- ಅನಿತಾ ಈ,
ಹಾಲಿವುಡ್ ಪಾಪ್ ಗಾಯಕ ನಿಕ್ ಜೋನಸ್ರನ್ನು ವರಿಸಿರುವ ಪ್ರಿಯಾಂಕಾ ಚೋಪ್ರಾ ಮಹಿಳೆಯರ ಒಳ ಉಡುಪನ್ನು ಸಾರ್ವಜನಿಕವಾಗಿ ತೋರಿಸುತ್ತಾ ಆಟವಾಡಿದ್ದಕ್ಕೆ ಎಲ್ಲೆಡೆಯಿಂದ ಖಂಡನೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: 'ಕೆ.ಜಿ.ಎಫ್' ವಿಲನ್ ಗರುಡ ಕಾಲಿವುಡ್ನತ್ತ: ರಶ್ಮಿಕಾ-ಕಾರ್ತಿಯ ಹೊಸ ಸಿನಿಮಾದಲ್ಲಿ ಮತ್ತೊಬ್ಬ ಕನ್ನಡಿಗ
ಕಳೆದ ಶನಿವಾರ ನಿಕ್ ಹಾಗೂ ಸೋದರ ಕೆವಿನ್ ನಡೆಸಿಕೊಟ್ಟಿದ್ದ ಸಂಗೀತ ಕಾರ್ಯಕ್ರಮದಲ್ಲಿ ಮಹಿಳಾ ಅಭಿಮಾನಿಯೊಬ್ಬರು ನಿಕ್ ಮೇಲೆ ತಮ್ಮ ಒಳ ಉಡುಪ್ನು ತೆಗೆದು ಎಸೆದಿದ್ದಾರೆ. ಅದನ್ನು ತೆಗೆದುಕೊಂಡ ಪ್ರಿಯಾಂಕಾ ಗಾಳಿಯಲ್ಲಿ ಜೋರಾಗಿ ಅದನ್ನು ತಿರುಗಿಸುತ್ತಾ ಆಟವಾಡಿದ್ದಾರೆ.
ಈ ಘಟನೆ ವಿದೇಶದಲ್ಲಿ ನಡೆದಿದ್ದರೂ ಸಹ ಸಾಕಷ್ಟು ಜನರಿಗೆ ಆಶ್ಚರ್ಯವನ್ನುಂಟುಮಾಡಿದೆ. ಕಾರಣ ಇಷ್ಟೆ ಯಾವ ಭಾರತೀಯ ನಾರಿಯೂ ತನ್ನ ಗಂಡನ ಮೇಲೆ ಪರ ಸ್ತ್ರೀ ಒಳ ಉಡುಪನ್ನು ಎಸೆದರೆ, ಅದನ್ನು ನೋಡಿಕೊಂಡು ಸುಮ್ಮನಿರುವುದಿಲ್ಲ. ಆದರೆ ಪ್ರಿಯಾಂಕಾ ಅದನ್ನೂ ಎಂಜಾ ಮಾಡಿರುವುದು ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಅಲ್ಲಿ ಒಳ ಉಡುಪನ್ನು ಯಾರು ಎಸೆದರೂ ಗೊತ್ತಾಗಲಿಲ್ಲ. ಆದರೆ ಪ್ರಿಯಾಂಕಾ ಅದರೊಂದಿಗೆ ಆಟವಾಡಿದ ಚಿತ್ರ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದರಲ್ಲೂ ಇಲ್ಲಿ ಸಂಗೀತ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ಒಳ ಉಡುಪಿನ ವಿಷಯವೇ ಹೈಲೈಟ್ ಆಗುತ್ತಿದೆ.
ನಿಕ್ ಹಾಗೂ ಕೆವಿನ್ ಐದು ವರ್ಷಗಳ ನಂತರ ಒಂದಾಗಿದ್ದು, ಸದ್ಯ ಇವರಿಬ್ಬರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಪ್ರಿಯಾಂಕಾ ಚೋಪ್ರಾ ಭಾಗವಹಿಸಿದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಪಿಗ್ಗಿ ಮಾಡಿರುವ ಕೆಲಸಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಇವರು ಭಾರತೀಯ ಮೌಲ್ಯಗಳನ್ನು ಮಣ್ಣು ಪಾಲು ಮಾಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
PHOTOS: ಸ್ಟಾರ್ ದಂಪತಿ ಸಂಜು-ಮಾನ್ಯತಾರ ಹೊಸ ಫೋಟೋಶೂಟ್ನ ಚಿತ್ರಗಳು..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ