ಮೊನ್ನೆ ತಾನೇ ಗಂಡ ನಿಕ್ ಜೊನಸ್ ಅವರೊಂದಿಗೆ ನೈಟ್ ಡೇಟಿಂಗ್ ಅಂತ ಮುಂಬೈನಲ್ಲಿ (Mumbai) ಆಟೋರಿಕ್ಷಾದ ಬಳಿ ನಿಂತು ಫೋಟೋ ತೆಗೆಸಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ನೋಡಿ. ಈ ಬಾರಿ ಅವರು ಸುದ್ದಿಯಲ್ಲಿರುವುದು ಅವರ ಪುಟ್ಟ ಮಗಳಾದ ಮಾಲ್ತಿ (Malti) ಮೇರಿಯನ್ನು ಮುಂಬೈ ನಲ್ಲಿರುವ ಪ್ರಸಿದ್ದವಾದ ಸಿದ್ದಿ ವಿನಾಯಕ ದೇವಸ್ಥಾನಕ್ಕೆ (Vinayaka Temple) ಕರೆದುಕೊಂಡು ಹೋಗಿರುವುದರಿಂದ ಅಂತ ಹೇಳಬಹುದು.
ನಟಿ ಪ್ರಿಯಾಂಕಾ ತನ್ನ ಗಂಡ ನಿಕ್ ಜೊತೆ ಇತ್ತೀಚೆಗೆ ನೀತಾ ಮುಖೇಶ್ ಅಂಬಾನಿಯವರ ಹೊಸದಾಗಿ ಶುರು ಮಾಡಿದ ಕಲ್ಚರಲ್ ಸೆಂಟರ್ ನ ಗ್ರ್ಯಾಂಡ್ ಓಪನಿಂಗ್ ವೀಕೆಂಡ್ ಕಾರ್ಯಕ್ರಮಕ್ಕೆ ಬಂದವರು ಇನ್ನೂ ಮುಂಬೈನಲ್ಲಿಯೇ ಇದ್ದಾರೆ.
ಮಗಳ ಜೊತೆಗೆ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ನಟಿ
ಪ್ರಿಯಾಂಕಾ ಗುರುವಾರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಮೆರಿಕದಲ್ಲಿ ಜನಿಸಿದ ನಂತರ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಮಗಳು ಮಾಲ್ತಿ ಮೇರಿಯನ್ನು ಕರೆದುಕೊಂಡು ಹೋಗಿದ್ದರು. ಪತಿ ಜೊನಾಸ್ ಸಹ ಅವರೊಂದಿಗೆ ಹೋಗಿದ್ದರು ಅಂತ ಹೇಳಲಾಗುತ್ತಿದೆ, ಆದರೆ ನಿಕ್ ದೇವಸ್ಥಾನದ ಒಳಗೆ ತೆಗೆಸಿಕೊಂಡ ಯಾವುದೇ ಫೋಟೋಗಳಲ್ಲಿ ಕಾಣಿಸಿಕೊಂಡಿಲ್ಲ.
ದೇವಾಲಯದಲ್ಲಿ ತೆಗೆಸಿಕೊಂಡ ಅನೇಕ ಫೋಟೋಗಳು ಮತ್ತು ವೀಡಿಯೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಈ ನಟಿ ತಿಳಿ ಹಸಿರು ಸಲ್ವಾರ್ ಸೂಟ್ ಅನ್ನು ಧರಿಸಿದರೆ, ಮಗಳು ಮಾಲ್ಟಿ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಳು. ವೀಡಿಯೋದಲ್ಲಿ, ಪೂಜಾ ಸಮಯದಲ್ಲಿ ಪ್ರಿಯಾಂಕಾ ತನ್ನ ಮಗಳನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಹೋಗುತ್ತಿರುವುದನ್ನು ಕಾಣಬಹುದು. ತಾಯಿ ಮತ್ತು ಮಗಳ ಹಣೆಯ ಮೇಲೆ ತಿಲಕವಿರುವುದನ್ನು ಸಹ ನಾವು ನೋಡಬಹುದು.
ಫೋಟೋದಲ್ಲಿ ಪ್ರಿಯಾಂಕಾ ಗಣೇಶನ ವಿಗ್ರಹದ ಮುಂದೆ ನಿಂತಿದ್ದಾರೆ ನೋಡಿ..
ಮತ್ತೊಂದು ಫೋಟೋದಲ್ಲಿ, ಪ್ರಿಯಾಂಕಾ ದೇವಾಲಯದಲ್ಲಿ ಗಣೇಶನ ವಿಗ್ರಹದ ಮುಂದೆ ಫೋಟೋಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಎಲ್ಲಾ ಫೋಟೋಗಳು ಮತ್ತು ವೀಡಿಯೋಗಳಲ್ಲಿ, ಮಾಲ್ತಿ ತುಂಬಾನೇ ಶಾಂತ ಮತ್ತು ಕುತೂಹಲದಿಂದ ಎಲ್ಲವನ್ನೂ ನೋಡುತ್ತಿರುವುದನ್ನು ನಾವು ನೋಡಬಹುದು. ಅಲ್ಲಿ ಸೇರಿದ್ದ ಹಲವಾರು ಜನರು ಮತ್ತು ಅಭಿಮಾನಿಗಳು ಪ್ರಿಯಾಂಕಾ ಮತ್ತು ಮಗಳ ಈ ಭೇಟಿಯನ್ನು ತಮ್ಮ ಮೊಬೈಲ್ ಫೋನ್ ಗಳಲ್ಲಿ ರೆಕಾರ್ಡ್ ಮಾಡುತ್ತಿರುವುದು ಸಹ ಕಂಡು ಬಂದಿದೆ.
ಫೋಟೋ ಮತ್ತು ವೀಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?
ಈ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ನೋಡಿ ಇವುಗಳಿಗೆ ಪ್ರತಿಕ್ರಿಯಿಸಿದ ಅನೇಕರು ಪ್ರಿಯಾಂಕಾ ಮತ್ತು ಮಾಲ್ಟಿ ಅವರನ್ನು ತುಂಬಾನೇ ಶ್ಲಾಘಿಸಿದ್ದಾರೆ. ಅವರಲ್ಲಿ ಒಬ್ಬರು "ಪ್ರಿಯಾಂಕಾ ಮಗು ತುಂಬಾನೇ ಚೆನ್ನಾಗಿದೆ, ತುಂಬಾನೇ ಶಾಂತ ಸ್ವಭಾವದ ಮಗು" ಎಂದು ಕಾಮೆಂಟ್ ಮಾಡಿದ್ದಾರೆ. "ಮಗಳಿಗೆ ಒಳ್ಳೆಯದಾಗಲಿ, ಆದರೆ ದೇವರ ಆಶೀರ್ವಾದವನ್ನು ಪಡೆಯುವಾಗ ವೀಡಿಯೋ ಮತ್ತು ಫೋಟೋಗಳನ್ನು ತೆಗೆದುಕೊಳ್ಳುವುದು ತುಂಬಾ ಅಸಹ್ಯಕರವಾಗಿದೆ. ಅವಳು ಬಹುಶಃ ಅದನ್ನು ನಂತರ ಲೈಕ್ ಗಳಿಗಾಗಿ ಎಲ್ಲಿಯಾದರೂ ಪೋಸ್ಟ್ ಮಾಡುತ್ತಾಳೆ. ಎಲ್ಲವೂ ತೋರಿಕೆಗಾಗಿ, ನಿಜವಾದದ್ದೇನೂ ಇಲ್ಲ" ಎಂದು ಇನ್ನೊಬ್ಬರು ಹೇಳಿದರು.
ಮುಂಬೈಯಲ್ಲಿ ‘ದಿ ಸಿಟಾಡೆಲ್’ ವೆಬ್ ಸೀರಿಸ್ ನ ಪ್ರಚಾರವನ್ನು ಶುರು ಮಾಡಿದ ನಟಿ
ಪ್ರಿಯಾಂಕಾ ತಮ್ಮ ಮುಂಬರುವ ಸ್ಪೈ-ಥ್ರಿಲ್ಲರ್ ವೆಬ್ ಸೀರಿಸ್ ‘ದಿ ಸಿಟಾಡೆಲ್’ ನ ಪ್ರಚಾರವನ್ನು ಮಂಗಳವಾರ ಮುಂಬೈನಲ್ಲಿ ಪ್ರಾರಂಭಿಸಿದರು. ಅವರ ಸಹನಟ ರಿಚರ್ಡ್ ಮ್ಯಾಡೆನ್ ಕೂಡ ಅವರೊಂದಿಗೆ ಸೇರಿಕೊಂಡರು. ಪ್ರೈಮ್ ವೀಡಿಯೋ ಸೀರಿಸ್ ನ ಪ್ರೀಮಿಯರ್ ಸಹ ನಗರದಲ್ಲಿ ನಡೆಯಿತು, ಇದರಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದು ಏಪ್ರಿಲ್ 28 ರಂದು ಜಾಗತಿಕವಾಗಿ 40 ಭಾಷೆಗಳಲ್ಲಿ ಬಿಡುಗಡೆಯಾಗಲಿದೆಯಂತೆ.
ಇದನ್ನೂ ಓದಿ: Ajay Devgn: ಕಾಜೋಲ್ ಮುಖ ನೋಡಲು ಕೂಡ ನನಗೆ ಇಷ್ಟವಿರಲಿಲ್ಲ, ಆಕೆ ಸೊಕ್ಕಿನ ಹುಡುಗಿ ಎಂದಿದ್ಯಾಕೆ ಅಜಯ್ ದೇವಗನ್?
ಇದಲ್ಲದೆ, ಪ್ರಿಯಾಂಕಾ ಸ್ಯಾಮ್ ಹ್ಯೂಘನ್ ಮತ್ತು ಸೆಲೀನ್ ಡಿಯೋನ್ ಅವರೊಂದಿಗೆ ನಟಿಸಿರುವ ‘ಲವ್ ಅಗೇನ್’ ಚಿತ್ರದಲ್ಲಿ ಸಹ ನಟಿಸಲಿದ್ದಾರೆ. ಇದು ಈ ವರ್ಷದ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ