• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • RRR Producer: ಆಸ್ಕರ್ ಪ್ರಚಾರಕ್ಕೆ ಖರ್ಚು ಮಾಡದ್ದಕ್ಕೆ ನಿರ್ಮಾಪಕರನ್ನೇ ಕಡೆಗಣಿಸಿದ್ರಾ ರಾಜಮೌಳಿ?

RRR Producer: ಆಸ್ಕರ್ ಪ್ರಚಾರಕ್ಕೆ ಖರ್ಚು ಮಾಡದ್ದಕ್ಕೆ ನಿರ್ಮಾಪಕರನ್ನೇ ಕಡೆಗಣಿಸಿದ್ರಾ ರಾಜಮೌಳಿ?

ಆಸ್ಕರ್ ಗೆದ್ದ ತ್ರಿಬಲ್ ಆರ್ ಸಿನಿಮಾ

ಆಸ್ಕರ್ ಗೆದ್ದ ತ್ರಿಬಲ್ ಆರ್ ಸಿನಿಮಾ

ಹೊರದೇಶಗಳಿಗೆ ಪ್ರವಾಸ ಮಾಡುವ ಸಮಯದಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ಹಾಜರಾತಿ ಇಲ್ಲದೆ ಇರುವುದು ಎದ್ದುಕಂಡಿದೆ. ಚಿತ್ರ ಬಿಡುಗಡೆಯಾಗಿ ಕೊಂಚ ಹೆಸರು ಮಾಡಿದ್ದರೂ ನಿರ್ಮಾಪಕರ ಹೆಸರು ಮಾತ್ರ ಮರೆತಂತೆ ಕಾಣುತ್ತಿದೆ.

  • Trending Desk
  • 4-MIN READ
  • Last Updated :
  • Hyderabad, India
  • Share this:

ಪ್ರತಿಷ್ಠಿತ ಆಸ್ಕರ್ (Oscars) ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಆರ್‌ಆರ್‌ಆರ್ (RRR) ಚಿತ್ರದ ನಾಟು ನಾಟು (Naatu Naatu) ಹಾಡು ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ರಾಜಮೌಳಿ (SS Rajamouli) ನಿರ್ದೇಶನದ ಆರ್‌ಆರ್‌ಆರ್ ಚಿತ್ರದಲ್ಲಿ ರಾಮ್ ಚರಣ್ (Ram Charan), ಎನ್‌ಟಿಆರ್ (Jr NTR), ಅಜಯ್ ದೇವಗನ್, ಆಲಿಯಾ ಭಟ್ (Alia Bhatt) ಹೀಗೆ ಅತಿರಥ ಮಹಾರಥ ಕಲಾವಿದರೇ ನಟಿಸಿದ್ದರು. ಚಿತ್ರವನ್ನು ರೂ 500 ಕೋಟಿ ಬಜೆಟ್‌ನಲ್ಲಿ (Budget) ಚಿತ್ರಿಸಲಾಗಿದೆ.


ಚಿತ್ರ ನಿರ್ಮಾಪಕರಾದ ದಾನಯ್ಯ ಖುಷಿಯಾಗಿಲ್ಲ ಏಕೆ?


ಆದರೆ ಇಷ್ಟೆಲ್ಲಾ ಖ್ಯಾತಿ ಪಡೆದುಕೊಂಡ ಆರ್‌ಆರ್‌ಆರ್ ಚಿತ್ರದ ನಿರ್ಮಾಪಕರಾದ ದಾನಯ್ಯ ಮಾತ್ರ ಖುಷಿಯಾಗಿಲ್ಲ. ಮೊದಲೇ ತಿಳಿಸಿದಂತೆ ಚಿತ್ರದ ನಿರ್ಮಾಣಕ್ಕೆ 500 ಕೋಟಿಗಿಂತಲೂ ಹೆಚ್ಚಿನ ಖರ್ಚಾಗಿದೆ. ಆದರೆ ಚಿತ್ರದ ನಿರಂತರ ಮುಂದೂಡಿಕೆಯಿಂದ ಇದು ನಿರ್ಮಾಪಕ ದಾನಯ್ಯ ಅವರ ಮೇಲೆ ಹೆಚ್ಚುವರಿ ಹೊರೆಯನ್ನು ಹಾಕಿದೆಯಂತೆ.


ಎಣಿಸಿದ ಲಾಭ ತಂದುಕೊಟ್ಟಿಲ್ಲ; ನಿರ್ಮಾಪಕರ ಅಳಲು


ಚಿತ್ರ ಎಣಿಸಿದಷ್ಟೂ ಯಶಸ್ಸನ್ನು ಪಡೆದುಕೊಳ್ಳಲಿಲ್ಲ ಹಾಗೂ ಅಷ್ಟೊಂದು ಗಳಿಕೆಯನ್ನು ತರಲಿಲ್ಲ. ಇತರ ಸ್ಥಳಗಳಲ್ಲಿ ಚಿತ್ರ ಅಷ್ಟೊಂದು ಹೆಸರೂ ಮಾಡಲಿಲ್ಲ ಒಂದು ರೀತಿಯಲ್ಲಿ ಈ ಚಿತ್ರ ನಷ್ಟವನ್ನುಂಟು ಮಾಡಿದೆ.




ರಾಜಮೌಳಿಯವರ ಚಿತ್ರ ಎಂದರೆ ಸಾಕಷ್ಟು ಹೆಸರಿನೊಂದಿಗೆ ಗಳಿಕೆ ಕೂಡ ಇದ್ದೇ ಇರುತ್ತದೆ ಎಂಬುದು ಹೆಚ್ಚಿನ ನಿರ್ಮಾಪಕರ ಲೆಕ್ಕಾಚಾರ ಆದರೆ ದಾನಯ್ಯ ಮಾತ್ರ ಈ ಚಿತ್ರದಿಂದ ಆರ್ಥಿಕವಾಗಿ ಲಾಭವನ್ನು ಪಡೆದುಕೊಂಡಿಲ್ಲ.


ಮಗಧೀರ, ಬಾಹುಬಲಿ ದೊಡ್ಡ ಪ್ರಮಾಣದಲ್ಲಿ ಆದಾಯ ಗಳಿಸಿತ್ತು


ಅವರ ಹಿಂದಿನ ದೊಡ್ಡ-ಪ್ರಮಾಣದ ಚಲನಚಿತ್ರಗಳಾದ ಮಗಧೀರ ಮತ್ತು ಬಾಹುಬಲಿ ಚಿತ್ರಗಳು ನಿರ್ಮಾಪಕರಿಗೆ ಹೆಚ್ಚಿನ ಲಾಭವನ್ನು ತಂದಿದ್ದವು. ಚಿತ್ರ ಬಿಡುಗಡೆಯಾದ ನಂತರ ಆಸ್ಕರ್ ಪ್ರಚಾರಕ್ಕಾಗಿ ಹಣ ಖರ್ಚುಮಾಡುವಂತೆ ರಾಜಮೌಳಿ ದಾನಯ್ಯ ಅವರನ್ನು ಕೇಳಿಕೊಂಡಿದ್ದರು.


ಆದರೆ ದಾನಯ್ಯ ಅವರಿಗೆ ಇನ್ನಷ್ಟು ಹಣ ಖರ್ಚುಮಾಡುವ ಇರಾದೆ ಇರಲಿಲ್ಲ. ಇದರಿಂದ ದಾನಯ್ಯ ಹಾಗೂ ರಾಜಮೌಳಿ ನಡುವೆ ಘರ್ಷಣೆ ಉಂಟಾಗಿದೆ ಎಂದು ವರದಿಯಾಗಿದೆ. ಆರ್‌ಆರ್‌ಆರ್ ಚಿತ್ರ ದಾನಯ್ಯ ಅವರನ್ನು ನಿರ್ಲಕ್ಷಿಸಿ ಮುಂದುವರಿಯಿತು.


ಆಸ್ಕರ್ ಅಭಿಯಾನದಲ್ಲಿ ದಾನಯ್ಯ ಹೆಸರೇ ಇಲ್ಲ


ಸಂಪೂರ್ಣ ಆಸ್ಕರ್ ಅಭಿಯಾನದ ಸಮಯದಲ್ಲಿಯೂ ಸಹ, ನಿರ್ಮಾಪಕರ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಮತ್ತು ಆಸ್ಕರ್ ವಿಜಯೋತ್ಸವಕ್ಕೆ ಅವರನ್ನು ಆಹ್ವಾನಿಸಲಾಗಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, RRR ದಾನಯ್ಯ ಅವರಿಗೆ ವೈಯಕ್ತಿಕವಾಗಿ ಮತ್ತು ಆರ್ಥಿಕವಾಗಿ ಏನನ್ನೂ ನೀಡಿಲ್ಲ ಎಂಬುದು ಖಚಿತವಾಗಿದೆ.


ವಿದೇಶಕ್ಕೂ ನಿರ್ಮಾಪಕರನ್ನು ತಂಡ ಕರೆದೊಯ್ದಿಲ್ಲ


ಆರ್‌ಆರ್‌ಆರ್ ಚಿತ್ರತಂಡ ಯುಎಸ್ ಹಾಗೂ ಯುಕೆನಲ್ಲೂ ಚಿತ್ರದ ಪ್ರವಾಸ ಮಾಡಿದೆ. ಗೋಲ್ಡನ್ ಗ್ಲೋಬ್ಸ್ ಮತ್ತು ಆಸ್ಕರ್‌ಗಳಿಗಾಗಿ US ಪ್ರವಾಸ ಪ್ರಾರಂಭವಾಗುವ ಮೊದಲು ಚಲನಚಿತ್ರದ ಬಿಡುಗಡೆಗಾಗಿ ಜಪಾನ್‌ಗೆ ಭೇಟಿ ನೀಡಿದೆ.




ಆದರೆ ಈ ಹೊರದೇಶಗಳಿಗೆ ಪ್ರವಾಸ ಮಾಡುವ ಸಮಯದಲ್ಲಿ ನಿರ್ಮಾಪಕ ಡಿವಿವಿ ದಾನಯ್ಯ ಹಾಜರಾತಿ ಇಲ್ಲದೆ ಇರುವುದು ಎದ್ದುಕಂಡಿದೆ. ಚಿತ್ರ ಬಿಡುಗಡೆಯಾಗಿ ಕೊಂಚ ಹೆಸರು ಮಾಡಿದ್ದರೂ ನಿರ್ಮಾಪಕರ ಹೆಸರು ಮಾತ್ರ ಮರೆತಂತೆ ಕಾಣುತ್ತಿದೆ ಎಂಬುದು ನಿಚ್ಚಳವಾಗಿ ಕಂಡುಬಂದಿದೆ.


ಇದನ್ನೂ ಓದಿ: Kabzaa: ಕಬ್ಜ 2 ಸಿನಿಮಾದಲ್ಲಿ ಪವನ್ ಕಲ್ಯಾಣ್! ಚಿತ್ರತಂಡದಿಂದ ಸಿಕ್ತು ಹಿಂಟ್


ಬಾಹುಬಲಿ ನಿರ್ಮಾಪಕ ಶೋಬು ಯಾರ್ಲಗಡ್ಡ ಜೊತೆಗೆ ರಾಜಮೌಳಿ ಕುಟುಂಬ ಆಸ್ಕರ್ ಪ್ರಚಾರದ ಎಲ್ಲಾ ಖರ್ಚುಗಳನ್ನು ಮಾಡಿದೆ ಎಂಬುದು ವರದಿಯಾಗಿದೆ. ದಾನಯ್ಯ ಆಸ್ಕರ್ ಪ್ರಚಾರಕ್ಕೆ ಖರ್ಚುಮಾಡದೇ ಇರುವುದೇ ಚಿತ್ರ ತಂಡ ಅವರನ್ನು ಕಡೆಗಣಿಸಿದೆ ಎಂದು ಸುದ್ದಿಪತ್ರಿಕೆಗಳು ವರದಿ ಮಾಡಿವೆ.


ನಿರ್ಮಾಪಕರನ್ನು ಕಡೆಗಣಿಸಿರುವ ಚಿತ್ರ ತಂಡ


ಇತ್ತೀಚಿನ ಸಂದರ್ಶನವೊಂದರಲ್ಲಿ ನಿರ್ಮಾಪಕರು ಆರ್‌ಆರ್‌ಆರ್ ತಂಡದ ಬಗ್ಗೆ ಹೆಮ್ಮೆಪಡುತ್ತೇನೆ. ತಮ್ಮ ಚಿತ್ರಕ್ಕೆ ಆಸ್ಕರ್ ಸಿಗುತ್ತಿದೆ ಇದು ಅತ್ಯಂತ ಗೌರವದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

top videos


    ಆಸ್ಕರ್ ವೇದಿಕೆಗೆ ಹೋಗುವ ಮೊದಲು ರಾಜಮೌಳಿ, ಎನ್‌ಟಿಆರ್ ಅಥವಾ ರಾಮ್ ಚರಣ್ ಮೂವರಲ್ಲಿ ಯಾರೂ ಅವರನ್ನು ಸಂಪರ್ಕಿಸಿಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ.

    First published: