ಕೊರೋನಾ ಎರಡನೇ ಅಲೆ ಇಡೀ ದೇಶದಲ್ಲಿ ರುದ್ರ ತಾಂಡವ ಮಾಡುತ್ತಿದೆ. ಒಂದು ಕಡೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರರೆ, ಅದರ ಜೊತೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಗುತ್ತಿರುವ ಸಾವಿನ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇಡೀ ದೇಶದಲ್ಲಿ ಈಗ ಕೊರೋನಾ ರಣಕೇಕೆ ಕೇಳಿಸುತ್ತಿದೆ. ಒಂದು ಕಡೆ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಇದರ ಜೊತೆಗೆ ಪ್ರಾಣವಾಯುವಿನ ಕೊರತೆ ಬೇರೆ. ಹೌದು, ಬೆಡ್ ಸಿಗದೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ಹಾಗೈ ಆಮ್ಲಜನಕ ಸಿಗದೆ ಸಾಕಷ್ಟು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಸಹ ಸೋಂಕಿತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಕೊರೋನಾ ಲಸಿಕೆ ಕೊರತೆ ಯ ಕೂಗು ಸಹ ಕೇಳಿ ಬರುತ್ತಿದೆ. ಈಗಲೂ ಸಾಕಷ್ಟು ಮಂದಿ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಇದರಿಂದಾಗಿಯೇ ಕಲ್ಯಾಣ ಮಂಟಪ ಹಾಗೂ ಸಂಘದ ಭವನಗಳಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆಯಬೇಕೆಂಬ ಮಾತುಗಳು ಕೇಳಿ ಬರುತ್ತಿವೆ.
ಕೊರೋನಾ ಕಾಟ ಬಣ್ಣದ ಲೋಕಕ್ಕೂ ತಪ್ಪಿಲ್ಲ. ಸ್ಯಾಂಡಲ್ವುಡ್ನಲ್ಲೂ ಸಹ ಸಾಕಷ್ಟು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಇರುವ ಪರಿಸ್ಥಿತಿಯಿಂದಾಗಿ ಸಾಕಷ್ಟು ಮಂದಿ ಸೋಂಕಿತರಿಗೆ ಆಸ್ಪತ್ರೆಗೆ ಸೇರಲು ಬೆಡ್ಗಳೇ ಸಿಗುತ್ತಿಲ್ಲ. ಹೀಗಿರುವಾಗಲೇ ಬಿಗ್ ಬಾಸ್ ಮನೆಯಲ್ಲಿ ಕೋವಿಡ್ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯ ಮಾಡಲಾಗುತ್ತಿದೆ.
ಹೌದು, ಬಿಗ್ ಬಾಸ್ ಮನೆ ಮಾತ್ರವಲ್ಲದೆ , ಕನ್ನಡ ಚಲನಚಿತ್ರ ಕಲಾವಿದರ ಸಂಘ ಹಾಗೂ ಕಂಠೀರವ ಸ್ಟುಡಿಯೋದಲ್ಲೂ ಕೋವಿಡ್ ಕೇಂದ್ರವನ್ನು ಆರಂಭಿಸುವಂತೆ ನಿರ್ಮಾಪಕ ಭಾ.ಮ. ಹರೀಶ್ ಆಗ್ರಹಿಸುತ್ತಿದ್ದಾರೆ.
ಕನ್ನಡ ಸಿನಿರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಸದಸ್ಯರು ಹಾಗೂ ಅವರ ಕುಟುಂಬದವರಿಗೆ ಸೋಂಕಾದಲ್ಲಿ ಅವರಿಗೆ ಚಿಕಿತ್ಸೆ ನೀಡಲು ಈ ಕೋವಿಡ್ ಕೇಂದ್ರಗಳನ್ನು ಬಳಸಿಕೊಳ್ಳಬಹುದು. ಅದಕ್ಕಾಗಿ ಸಿನಿರಂಗದವರಿಗೆಂದೇ ಬಿಗ್ ಬಾಸ್ ಮನೆ, ಕಂಠೀರವ ಸ್ಟುಡಿಯೋ ಹಾಗೂ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಕೋವಿಡ್ ಕೇಂದ್ರಗಳನ್ನು ಆರಂಭಿಸಿ ಎಂದು ಭಾ ಮಾ ಹರೀಶ್ ಅವರು ಮುಖ್ಯಮಂತ್ರಿಗಳಿಗೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಲಿಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಅಮ್ಮ ಶ್ರೀದೇವಿಯ ಅಪರೂಪದ ಫೋಟೋಗಳನ್ನು ಹಂಚಿಕೊಂಡ ಜಾಹ್ನವಿ ಕಪೂರ್..!
ಬಿಗ್ ಬಾಸ್ ಕಾರ್ಯಕ್ರಮ ಕಳೆದ ಭಾನುವಾರದಂದೇ ರದ್ದುಗೊಂಡಿದ್ದು, ಅಲ್ಲಿಂದ ಸ್ಪರ್ಧಿಗಳನ್ನು ಮನೆಗಳಿಗೆ ಕಳುಹಿಸಲಾಗಿದೆ. ಹೀಗಿರುವಾಗ ಆ ಜಾಗ ಈಗ ಖಾಲಿಯಾಗಿದೆ. ಈ ಹಿಂದೆಯೂ ನೆಟ್ಟಿಗರು ಬಿಗ್ ಬಾಸ್ ಕಾರ್ಯಕ್ರಮವನ್ನು ನಿಲ್ಲಿಸಿ, ಅಲ್ಲಿ ಕೋವಿಡ್ ಕೇಂದ್ರಗಳನ್ನು ಮಾಡಿ ಎಂದು ಒತ್ತಾಯಿಸಿದ್ದರು.
ಕೊರೋನಾ ಇಡೀ ದೇಶವನ್ನೇ ಆತಂಕಕ್ಕೆ ದೂಡಿದೆ. ಇದಕ್ಕೆ ಸ್ಯಾಂಡಲ್ವುಡ್ ಹಾಗೂ ಕನ್ನಡ ಕಿರುತೆರೆ ಕ್ಷೇತ್ರ ಸಹ ಹೊರತಾಗಿಲ್ಲ. ಕೊರೋನಾ ಲಾಕ್ಡೌನ್ನಿಂದಾಗಿ ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣದಿಂದಲೇ ಈಗ ಉಪೇಂದ್ರ ಅವರು ಕಿರುತೆರೆ ಹಾಗೂ ಬೆಳ್ಳಿತೆರೆಯ ಕಲಾವಿದರು, ತಂತ್ರಜ್ಙರು ಹಾಗೂ ಕಾರ್ಮಿಕರ ಕುಟುಂಬಗಳ ನೆರವಿಗೆ ಬಂದಿದ್ದಾರೆ ಉಪೇಂದ್ರ.
ಕೊರೋನಾ ಲಾಕ್ಡೌನ್ನಿಂದಾಗಿ ಸದ್ಯ ಚಿತ್ರೀಕರಣ ನಡೆಯುತ್ತಿಲ್ಲ. ಇದರಿಂದಾಗಿ ಕಲಾವಿದರು, ತಂತ್ರಜ್ಙರು ಹಾಗೂ ಕಾರ್ಮಿಕರು ಕೆಲಸವಿಲ್ಲದೆ ಪರೆದಾಡುವಂತಾಗಿದೆ. ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣದಿಂದ ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ತರನ್ನು ಸಂಪರ್ಕಿಸಿ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Upendra: ಕೊರೋನಾ ಲಾಕ್ಡೌನ್: ಸಿನಿ ರಂಗದ ಜೊತೆಗೆ ಕಿರುತೆರೆ ಕಾರ್ಮಿಕರ ನೆರವಿಗೆ ಬಂದ ಉಪೇಂದ್ರ..!
ಕೇವಲ ಬೆಳ್ಳಿತೆರೆ ಅಲ್ಲದೆ ಕಿರುತೆರೆಯ ಕಾರ್ಮಿಕರಿಗೂ ಉಪೇಂದ್ರ ಸಹಾಯ ಮಾಡುತ್ತಿದ್ದಾರೆ. ಎಸ್. ಕೆ. ಸ್ಟೀಲ್ಸ್ ಕಂಪನಿಯ ವತಿಯಿಂದ ಐದು ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುತ್ತೇವೆಂದು ಮುಂದೆ ಬಂದಿದ್ದಾರೆ. ಈ ಹಣವನ್ನು ಪ್ರತ್ಯೇಕವಾಗಿ ಕರೋನದಿಂದಾಗಿ ಸಂಕಷ್ಟದಲ್ಲಿರುವ ಕಿರುತೆರೆ ಕಲಾವಿದರು ಕಾರ್ಮಿಕರಿಗೆ ನೀಡಲು ಇಚ್ಛಿಸುತ್ತೇನೆ ಎಂದಿದ್ದಾರೆ ರಿಯಲ್ ಸ್ಟಾರ್ ಉಪ್ಪಿ.
.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ