• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Priyanka Chopra: ಎಡವಿ ಬಿದ್ದ ಮಾಜಿ ವಿಶ್ವ ಸುಂದರಿ, ಫೋಟೋ ತೆಗೆಯದೆ ಕ್ಯಾಮೆರಾ ಆಫ್​ ಮಾಡಿದ ಛಾಯಾಗ್ರಾಹಕರು!

Priyanka Chopra: ಎಡವಿ ಬಿದ್ದ ಮಾಜಿ ವಿಶ್ವ ಸುಂದರಿ, ಫೋಟೋ ತೆಗೆಯದೆ ಕ್ಯಾಮೆರಾ ಆಫ್​ ಮಾಡಿದ ಛಾಯಾಗ್ರಾಹಕರು!

ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ತಮ್ಮ ಇತ್ತೀಚಿನ ರೊಮ್ಯಾಂಟಿಕ್ ಚಿತ್ರವಾದ ಲವ್ ಎಗೇನ್‌ನ (Love Again) ಪ್ರೀಮಿಯರ್‌ಗಾಗಿ ಡೆನೀಮ್ ಉಡುಗೆಯಲ್ಲಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆಹಾಕಿದ್ದು, ಇದರಲ್ಲಿ ಇನ್ನಷ್ಟು ಸುಂದರಿಯಾಗಿ ಕಾಣುತ್ತಿದ್ದರು.

 • Share this:

ಪ್ರಸ್ತುತ ಹಾಲಿವುಡ್‌ನಲ್ಲಿ (Hollywood) ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ತಮ್ಮ ಇತ್ತೀಚಿನ ರೊಮ್ಯಾಂಟಿಕ್ ಚಿತ್ರವಾದ ಲವ್ ಎಗೇನ್‌ನ (Love Again) ಪ್ರೀಮಿಯರ್‌ಗಾಗಿ ಡೆನೀಮ್ ಉಡುಗೆಯಲ್ಲಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆಹಾಕಿದ್ದು, ಬಾಲಿವುಡ್ ಬೆಡಗಿ ಇನ್ನಷ್ಟು ಸುಂದರಿಯಾಗಿ ಕಾಣುತ್ತಿದ್ದರು. ಅವರು ಧರಿಸಿದ್ದ ಉಡುಗೆ ಮನಮೋಹಕವಾಗಿದ್ದರೂ ಅದನ್ನು ಧರಿಸಿ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ ಎಂಬುದು ಪ್ರಿಯಾಂಕಾ ನಡಿಗೆಯಲ್ಲಿಯೇ ತಿಳಿಯುತ್ತಿತ್ತು.


ರೆಡ್ ಕಾರ್ಪೆಟ್‌ನಲ್ಲಿ ಎಡವಿ ಬಿದ್ದ ಪ್ರಿಯಾಂಕಾ


ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುತ್ತಿದ್ದಾಗ ಪ್ರಿಯಾಂಕ ಎಡವಿ ಬಿದ್ದಿದ್ದು ಆದರೆ ಪ್ರಿಯಾಂಕ ಎಡವಿದರೂ ಯಾವುದೇ ವಿಡಿಯೋಗ್ರಾಫರ್ ಅಥವಾ ಪೋಟೋಗ್ರಾಫರ್ ಈ ಘಟನೆಯನ್ನು ಸೆರೆಹಿಡಿಯಲಿಲ್ಲ ಎಂಬುದೇ ಇಲ್ಲಿ ವಿಶೇಷವಾಗಿದೆ. ರೆಡ್ ಕಾರ್ಪೆಟ್‌ನಲ್ಲಿ ಎಡವಿ ಬಿದ್ದ ಫೋಟೋ ಸೆರೆಹಿಡಿಯಲು ಫೋಟೋಗ್ರಾಫರ್‌ಗಳು ಮುಂದಾಗಲಿಲ್ಲ ಇದು ಆಶ್ಚರ್ಯಕರವಾಗಿದೆ ಎಂದು ನಟಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.


ಪ್ರಿಯಾಂಕಾ ಬಿದ್ದ ಫೋಟೋ ಸೆರೆಹಿಡಿಯದ ಫೋಟೋಗ್ರಾಫರ್


ಯಾವುದಾದರೂ ಸೆಲೆಬ್ರಿಟಿ ಅಥವಾ ನಟಿ ಎಡವಿದರೆ ಇಲ್ಲವೇ ನಡೆಯುತ್ತಿರುವಾಗ ಬಿದ್ದರೆ ಅಥವಾ ಧರಿಸಿದ ದಿರಿಸು ಅವರಿಗೆ ಅನುಕೂಲಕರವಾಗಿಲ್ಲದೇ ಇದ್ದರೆ ಆ ಕ್ಷಣವನ್ನು ಕೂಡಲೇ ಯಾವುದೇ ಫೋಟೋಗ್ರಾಫರ್ ಕ್ಷಣಮಾತ್ರದಲ್ಲಿ ಸೆರೆಹಿಡಿದು ಬಿಡುತ್ತಾರೆ.


ಇದನ್ನೂ ಓದಿ: ಕೆಲ ರಾಜ್ಯಗಳಲ್ಲಿ ‘The Kerala Story’ ಸಿನಿಮಾ ತೆರಿಗೆ ಮುಕ್ತ, ಈ ಟ್ಯಾಕ್ಸ್​ ಫ್ರೀ ಎಂದರೇನು?


ಅಂತೆಯೇ ವಿಡಿಯೋಗ್ರಾಫರ್ ವಿಡಿಯೋ ಮಾಡಿ ತಾಣದಲ್ಲಿ ಅಪ್‌ಲೋಡ್ ಕೂಡ ಮಾಡಿಬಿಡುತ್ತಾರೆ. ಆದರೆ ಪ್ರಿಯಾಂಕಾ ವಿಷಯದಲ್ಲಿ ಹಾಗೆ ಯಾರೊಬ್ಬರೂ ನಡೆದುಕೊಳ್ಳಲಿಲ್ಲ ಎಂಬುದೇ ಪ್ರಿಯಾಂಕಾಗಿರುವ ಸರಳತೆಯನ್ನು ಇಲ್ಲಿ ತಿಳಿಸುತ್ತದೆ.


ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಸುದ್ದಿ ಇಲ್ಲ


ಪ್ರಿಯಾಂಕಾ, ದಿ ವ್ಯೂ ಎಂಬ ಟಾಕ್ ಶೋನಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದು ರೆಡ್ ಕಾರ್ಪೆಟ್‌ನಲ್ಲಿ ಎಡವಿ ಬಿದ್ದಾಗ ತಮಗಾದ ಅನುಭವವನ್ನು ಮಾತುಗಳಲ್ಲಿ ವರ್ಣಿಸಿದ್ದಾರೆ. ಈ ಘಟನೆಯ ಯಾವುದೇ ಫೋಟೇಜ್ ಅಥವಾ ವರದಿ ಸಾಮಾಜಿಕ ತಾಣದಲ್ಲಾಗಲೀ ಯಾವುದೇ ಸುದ್ದಿಮಾಧ್ಯಮದಲ್ಲಾಗಲೀ ಬಂದಿಲ್ಲ ಎಂಬುದೇ ಚಮತ್ಕಾರದ ವಿಷಯವಾಗಿದೆ ಎಂದು ದೇಸೀ ಬೆಡಗಿ ತಿಳಿಸಿದ್ದು, ತನ್ನ 23 ವರ್ಷಗಳ ಸಿನಿ ವೃತ್ತಿ ಜೀವನದಲ್ಲಿ ಇಂತಹ ಘಟನೆ ಸಂಭವಿಸಿಯೇ ಇಲ್ಲ ಎಂದು ತಿಳಿಸಿದ್ದಾರೆ.


ಪ್ರಿಯಾಂಕ ಚೋಪ್ರಾ


ನಾನು ಹೀಗೆ ಎಡವಿ ಬಿದ್ದಾಗ ಫೋಟೋಗ್ರಾಫರ್ ಇಲ್ಲವೇ ವಿಡಿಯೋಗ್ರಾಫರ್ ತಮ್ಮ ತಮ್ಮ ಕ್ಯಾಮೆರಾಗಳನ್ನು ಕೆಳಕ್ಕೆ ಹಿಡಿದುಕೊಂಡು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಪ್ರಿ, ಸಮಯ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇಂತಹ ಸನ್ನಿವೇಶ ತುಂಬಾ ವಿರಳ ಎಂದ ನಟಿ


ಯಾವುದೇ ಸೆಲೆಬ್ರಿಟಿಗೆ ಇಂತಹ ಸನ್ನಿವೇಶಗಳು ಸಂಭವಿಸುವುದು ತುಂಬಾ ವಿರಳ ಎಂದು ತಿಳಿಸಿರುವ ಪ್ರಿಯಾಂಕಾ, ಫೋಟೋಗ್ರಾಫರ್‌ಗಳಿಗೆ ನಾನು ಹಾಗೂ ನನ್ನ ವರ್ತನೆ ಅಷ್ಟೊಂದು ಪ್ರಿಯವಾಗಿರುವುದೇ ಇದಕ್ಕೆ ಬಹುಶಃ ಕಾರಣವಾಗಿರಬಹುದು ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.


ನೀವು ಯಾವಾಗಲೂ ತುಂಬಾ ಸರಳ ಹಾಗೂ ಸುಂದರ ಎಂದು ಫೋಟೋಗ್ರಾಫರ್‌ಗಳು ಬಣ್ಣಿಸಿರುವುದನ್ನು ಪ್ರಿಯಾಂಕಾ ಮಾತುಗಳಲ್ಲಿ ತಿಳಿಸಿದ್ದಾರೆ. ಹಾಗಾಗಿ ಇದುವರೆಗೆ ನಾನು ರೆಡ್ ಕಾರ್ಪೆಟ್‌ನಲ್ಲಿ ಬಿದ್ದಂತಹ ಯಾವುದೇ ವಿಡಿಯೋ ಕ್ಲಿಪ್‌ಗಳು ದೊರೆಯಲು ಸಾಧ್ಯವೇ ಇಲ್ಲ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.
ಹಾಲಿವುಡ್‌ನಲ್ಲಿ ಹೆಚ್ಚು ಬ್ಯುಸಿಯಾಗಿರುವ ಪ್ರಿಯಾಂಕಾ


ಆದರೆ ರೆಡ್ ಕಾರ್ಪೆಟ್‌ನಲ್ಲಿ ಎಡವಿ ಬಿದ್ದ ಪ್ರಿಯಾಂಕಾಗೆ ಮೇಲೇಳಲು ಐದು ಜನರ ಸಹಾಯ ಪಡೆದುಕೊಂಡಿರುವುದು ಮಾತ್ರ ಸುಳ್ಳಲ್ಲ. ಆಕೆ ಬಿದ್ದಾಗ ಅವರ ಪತಿ ನಿಕ್ ಜೋನಾಸ್ ಕೂಡಲೇ ಪತ್ನಿಯ ಸಹಾಯಕ್ಕೆ ನಿಂತರು. ಇಂತಹ ಇರಿಸು ಮುರಿಸಿನ ಸಂದರ್ಭವನ್ನು ಯಾವುದೇ ಫೋಟೋಗ್ರಾಫರ್ ಬಳಸಿಕೊಂಡಿಲ್ಲ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಪ್ರಿಯಾಂಕಾರ ಸಿನಿ ಪಯಣದ ಬಗ್ಗೆ ಮಾತನಾಡುವುದಾದರೆ ಪ್ರಿ ಹೆಚ್ಚಾಗಿ ಹಾಲಿವುಡ್ ಚಿತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದು, ಅವರು ನಟಿಸಿರುವ ಲವ್ ಎಗೇನ್ ಮೇ 5 ರಂದು ಯುಎಸ್‌ನ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ.

top videos


  ಸ್ಯಾಮ್ ಹ್ಯೂಘನ್ ಮತ್ತು ಸೆಲಿನ್ ಡಿಯೋನ್ ಕೂಡ ಪ್ರಿಯಾಂಕಾರೊಂದಿಗೆ ಚಿತ್ರದಲ್ಲಿ ಸ್ಕ್ರೀನ್​ ಹಂಚಿಕೊಂಡಿದ್ದು, ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿಲ್ಲ.ರಾಟನ್ ಟೊಮ್ಯಾಟೋಸ್‌ ಎಂಬ ವಿಮರ್ಶಾತ್ಮಕ ಸೈಟ್‌ನಲ್ಲಿ 19% ರೇಟಿಂಗ್ ಅನ್ನು ಪಡೆದುಕೊಳ್ಳುವಲ್ಲಿ ಮಾತ್ರವೇ ಸಫಲವಾಯಿತು. ಮತ್ತು ಸಿನಿಮಾಸ್ಕೋರ್‌ನಲ್ಲಿ 'ಬಿ' ದರ್ಜೆಯನ್ನು ಗಳಿಸಿದೆ.

  First published: