ಮೆಜೆಸ್ಟಿಕ್ ನಿರ್ಮಾಪಕರ ಪಾಲಾದ ಜೋಡೆತ್ತು ಟೈಟಲ್: ದರ್ಶನ್ ಜತೆ ಕಾಣಿಸಿಕೊಳ್ಳುವ ನಟನಾರು?

ಇದರ ಬೆನ್ನಲ್ಲೇ ಇದೀಗ ಜೋಡೆತ್ತುವಿನಲ್ಲಿ ಬಾಕ್ಸಾಫೀಸ್​ ಸುಲ್ತಾನ ಇರಲಿರುವುದು ಪಕ್ಕಾ ಎನ್ನಲಾಗುತ್ತಿದೆ. ಹಾಗೆಯೇ ದರ್ಶನ್​ ಜೊತೆಗಾರನಾಗಿ ಈ ಚಿತ್ರದಲ್ಲಿ ನಟ ಯಶ್ ಕಾಣಿಸಲಿದ್ದಾರಾ ಎಂಬ ಪ್ರಶ್ನೆ ಸಹ ಹುಟ್ಟಿಕೊಂಡಿದೆ.

zahir | news18
Updated:May 15, 2019, 9:45 PM IST
ಮೆಜೆಸ್ಟಿಕ್ ನಿರ್ಮಾಪಕರ ಪಾಲಾದ ಜೋಡೆತ್ತು ಟೈಟಲ್: ದರ್ಶನ್ ಜತೆ ಕಾಣಿಸಿಕೊಳ್ಳುವ ನಟನಾರು?
@darshanfanFB
zahir | news18
Updated: May 15, 2019, 9:45 PM IST
ಮಂಡ್ಯ ಲೋಕಸಭಾ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ಪ್ರಚಾರದಲ್ಲಿ ಭಾಗಿಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಆಡಿದ ಬಹುತೇಕ ಡೈಲಾಗ್​ಗಳು ಇದೀಗ ಸಿನಿಮಾ ಟೈಟಲ್​ ಆಗುವಲ್ಲಿಗೆ ಬಂದು ನಿಂತಿದೆ. ಅದರಲ್ಲೂ 'ದಾಸ' ಉದುರಿಸಿದ್ದ 'ಜೋಡೆತ್ತು' ಡೈಲಾಗ್ ಸ್ಯಾಂಡಲ್​ವುಡ್​ನಲ್ಲಿ ಹೊಸ ಸೆನ್ಸೇಷನ್ ಹುಟ್ಟು ಹಾಕಿತ್ತು.

ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ 'ಜೋಡೆತ್ತು' ಜೋಡಿಗಳಾಗಿ ಸ್ಯಾಂಡಲ್​ವುಡ್​ 'ಸಾರಥಿ' ಹಾಗೂ 'ರಾಕಿ ಭಾಯ್' ಮಿಂಚಿದ್ದರು. ಇದರಿಂದ 'ಜೋಡೆತ್ತು' ಸಿನಿಮಾ ಬರಲಿದೆ ಎಂಬ ಊಹಾಪೋಹಗಳು ಹುಟ್ಟಿಕೊಂಡಿತ್ತು. ಇದೀಗ ಇದರ ಮೊದಲ ಹೆಜ್ಜೆಯಾಗಿ 'ಜೋಡೆತ್ತು' ಟೈಟಲ್ ರಿಜಿಸ್ಟರ್ ಆಗಿದೆ.

ದರ್ಶನ್​ ತೂಗುದೀಪ್ ಅವರನ್ನು ಸ್ಯಾಂಡಲ್​ವುಡ್​ಗೆ ಪರಿಚಯಿಸಿದ್ದ 'ಮೆಜೆಸ್ಟಿಕ್' ಚಿತ್ರ ನಿರ್ಮಾಪಕ ರಾಮಮೂರ್ತಿ 'ಜೋಡೆತ್ತು' ಶೀರ್ಷಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ನಿರ್ಮಾಪಕರು 'ದಾಸ'ನೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಮುಗಿಸಿದ್ದಾರಂತೆ.

ಇದರ ಬೆನ್ನಲ್ಲೇ ಇದೀಗ 'ಜೋಡೆತ್ತು'ವಿನಲ್ಲಿ ಬಾಕ್ಸಾಫೀಸ್​ ಸುಲ್ತಾನ ಇರಲಿರುವುದು ಪಕ್ಕಾ ಎನ್ನಲಾಗುತ್ತಿದೆ. ಹಾಗೆಯೇ ದರ್ಶನ್​ ಜೊತೆಗಾರನಾಗಿ ಈ ಚಿತ್ರದಲ್ಲಿ ನಟ ಯಶ್ ಕಾಣಿಸಲಿದ್ದಾರಾ ಎಂಬ ಪ್ರಶ್ನೆ ಸಹ ಹುಟ್ಟಿಕೊಂಡಿದೆ. ಆದರೆ ಈ ಪ್ರಶ್ನೆಗೆ  ರಾಕಿ ಭಾಯ್ ಕಡೆಯಿಂದ ಇಲ್ಲ ಎನ್ನುವ ಉತ್ತರ ಬಂದಿದೆ. ಮಂಡ್ಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಯಶ್, ನಾನು 'ಜೋಡೆತ್ತು' ಸಿನಿಮಾದಲ್ಲಿ ನಟಿಸುತ್ತಿಲ್ಲ. ದರ್ಶನ್ ಅವರಂತಹ ದೊಡ್ಡ ಸ್ಟಾರ್ ಜೊತೆ ಸಿನಿಮಾ ಮಾಡಬೇಕೆಂದರೆ ಒಳ್ಳೆಯ ಕಥೆ ಸಿಗಬೇಕು” ಎಂದು ಹೇಳಿದ್ದಾರೆ.

ಇತ್ತ ಕಡೆ ನಿರ್ಮಾಪಕ ರಾಮಮೂರ್ತಿ ಅವರು 'ರಾಕಿಂಗ್ ಸ್ಟಾರ್' ಜೊತೆಗೂ ಒಂದು ಸುತ್ತಿನ ಮಾತುಕತೆಗೆ ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹಾಗೆಯೇ 'ಜೋಡೆತ್ತು' ಸಿನಿಮಾದಲ್ಲಿ ದರ್ಶನ್​ ಒಬ್ಬರೇ ಕಾಣಿಸಲಿದ್ದಾರೆಂಬ ಗಾಸಿಪ್​ಗಳು ಗಾಂಧಿನಗರದಲ್ಲಿ ಹುಟ್ಟಿಕೊಂಡಿದೆ. ಈಗಾಗಲೇ ಕಥೆ ಸಿದ್ಧವಾಗುತ್ತಿದ್ದು, 'ಜೋಡೆತ್ತು'ಗಳಾಗಿ ದರ್ಶನ್​ ಡಬಲ್ ರೋಲ್​ನಲ್ಲಿ ಕಾಣಿಸಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ. ಈ ಹಿಂದೆ ಚಾಲೆಂಜಿಂಗ್ ಸ್ಟಾರ್ 'ಬಾಸ್' ಎಂಬ ಸಿನಿಮಾದಲ್ಲಿ ದ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ವಿರಾಟ್​ ಕೊಹ್ಲಿಯಂತೆ ಬ್ಯಾಟ್ ಬೀಸುತ್ತಿರುವ ಪಾಕ್ ಯುವ ಕ್ರಿಕೆಟಿಗ: ವಿಡಿಯೋ ವೈರಲ್
Loading...

ಅದೇ ರೀತಿ 'ಜೋಡೆತ್ತು' ಸಿನಿಮಾಗಾಗಿ ದ್ವಿ ಪಾತ್ರದ ಕಥೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂಬ ಟಾಕುಗಳು ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿ ಕೇಳಿ ಬರುತ್ತಿದೆ. ಒಟ್ಟಿನಲ್ಲಿ 'ಜೋಡೆತ್ತು' ಯಾರಾಗಲಿದ್ದಾರಾ ಎಂಬ ಒಂದು ಪ್ರಶ್ನೆಗೆ ದರ್ಶನ್ ಎಂಬ ಉತ್ತರ ಸಿಕ್ಕಿದೆ. ಮತ್ತೊಂದು ಜೋಡೆತ್ತು ಯಶ್ ಆಗಲಿ ಎಂಬುದೇ  ಡಿ ಬಾಸ್ - ರಾಕಿ ಭಾಯ್ ಅಭಿಮಾನಿಗಳ ಮನದಾಸೆ.

ಇದನ್ನೂ ಓದಿ: 'ಗಜ'ನ ಫೋಟೋಗೆ ದುಬಾರಿ ಬೆಲೆ ಕೊಟ್ಟ ಚಿಕ್ಕಣ್ಣ: ಕಾಮಿಡಿ ನಟನ ಕಳಕಳಿಗೆ 'ಡಿ ಬಾಸ್' ಬಹುಪರಾಕ್

First published:May 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...