ಸಾಮಾನ್ಯವಾಗಿ ಈ ಚಲನಚಿತ್ರೋದ್ಯಮದ (Film industry) ಅಭಿಮಾನಿಗಳು ತಮ್ಮ ನೆಚ್ಚಿನ ನಟ (Actor) ಮತ್ತು ನಟಿಯರಿಗೆ (Actress) ಸ್ವಲ್ಪ ನೋವಾದರೂ ಸಾಕು, ಮನಸ್ಸಿಗೆ ತುಂಬಾನೇ ಬೇಸರ ಮಾಡಿಕೊಳ್ಳುತ್ತಾರೆ. ಅದಕ್ಕೆ ಚಲನಚಿತ್ರ (Movie) ನಟರು ತಮ್ಮ ಅಭಿಮಾನಿಗಳೇ ತಮಗೆ ದೇವರು (God) ಎಂದು ಹೇಳುವುದನ್ನು ನಾವು ಅನೇಕ ಸಾರಿ ನೋಡಿದ್ದೇವೆ. ಇಲ್ಲೊಬ್ಬ ನಟಿಯು ತನ್ನ ಗಾಯಗೊಂಡಿರುವ ಮುಖದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಆರೋಗ್ಯದ (Health) ಬಗ್ಗೆ ತುಂಬಾನೇ ಚಿಂತಿತರಾಗಿರುವುದನ್ನು ನಾವು ಇಲ್ಲಿ ನೋಡಬಹುದು.
ಗಾಯದ ಮುಖದ ಫೋಟೋ ಹಚ್ಚಿಕೊಂಡ ಪ್ರಿಯಾಂಕಾ ಚೋಪ್ರಾ
ಯಾರಪ್ಪಾ ಆ ನಟಿ ಎಂದು ತಿಳಿದುಕೊಳ್ಳಲು ನೀವು ತುಂಬಾನೇ ಕಾತುರರಾಗಿದ್ದೀರಿ ಎನ್ನುವುದು ನಮಗೆ ತಿಳಿದಿದೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಬುಧವಾರ ಬೆಳಿಗ್ಗೆ ತಮ್ಮ ಗಾಯದ ಮುಖದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಾಗ ತನ್ನ ಅಭಿಮಾನಿಗಳನ್ನು ಶಾಕ್ ಆಗಿ ಅವರ ಆರೋಗ್ಯದ ಬಗ್ಗೆ ಚಿಂತೆಗೀಡಾದರು.
ಸಿಟಾಡೆಲ್ ವೆಬ್ ಸಿರೀಸ್
ಅವರು ಪ್ರಸ್ತುತ ತಮ್ಮ ಚೊಚ್ಚಲ ವೆಬ್ ಸಿರೀಸ್ ‘ಸಿಟಾಡೆಲ್’ ನ ಚಿತ್ರೀಕರಣದಲ್ಲಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ಅವರು ತಮ್ಮ ಅಭಿಮಾನಿಗಳಿಗೆ ಶೀರ್ಷಿಕೆಯಲ್ಲಿ ‘ನೀವು ಸಹ ನನ್ನಂತೆಯೇ ತುಂಬಾನೇ ಕಠಿಣವಾದ ದಿನವನ್ನು ಹೊಂದಿರುವಿರಾ’ ಎಂದು ಬರೆದಿದ್ದನ್ನು ನೋಡಿ ನಿಜಕ್ಕೂ ಅಭಿಮಾನಿಗಳಿಗೆ ಶಾಕ್ ಆಗಿದೆ.
ಈ ನಟಿಯ ಪೋಸ್ಟ್ ಮತ್ತು ಶೀರ್ಷಿಕೆ ನೋಡಿ ಅವರ ಕೆಲವು ಅಭಿಮಾನಿಗಳು ನಟಿಯನ್ನು ಚಿತ್ರೀಕರಣದ ಸೆಟ್ ನಲ್ಲಿ ನಿಜವಾಗಿಯೂ ನೋಯಿಸಲಾಗಿದೆ ಎಂದು ನಂಬಿದ್ದಾರೆ. ಆದರೆ ಕೆಲವರು ಅವರು ಮೇಕಪ್ ನೊಂದಿಗೆ ಪೋಸ್ ನೀಡುತ್ತಿದ್ದಾರೆಯೇ ಎಂದು ತಿಳಿದು ಆಶ್ಚರ್ಯಪಟ್ಟರು.
ಇದನ್ನೂ ಓದಿ: Gauahar Khan: ಬಡ ಬಾಲಕನ ಶಿಕ್ಷಣಕ್ಕೆ ಸಹಾಯಹಸ್ತ ಚಾಚಿದ ನಟಿ, ಟ್ವಿಟ್ಟರ್ನಲ್ಲಿ ವಿದ್ಯಾರ್ಥಿ ನಂಬರ್ಗಾಗಿ ಹುಡುಕಾಟ
ಈ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ನಟಿ ಪ್ರಿಯಾಂಕಾ ಅವರು "ನೀವು ಕೆಲಸದಲ್ಲಿ ಕಠಿಣ ದಿನವನ್ನು ಹೊಂದಿದ್ದೀರಾ” ಎಂದು ಕೇಳಿ ಅನೇಕ ಹ್ಯಾಶ್ ಟ್ಯಾಗ್ ಗಳನ್ನು ಹಾಕಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಪ್ರಿಯಾಂಕಾ ಅವರು ಕಪ್ಪು ಟಾಪ್ ಮತ್ತು ನೀಲಿ ಐಷಾಡೋದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ಅವಳ ಮೂಗಿನ ಕೆಳಗೆ ಮತ್ತು ಅವಳ ತುಟಿಗಳು ಮತ್ತು ಗಲ್ಲದ ಮೇಲೆ ಕೆಲವು ರಕ್ತದ ಗುರುತುಗಳನ್ನು ನಾವು ಇಲ್ಲಿ ಕಾಣಬಹುದು.
ಆತಂಕಗೊಂಡ ಅಭಿಮಾನಿಗಳು
ಇದನ್ನು ನೋಡಿದ ಅಭಿಮಾನಿಯೊಬ್ಬರು ಪ್ರಿಯಾಂಕಾ ಅವರಿಗೆ "ಏನಾಯಿತು, ನೀವು ಚೆನ್ನಾಗಿದ್ದೀರಾ ತಾನೇ" ಎಂದು ವಿಚಾರಿಸಿದರು. ಇನ್ನೊಬ್ಬ ಅಭಿಮಾನಿ "ಏನಾಯಿತು" ಎಂದು ಕೇಳಿದರು. ಆತಂಕಗೊಂಡ ಅಭಿಮಾನಿಯೊಬ್ಬರು "ನಿಮ್ಮ ಬಗ್ಗೆ ಸ್ವಲ್ಪ ಕಾಳಜಿ ವಹಿಸಿರಿ.. ಪ್ರತಿ ದಿನವೂ ಒಂದು ಹೊಸ ಅನುಭವ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಸತ್ಯವನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿರುವ ಅಭಿಮಾನಿಯೊಬ್ಬರು "ಒಂದು ಸೆಕೆಂಡು ನಾನು ನಿಮಗೆ ನೋವಾಗಿದೆ ಎಂದು ಭಾವಿಸಿದೆ" ಎಂದು ಬರೆದಿದ್ದಾರೆ.
ರುಸ್ಸೊ ಸಹೋದರರು ರಚಿಸುತ್ತಿರುವ ಒಂದು ವಿಜ್ಞಾನ ಕಾಲ್ಪನಿಕ ವೆಬ್ ಸಿರೀಸ್
ಸಿಟಾಡೆಲ್ ಅಮೆಜಾನ್ ಪ್ರೈಮ್ ವೀಡಿಯೋಗಾಗಿ ರುಸ್ಸೊ ಸಹೋದರರು ರಚಿಸುತ್ತಿರುವ ಒಂದು ವಿಜ್ಞಾನ ಕಾಲ್ಪನಿಕ ವೆಬ್ ಸಿರೀಸ್ ಆಗಿದೆ. ಇದರಲ್ಲಿ ರಿಚರ್ಡ್ ಮ್ಯಾಡನ್ ಕೂಡ ನಟಿಸಿದ್ದಾರೆ.
ಜನವರಿಯಲ್ಲಿ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಸ್ ಅವರನ್ನು ಸ್ವಾಗತಿಸಿದ ನಂತರ ಪ್ರಿಯಾಂಕಾ ಇತ್ತೀಚೆಗೆ ಈ ವೆಬ್ ಸಿರೀಸ್ ನ ಚಿತ್ರೀಕರಣವನ್ನು ಪುನರಾರಂಭಿಸಿದರು. ಅದಕ್ಕೂ ಮುಂಚೆ ಅವರು ಕಳೆದ ಡಿಸೆಂಬರ್ ನಲ್ಲಿ ತಮ್ಮ ಲಂಡನ್ ಪ್ರವಾಸ ಮುಗಿಸಿದ್ದರು ಹಾಗೂ ಆ ಸಂದರ್ಭದಲ್ಲೂ ಅವರು ತಮ್ಮ ಕೆಲ ಗಾಯವಾದಂತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.
ಇದನ್ನೂ ಓದಿ: Sai Pallavi: ಮಾರುವೇಷದಲ್ಲಿ ಮಹೇಶ್ ಬಾಬು ಫಿಲ್ಮ್ ನೋಡಿದ ಗಾರ್ಗಿ ಸುಂದರಿ - ಫೋಟೋ ಫುಲ್ ವೈರಲ್
ಆಗ ಇದನ್ನು "ತೀವ್ರ" ಎಂದು ಕರೆದ ಅವರು ಸೆಟ್ ನಲ್ಲಿ ತೆಗೆಸಿಕೊಂಡಿರುವ ಹಲವಾರು ಫೋಟೋಗಳನ್ನು ಸಹ ಹಂಚಿ ಕೊಂಡಿದ್ದರು. ಇನ್ನೂ ಬಾಲಿವುಡ್ ನಲ್ಲಿರುವ ಅವರ ಚಲನಚಿತ್ರಗಳ ವಿಷಯಕ್ಕೆ ಬಂದಾಗ, ‘ಜೀ ಲೇ ಜರಾ’, ಹಾಲಿವುಡ್ ಚಿತ್ರ ‘ಇಟ್ಸ್ ಆಲ್ ಕಮ್ ಬ್ಯಾಕ್ ಟು ಮಿ’ ಮತ್ತು ‘ಎಂಡಿಂಗ್ ಥಿಂಗ್ಸ್’ ಕೂಡ ಪ್ರಿಯಾಂಕಾ ಅವರ ಕೈಯಲ್ಲಿವೆ ಎಂದು ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ