Priyanka Upendra: ಸ್ಯಾಂಡಲ್​ವುಡ್​ ಕ್ವೀನ್​ಗೆ ಪ್ರಿಯಾಂಕಾ ಉಪೇಂದ್ರ ಸಾಥ್​ - ಬಾಡಿ ಶೇಮಿಂಗ್​ ಸರಿಯಲ್ಲ ಎಂದ ನಟಿ

Sandalwood: ನನಗೂ ಕೂಡ ತುಂಬಾ ಜನ ದಪ್ಪ ಆಗಿದಿರಾ ಅಂತಾ ಕಾಮೆಂಟ್ ಮಾಡಿದರು. ತಾರೆಯರಿಗೆ ಇದು ಹೆಚ್ಚು ಒತ್ತಡ ಇರುತ್ತೆ. ಆ ಒತ್ತಡದಲ್ಲಿ ಬಹುಶಃ ಚೇತನಾ ರಾಜ್ ಕೂಡ ಇದ್ದರು ಅನಿಸುತ್ತೆ.

ನಟಿ ಪ್ರಿಯಾಂಕಾ ಉಪೇಂದ್ರ

ನಟಿ ಪ್ರಿಯಾಂಕಾ ಉಪೇಂದ್ರ

 • Share this:
  ಕಿರುತೆರೆ ನಟಿ ಚೇತನಾ ರಾಜ್ (Chethana Raj) ಸಾವಿಗೆ ಸಂತಾಪ ಸೂಚಿಸಿರುವ ನಟಿ ರಮ್ಯಾ (Ramya) , ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಇದೆ ಎಂಬ ಬಾಂಬ್ ಸಿಡಿಸಿದ್ದಾರೆ.  ರಮ್ಯಾ ಹಾಕಿದ ಲಿಂಗ ತಾರತಮ್ಯ ಎಂಬ ಬಾಂಬ್ ಈಗ ಇಂಡಸ್ಟ್ರಿಯಲ್ಲಿ ಸ್ಫೋಟಿಸಿದ್ದು, ಸಾಕಷ್ಟು ಪರ ವಿರೋಧ ಚರ್ಚೆಗಳಾಗ್ತಿವೆ. ಬಣ್ಣದ ಲೋಕ ಚಿತ್ರರಂಗದಲ್ಲಿ (Film Industry) ಮೇಲ್ ಡಾಮಿನೆಟ್ ಇದೆ ಅನ್ನೋ ಮಾತು ತುಂಬಾ ದಿನಗಳಿಂದ‌ ಕೇಳಿ ಬರ್ತಿದೆ. ಹೀರೋಗಳಿಗೆ  ಇಲ್ಲದ  ಕಂಡಿಷನ್ಸ್ ಹೀರೋಯಿನ್​ಗಳಿಗ್ಯಾಕೆ ಅಂತ ಆಗಾಗ ಯಾರಾದ್ರು ಪ್ರಶ್ನೆ ಮಾಡ್ತಾರೆ. ಆದ್ರೆ ಆ ಪ್ರಶ್ನೆಗೆ ಉತ್ತರ ಸಿಕ್ಕದೆ ಕೇವಲ ಚರ್ಚೆಗಷ್ಟೇ ಸೀಮಿತವಾಗಿರುತ್ತೆ. ಅದೇ ರೀತಿಈ ಚಿತ್ರರಂಗದಲ್ಲಿರುವ ಲಿಂಗ ತಾರತಮ್ಯ, ಹಾಗೂ ಬಾಡಿ ಶೇಮಿಂಗ್ ಬಗ್ಗೆ ನಟಿ ರಾಜಕಾರಣಿ ರಮ್ಯಾ ಸಿಡಿದು ನಿಂತಿದ್ದಾರೆ. ಫ್ಯಾಟ್ ತೆಗೆಸಿ ಫಿಟ್ ಆಗೋಣ ಅಂತ ಹೋಗಿಜೀವವನ್ನೆ ಕಳೆದುಕೊಂಡ ಕಿರುತೆರೆ ನಟಿ ಚೇತನ್ ರಾಜ್ ಸಾವಿಗೆ ಸಂತಾಪ ಸೂಚಿಸಿ. ಚಿತ್ರರಂಗದಲ್ಲಿರುವ ಲಿಂಗ ತಾರತಮ್ಯ, ವೇತನ ತಾರತಮ್ಯ, ಬ್ಯೂಟಿ ಆಧರಿಸಿಪಾತ್ರಗಳ ನಿರ್ಧಾರ ಮಾಡುವ ಕೆಟ್ಟ ಸಂಪ್ರದಾಯದ ವಿರುದ್ದ ನಟಿ ರಮ್ಯಾ ಟ್ವೀಟ್ ಮಾಡುವ ಮೂಲಕ ಚಿತ್ರರಂಗದ ಅಸಮಾನತೆ ವಿರುದ್ದ ಸಮರ ಸಾರಿದ್ದಾರೆ.

  ಅಲ್ಲದೆ.ಮಹಿಳೆಯರು ಫಿಟ್ ಆಗಿರಬೇಕು ಅನ್ನೋ ರೂಲ್ಸ್  ಪುರುಷರಿಗೆ ಯಾಕಿಲ್ಲ .ಮದ್ವೆ ಅದ ಹೀರೋಯಿನ್ ಗಳ ಬಗ್ಗೆ ಮಾತನಾಡೊರು. ವಯಸ್ಸು 65 ಆದ್ರು  ತಲೆಯಲ್ಲಿ ಕೂದಲಿಲ್ಲದವರು ಟೋಪಿ ಹಾಕಿ ನಾಯಕರಾಗಿ ನಟಿಸಬಹುದ ಎಂದು ಪ್ರಶ್ನೆ ಮಾಡಿ ದ್ದಾರೆ. ಟ್ರೋಲ್ ಮಾಡೋ ಮಂದಿಗೆ ಚಾಟಿ ಬೀಸಿದ್ದಾರೆ. ಸದ್ಯ ಚಿತ್ರ ರಂಗದಲ್ಲಿ ರಮ್ಯಾ ಟ್ವೀಟಿನ ಏಟು ಸರಿಯಾಗೆ ಬಿಸಿ ಮುಟ್ಟಿಸಿದೆ ಅನ್ನ ಬಹುದು. ರಮ್ಯಾ ಮಾತಿನಲ್ಲಿ ಸತ್ಯ ಇದೆ ಎಂದು ನಟಿ ಪ್ರಿಯಾಂಕ ಉಪೇಂದ್ರ ರಮ್ಯಾ ಪರ ಬೀಸಿದ್ದಾರೆ.

  ಮೊನ್ನೆ ಸಾವನ್ನಪ್ಪಿದ ಚೇತನಾ ರಾಜ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರಿಯಾಂಕಾ, ಚಿತ್ರರಂಗದಲ್ಲಿ ಎಲ್ಲರೂ ಒತ್ತಡದಲ್ಲಿ ಕೆಲಸ ಮಾಡ್ತಾ ಇದ್ದಾರೆ. ನನಗೂ ಕೂಡ ತುಂಬಾ ಜನ ದಪ್ಪ ಆಗಿದಿರಾ ಅಂತಾ ಕಾಮೆಂಟ್ ಮಾಡಿದರು. ತಾರೆಯರಿಗೆ ಇದು ಹೆಚ್ಚು ಒತ್ತಡ ಇರುತ್ತೆ. ಆ ಒತ್ತಡದಲ್ಲಿ ಬಹುಶಃ ಚೇತನಾ ರಾಜ್ ಕೂಡ ಇದ್ದರು ಅನಿಸುತ್ತೆ. ಯಾಕೆಂದರೆ ನಾನು ಇನ್ನು ಚೆನ್ನಾಗಿ ಕಾಣಿಸಿದ್ರೆ ಕೆಲಸ ಜಾಸ್ತಿ ಸಿಗಬಹುದು ಅಂತಾ ಅವರು ಈ ರೀತಿ ಮಾಡಿಕೊಂಡಿದ್ದಾರೆ .ಆದರೆ ನನಗೂ ಸಿನಿಮಾ ಬಂದ ಮೇಲೆ‌ ಸಾಕಷ್ಟು ಕಾಮೆಂಟ್ ಮಾಡಿದರು, ನಿಮ್ಮ ಹೈಟ್ ಚಿಕ್ಕದು, ನಿಮ್ಮ ಕಣ್ಣು ಸಣ್ಣ ಅಂತಾ ಹೇಳ್ತಾ ಇದ್ದಾರೆ. ಆ ಕಾಮೆಂಟ್ ಗಳನ್ನ ಕ್ರಾಸ್ ಮಾಡಿ ನಾನು ಇವತ್ತು ಸ್ಟೇಜ್ ಗೆ ಬಂದಿದ್ದೇನೆ.

  ಇದನ್ನೂ ಓದಿ: ಫ್ಯಾಮಿಲಿ ಫೋಟೋ ಶೇರ್ ಮಾಡಿದ ರಶ್ಮಿಕಾ - ನಿಮ್ಮಿಂದಲೇ ನಮ್ಮ ಮುಖದಲ್ಲಿ ನಗು ಅಂದಿದ್ದು ಯಾರಿಗೆ?

  ಅಲ್ಲದೆ  ಮದುವೆ ಆದ್ಮಲೇ ಅವಕಾಶಗಳು ಕಡಿಮೆ ಆಗುತ್ತವೆ. ಮಕ್ಕಳು ಆದ್ಮಲೇ ಬ್ಯೂಟಿ ಇರೋಲ್ಲ, ದಪ್ಪ ಆಗಿದ್ದಾರೆ ಎಂಬ ಕಾರಣಕ್ಕೆ ಹೀರೋ ಅಕ್ಕನ‌ ಪಾತ್ರ , ಅಥವಾ ತಂಗಿ ಪಾತ್ರಗಳು ಬರುತ್ತೆ.ಆದರೆ ಹೀರೋಗಳಿಗೆ ಈ ಮಾನದಂಡ ಇಲ್ಲಾ, ವಯಸ್ಸು 65 ಆದರೂ ತಲೆಗೆ ವಿಗ್ ಹಾಕ್ಕೊಂಡು ಆಕ್ಟ್ ಮಾಡ್ತಾರೆ. ಮದ್ವೆ ಆದ ಮೇಲೆ ಹೀರೋಗಳಿಗೆ ಯಾರು ನಿಮ್ಮ ಕಂಬ್ಯಾಕ್ ಸಿನಿಮಾ ಅಂತ ಕೇಳಲ್ಲ. ಆದ್ರೆ ನಮಗೆ ಮದ್ವೆ ಅಗಿ ಮಕ್ಕಳಾದ ಮೇಲೆ ಕಂಬ್ಯಾಕ್ ಸಿನಿಮಾ ಅಂತಾರೆ ಎಂದು ಪ್ರಿಯಾಂಕಾ ಕಿಡಿಕಾರಿದ್ದಾರೆ.

  ಇದನ್ನೂ ಓದಿ: ನಾಳೆ ಸೆಟ್ಟೇರಲಿದೆ ಶ್ರೀಮುರಳಿ ಅಭಿನಯದ ಹೊಸ ಚಿತ್ರ - ಬಘೀರ ಮೂಲಕ ಮತ್ತೆ ಘರ್ಜಿಸಲು ರೋರಿಂಗ್ ಸ್ಟಾರ್​ ರೆಡಿ

  ಮದ್ವೆ ಆದ ಮೇಲೆ ಹೀರೋಯಿನ್ ಗಳು ಗ್ಲಾಮರಸ್ ರೋಲ್ ಮಾಡೋಕೆ ಆಗಲ್ಲ, ಬೇರೆ ಹೀರೋಗಳ ಜೊತೆ ರೋಮ್ಯಾನ್ಸ್ ಮಾಡೊಕೆ ಆಗಲ್ಲ ಅಂತಾರೆ. ಆದ್ರೆ ಹೀರೋಗಳು ಮದ್ವೆ ಆಗಿ ಮಕ್ಕಳಾದ್ರು ರೋಮ್ಯಾನ್ಸ್ ಮಾಡ್ತಾರೆ ಈ ರೀತಿಯ ಮೈಂಡ್ ಸೆಟ್ ನಮ್ಮ ಇಂಡಸ್ಟ್ರಿಯಲ್ಲಿ ಇದೆ ರಮ್ಯಾ ಹೇಳಿರುವುದರಲ್ಲಿ ಸತ್ಯ ಇದೆ ಹೀರೋಯಿನ್ ಗಳಿಗೆ ತುಂಭಾ ಪ್ರೆಶರ್ ಇರುತ್ತೆ ಎಂದು ಲಿಂಗ ತಾರತಮ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
  Published by:Sandhya M
  First published: