• Home
  • »
  • News
  • »
  • entertainment
  • »
  • Priyanka Upendra: ಸ್ಕೂಲ್​ನಲ್ಲಿ ಐಶ್ವರ್ಯಾ ಭಾಷಣ! ಥೇಟ್ ಅಪ್ಪನಂತೆ ಉಪ್ಪಿ ಮಗಳು

Priyanka Upendra: ಸ್ಕೂಲ್​ನಲ್ಲಿ ಐಶ್ವರ್ಯಾ ಭಾಷಣ! ಥೇಟ್ ಅಪ್ಪನಂತೆ ಉಪ್ಪಿ ಮಗಳು

ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳು ಇತ್ತೀಚೆಗೆ ಸ್ಕೂಲ್​ನಲ್ಲಿ ಭಾಷಣ ಮಾಡಿದ್ದಾರೆ. ಅವರ ಭಾಷಣವನ್ನು ತಾಯಿ ಪ್ರಿಯಾಂಕ ಉಪೇಂದ್ರ ಹಂಚಿಕೊಂಡಿದ್ದಾರೆ. ಈ ಬಾಷಣ ಓದಿದ್ರೆ ಐಶ್ವರ್ಯಾ ಥೇಟ್ ಅಪ್ಪ ಉಪ್ಪಿಯಂತೆ ಎನ್ನುವುದರಲ್ಲಿ ನೋ ಡೌಟ್.

ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳು ಇತ್ತೀಚೆಗೆ ಸ್ಕೂಲ್​ನಲ್ಲಿ ಭಾಷಣ ಮಾಡಿದ್ದಾರೆ. ಅವರ ಭಾಷಣವನ್ನು ತಾಯಿ ಪ್ರಿಯಾಂಕ ಉಪೇಂದ್ರ ಹಂಚಿಕೊಂಡಿದ್ದಾರೆ. ಈ ಬಾಷಣ ಓದಿದ್ರೆ ಐಶ್ವರ್ಯಾ ಥೇಟ್ ಅಪ್ಪ ಉಪ್ಪಿಯಂತೆ ಎನ್ನುವುದರಲ್ಲಿ ನೋ ಡೌಟ್.

ರಿಯಲ್ ಸ್ಟಾರ್ ಉಪೇಂದ್ರ ಅವರ ಮಗಳು ಇತ್ತೀಚೆಗೆ ಸ್ಕೂಲ್​ನಲ್ಲಿ ಭಾಷಣ ಮಾಡಿದ್ದಾರೆ. ಅವರ ಭಾಷಣವನ್ನು ತಾಯಿ ಪ್ರಿಯಾಂಕ ಉಪೇಂದ್ರ ಹಂಚಿಕೊಂಡಿದ್ದಾರೆ. ಈ ಬಾಷಣ ಓದಿದ್ರೆ ಐಶ್ವರ್ಯಾ ಥೇಟ್ ಅಪ್ಪ ಉಪ್ಪಿಯಂತೆ ಎನ್ನುವುದರಲ್ಲಿ ನೋ ಡೌಟ್.

  • News18 Kannada
  • Last Updated :
  • Bangalore, India
  • Share this:

ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ಮಗಳು ಐಶ್ವರ್ಯಾ ಉಪೇಂದ್ರ (Aishwarya Upendra) ಅವರು ಬೆಂಗಳೂರಿನ (Bengaluru) ವ್ಯಾಲಿ ಸ್ಕೂಲ್​ನಲ್ಲಿ ಓದುತ್ತಿದ್ದಾರೆ. ತನ್ನ ವಿಶಿಷ್ಠ ಪದ್ಧತಿಯಿಂದಲೇ ದೇಶಾದ್ಯಂತ ಸುದ್ದಿಯಾಗಿರುವ ವ್ಯಾಲಿ ಸ್ಕೂಲ್​ನಲ್ಲಿ ಬಹಳಷ್ಟು ಜನ ತಮ್ಮ ಮಕ್ಕಳನ್ನು ಸೇರಿಸಲು ಬಯಸುತ್ತಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಇಬ್ಬರು ಮಕ್ಕಳು ಕೂಡಾ ಕಲಿಯುತ್ತಿರುವುದು ಇದೇ ಶಾಲೆಯಲ್ಲಿ. ಇದೀಗ ಇವರ ಪುತ್ರಿ ಐಶ್ವರ್ಯಾ ಉಪೇಂದ್ರ ಅವರು ವ್ಯಾಲಿ ಸ್ಕೂಲ್​ನಲ್ಲಿ ಮಾಡಿದ ಭಾಷಣವನ್ನು ನಟಿ ಪ್ರಿಯಾಂಕ ಉಪೇಂದ್ರ (Priyanka Upendra) ಫೇಸ್​ಬುಕ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಭಾಷಣದ ವಿಷಯ, ಮಾತನಾಡಿದ ವಿಚಾರಗಳು, ಐಶ್ವರ್ಯಾ ಹಂಚಿಕೊಂಡ ಯೋಚನೆಗಳನ್ನು ಗಮನಿಸಿದರೆ ಉಪ್ಪಿ ಮಗಳು ಥೇಟ್ ಅಪ್ಪನಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು.


ಐಶ್ವರ್ಯಾ ಪ್ರಿಯಾಂಕ ಭಾಷಣ ಹೀಗಿತ್ತು


ಪ್ರತಿ ದಿನವೂ ನಮ್ಮ ಕೊನೆಯ ದಿನ ಎನ್ನುವಂತೆ ನಾವೆಲ್ಲರೂ ಏಕೆ ಬದುಕಬೇಕು ಎನ್ನುವುದರ ಬಗ್ಗೆ ನಾನಿಂದು ಮಾತನಾಡುತ್ತೇನೆ. ವಯಸ್ಸಿನ ಹಂಗನ್ನು ಬದಿಗಿರಿಸಿ ನೋಡುವುದಾದರೆ ಎಲ್ಲರೂ ತಾವು ಹೀಗೆಯೇ ಬದುಕಿರುತ್ತೇವೆ ಎಂದೇ ಯೋಚಿಸುತ್ತಾರೆ. ಅವರು ಆಳವಾಗಿ ತಿಳಿದಿರುವ, ಮಾಡಬೇಕಾದ ಕೆಲಸಗಳನ್ನು ಅವರು ಮುಂದೂಡುತ್ತಾರೆ. ಇದು ತುಂಬಾ ಸಾಮಾನ್ಯ ಎಂಬಂತೆಯೇ ಅದನ್ನು ಮುಂದಕ್ಕೆ ಹಾಕುತ್ತಾರೆ.
ನಾಳೆಗಾದರೂ ಗ್ಯಾರೆಂಟಿ ಇದೆಯಾ?


ನಿಮ್ಮ ಕನಸುಗಳನ್ನು ಬೆನ್ನಟ್ಟುವುದು, ಸತ್ಯನಿಷ್ಠರಾಗಿರುವುದು ಮತ್ತು ನಿಮ್ಮ ಭಾವನೆಗಳ ಬಗ್ಗೆ ಮುಕ್ತವಾಗಿರುವುದು ಆ ಪ್ರಕ್ರಿಯೆಯನ್ನಷ್ಟೇ ಮಾಡುತ್ತದೆ. ಆದರೆ ಆ ನಿಜವಾದ ಕೆಲಸವನ್ನು ಮಾಡುವುದಿಲ್ಲ. ಹೌದು ಅಥವಾ ಅಲ್ಲ ಎನ್ನುವಾಗ ನಾವು ಮನುಷ್ಯರು ನಮ್ಮ ಮುಂದಿನ ವರ್ಷಕ್ಕೆ, ಮುಂದಿನ ತಿಂಗಳಿಗೆ, ಹೋಗಲಿ ನಾಳೆಗೂ ಗ್ಯಾರೆಂಟಿ ಇಲ್ಲ ಎನ್ನುವುದನ್ನು ಮರೆತುಬಿಡುತ್ತೇವೆ.


ಬದುಕು ಚಿಕ್ಕದು ಎಂದು ಗೊತ್ತಿದ್ದರೂ ಪೂರ್ತಿಯಾಗಿ ಅನುಭವಿಸುವುದಿಲ್ಲ


ಜೀವನ ಕೊಡುವ ಒಂದೇ ಗ್ಯಾರೆಂಟಿ ಎಂದರೆ ಅಲ್ಲೊಂದು ಕೊನೆ ಇದೆ. ನಾವು ಸಾಯುವವರು, ಸೀಮಿತ ಜೀವಗಳು. ಬದುಕು ಇಷ್ಟು ಚಿಕ್ಕದು ಎಂದು ತಿಳಿದೂ ಕೂಡಾ ಬದುಕಿದ್ದಾಗಲೇ ನಾವಿದನ್ನು ಪೂರ್ತಿಯಾಗಿ ಜೀವಿಸಿ ಅನುಭವಿಸುವುದು ತುಂಬಾ ವಿರಳ. ಹೆಚ್ಚಿನ ಜನರಿಗೆ ಯಾವಾಗ ಹೃದಯ ಬಡಿತ ನಿಲ್ಲುತ್ತದೆಯೋ ಅದು ತುಂಬಾ ಔಪಚಾರಿಕವಾಗಿರುತ್ತದೆ. ಆದರೆ ಸತ್ಯ, ಎಷ್ಟೇ ಕಹಿಯಾಗಿದ್ದರೂ, ಒಂದು ದಿನ ಆ ಔಪಚಾರಿಕ ಭಾವನೆಯೂ ಕೂಡಾ ಮುಗಿದು ಹೋಗುತ್ತದೆ.
ಸಾವು ಇಂದೇ ಆಗಿದ್ದರೆ?


ಆ ಸಾವಿನ ದಿನ ಇಂದಾಗಿದ್ದರೆ, ನೀವು ಈಗ ಇರುವ ವ್ಯಕ್ತಿಯೊಂದಿಗೆ ನೀವು ತೃಪ್ತರಾಗಿದ್ದೀರಾ? ಅಥವಾ ನೀವು ಜಗತ್ತಿಗೆ ಏನು ತಂದಿದ್ದೀರಿ? ಅಥವಾ ನೀವು ನೋವಿನ ಭಾವನೆಯನ್ನು ಅನುಭವಿಸುತ್ತೀರಾ? ನೀವು ತುಂಬಾ ಹೆಚ್ಚು ಬಯಸಿದ ವಿಷಯಗಳನ್ನು ಮಾಡದೆ ಅಥವಾ ಹೇಳದಿರುತ್ತೀರಾ? ನೀವು ಸಾಯುವಾಗ ಅದು ಮುಖ್ಯವೇ? ಪ್ರತಿದಿನ ಬೆಳಿಗ್ಗೆ ಎದ್ದೇಳುವಾಗ ಇದು ನಿಮ್ಮ ಮನಸ್ಸಿನಲ್ಲಿ ಉಳಿಯುತ್ತದೆ, ಜೀವನವು ಶಕ್ತಿಯುತವಾಗುತ್ತದೆ.


ನಿಮ್ಮೊಳಗಿನ ಭಯ ಓಡಿಸುವ ಶಕ್ತಿ ನಿಮ್ಮಲ್ಲೇ ಇದೆ


ನಿಮ್ಮೊಳಗಿರುವ ಎಲ್ಲ ಭಯವನ್ನು ಓಡಿಸುವ ಶಕ್ತಿ ನಿಮ್ಮೊಳಗೆಯೇ ಇದೆ. ಸೋಲಿನ ಭಯ, ತಿರಸ್ಕೃತರಾಗುವ ಭಯ, ತಾನು ಹೀಗಿಲ್ಲ ಹಾಗಿಲ್ಲ ಎನ್ನುವ ಭಯ ಇದನ್ನು ನೀವೇ ದೂರ ಮಾಡಬಹುದು. ಇದು ಅಜಾಗರೂಕ ಅಥವಾ ಅಸಡ್ಡೆಯಿಂದ ಬದುಕಲು ಇರುವಂತಹ ಫ್ರೀ ಪಾಸ್ ಖಂಡಿತಾ ಅಲ್ಲ. ಬದಲಿಗೆ ನಿಮ್ಮ ಮನಸಿನಲ್ಲಿ ತಿಳಿದಿರುವ ಜೀವನವನ್ನು ಅನುಸರಿಸಲು ಸಿಗುವ ಲೈಸೆನ್ಸ್.
ನಿಮ್ಮ ಕಥೆಗೆ ನೀವೇ ಹೀರೋಗಳು


ನಿಮ್ಮ ಕಥೆಯ ಹೀರೋಗಳು ನೀವೇ, ಪ್ರಮುಖವಲ್ಲದ ಪಾತ್ರಗಳು ಏನು ಯೋಚಿಸುತ್ತವೆ ಎಂಬುದರ ಯೋಚಿಸುವುದನ್ನು ನಿಲ್ಲಿಸಿ. ನೀವು ಈ ಭೂಮಿಯಲ್ಲಿ ಕಳೆಯುವ ಪ್ರತಿ ಕ್ಷಣವೂ ನೀವು ಬಿಟ್ಟು ನೆನಪಿನ ಭಾಗವಾಗಿದೆ. ಬದುಕು ಜೀವನವೆಂಬ ಉಡುಗೊರೆಯ ಮೇಲೆ ನೀವಿಡುವ ಮುದ್ರೆಯಾಗಿದೆ. ಅದರಲ್ಲಿ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ನಿಮ್ಮ ಕನಸುಗಳನ್ನು ಬೆನ್ನಟ್ಟಿ. ಉತ್ಸಾಹ ಮತ್ತು ದೃಢನಿಶ್ಚಯದಿಂದ ಅದನ್ನು ಮಾಡಿ.


ಇದನ್ನೂ ಓದಿ: Pawan Kalyan: ನಟ, ರಾಜಕಾರಣಿ ಪವನ್ ಕಲ್ಯಾಣ್ ಚುನಾವಣಾ ರಥ ರೆಡಿ! ಹೆಸರೇನು ಗೊತ್ತಾ?


ನಾವೆಲ್ಲರೂ ಚಿಕ್ಕವರಿದ್ದಾಗ ಬೇಗನೆ ಬೆಳೆಯಲು ಬಯಸುತ್ತೇವೆ. ಈಗ, ನಮ್ಮಲ್ಲಿ ಹೆಚ್ಚಿನವರು ಆ ಸರಳವಾಗಿದ್ದ ಹಳೆಯ ಸಮಯಕ್ಕೆ ಹಿಂತಿರುಗಲು ಬಯಸುತ್ತೇವೆ. ವೈಯಕ್ತಿಕವಾಗಿ, ನಾನು ಹಿಂತಿರುಗಲು ಬಯಸುವುದಿಲ್ಲ. ಬದಲಾಗಿ, ಯಾವುದೂ ಶಾಶ್ವತವಲ್ಲ ಎಂಬುದನ್ನು ನಿರಂತರವಾಗಿ ನೆನಪಿಸಿಕೊಳ್ಳುತ್ತಾ ನಾನು ಮುಂದುವರಿಯಲು ಬಯಸುತ್ತೇನೆ. ನಾನು ಈ ಮಾತುಗಳನ್ನು ಮುಗಿಸುವಾಗ ಒಂದು ಹಾಡಿನ ಕೆಲವು ಸಾಲು ನೆನಪಿಗೆ ಬರುತ್ತಿದೆ. ಈ ಹಾಡು ಡೈಲನ್ ಕಾನ್ರಿಕ್ ಅವರ 'ಬರ್ತ್‌ಡೇ ಕೇಕ್'. ಮತ್ತು ಸಾಹಿತ್ಯವು ಹೀಗಿದೆ - ಜಗತ್ತು ಉರಿಯುತ್ತಿರುವಂತೆ ಬದುಕು, ಮನಸುಗಳು ಮುರಿಯದ ಹಾಗೆ ಪ್ರೀತಿಸು. ಧನ್ಯವಾದಗಳು ಎಂದು ಭಾಷಣ ಮುಗಿಸಿದ್ದಾರೆ ಉಪೇಂದ್ರ ಮಗಳು ಐಶ್ವರ್ಯಾ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು