• Home
 • »
 • News
 • »
 • entertainment
 • »
 • Priyanka Chopra: ಪತಿ, ಮಗಳ ಜೊತೆಗೆ ಪ್ರಿಯಾಂಕ ಝೂ ಪ್ರವಾಸ!

Priyanka Chopra: ಪತಿ, ಮಗಳ ಜೊತೆಗೆ ಪ್ರಿಯಾಂಕ ಝೂ ಪ್ರವಾಸ!

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನಸ್‌ ತಮ್ಮ ಬ್ಯುಸಿ ಲೈಫ್‌ ಶೆಡ್ಯೂಲ್​ನಿಂದ ಸ್ವಲ್ಪ ವಿರಾಮ ಪಡೆದು ಫ್ಯಾಮಿಲಿ ಟೈಂ ಅನ್ನು ಎಂಜಾಯ್‌ ಮಾಡಿದರು.

 • Trending Desk
 • 2-MIN READ
 • Last Updated :
 • Bangalore, India
 • Share this:

ಬಾಲಿವುಡ್‌ (Bollywood) ನಿಂದ ದೂರವಾಗಿ ಅಮೆರಿಕದಲ್ಲಿ (America) ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka CHopra) ಆಗಾಗ ತಮ್ಮ ಪತಿ ನಿಕ್‌ ಜೋನಸ್‌ (Nick Jonas) ಹಾಗೂ ಪುಟ್ಟ ಮಗಳು ಮಾಲ್ತಿ ಮೇರಿಯ ಫೋಟೋ, ವಿಡಿಯೋಗಳನ್ನು (Video) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾನೇ ಇರ್ತಾರೆ. ಇತ್ತೀಚೆಗೆ ಕುಟುಂಬದೊಂದಿಗೆ ಮೃಗಾಲಯಕ್ಕೆ ಪ್ರವಾಸ ಹೋಗಿದ್ದ ಫೋಟೋವೊಂದನ್ನು ಅವರು ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನಸ್‌ ತಮ್ಮ ಬ್ಯುಸಿ ಲೈಫ್‌ ಶೆಡ್ಯೂಲ್‌ ನಿಂದ ಸ್ವಲ್ಪ ವಿರಾಮ ಪಡೆದು ಫ್ಯಾಮಿಲಿ ಟೈಂ ಅನ್ನು ಎಂಜಾಯ್‌ ಮಾಡಿದರು.


ತಮ್ಮ ಕುಟುಂಬದ ಜೊತೆಗೆ ಕ್ವಾಲಿಟಿ ಟೈಂ ಕಳೆದರು. ಪುಟ್ಟ ಮಗಳು ಮಾಲ್ತಿ ಮೇರಿ ಕರೆದುಕೊಂಡು ಲಾಸ್‌ ಏಂಜಲಿಸ್‌ ನ ಮೃಗಾಲಯಕ್ಕೆ ಭೇಟಿ ನೀಡಿದ್ದರು.
ಅಲ್ಲಿ ಅಕ್ವೇರಿಯಂವೊಂದರ ಮುಂದೆ ನಿಂತುಕೊಂಡಿದ್ದ ಫೋಟೋವನ್ನು ಇನ್‌ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ನಿಕ್‌ ಜೋನಸ್‌ ಮಗಳನ್ನು ಎತ್ತಿಕೊಂಡಿದ್ದಾರೆ. ಪ್ರಿಯಾಂಕಾ ಅವಳನ್ನು ಪ್ರೀತಿಯಿಂದ ನೋಡುತ್ತಿದ್ದಾರೆ.


ಇಲ್ಲಿ ಮೂವರೂ ಚಳಿಗಾಲದ ಬೆಚ್ಚಗಿನ ಬಟ್ಟೆಗಳನ್ನು ಧರಿಸಿರೋದು ಕಾಣುತ್ತೆ. ಅಲ್ಲದೇ ನಿಕ್‌ ಹಾಗೂ ಪ್ರಿಯಾಂಕಾ ಇಬ್ಬರೂ ಮಾಸ್ಕ್‌ ಧರಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಪ್ರಿಯಾಂಕಾ ಮಗಳು ಮಾಲ್ತಿ ಮೇರಿ ಮುಖವನ್ನು ಹಾರ್ಟ್‌ ಎಮೋಜಿಯಿಂದ ಮುಚ್ಚಿದ್ದಾರೆ.
ಈ ಪೋಟೋಗೆ ಸರಳವಾದ ಶೀರ್ಷಿಕೆ ನೀಡಿರುವ ಅವರು ಹ್ಯಾಷ್‌ ಟ್ಯಾಗ್‌ ಹಾಕಿ ಕುಟುಂಬ, #Zo̧o #familyday ಮತ್ತು #love ಎಂಬುದಾಗಿ ಬರೆದುಕೊಂಡಿದ್ದಾರೆ.


ಅಂದಹಾಗೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಬಾಡಿಗೆ ತಾಯ್ತತನದ ಮೂಲಕ ಈ ವರ್ಷದ ಜನವರಿಯಲ್ಲಿ ಮಗಳು ಮಾಲ್ತಿ ಮೇರಿಯನ್ನು ಬರಮಾಡಿಕೊಂಡಿದ್ದರು.


ಇದನ್ನೂ ಓದಿ: ಮತ್ತೆ ನೆಟ್ಟಿಗರಿಗೆ ಆಹಾರವಾದ ಪಿಗ್ಗಿ; ಪತಿ ವಯಸ್ಸನ್ನೇ ತಪ್ಪಾಗಿ ನಮೂದಿಸಿ ಪೋಸ್ಟ್​ ಹಾಕಿದ್ದ ಪ್ರಿಯಾಂಕ ಚೋಪ್ರಾ


ಇನ್ನು ಆಗಾಗ ತಮ್ಮ ಮೂವರ ಫೋಟೋವನ್ನು ಹಂಚಿಕೊಳ್ಳುವ ಪ್ರಿಯಾಂಕಾ ಅವರು ಇತ್ತೀಚಿಗಷ್ಟೇ ಮುದ್ದಾಗ ಫೋಟೋವೊಂದನ್ನು ಶೇರ್‌ ಮಾಡಿದ್ದರು. ಅದರಲ್ಲಿ ಪ್ರಿಯಾಂಕಾ ಮಗಳನ್ನು ಎತ್ತಿ ಆಡಿಸುತ್ತಿದ್ದು, ಅದನ್ನು ನಿಕ್‌ ಪ್ರೀತಿಯಿಂದ ನೋಡುತ್ತಿರುವಂಥ ಫೋಟೋವನ್ನೂ ಹಂಚಿಕೊಂಡಿದ್ದರು. ಇದಕ್ಕೆ ಅವರು ಮನೆ ಎಂದು ಶೀರ್ಷಿಕೆ ನೀಡಿದ್ದರು.

View this post on Instagram


A post shared by Priyanka (@priyankachopra)

ಅಲ್ಲದೇ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರ ಮಗಳು ಮಾಲ್ತಿ ಮೇರಿ ಜೊತೆಗಿನ ಮೊದಲ ದೀಪಾವಳಿ ಪೋಟೋ ಮುದ್ದಾಗಿತ್ತು. ಕ್ರೀಂ ಕಲರ್‌ ಟ್ರಡೀಷನಲ್‌ ಡ್ರೆಸ್‌ ನಲ್ಲಿ ಮೂವರೂ ಮುದ್ದಾಗಿ ಕಾಣುತ್ತಿದ್ದರು. ಇನ್ನು, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಈ ವರ್ಷ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗಳನ್ನು ಪಡೆದಿರುವುದಾಗಿ ಘೋಷಿಸಿದ್ದರು.
ಆದ್ರೆ ಅವರಿಬ್ಬರೂ ತಮ್ಮ ಮಗುವಿನ ಬಹಳಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೂ ಈ ವಿಷಯದಲ್ಲಿ ಗೌಪ್ಯತೆ ಕಾಯ್ದುಕೊಂಡಿದ್ದಾರೆ. ಫೋಟೋಗಳಲ್ಲಿ ಎಂದಿಗೂ ಮಗುವಿನ ಮುಖವನ್ನು ಅವರು ಬಹಿರಂಗಪಡಿಸಿಲ್ಲ.


ಇನ್ನು, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು 2017 ರಲ್ಲಿ ಡಿಸೈನರ್ ರಾಲ್ಫ್ ಲಾರೆನ್ ಅವರನ್ನು ಪ್ರತಿನಿಧಿಸುವ ಗ್ರ್ಯಾಂಡ್ ಫ್ಯಾಶನ್ ಈವೆಂಟ್ ಮೆಟ್ ಗಾಲಾದಲ್ಲಿ ಭೇಟಿಯಾದರು.


ಪ್ರಿಯಾಂಕಾ ಹುಟ್ಟುಹಬ್ಬದಂದೇ ಲಂಡನ್‌ನಲ್ಲಿ ನಿಕ್‌ ಪ್ರಪೋಸ್‌ ಮಾಡಿದ್ದರು. ಕೊನೆಗೆ 2018 ರಲ್ಲಿ ಉಮೈದ್ ಭವನ್ ಅರಮನೆಯಲ್ಲಿ ಪ್ರಿಯಾಂಕಾ ಹಾಗೂ ನಿಕ್‌ ವಿವಾಹವಾದರು. ಅಮೆರಿಕಾದಲ್ಲಿ ನೆಲೆಸಿರುವ ಪ್ರಿಕಾಂಯಾ ಚೋಪ್ರಾ ಹಲವಾರು ಬ್ಯುಸಿನೆಸ್‌ ಗಳನ್ನು ನಡೆಸ್ತಿದ್ದಾರೆ. ಸದ್ಯ ಬಾಲಿವುಡ್‌ ನಿಂದ ದೂರವೇ ಉಳಿದಿರುವ ಪ್ರಿಯಾಂಕಾ ಬಹಳ ದಿನಗಳ ನಂತರ ಇತ್ತೀಚೆಗೆ ಭಾರತಕ್ಕೆ ಬಂದಿದ್ದರು.


ಅವರು ಶೀಘ್ರದಲ್ಲೇ ಫರ್ಹಾನ್ ಅಖ್ತರ್ ಅವರ ಜೀ ಲೇ ಜರಾ ಚಿತ್ರದಲ್ಲಿ ನಟಿ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು