Priyanka Chopra: ಗಂಡನ ಜತೆಗಿನ ಹಾಟ್​ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ: ಸಂಸ್ಕಾರ ಮರೆತ್ರಾ ಎಂದ ನೆಟ್ಟಿಗರು..!

ಬಾಲಿವುಡ್​ ಪ್ರಾಜೆಕ್ಟ್​ಗಳಿಗಿಂತ ಹೆಚ್ಚಾಗಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್​ ಸಿನಿಮಾ ಹಾಗೂ ವೆಬ್​ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ನಟಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ಪ್ರಿಯಾಂಕಾ ತಮ್ಮ ಲೆಟೆಸ್ಟ್​ ಫೋಟೋಗಳನ್ನು ಹಂಚಿಕೊಂಡಿದ್ದು, ಅದು ತುಂಬಾ ಜನರಿಗೆ ಇಷ್ಟವಾಗಿಲ್ಲ.  

ನಟಿ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ

  • Share this:
ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ (Priyanka Chopra Jonas) ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ. ಆಗಾಗ ತಮ್ಮ ಪತಿ ನಿಕ್ ಜೋನಸ್​ (Nick Jonas) ಜತೆಗಿನ ಸಾಕಷ್ಟು ಹಾಟ್​ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ತಮ್ಮ ಫ್ಯಾಷನ್ ಆಯ್ಕೆ ಹಾಗೂ ತೊಡುವ ವಿನ್ಯಾಸ ಡ್ರೆಸ್​ಗಳಿಂದಾಗಿ ಟ್ರೋಲ್ ಆಗುವ ಪ್ರಿಯಾಂಕಾ ಚೋಪ್ರಾ ಸಾಕಷ್ಟು ಸಲ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗುತ್ತಿರುತ್ತಾರೆ. ಈಗಲೂ ಸಹ ಪ್ರಿಯಾಂಕಾ ಚೋಪ್ರಾ ಮಾಡಿರುವ ಆ ಒಂದು ಕೆಲಸದಿಂದ ಮತ್ತೆ ನೆಟ್ಟಿಗರು ಪ್ರಿಯಾಂಕಾ ಚೋಪ್ರಾ ಮೇಲೆ ಸಿಟ್ಟಾಗಿದ್ದಾರೆ. ಅಷ್ಟಕ್ಕೂ ಗಾಯಕಿ ಹಾಗೂ ನಟಿ ಪ್ರಿಯಾಂಕಾ ಚೋಪ್ರಾ ಮಾಡಿದ್ದಾದರೂ ಏನು ಅಂತೀರಾ..?

ಬಾಲಿವುಡ್​ ಪ್ರಾಜೆಕ್ಟ್​ಗಳಿಗಿಂತ ಹೆಚ್ಚಾಗಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್​ ಸಿನಿಮಾ ಹಾಗೂ ವೆಬ್​ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ನಟಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಈಗಲೂ ಸಹ ಪ್ರಿಯಾಂಕಾ ತಮ್ಮ ಲೆಟೆಸ್ಟ್​ ಫೋಟೋಗಳನ್ನು ಹಂಚಿಕೊಂಡಿದ್ದು, ಅದು ತುಂಬಾ ಜನರಿಗೆ ಇಷ್ಟವಾಗಿಲ್ಲ.

Nick Jonas, Priyanka Chopra, Priyanka Chopra photos, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್​, ಪ್ರಿಯಾಂಕಾ ಚೋಪ್ರಾ ಟ್ರೋಲ್​, ಪ್ರಿಯಾಂಕಾ ಚೋಪ್ರಾ ಹಾಟ್​ ಫೋಟೋಗಳು, Priyanka Chopra shared a naughty picture with her husband fans got angry ae
ನಟಿ ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಪೋಸ್ಟ್​


ಹೌದು, ಪ್ರಿಯಾಂಕಾ ಚೋಪ್ರಾ ಕೆಂಪು ಹಾಗೂ ಕಪ್ಪು ಬಣ್ಣದ ಬಿಕಿನಿ ತೊಟ್ಟಿದ್ದು, ಅದರಲ್ಲಿ ತೆಗೆದ ಎರಡು ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾರ ಬಿಕಿನಿ ಫೋಟೋ ಮಾತ್ರ ಆಗಿದ್ದರೆ ನೆಟ್ಟಿಗರು ಇಷ್ಟು ಸಿಟ್ಟಾಗುತ್ತಿರಲಿಲ್ಲ ಅನಿಸುತ್ತೆ. ಈಇ ಎರಡು ಚಿತ್ರಗಳಲ್ಲಿ ಒಂದು ಫೋಟೋದಲ್ಲಿ ನಿಕ್ ಜೋನಸ್ ಸಹ ಇದ್ದಾರೆ.

ಇದನ್ನೂ ಓದಿ: Drone Prathap: ಅಪೂರ್ವ ಸಂಗಮ: ತಮ್ಮ ಡ್ರೋನ್ ಪ್ರತಾಪನ ಭೇಟಿಯಾದ ಡ್ರೋನ್ ಪ್ರಥಮ್​..!

ನಿಕ್ ಜತೆ ಪ್ರಿಯಾಂಕಾ ಒಂದು ಹಾಟ್ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನಿಕ್ ಜೋನಸ್​ ಅವರು ಪ್ರಿಯಾಂಕಾ ಮಲಗಿದ್ದರೆ, ಕಾಲಿನ ಬಳಿ ನಿಕ್ ಕುಳಿತುಕೊಂಡಿದ್ದಾರೆ. ಕೈಯಲ್ಲಿ ಫೋರ್ಕ್​ ಹಾಗೂ ಚೂರಿ ಹಿಡಿದು ಪೋಸ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಪ್ರಿಯಾಂಕಾ ಚೋಪ್ರಾ ಸ್ನ್ಯಾಕ್ಸ್​ ಎಂದು ಶೀರ್ಷಿಕೆ ನೀಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಅವರ ಈ ಹಾಟ್​ ಫೋಟೋ ನೋಡಿದ ನೆಟ್ಟಿಗರು ಸಂಸ್ಕಾರ ಮರೆತ್ರಾ ಎಂದು ಕಮೆಂಟ್​ ಮಾಡುತ್ತಿದ್ದಾರೆ. ಸಾಲದಕ್ಕೆ ಇಂತಹ ಫೋಟೋ ಹಾಕಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆಯೂ ಪ್ರಿಯಾಂಕಾ ರವಿಕೆ ಇಲ್ಲದೆ ಸೀರೆಯುಟ್ಟು ಡ್ಯಾನ್ಸ್​ ಮಾಡಿದ್ದ ವಿಡಿಯೋ ಹಂಚಿಕೊಂಡಿದ್ದರು. ಆಗಲೂ ಸಹ ಪ್ರಿಯಾಂಕಾ ಚೋಪ್ರಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು.

ಸಿಟಾಡೆಲ್​ ವೆಬ್​ ಸರಣಿಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಅವರು ಲಂಡನ್​ನಲ್ಲಿದ್ದರು. ಆದರೆ ಶೂಟಿಂಗ್​ನಿಂದ ಬಿಡುವುದು ಪಡೆದು ಲಾಸ್​ ಏಂಜಲೀಸ್​ನಲ್ಲಿರುವ ಮನೆ ಮರಳಿರುವ ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಸ್​ ಜತೆ ಭಾನುವಾರ ಕಾಲ ಕಳೆದಿದ್ದಾರೆ. ಈ ವೇಳೆ ಗಂಡನ ಜತೆ ಕಳೆದ ಮಧುರ ಕ್ಷಣಗಳನ್ನು ಕ್ಯಾಮೆರಾರಾದಲ್ಲಿ ಸೆರೆ ಹಿಡಿದ್ದಾರೆ.

ಇದನ್ನೂ ಓದಿ: ಪ್ರೀತಿಸಿದ ಹುಡುಗನ ಜತೆ ತವರೂರು ಶಿರ್ವದಲ್ಲಿ ಕಾಣಿಸಿಕೊಂಡ ಶುಭಾ ಪೂಂಜಾ..!ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Anitha E
First published: