Priyanka Upendra: ಕಿರುತೆರೆಗೆ ಬಂದ ಉಪ್ಪಿಯ 'ಅರ್ಧಾಂಗಿ'! 'ಸುವರ್ಣ' ಅವಕಾಶದ ಬಗ್ಗೆ ಪ್ರಿಯಾಂಕಾ ಹೇಳಿದ್ದೇನು?

ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲೇ ಆರಂಭಗೊಳ್ಳಲಿರುವ ಅರ್ಧಾಂಗಿ ಧಾರಾವಾಹಿಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ. ಹಾಗಿದ್ರೆ ಅವರು ಧಾರಾವಾಹಿಯಲ್ಲಿ ನಟಿಸ್ತಾರಾ? ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಅವರೇ ಕೊಟ್ಟಿದ್ದಾರೆ ಓದಿ...

ಅರ್ಧಾಂಗಿ ಧಾರಾವಾಹಿಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ

ಅರ್ಧಾಂಗಿ ಧಾರಾವಾಹಿಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ

  • Share this:
    ಸ್ಟಾರ್ ಸುವರ್ಣ ವಾಹಿನಿಯಲ್ಲಿ (Star Suvarna) ಶೀಘ್ರದಲ್ಲೇ ಆರಂಭಗೊಳ್ಳಲಿರುವ ಅರ್ಧಾಂಗಿ (Ardhangi) ಧಾರಾವಾಹಿಯಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿರುವ ಇವರು ಕಿರುತೆರೆಗೆ ಕಾಲಿಟ್ಟಿದ್ದಾರೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಅವರು ಈ ಧಾರಾವಾಹಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಿಗೆ ಅರ್ಧಾಂಗಿ ಧಾರಾವಾಹಿಯ ರಾಯಭಾರಿಯಾಗಿ ಇವರು ಕಳೆದ ಕೆಲವು ದಿನಗಳಿಂದ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಪ್ರಿಯಾಂಕಾ ಬದುಕಿನಲ್ಲಿ 50 ಸಿನಿಮಾಗಳಲ್ಲಿ ನಟಿಸಿ, ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇಮೇಜಸ್ ಬ್ಯಾನರ್‌ನಲ್ಲಿ ಶ್ರೀನಾಥ್ ರಘುರಾಮ್ (Shrinath Raghuram) 'ಅರ್ಧಾಂಗಿ' ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಂ. ಕುಮಾರ್‌ ಅವರು ಇದರ ನಿರ್ದೇಶನ ಮಾಡುತ್ತಿದ್ದಾರೆ. 

    'ಅರ್ಧಾಂಗಿ'  ಧಾರಾವಾಹಿ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?

    ಈ ಧಾರಾವಾಹಿ ಬಗ್ಗೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, 'ಈ ಧಾರಾವಾಹಿಯಲ್ಲಿ ಕಥಾನಾಯಕಿಯ ಪಾತ್ರವು ತುಂಬ ಸವಾಲಿನಿಂದ ಕೂಡಿದೆ. ಅರ್ಧಾಂಗಿ ಆಗಿ ನಾವು ನಿಭಾಯಸುವ ಸವಾಲುಗಳಿಂಗಿತ ಇದು ಜಾಸ್ತಿ ಸವಾಲು ಇದೆ. 'ಅರ್ಧಾಂಗಿ' ಧಾರಾವಾಹಿಯಲ್ಲಿ ಅಂಜನಾ ದೇಶಪಾಂಡೆ ಮತ್ತು ಪೃಥ್ವಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತುಂಬ ಜನಕ್ಕೆ ಈ ಪಾತ್ರದಿಂದ ಸ್ಫೂರ್ತಿ ಸಿಗಲಿದೆ. ‌ ಬೆಂಗಾಲಿಯಲ್ಲಿ ಇಂಥದ್ದೇ ಒಂದು ಕಥೆಯ ಸಿನಿಮಾದಲ್ಲಿ ನಾನು ಇದೇ ಥರದ ಪಾತ್ರ ಮಾಡಿದ್ದೇನೆ. ಈ ಧಾರಾವಾಹಿ ತಂಡ ತುಂಬ ಎಫರ್ಟ್ ಹಾಕಿದ್ದಾರೆ. ನಾಯಕಿಯ ಪಾತ್ರದ ಜೊತೆಗೆ ಪೃಥ್ವಿ ಅವರು ನಿಭಾಯಿಸಿರುವ ಪಾತ್ರವು ಕೂಡ ಬಹಳ ಪರಿಣಾಕಾರಿಯಾಗಿದೆ.  ಇದು ಒಳ್ಳೆಯ ಕೌಟುಂಬಿಕ ಧಾರಾವಾಹಿ" ಎನ್ನುತ್ತಾರೆ ಪ್ರಿಯಾಂಕ ಉಪೇಂದ್ರ. ಇಂಥ ಕಥೆಗಳಿಗೆ ಎಲ್ಲರೂ ಸಪೋರ್ಟ್ ಮಾಡಬೇಕು' ಎಂದು ವೀಕ್ಷಕರಲ್ಲಿ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: Jenu Goodu: ಶಶಾಂಕ್- ದಿಯಾ ಜೋಡಿಯ ಮಧ್ಯೆ ಮತ್ತೆ ಮತ್ತೆ ಮಾಯಾ ಎಂಟ್ರಿ - ಸಕ್ಸಸ್​ ಆಗುತ್ತಾ ಆಕೆಯ ಪ್ಲ್ಯಾನ್​?

    'ಅರ್ಧಾಂಗಿ'  ಧಾರಾವಾಹಿಯ ಕಥೆ ಏನು?

    ಧಾರಾವಾಹಿ ನಾಯಕಿ ಅದಿತಿ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿರುವ ಹುಡುಗಿ. ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡುತ್ತಿರುವ ಅದಿತಿಗೆ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದಾಳೆ. ಅದಿತಿ ತಂದೆ ಮತ್ತೊಂದು ಮದುವೆಯಾಗಿದ್ದರಿಂದ, ಮಲತಾಯಿ ಮತ್ತು ಅವರ ಮಕ್ಕಳನ್ನೇ ಸ್ವಂತ ತಾಯಿ, ತಂಗಿ, ತಮ್ಮ ಎಂದು ಭಾವಿಸಿರುತ್ತಾಳೆ. ಈ ಮಧ್ಯೆ ಅದಿತಿ ತಂಗಿಗೆ ಮದುವೆ ನಿಶ್ಚಯವಾಗಿದೆ. ಇಷ್ಟಪಟ್ಟಿರುವ ಹುಡುಗನನ್ನು ಆಕೆ ಮದುವೆ ಆಗಬೇಕೆಂದರೆ, ಅಕ್ಕ ಅದಿತಿ ದೊಡ್ಡ ತ್ಯಾಗ ಮಾಡಬೇಕಿದೆ. ಅದೇನೆಂದರೆ, ದಿಗಂತ್‌ನನ್ನು ಅದಿತಿ ಮದುವೆ ಆಗಬೇಕಿದೆ. ದಿಗಂತ್‌ನ ವಯಸ್ಸು 28. ಆದರೆ ಅವನ ಮನಸ್ಸಿಗೆ ಬರೀ 8ರ ವಯಸ್ಸು. ಇಂಥವನೊಂದಿಗೆ ಅದಿತಿ ಮದುವೆ ಆಗಿದೆ. ಹಾಗಾದರೆ, ಮುಂದೇನು? ಅದೇ ಈ ಧಾರಾವಾಹಿಯ ಭಾವನಾತ್ಮಕ ಎಳೆ.

    ಇದನ್ನೂ ಓದಿ: Sangharsha Serial: ಮುಗಿದೇ ಹೋಯ್ತು 'ಸಂಘರ್ಷ'ದ ಕಥೆ, 'ಸುವರ್ಣ' ಅವಕಾಶಕ್ಕೆ ಥ್ಯಾಂಕ್ಸ್ ಎಂದ ತೇಜಸ್ವಿನಿ ಶೇಖರ್

    ಎಂ. ಕುಮಾರ್‌ ನಿರ್ದೇಶನದ 'ಅರ್ಧಾಂಗಿ' ಧಾರಾವಾಹಿ

    ಇಮೇಜಸ್ ಬ್ಯಾನರ್‌ನಲ್ಲಿ ಶ್ರೀನಾಥ್ ರಘುರಾಮ್ 'ಅರ್ಧಾಂಗಿ' ಧಾರವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಂ. ಕುಮಾರ್‌ ಅವರು ಇದರ ನಿರ್ದೇಶನ ಮಾಡುತ್ತಿದ್ದಾರೆ.  ಈ ಧಾರವಾಹಿ ದೊಡ್ಡ ಹಿಟ್ ಆಗಬಹುದು ಎಂಬ ನಿರೀಕ್ಷೆ ತಂಡಕ್ಕೆ. ದಿಗಂತ್ ಪಾತ್ರದಲ್ಲಿ ಪೃಥ್ವಿ ಶೆಟ್ಟಿ ಮತ್ತು ಅದಿತಿ ಪಾತ್ರದಲ್ಲಿ ಅಂಜನಾ ದೇಶಪಾಂಡೆ ನಟಿಸುತ್ತಿದ್ದಾರೆ. ಉಳಿದಂತೆ, ಮಂಡ್ಯ ರವಿ, ಪದ್ಮಿನಿ, ಪ್ರಕಾಶ್ ಮತ್ತು ನೀತು ಮುಂತಾದವರು 'ಅರ್ಧಾಂಗಿ' ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರವಾಹಿಯು ಸ್ಟಾರ್‌ ಸುವರ್ಣದಲ್ಲಿ ಮೇ 23ರಿಂದ ಸಂಜೆ 7 ಗಂಟೆಗೆ ಪ್ರಸಾರ ಆಗಲಿದೆ.  'ಅರ್ಧಾಂಗಿ' ಈಗಾಗಲೇ ಪ್ರಿಯಾಂಕ ಉಪೇಂದ್ರ ಅವರನ್ನಿಟ್ಟುಕೊಂಡು ಸ್ಟಾರ್ ಸುವರ್ಣ ಪ್ರಚಾರವನ್ನೂ ಮಾಡುತ್ತಿದೆ. ಈಗಾಗಲೇ ಪ್ರೋಮೊಗಳು ರಿಲೀಸ್ ಆಗಿದ್ದು, ಕಿರುತೆರೆ ವೀಕ್ಷಕರು 'ಅರ್ಧಾಂಗಿ' ಧಾರವಾಹಿಯನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
    Published by:Swathi Nayak
    First published: