• Home
 • »
 • News
 • »
 • entertainment
 • »
 • Priyanka Chopra Daughter: ಪ್ರಿಯಾಂಕಾ ಚೋಪ್ರಾ ಮಗಳ ಫೋಟೋ ವೈರಲ್- ತುಟಿಗಳು ಅಪ್ಪನಂತೆ ಅಂದ್ರು ಫ್ಯಾನ್ಸ್​

Priyanka Chopra Daughter: ಪ್ರಿಯಾಂಕಾ ಚೋಪ್ರಾ ಮಗಳ ಫೋಟೋ ವೈರಲ್- ತುಟಿಗಳು ಅಪ್ಪನಂತೆ ಅಂದ್ರು ಫ್ಯಾನ್ಸ್​

ಪ್ರಿಯಾಂಕಾ ಚೋಪ್ರಾ ಮಗಳ ಫೋಟೋ ನೋಡಿ

ಪ್ರಿಯಾಂಕಾ ಚೋಪ್ರಾ ಮಗಳ ಫೋಟೋ ನೋಡಿ

ನಟಿ ಪ್ರಿಯಾಂಕಾ ಚೋಪ್ರಾ ಮಗಳ ಅರ್ಧ ಮುಖವನ್ನು ನೋಡಿದ ಅಭಿಮಾನಿಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅಪ್ಪನ ರೀತಿ ಇದ್ದಾಳೆ. ತುಂಬಾ ಸುಂದರವಾಗಿ ಕಾಣುತ್ತಿದ್ದಾಳೆ ಎಂದು ಹೇಳಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅಂತಿಮವಾಗಿ ತಮ್ಮ ಮಗಳು  ಮಾಲ್ತಿ ಮೇರಿ ಚೋಪ್ರಾ ಜೋನಾಸ್ (Malti Marie) ಮುಖವನ್ನು ಬಹಿರಂಗಪಡಿಸಿದ್ದಾರೆ. ಅಭಿಮಾನಿಗಳು ನಿಕ್ ಜೋನಾಸ್ (Nick Jonas) ಅವರ ತುಟಿಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಪ್ರಿಯಾಂಕಾ ಚೋಪ್ರಾ  ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಮಲಗಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ಮಗುವಿಗೆ ಬಿಳಿ ಸ್ವೆಟರ್ ಮತ್ತು ಗುಲಾಬಿ ಬಣ್ಣದ ಟೋಪಿ ಧರಿಸಿ ಶಾಲು ಸುತ್ತಿದ್ದಾರೆ. ಯಾವಗಲೂ ತಮ್ಮ ಮಗಳ ಫೋಟೋವನ್ನು ಹಾರ್ಟ್ ನಿಂದ ಎಡಿಟ್ (Edit) ಮಾಡುತ್ತಿದ್ದ ಪ್ರಿಯಾಂಕಾ ಅವರು ಇಂದು ಅರ್ಧ ಮುಖವನ್ನು ಬಹಿರಂಗ ಪಡಿಸಿದ್ದಾರೆ. ಮಗು ಕ್ಯೂಟ್ (Cute) ಆಗಿ ಕಾಣುತ್ತಿದೆ. ಮತ್ತು ಮಲಗಿಕೊಂಡಿದೆ.


  ಅಪ್ಪನಂತೆ ಮಗಳು
  ನಟಿ ಪ್ರಿಯಾಂಕಾ ಚೋಪ್ರಾ ಮಗಳ ಅರ್ಧ ಮುಖವನ್ನು ನೋಡಿದ ಅಭಿಮಾನಿಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್  ಅಪ್ಪನ ರೀತಿ ಇದ್ದಾಳೆ. ತುಂಬಾ ಸುಂದರವಾಗಿ ಕಾಣುತ್ತಿದ್ದಾಳೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಇಲ್ಲ, ಇಲ್ಲ ಮಗು ಪ್ರಿಯಾಂಕಾ ಚೋಪ್ರಾ ಅವರನ್ನು ಹೋಲುತ್ತೆ ಎಂದಿದ್ದಾರೆ.


  ತುಟಿಗಳು ನಿಕ್ ಜೋನಸ್ ತರ
  ನಟಿ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರು ಫೋಟೋ, ಎಲ್ಲೆಡೆ ವೈರಲ್ ಆಗ್ತಿದೆ. ಅಲ್ಲದೇ ಮಗುವಿನ ತುಟಿಗಳು ಅಪ್ಪ ನಿಕ್ ಜೋನಸ್ ತರ ಇವೆ ಎಂದು ಅಭಿಮಾನಿಗಳು ಹೇಳಿದ್ದಾರೆ.


  actress priyanka chopra, priyanka chopra daughter, priyanka chopra shared a new picture of her daughter, priyanka chopra daughter name, ನಟಿ ಪ್ರಿಯಾಂಕಾ ಚೋಪ್ರಾ, ಪ್ರಿಯಾಂಕಾ ಚೋಪ್ರಾ ಮಗಳು, ಪ್ರಿಯಾಂಕಾ ಚೋಪ್ರಾ ಮಗಳ ಹೆಸರು, ಪ್ರಿಯಾಂಕಾ ಚೋಪ್ರಾ ಮಗಳ ಫೋಟೋ ನೋಡಿ, ಅಪ್ಪನ ರೀತಿ ತುಟಿಗಳು ಅಂದ್ರು ಅಭಿಮಾನಿಗಳು, kannada news, karnataka news,
  ಪ್ರಿಯಾಂಕಾ ಚೋಪ್ರಾ ಮಗಳ ಫೋಟೋ ನೋಡಿ


  ನಟರಿಗೆ ಹೆಚ್ಚು ಕ್ರೆಡಿಟ್
  ನಟಿ ಪ್ರಿಯಾಂಕಾ ಇತ್ತೀಚೆಗೆ ತಮ್ಮ ಹೇರ್ ಕೇರ್ ಬ್ರ್ಯಾಂಡ್ ಅನ್ನು ದೇಶದಲ್ಲಿ ಪ್ರಾರಂಭಿಸಲು ಭಾರತಕ್ಕೆ ಬಂದಿದ್ದರು. ಸಂದರ್ಶನವೊಂದರಲ್ಲಿ, ಜನರು ನಟರಿಗೆ ಹೆಚ್ಚು ಕ್ರೆಡಿಟ್ ನೀಡುತ್ತಾರೆ. ಮತ್ತು ಚಲನಚಿತ್ರದಲ್ಲಿ ಅವರ ಪಾತ್ರವು 'ತುಂಬಾ ಸೀಮಿತವಾಗಿದೆ' ಎಂದು ಹೇಳಿದರು.


  ಇದನ್ನೂ ಓದಿ: Naga Chaitanya Birthday: ಹ್ಯಾಪಿ ಬರ್ತ್‍ಡೇ ನಾಗ ಚೈತನ್ಯ, ನಟನ 6 ಅತ್ಯುತ್ತಮ ಸಿನಿಮಾಗಳಿವು


  ಪ್ರಿಯಾಂಕಾ ತನ್ನ ಒಂದು ವಾರದ ಭಾರತ ಪ್ರವಾಸದ ನಂತರ ಲಾಸ್ ಏಂಜಲೀಸ್‍ಗೆ ಹಿಂದಿರುಗಿ ಇತ್ತೀಚಿನ ದಿನಗಳಲ್ಲಿ ಯುಎಸ್ ನಲ್ಲಿ ಗಾಯಕ ಮತ್ತು ಅವರ ಪತಿಯಾದ ನಿಕ್ ಜೋನಸ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುದ್ದಿಯು ನಮಗೆ ಗೊತ್ತೇ ಇದೆ.


  actress priyanka chopra, priyanka chopra daughter, priyanka chopra shared a new picture of her daughter, priyanka chopra daughter name, ನಟಿ ಪ್ರಿಯಾಂಕಾ ಚೋಪ್ರಾ, ಪ್ರಿಯಾಂಕಾ ಚೋಪ್ರಾ ಮಗಳು, ಪ್ರಿಯಾಂಕಾ ಚೋಪ್ರಾ ಮಗಳ ಹೆಸರು, ಪ್ರಿಯಾಂಕಾ ಚೋಪ್ರಾ ಮಗಳ ಫೋಟೋ ನೋಡಿ, ಅಪ್ಪನ ರೀತಿ ತುಟಿಗಳು ಅಂದ್ರು ಅಭಿಮಾನಿಗಳು, kannada news, karnataka news,
  ಪ್ರಿಯಾಂಕಾ ಚೋಪ್ರಾ ಮಗಳ ಫೋಟೋ ನೋಡಿ


  ಪ್ರಿಯಾಂಕಾ ಅವರು ಭಾರತದಲ್ಲಿದ್ದಾಗ ಚಲನಚಿತ್ರದಲ್ಲಿ ನಟರ ಪಾತ್ರ ಏನು ಎಂದು ಅವರನ್ನು ಕೇಳಿದಾಗ, ಪ್ರಿಯಾಂಕಾ ಅವರು ನಟರು ಏನೂ ಮಾಡುವುದಿಲ್ಲ, ಎಲ್ಲಾ ಬಹುತೇಕ ಕೆಲಸಗಳನ್ನು ಬರಹಗಾರರು, ನಿರ್ದೇಶಕರು, ನೃತ್ಯ ಸಂಯೋಜಕರು, ಮೇಕಪ್ ಕಲಾವಿದರು, ಸ್ಟೈಲಿಸ್ಟ್ ಗಳು ಮತ್ತು ಇತರರು ಮಾಡುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದರು.


  ಇದನ್ನೂ ಓದಿ: Manoj Tiwari: 51ನೇ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಮನೋಜ್ ತಿವಾರಿ, ಬೇಬಿ ಶವರ್ ವಿಡಿಯೋ ನೋಡಿ


  ನಟರು ಬೇರೆಯವರ ಸಹಾಯದಿಂದ ಕೆಲಸ ಮಾಡ್ತಾರೆ
  "ನಾವು ಬೇರೊಬ್ಬರು ಬರೆದುಕೊಟ್ಟ ಡೈಲಾಗ್ ಗಳನ್ನು ಹೇಳುತ್ತೇವೆ, ಬೇರೆಯವರು ಬರೆದ ಸ್ಕ್ರಿಪ್ಟ್ ನಂತೆ ನಾವು ಕೆಲಸ ಮಾಡುತ್ತೇವೆ, ನಾವು ಹಾಡುಗಳಿಗೆ ಲಿಪ್-ಸಿಂಕ್ ಮಾಡುತ್ತೇವೆ ಅಷ್ಟೇ ಮತ್ತು ಇನ್ನೊಬ್ಬ ಗಾಯಕರು ಅದನ್ನು ಹಾಡುತ್ತಾರೆ. ನಾವು ಇನ್ನೊಬ್ಬರಿಂದ ನೃತ್ಯ ಕಲಿತುಕೊಂಡು ಸಿನೆಮಾದಲ್ಲಿರುವ ಹಾಡಿಗೆ ಹೆಜ್ಜೆ ಹಾಕುತ್ತೇವೆ.


  ನಾವು ಕೇವಲ ಮಾರ್ಕೆಟಿಂಗ್ ಮಾಡುತ್ತೇವೆ, ನಮಗೆ ಯಾರೂ ಕೂದಲು ಬಾಚುತ್ತಾರೆ ಮತ್ತು ಮೇಕಪ್ ಮಾಡುತ್ತಾರೆ. ನಾವೇನು ಮಾಡುತ್ತಿದ್ದೇವೆ ಅಂತ ನನಗೆ ಅನ್ನಿಸುತ್ತದೆ ಎಂದು ಪ್ರಿಯಾಂಕಾ ಹೇಳಿದ್ದರು.

  Published by:Savitha Savitha
  First published: