ್ತಾರೆ. ಶೂಟಿಂಗ್ ಸೆಟ್‌ನಲ್ಲಿ ಕಿರಿಕಿರಿ, ಆ ರೀತಿ ಮಾಡೋದಿಲ್ಲ ಈ ರೀತಿ ಮಾಡೋದಿಲ್ಲ ಎನ್ನುತ್ತಿದ್ದರು ಅಂತ ಹೇಳಲಾಗುತ್ತಿದೆ.

ಇಂದೂ ಶೂಟಿಂಗ್‌ನಲ್ಲಿ ಕಿರಿಕ್ ಮಾಡಿದ್ರಾ ಅನಿರುದ್ಧ್?

ಇಂದೂ ಕೂಡ ಶೂಟಿಂಗ್ ಸಮಯದಲ್ಲಿ ಅನಿರುದ್ದ್ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಡೈರೆಕ್ಟರ್ ಹೇಳಿದಂತೆ ಕೇಳದೇ, ನಾನು ಈ ರೀತಿ ಆ್ಯಕ್ಟ್ ಮಾಡೋದಿಲ್ಲ ಅಂತ ಹೇಳಿದ್ದಾರೆ ಎನ್ನಲಾಗಿದೆ.

ನಿರ್ಮಾಪಕ ಸಂಘದಿಂದ ಮಹತ್ವದ ಸಭೆ

ಅನಿರುದ್ಧ್ ವರ್ತನೆ ವಿರುದ್ಧ ಕನ್ನಡ ಕಿರುತೆರೆ ನಿರ್ಮಾಪಕರ ಸಂಘಕ್ಕೂ ದೂರು ಹೋಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕನ್ನಡ ಕಿರುತೆರೆ ನಿರ್ಮಾಪಕರ ಸಂಘದಲ್ಲಿ ಸಭೆ ನಡೆಯುತ್ತಿದೆ ಅಂತ ಮೂಲಗಳು ತಿಳಿಸಿವೆ.

ಕಿರುತೆರೆಯಿಂದ ಬ್ಯಾನ್ ಆಗ್ತಾರಾ ಅನಿರುದ್ಧ್?

ನಟ ಅನಿರುದ್ಧ್ ಬರೀ ಜೊತೆ ಜೊತೆಯಲಿ ಧಾರಾವಾಹಿಯಿಂದ ಅಷ್ಟೇ ಹೊರಹೋಗುತ್ತಿಲ್ಲ. ಬದಲಾಗಿ ಅವರನ್ನು ಕನ್ನಡ ಕಿರುತೆರೆಯಿಂದಲೇ ಬ್ಯಾನ್ ಮಾಡುವ ಸಾಧ್ಯತೆ ಇದೆ ಅಂತಾನೂ ಹೇಳಲಾಗುತ್ತಿದೆ.

ಇದನ್ನೂ ಓದಿ: Jote Joteyali: ರಾಜವರ್ಧನ್ ಸಾವಿನ ಹಿಂದೆ ಇರೋ ಸತ್ಯ ಬಯಲು! ಅನು ಈ ಮಾತನ್ನೆಲ್ಲಾ ನಂಬ್ತಾಳಾ?

ಈ ಬಗ್ಗೆ ಧಾರಾವಾಹಿ ತಂಡ ಹೇಳಿದ್ದೇನು?

ಅನಿರುದ್ಧ್ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬರುತ್ತಾರೆ ಎಂಬ ವಿಚಾರ ಈ ಹಿಂದೆಯೂ ಕೇಳಿ ಬಂದಿತ್ತು. ಜೊತೆಗೆ ಅನು ಸಿರಿಮನೆ ಪಾತ್ರಧಾರಿ ಮೇಘ ಶೆಟ್ಟಿ ಕೂಡ ಧಾರಾವಾಹಿಯಿಂದ ಹೊರ ಬರುತ್ತಾರೆ ಎಂಬ ವದಂತಿ ಈ ಹಿಂದೆ ಇತ್ತು. ಎಲ್ಲವೂ ಮುಗಿದು ಎಲ್ಲವೂ ತಣ್ಣಗಾಯ್ತು ಎನ್ನುತ್ತಿದ್ದಂತೆ ಹೊಸ ಬ್ರೇಕಿಂಗ್ ನ್ಯೂಸ್ ಹೊರ ಬಂದಿದೆ. ಆದ್ರೆ ಇದು ಸತ್ಯವೋ, ಸುಳ್ಳೋ ಎನ್ನುವುದು ಶೀಘ್ರವೇ ಗೊತ್ತಾಗಲಿದೆ.
Published by:Annappa Achari
First published: