Samantha: ನಟಿ ಸಮಂತಾ-ಚಿಟ್ಟಿಬಾಬು ನಡುವೆ ನಿಲ್ಲದ ಸಮರ! ಸೌಂದರ್ಯ ನೋಡಿ ಕಲಿಯಮ್ಮ ಎಂದಿದ್ಯಾಕೆ ನಿರ್ಮಾಪಕ?
Samantha: ನಟಿ ಸಮಂತಾ-ಚಿಟ್ಟಿಬಾಬು ನಡುವೆ ನಿಲ್ಲದ ಸಮರ! ಸೌಂದರ್ಯ ನೋಡಿ ಕಲಿಯಮ್ಮ ಎಂದಿದ್ಯಾಕೆ ನಿರ್ಮಾಪಕ?
ನಟಿ ಸಮಂತಾ ಹಾಗೂ ನಿರ್ಮಾಪಕ ಚಿಟ್ಟಿಬಾಬು ನಡುವಿನ ಟಾಕ್ ವಾರ್ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಸಮಂತಾ ಹೆಸರು ಹೇಳದೆ ಟಾಂಗ್ ಕೊಟ್ರೆ, ಚಿಟ್ಟಿ ಬಾಬು ನಟಿಯೊಬ್ಬರನ್ನು ಉದಾಹರಣೆಯಾಗಿ ನೀಡಿ ಮತ್ತೆ ಸಮಂತಾಗೆ ತಿರುಗೇಟು ನೀಡಿದ್ದಾರೆ.
ನಟಿ ಸಮಂತಾ ಹಾಗೂ ನಿರ್ಮಾಪಕ ಚಿಟ್ಟಿಬಾಬು ನಡುವಿನ ಟಾಕ್ ವಾರ್ ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ಸಮಂತಾ ಹೆಸರು ಹೇಳದೆ ಟಾಂಗ್ ಕೊಟ್ರೆ, ಚಿಟ್ಟಿ ಬಾಬು ನಟಿಯೊಬ್ಬರನ್ನು ಉದಾಹರಣೆಯಾಗಿ ನೀಡಿ ಮತ್ತೆ ಸಮಂತಾಗೆ ತಿರುಗೇಟು ನೀಡಿದ್ದಾರೆ.
ಶಾಕುಂತಲಂ ಸಿನಿಮಾ ರಿಲೀಸ್ ಬಳಿಕ ಸಮಂತಾ ಬಗ್ಗೆ ನೆಗೆಟಿವ್ ಕಮೆಂಟ್ಗಳು ಕೇಳಿ ಬರ್ತಿದೆ. ನಟಿ ಸಮಂತಾ ಬಹು ನಿರೀಕ್ಷಿತ ಸಿನಿಮಾ ಶಾಕುಂತಲಂ ತೆರೆ ಕಂಡು ಮಕಾಡೆ ಮಲಗಿತು. ಚಿತ್ರ ಸೋತ ಬಳಿಕ ಟಾಲಿವುಡ್ನಲ್ಲಿ ಸಮಂತಾ ಸಿನಿಮಾ ಕೆರಿಯರ್ ಬಗ್ಗೆ ಚರ್ಚೆ ಜೋರಾಗಿದೆ.
ನಟಿ ಸಮಂತಾ ನಿರ್ಮಾಪಕ ಚಿಟ್ಟಿಬಾಬು ಹೆಸರು ಉಲ್ಲೇಖ ಮಾಡದೇ, ಕಿವಿಯಲ್ಲಿ ಬೆಳೆದಿರುವ ಕೂದಲಿನ ಬಗ್ಗೆ ಮಾತಾಡಿದ್ದ ಸಮಂತಾಗೆ ನಿರ್ಮಾಪಕ ಚಟ್ಟಿ ಬಾಬು ಮತ್ತೆ ತಿರುಗೇಟು ನೀಡಿದ್ದಾರೆ. ಸಮಂತಾ ವೃತ್ತಿಪರ ನಟಿಯಲ್ಲ ಎಂದು ಆರೋಪಿಸಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ ನಿರ್ಮಾಪಕ ಚಿಟ್ಟಿ ಬಾಬು, ನಟಿ ಸೌಂದರ್ಯ ಅವರನ್ನು ಉದಾಹರಣೆಯಾಗಿ ನೀಡಿ, ನಟಿ ಸಮಂತಾ ವಿರುದ್ಧ ಕೆಂಡಕಾರಿದ್ದಾರೆ. ಸಮಂತಾ ಅನಾರೋಗ್ಯದ ಕುಂಟು ನೆಪ ಹೇಳ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದೆ ನಟಿ ಸೌಂದರ್ಯ ಅವರ ಜೊತೆ ಗೆಲುಪು ಹೆಸರಿನ ಸಿನಿಮಾ ಮಾಡಿದಾಗ ಆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಸೌಂದರ್ಯ ನಟಿಸಿದ್ದರು. ಸೌಂದರ್ಯ ಶೂಟಿಂಗ್ ಸೆಟ್ಗೆ ಬಂದಾಗ ಆಕೆಗೆ ಆರೋಗ್ಯ ಸರಿಯಿರಲಿಲ್ಲ ಎಂದು ಹೇಳಿದ್ರು.
ಸೌಂದರ್ಯ ಅನಾರೋಗ್ಯ ನನ್ನ ಗಮನಕ್ಕೂ ಬಂತು. ಆರೋಗ್ಯ ಸರಿಯಿಲ್ಲದಿದ್ದರೆ ಶೂಟಿಂಗ್ ಮುಂದೂಡಬಹುದು ಎಂದು ನಾನು ಹೇಳಿದೆ. ಆದ್ರೆ ಶೂಟಿಂಗ್ ಮುಂದಕ್ಕೆ ಹಾಕೋದು ಬೇಡ ಎಂದು ನಟಿ ಸೌಂದರ್ಯ ಹೇಳಿದ್ರು.
ಸುಹಾಸಿನಿ, ಕೋಟಾ ಶ್ರೀನಿವಾಸ್ ರಾವ್, ನರೇಶ್ ಇನ್ನೂ ದೊಡ್ಡ ದೊಡ್ಡ ನಟರಿದ್ದಾರೆ ಹೀಗಿದ್ದಾಗ ನನಗಾಗಿ ಶೂಟಿಂಗ್ ಮುಂದೂಡುವುದು ಬೇಡ ನಾನು ಶಾಟ್ ನೀಡುತ್ತೇನೆ ಎಂದು ಹೇಳಿ ನಟಿಸಿದರು. ಇದು ನಿಜವಾದ ವೃತ್ತಿಪರತೆ ಎಂದು ಹೇಳಿವ ಮೂಲಕ ಚಿಟ್ಟಿಬಾಬು ಸಮಂತಾಗೆ ಟಾಂಗ್ ಕೊಟ್ಟಿದ್ದಾರೆ.
ಆರೋಗ್ಯ ಸರಿಯಿಲ್ಲದೇ ಇದ್ದಾಗಲೂ ಚಿತ್ರ ಶೂಟಿಂಗ್ಗೆ ಸಮಸ್ಯೆ ಆಗಬಾರದು ಎಂದು ನಟಿಸಿದ ಹಲವು ನಟ-ನಟಿಯರಿದ್ದಾರೆ. ಅದು ಅವರಲ್ಲಿರುವ ವೃತ್ತಿಪರತೆ, ಅದು ದೊಡ್ಡ ವಿಷಯವಲ್ಲ, ನಟರಾಗಿರುವವರಿಗೆ ಇರಬೇಕಾದ ಜವಾಬ್ದಾರಿ ಎಂದು ಹೇಳಿದ್ದಾರೆ.
ಆದರೆ ಸಮಂತಾ ತಮಗೆ ಹುಷಾರಿಲ್ಲದಿದ್ದರೂ ನಟಿಸಿದ್ದನ್ನು ದೊಡ್ಡ ವಿಷಯವನ್ನಾಗಿ ಹೇಳಿಕೊಂಡು ಪ್ರಚಾರ ಪಡೆದಿದ್ದಾರೆ. ಸಿಂಪತಿಯನ್ನಾಗಿ ಬಳಸಿ ಸಿನಿಮಾದ ಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಮತ್ತೆ ಸಮಂತಾ ವಿರುದ್ಧ ನಿರ್ಮಾಪಕ ಚಿಟ್ಟಿಬಾಬು ಆರೋಪ ಮಾಡಿದ್ದಾರೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ