Priyanka Chopra: ಮುದ್ದು ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಮಗಳು ಮಾಲ್ತಿ ಮೇರಿ ಜೊತೆಗಿನ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ, ಪ್ರಿಯಾಂಕಾ, ತನ್ನ ಏಳು ತಿಂಗಳ ಮಗಳನ್ನು ಅಪ್ಪಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಹಾಗೂ ಮಗಳು

ಪ್ರಿಯಾಂಕಾ ಚೋಪ್ರಾ ಹಾಗೂ ಮಗಳು

  • Share this:
ಬಾಲಿವುಡ್‌ನ 'ದೇಸಿ ಗರ್ಲ್', ಗ್ಲೋಬಲ್​ ಸ್ಟಾರ್ (Global Star) ಪ್ರಿಯಾಂಕಾ ಚೋಪ್ರಾ (Priyanka Chopra) ಕೊನೆಗೂ ತಮ್ಮ ಅಭಿಮಾನಿಗಳಿಗೆ ತನ್ನ ಮಗುವಿ ದರ್ಶನ ಮಾಡಿಸಿದ್ದಾರೆ . ನಟಿ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಚಿತ್ರವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸುವ ಕೆಲಸವನ್ನು ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಮಗಳನ್ನು ನೋಡಿ ಸೋಷಿಯಲ್ ಮೀಡಿಯಾದಲ್ಲಿ (Social Media) ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಮಗಳ ಫೋಟೋ ಹಂಚಿಕೊಂಡ ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಮಗಳು ಮಾಲ್ತಿ ಮೇರಿ ಜೊತೆಗಿನ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ, ಪ್ರಿಯಾಂಕಾ, ತನ್ನ ಏಳು ತಿಂಗಳ ಮಗಳನ್ನು ಅಪ್ಪಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋ ಕೆಳಗೆ ಇತರರಂತೆ ಪ್ರೀತಿಸಿ ಎಂದು ಬರೆದುಕೊಂಡಿದ್ದಾರೆ










View this post on Instagram






A post shared by Priyanka (@priyankachopra)






6 ತಿಂಗಳ ಮಗುವಿನ ಫೋಟೋ ಶೇರ್​​ 

ಕಳೆದ ತಿಂಗಳು ಮೆಕ್ಸಿಕೋದ ಕ್ಯಾಬೊದಲ್ಲಿ ನಟ ತನ್ನ 40ನೇ ಹುಟ್ಟುಹಬ್ಬ ಆಚರಿಸಿಕೊಂಡರ. ಈ ವೇಳೆ ದಂಪತಿ ಫೋಟೋಗಳನ್ನು ಹಂಚಿಕೊಂಡಿದ್ದರು. ಒಂದು ಚಿತ್ರದಲ್ಲಿ, ಮಾಲ್ಟಿ ಗುಲಾಬಿ ಬಣ್ಣದ ಡ್ರೆಸ್​​ ಧರಿಸಿ ಅದರ ಮೇಲೆ 6 ತಿಂಗಳುಗಳು ಎಂದು ಬರೆದಿರುವ ಟಿ-ಶರ್ಟ್ ನಲ್ಲಿ ಮುದ್ದು ಕಂದ ಅಂದವಾಗಿ ಕಾಣ್ತಿದೆ.  ಫೋಟೋದಲ್ಲಿ  6 ತಿಂಗಳ ಹುಟ್ಟುಹಬ್ಬದ ಶುಭಾಶಯಗಳು ಎಂಎಂ ಎಂಬ ಸಂದೇಶದೊಂದಿಗೆ ಸಣ್ಣ ಕೇಕ್ ಕಟ್​ ಮಾಡಿದ್ದಾರೆ.



ದೇಸಿ ಗರ್ಲ್ ಎಂದು ವರ್ಣನೆ

ರಕ್ಷಾ ಬಂಧನದ ಈ ಶುಭ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ಹಂಚಿಕೊಂಡಿರುವ ಮಗಳ ಫೋಟೋ ನಿಜವಾಗಿಯೂ ತುಂಬಾ ಸುಂದರವಾಗಿದೆ. ಈ ಚಿತ್ರದಲ್ಲಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಸೈಡ್​ ಪೋಸ್​ ಕೊಟ್ಟಿರೋ ಫೋಟೋವನ್ನು ಪ್ರಿಯಾಂಕಾ ಹಂಚಿಕೊಂಡಿದ್ದಾರೆ.  ಬಾಲಿವುಡ್​ನಲ್ಲಿ ಪ್ರಿಯಾಂಕಾ ಚೋಪ್ರಾ ದೇಸಿ ಗರ್ಲ್ ಎಂದು ಹೆಸರು ಪಡೆದಿದ್ದು, ಈಗ ಮಗಳನ್ನು 'ದೇಸಿ ಗರ್ಲ್' ಎಂದೇ ಪರಿಗಣಿಸಿದ್ದಾರೆ.

ಪುಟ್ಟ ಮಗುವಿನ  ಫೋಟೋಗಳು ಸಖತ್ ಕ್ಯೂಟ್

ಮಾಲ್ತಿಯ ಟೀ ಶರ್ಟ್ ಮೇಲೆ 'ದೇಸಿ ಗರ್ಲ್' ಎಂದು ಬರೆಯಲಾಗಿದೆ. ಈ ಚಿತ್ರವನ್ನು ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ 'ದೇಸಿ ಗರ್ಲ್' ಎಂಬ ಶೀರ್ಷಿಕೆಯನ್ನು ಕೂಡ ಬರೆದಿದ್ದಾರೆ. ಈ ಚಿತ್ರದಲ್ಲಿ ಮಾಲ್ತಿಯ ಮುಖ ಅರ್ಧದಷ್ಟು ಗೋಚರಿಸುತ್ತದೆ. ಪುಟ್ಟ ಮಗುವಿನ ಈ ಫೋಟೋ ಸಖತ್ ಕ್ಯೂಟ್ ಆಗಿದೆ ನೋಡಿ. ಬಿಳಿ ಶರ್ಟ್ ಮತ್ತು ಆಲಿವ್ ಹಸಿರು ಶಾರ್ಟ್ಸ್‌ನೊಂದಿಗೆ ಕ್ಯಾಶುಯಲ್ ಉಡುಪನ್ನು ಧರಿಸಿದ್ದರು. 2ನೇ ಫೋಟೋದಲ್ಲಿ, ಮಾಲ್ತಿ ತನ್ನ ಪಾದಗಳನ್ನು ಮಮ್ಮಿ ಪ್ರಿಯಾಂಕಾ ಮುಖ ಬಳಿ ಇಟ್ಟಿದ್ದಾರೆ.

ಇದನ್ನೂ ಓದಿ: Allu Arjun: ಅಲ್ಲು ಅರ್ಜುನ್ ಇಲ್ಲದೆ ಪುಷ್ಪ 2 ಶುರು; ಮುಹೂರ್ತದ ಫೋಟೋಗಳು ವೈರಲ್

ಬಾಡಿಗೆ ತಾಯಿ  ಮೂಲಕ ಮಗು ಪಡೆದ ದಂಪತಿ

ಪ್ರಿಯಾಂಕಾ ಮತ್ತು ಅವರ ಪತಿ, ಗಾಯಕ ನಿಕ್ ಜೋನಾಸ್ ಈ ವರ್ಷದ ಆರಂಭದಲ್ಲಿ ಬಾಡಿಗೆ ತಾಯಿ  ಮೂಲಕ ತಮ್ಮ ಮಗಳನ್ನು ಪಡೆದಿದ್ದಾರೆ. ಈ ಜೋಡಿಯು ಹಲವಾರು ಸಂದರ್ಭಗಳಲ್ಲಿ ಮಗುವಿನ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

ಮಾಲ್ಟಿ ಮೊದಲ 100 ದಿನಗಳನ್ನು ನವಜಾತ ತೀವ್ರ ನಿಗಾ ಘಟಕದಲ್ಲಿ ಕಳೆದರು. ಅನುಭವದ ಬಗ್ಗೆ ಮಾತನಾಡುತ್ತಾ, ಪ್ರಿಯಾಂಕಾ ಅವರು ತಾಯಂದಿರ ದಿನದಂದು ವಿಶೇಷ ಪೋಸ್ಟ್ ಅನ್ನು ಹಾಕಿದ್ರು. “ಈ ತಾಯಂದಿರ ದಿನದಂದು ನಾವು ಕಳೆದ ಕೆಲವು ತಿಂಗಳುಗಳ ಬಗ್ಗೆ ಮತ್ತು ನಾವು ಈಗ ತಿಳಿದಿರುವ ರೋಲರ್ ಕೋಸ್ಟರ್ ಅನ್ನು ಪ್ರತಿಬಿಂಬಿಸದೆ ಇರಲು ಸಾಧ್ಯವಿಲ್ಲ. ಅನೇಕ ಜನರು ಸಹ ಅನುಭವಿಸಿದ್ದಾರೆ. NICU ನಲ್ಲಿ 100 ಪ್ಲಸ್ ದಿನಗಳ ನಂತರ, ನಮ್ಮ ಮಗು ಅಂತಿಮವಾಗಿ ಮನೆಗೆ ಬಂದಿದ್ದಾಳೆ. ಪ್ರತಿಯೊಂದು ಪ್ರಯಾಣವು ವಿಶಿಷ್ಟವಾಗಿದೆ. ನಮ್ಮದು ಸವಾಲಿನ ಕೆಲವು ತಿಂಗಳುಗಳಾಗಿದ್ದರೂ, ಪ್ರತಿ ಕ್ಷಣವೂ ಎಷ್ಟು ಅಮೂಲ್ಯ ಮತ್ತು ಪರಿಪೂರ್ಣವಾಗಿದೆ
Published by:Pavana HS
First published: