Sai Dharam Tej Accident: ನಟ ಸಾಯಿ ಧರಮ್ ತೇಜ್ ಮೂಳೆ ಶಸ್ತ್ರಚಿಕಿತ್ಸೆ ಯಶಸ್ವಿ...

Sai Dharam Tej Accident: ಶುಕ್ರವಾರ ರಾತ್ರಿ ಅವರು ಸ್ಪೋರ್ಟ್​​ ಬೈಕ್​ ರೈಡ್​ ವೇಳೆ ಸ್ಕಿಡ್​ ಆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಅಪಘಾತಕ್ಕೀಡಾಗಿದ್ದ ಟಾಲಿವುಡ್ (Tollywood)ನಟ ಸಾಯಿ ಧರಮ್ ತೇಜ್ ,(sai Dharam Tej) ಆರೋಗ್ಯ  ಸ್ಥಿರವಾಗಿದ್ದು, ಸುಧಾರಿಸುತ್ತಿದೆ ಎಂದು ಹೈದರಾಬಾದ್‌ನ ಅಪೋಲೋ(Apollo) ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.  ಸಾಯಿ ಧರಂ ತೇಜ್ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ. ಕಾಲರ್ ಮೂಳೆ ಮುರಿದಿದ್ದು, ಅದರ ಶಸ್ತ್ರ ಚಿಕಿತ್ಸೆಯನ್ನು ನಮ್ಮ ತಜ್ಞರ ತಂಡವು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅವರನ್ನು ಸಧ್ಯ ತೀವ್ರ ನಿಗಾಘಟಕದಲ್ಲಿ ಇಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 

ಶುಕ್ರವಾರ ಸಂಜೆ 7: 30 ರ ಸುಮಾರಿಗೆ ರಸ್ತೆ ಅಪಘಾತಕ್ಕೆ ಒಳಗಾಗಾಗಿದ್ದ  ಸಾಯಿ ಧರಮ್ ತೇಜ್​ಗೆ ಭಾರಿ ಗಾಯಗಳಾಗಿದ್ದವು ಹಾಗೂ  ಕಾಲರ್ ಮೂಳೆ ಮುರಿದಿತ್ತು. ಮೊದಲು ಖಾಸಗಿ ಆಸ್ಪತ್ರೆಗಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ನಂತರ  ಅಪೋಲೋಗೆ ಸ್ಥಳಾಂತರಿಸಲಾಯಿತು. ವರದಿಗಳ ಪ್ರಕಾರ, ಹೈದಾರಬಾದ್​ನ ಕೇಬಲ್ ಬ್ರಿಡ್ಜ್ ನಲ್ಲಿ  ಸ್ಪೋರ್ಟ್ಸ್ ಬೈಕ್ ನಿಯಂತ್ರಣ ಕಳೆದುಕೊಂಡ ಕಾರಣ ಅಪಘಾತ ಸಂಭವಿಸಿದೆ.

ಈ ಮಧ್ಯೆ ನಟ ರಾಮ್ ಚರಣ್, ಇಂದು ಬೆಳಿಗ್ಗೆ ಸಾಯಿ ಧರಂ ತೇಜ್ ಅವರನ್ನು ಪತ್ನಿ ಉಪಾಸನಾ ಜೊತೆ ಆಸ್ಪತ್ರೆಗೆ ತೆರಳಿ  ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.  ಅಲ್ಲದೇ ನಟ ಸಾಯಿ ಧರಮ್​ ತೇಜ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಕುಟುಂಬ ಸದಸ್ಯರಾದ ನಟ ಪವನ್​ ಕಲ್ಯಾಣ್​​, ವರುಣ್​ ತೇಜ, ಚಿರಂಜೀವಿ ಸೇರಿದಂತೆ ಕೊಡಿನೆಲಾ ಕುಟುಂಬ ಸದಸ್ಯರು ಆಸ್ಪತ್ರೆಗೆ ಧಾವಿಸಿದ್ದರು.

ಇದನ್ನೂ ಓದಿ: ಅಪಘಾತಕ್ಕೆ ಒಳಗಾದ ಟಾಲಿವುಡ್​ ನಟನ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು

ಈ ಹಿಂದೆ, ಅಪೊಲೊ ಆಸ್ಪತ್ರೆಗಳು ಹೊರಡಿಸಿದ ವೈದ್ಯಕೀಯ ಬುಲೆಟಿನ್​ ಪ್ರಕಾರ, "ಸಾಯಿ ಧರಂ ತೇಜ್  ಆರೋಗ್ಯ ಸ್ಥಿರವಾಗಿದೆ ಮತ್ತು ಎಲ್ಲಾ ಪ್ರಮುಖ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆರೋಗ್ಯ ದೃಷ್ಟಿಯಿಂದ ಅವರನ್ನು ಐಸಿಯುನಲ್ಲಿ ಇರಿಸಲಾಗಿದ್ದು, ಆಕ್ಸಿಜನ್ ನೀಡಲಾಗುತ್ತಿದೆ.  ಅವರ ಆರೋಗ್ಯವನ್ನು ಹೆಚ್ಚು ನಿಗಾವಹಿಸಿ ನೋಡಿಕೊಳ್ಳಲಾಗುತ್ತಿದೆ.

ಇನ್ನು ಸಾಯಿ ಧರಮ್ ತೇಜ್  ಚಿತ್ರಗಳ ವಿಚಾರಕ್ಕೆ ಬಂದರೆ ಅವರ ರಿಪಬ್ಲಿಕ್ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಐಶ್ವರ್ಯ ರಾಜೇಶ್ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು , ಇದನ್ನು ದೇವ ಕಟ್ಟಾ ನಿರ್ದೇಶಿಸಿದ್ದಾರೆ.

ಶುಕ್ರವಾರ ರಾತ್ರಿ ಅವರು ಸ್ಪೋರ್ಟ್​​ ಬೈಕ್​ ರೈಡ್​ ವೇಳೆ ಸ್ಕಿಡ್​ ಆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅವರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ಪ್ರಕರಣ ಕುರಿತು ದೂರು ದಾಖಲಿಸಿರುವ ಪೊಲೀಸರು ಟಾಲಿವುಡ್​ ನಟನ ಮೇಲೂ ಕೂಡ ಕೇಸ್​ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್​ 366 (ಸುರಕ್ಷತಾ ಕ್ರಮ ಅನುಸರಿಸದ ಬಗ್ಗೆ), 279 (ರ್ಯಾಶ್​ ಡ್ರೈವಿಂಗ್​) 184 (ಅಪಾಯಕಾರಿ ಡ್ರೈವಿಂಗ್​​) ಪ್ರಕರಣದ ಆಧಾರದ ಮೇಲೆ ದೂರು ದಾಖಲಿಸಕೊಳ್ಳಲಾಗಿದೆ ಎಂದು ಸೈಬರ್​ಬಾದ್​ ಪೊಲೀಸ್​ ಕಮಿಷನರ್​ ತಿಳಿಸಿದ್ದಾರೆ.

ಇನ್ನು ರಸ್ತೆಯಲ್ಲಿ ಮರಳಿದ್ದ ಕಾರಣ ಬೈಕ್​ ಸ್ಕಿಡ್​ ಆಗಿದೆ. ನಟ ಹೆಲ್ಮೆಟ್​ ಧರಿಸಿದ ಪರಿಣಾಮ ಜೀವಕ್ಕೆ ಹಾನಿಯಾಗಿಲ್ಲ. ಅವರು ಈ ವೇಳೆ ಯಾವುದೇ ಆಲ್ಕೋಹಾಲ್​ ಸೇವಿಸಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಪಘಾತಕ್ಕೆ ಕಾರಣವಾಯ್ತಾ ಅತಿಯಾದ ವೇಗ: ಸಾಯಿ ಧರಮ್ ತೇಜ ಬಳಸಿದ ಬೈಕ್ ವಿವರ ಇಲ್ಲಿದೆ

ಕಳೆದ 3 ತಿಂಗಳ ಹಿಂದಷ್ಟೇ ಕನ್ನಡದ ನಟ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್​ ಕೂಡ ಬೆಂಗಳೂರಿನಲ್ಲಿ ಬೈಕ್ ಅಪಘಾತದಲ್ಲಿ ನಿಧನರಾಗಿದ್ದರು.  ಬೈಕ್ ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿರುವುದು ಅತಿ ಮುಖ್ಯವಾಗುತ್ತದೆ.
Published by:Sandhya M
First published: