Priyanka Upendra: ಹೊಸ ಸಾಹಸಕ್ಕೆ ಕೈ ಹಾಕಿದ ಪ್ರಿಯಾಂಕಾ ಉಪೇಂದ್ರ: ವೈರಲ್​ ಆಗುತ್ತಿವೆ ವಿಡಿಯೋಗಳು..!

Priyanka Upendra Workout Videos: ಸದಾ ಮೊಗದಲ್ಲಿ ಮುದ್ದಾದ ನಗು ಬೀರುತ್ತಾ ಕಾಣಿಸುವ ಪ್ರಿಯಾಂಕಾ ಉಪೇಂದ್ರ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಹಗಲಿರುಳು ಎನ್ನದೆ ಸಿಕ್ಕಾಪಟ್ಟೆ ಕಷ್ಟಪಡುತ್ತಿದ್ದಾರೆ.

Anitha E | news18-kannada
Updated:November 7, 2019, 3:34 PM IST
Priyanka Upendra: ಹೊಸ ಸಾಹಸಕ್ಕೆ ಕೈ ಹಾಕಿದ ಪ್ರಿಯಾಂಕಾ ಉಪೇಂದ್ರ: ವೈರಲ್​ ಆಗುತ್ತಿವೆ ವಿಡಿಯೋಗಳು..!
Priyanka Upendra Workout Videos: ಸದಾ ಮೊಗದಲ್ಲಿ ಮುದ್ದಾದ ನಗು ಬೀರುತ್ತಾ ಕಾಣಿಸುವ ಪ್ರಿಯಾಂಕಾ ಉಪೇಂದ್ರ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಹಗಲಿರುಳು ಎನ್ನದೆ ಸಿಕ್ಕಾಪಟ್ಟೆ ಕಷ್ಟಪಡುತ್ತಿದ್ದಾರೆ.
  • Share this:
ರಂಗು ರಂಗಿನ ರಂಗೀನ್​ ದುನಿಯಾದಲ್ಲಿ ಎಲ್ಲವೂ ಗ್ಲಾಮರಸ್​. ಇಲ್ಲಿ ಒಮ್ಮೆ ನಾಯಕಿಯಾಗಿ ಮೆರೆದವರು... ನಾಯಕಿಯಾಗಿರುವವರು... ಸದಾ ತಮ್ಮ ಫಿಟ್​ನೆಸ್​ ಕಾಯ್ದುಕೊಳ್ಳಲು ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ. ಅದರಲ್ಲೂ ಸಿನಿಮಾಗಳಲ್ಲಿ ಮಾಡುವ ಪಾತ್ರಗಳ ವಿಷಯಕ್ಕೆ ಬಂದಾಗ ಹಗಲಿರುಳೆನ್ನದೆ ಕಷ್ಟ ಪಡುತ್ತಾರೆ.

ನಟಿ ಪ್ರಿಯಾಂಕಾ ಉಪೇಂದ್ರ ವಿಷಯದಲ್ಲೂ ಇದೇ ಆಗಿದೆ. ಸದಾ ಮೊಗದಲ್ಲಿ ಮುದ್ದಾದ ನಗು ಬೀರುತ್ತಾ ಕಾಣಿಸುವ ಪ್ರಿಯಾಂಕಾ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಹಗಲಿರುಳು ಎನ್ನದೆ ಸಿಕ್ಕಾಪಟ್ಟೆ ಕಷ್ಟಪಡುತ್ತಿದ್ದಾರೆ.
 View this post on Instagram
 

#staystrong #staymotivated💪 #icandothis #jeetusamdariya #goldsgymbasavanagudi #jfit47


A post shared by priyanka upendra (@priyanka_upendra) on


ಹೌದು, ಪ್ರಿಯಾಂಕಾ ಈಗ ಜಿಮ್ ಮೆಟ್ಟಿಲೇರಿದ್ದು, ಅಲ್ಲಿ ನಿತ್ಯ ಬೆವರಿಳಿಸುತ್ತಿದ್ದಾರೆ. ಅದು ಕೂಡ ಅವರ ಹೊಸ ಸಿನಿಮಾಗಾಗಿ. ಫಿಡ್ನೆಸ್​ಗಾಗಿ ವ್ಯಾಯಮ ಮಾಡುತ್ತಿದ್ದ ಪ್ರಿಯಾಂಕಾ ಈಗ ಪರ್ಸನಲ್​ ಟ್ರೈನರ್​ ಜತೆ ನಿತ್ಯ ಗಂಟೆಗಟ್ಟಲೆ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ.
ಅವರು ತಮ್ಮ ಹೊಸ ಸಿನಿಮಾಗಾಗಿ ಪಡುತ್ತಿರುವ ಶ್ರಮಕ್ಕೆ ಅವರ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಲಾಗಿರುವ ವಿಡಿಯೋಗಳೇ ಸಾಕ್ಷಿ. 
View this post on Instagram
 

Arms today @jfit47 #thursdaymotivation #goldsgymbasavanagudi


A post shared by priyanka upendra (@priyanka_upendra) on
 
View this post on Instagram
 

#staystrong #thursdaymotivation💪 #jeetusamdariya #staypositive


A post shared by priyanka upendra (@priyanka_upendra) on


ಪ್ರಿಯಾಂಕಾ 'ದೇವಕಿ' ಸಿನಿಮಾದ ನಂತರ 'ಉಗ್ರಾವತಾರ' ಎಂಬ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರಂತೆ. ಇದರಲ್ಲಿ ಸೂಪರ್​ ಕಾಪ್​ ಅಂದರೆ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಅದಕ್ಕಾಗಿ ಅವರು ಈಗ ಜಿಮ್​ನಲ್ಲಿ ಸಖತ್​ ತಯಾರಿ ನಡೆಸುತ್ತಿದ್ದಾರೆ.

 
ಒಂದು ಕಾಲದಲ್ಲಿ ಟಾಪ್​ ನಟಿಯಾಗಿದ್ದ ಪ್ರಿಯಾಂಕಾ ವಿವಾಹವಾದ ನಂತರ ಮನೆ, ಮಕ್ಕಳು ಅಂತ ತಮ್ಮ ಕೌಟುಂಬಿಕ ಜವಾಬ್ದಾರಿಯಲ್ಲಿ ಮುಳುಗಿ ಹೋಗಿದ್ದರು. ಆದರೆ ಈಗ ಮತ್ತೆ ಅವರು ಬಣ್ಣದ ಲೋಕದತ್ತ ಮೆಲ್ಲನೆ ಮರಳುತ್ತಿದ್ದಾರೆ. ಇದಕ್ಕೆ ಗಂಟ ಉಪೇಂದ್ರ ಅವರ ಬೆಂಬಲವೂ ಇದೆ. ಗುರುಮೂರ್ತಿ ಎನ್ನುವರು ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಸೆಟ್ಟೇರಬೇಕಿದೆಯಷ್ಟೆ.

ಇದನ್ನೂ ಓದಿ: Rashmika Mandanna: ಕೆಟ್ಟದಾಗಿ ಟ್ರಾಲ್​ ಮಾಡಿದವರಿಗೆ ಬಿಸಿ ಮುಟ್ಟಿಸಿದ ರಶ್ಮಿಕಾ..! 

ಅವಕಾಶಗಳ ಕೊರತೆಯಿಂದಾಗಿ ಬೋಲ್ಡ್​ ಫೋಟೋಶೂಟ್​ ಮೊರೆ ಹೋದ ಖ್ಯಾತ ಸ್ಯಾಂಡಲ್​ವುಡ್​ ನಟಿಯ ಮಗಳು..!


First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading