Priyanka Chopra: ಟ್ರಾಲ್​ ಆಯಿತು ಬ್ಲೌಸ್​ ಇಲ್ಲದೆ ಸೀರೆ ತೊಟ್ಟು ಪೋಸ್​ ನೀಡಿದ ಪ್ರಿಯಾಂಕಾರ ಫೋಟೊ

Priyanka Chopra: ಸಿನಿಮಾಗಿಂತ ಹೆಚ್ಚಾಗಿ ಫ್ಯಾಷನ್​ ಹಾಗೂ ಫೋಟೊಶೂಟ್​ಗಳಿಂದಲೇ ಸುದ್ದಿಯಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ ಈಗ ವಿನ್ಯಾಸಿತ ದಿರಿಸಿನಿಂದಾಗಿ ಟ್ರಾಲ್​ ಆಗುತ್ತಿದ್ದಾರೆ.

Anitha E | news18
Updated:June 8, 2019, 4:10 PM IST
Priyanka Chopra: ಟ್ರಾಲ್​ ಆಯಿತು ಬ್ಲೌಸ್​ ಇಲ್ಲದೆ ಸೀರೆ ತೊಟ್ಟು ಪೋಸ್​ ನೀಡಿದ ಪ್ರಿಯಾಂಕಾರ ಫೋಟೊ
ನಟಿ ಪ್ರಿಯಾಂಕಾ ಚೋಪ್ರಾ
  • News18
  • Last Updated: June 8, 2019, 4:10 PM IST
  • Share this:
ನಟಿ ಪ್ರಿಯಾಂಕಾ ಚೋಪ್ರಾ ಸದಾ ತಮ್ಮ ಫ್ಯಾಷನ್​, ಲುಕ್ಸ್​ ಹಾಗೂ ವಿನ್ಯಾಸಿತ ದಿರಿಸುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ಫೇಮಸ್​ ಆಗಿರುತ್ತಾರೆ. ಅವರ ಫ್ಯಾಷನ್​ ಕುರಿತಾದ ಸುದ್ದಿಗಳು ಹೆಚ್ಚಾಗಿ ಹರಿದಾಡುತ್ತಿರುತ್ತವೆ. ಈಗ ಇಂತಹದ್ದೇ ಒಂದು ಸುದ್ದಿಯಿಂದಾಗಿ ಪ್ರಿಯಾಂಕಾ ಟ್ರಾಲ್​ ಆಗಿದ್ದಾರೆ.

ಹೌದು, ಕಾನ್ಸ್​ ಸಿನಿಮೋತ್ಸವದಲ್ಲಿ ಪಿಗ್ಗಿ ಕಾಣಿಸಿಕೊಂಡಿದ್ದ ರೀತಿಯಿಂದಾಗಿ ಅವರ ಫ್ಯಾಷನ್​ ಸೆನ್ಸ್​ ಬಗ್ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಕೇಳಿ ಬಂದಿದ್ದವು. ಅದಕ್ಕೂ ಮೊದಲು ಮೆಟ್​ಗಾಲಾದಲ್ಲಿ ಅವರ ವೇಷಭೂಷಣದಿಂದಾಗಿ ಆಗ ಹಾಸ್ಯಕ್ಕೀಡಾಗಿದ್ದರು. ಈಗಲೂ ಅವರು ಅವರ ಫ್ಯಾಷನ್​ನಿಂದಾಗಿ ಟ್ರಾಲ್​ ಆಗುತ್ತಿದ್ದಾರೆ.
ಇತ್ತೀಚೆಗೆ ಪ್ರಿಯಾಂಕಾ ನಿಯತಕಾಲಿಕೆವೊಂದರ ಮುಖಪುಟದ ಫೋಟೊಶೂಟ್​ಗೆ ಪೋಸ್​ ನೀಡಿದ್ದಾರೆ. ಅದರಲ್ಲಿ ಅವರು ಬ್ಯಾಕ್​ ಲೆಸ್​ ಅಂದರೆ ರವಿಕೆ (ಬ್ಲೌಸ್​) ಇಲ್ಲದ ಸೀರೆ ತೊಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಟ್ಟೆ ತೊಟ್ಟು ಪಿಗ್ಗಿ ಹಾಕಿರುವ ಸ್ಟೆಪ್​ಗೆ ನೆಟ್ಟಿಗರು ಸಿಡಿಮಿಡಿಗೊಂಡಿದ್ದಾರೆ.
ಪ್ರಿಯಾಂಕಾ ತೊಟ್ಟಿರುವ ಆ ಉಡುಗೆಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸುತ್ತಿದ್ದು, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟ್ರಾಲ್​ ಮಾಡುತ್ತಿದ್ದಾರೆ. ಇನ್ನೂ ಕೆಲವರು ಪ್ರಿಯಾಂಕಾ ಹಾಲಿವುಡ್​ನಲ್ಲಿ ತಮ್ಮ ಅಸ್ತತ್ವಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.

Priyanka Chopra
ಟ್ರಾಲ್​ ಆದ ಪ್ರಿಯಾಂಕಾ ಚೋಪ್ರಾ


ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಯಾರನ್ನ ಅಷ್ಟು ಪ್ರೀತಿಸುತ್ತಿದ್ದಾರೆ ಗೊತ್ತಾ..?

ಪ್ರಿಯಾಂಕಾರ ಈ ಲುಕ್​ಗೆ ಪತಿ ನಿಕ್​ ಜೋನಸ್​, ಬಾಲಿವುಡ್​ ಮಂದಿ ಹಾಗೂ ಹಾಲಿವುಡ್​ನವರು ಹಗಳಿಕೆಯ ಸುರಿ ಮಳೆಯನ್ನೇ ಸುರಿಸುತ್ತಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಟ್ರಾಲ್​ ಮಾಡುತ್ತಿದ್ದಾರೆ.

Mouni Roy Photos: ಮುದ್ದಾದ ನಗು ಮೊಗದ 'ಕೆ.ಜಿ.ಎಫ್' ಸಿನಿಮಾದ ನಟಿ ಮೌನಿ ರಾಯ್​ 
First published:June 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ