Priyanka Chopra ಲ್ಯಾಪ್‌ಟಾಪ್​ನಲ್ಲಿ ಇದೆಲ್ಲಾ ಇದ್ಯಾ? ಅಯ್ಯೋ ದೇವ್ರೇ, ಏನಿದು?

ಪ್ರಿಯಾಂಕ ಚೋಪ್ರ

ಪ್ರಿಯಾಂಕ ಚೋಪ್ರ

ಕೆಲ ನಟ ಮತ್ತು ನಟಿಯರು ನಟನೆಯ ಜೊತೆಗೆ ಕೆಲವು ಸಿನೆಮಾದಲ್ಲಿ ಹಾಡುಗಳನ್ನು ಸಹ ಹಾಡಿರುತ್ತಾರೆ.

  • Share this:

ಈ ಸಿನೆಮಾರಂಗದಲ್ಲಿ (Film Industry) ಕೆಲಸ ಮಾಡುವ ಎಷ್ಟೋ ನಟ ಮತ್ತು ನಟಿಯರು ಬರೀ ತಮ್ಮ ನಟನೆಯಿಂದ ಹೆಸರು ಮಾಡಿರದೆ, ತಮ್ಮ ಸುಮಧುರವಾದ ಕಂಠದಿಂದಲೂ ಸಹ ಜನಪ್ರಿಯತೆಯನ್ನು ಗಳಿಸಿರುತ್ತಾರೆ. ಹೌದು. ಕೆಲ ನಟ ಮತ್ತು ನಟಿಯರು ನಟನೆಯ ಜೊತೆಗೆ ಕೆಲವು ಸಿನೆಮಾದಲ್ಲಿ ಹಾಡುಗಳನ್ನು ಸಹ ಹಾಡಿರುತ್ತಾರೆ. ಬಹುತೇಕವಾಗಿ ಕನ್ನಡ, ತಮಿಳು, ತೆಲುಗು ಮತ್ತು ಬಾಲಿವುಡ್ ಹೀಗೆ ಎಲ್ಲಾ ಚಿತ್ರೋದ್ಯಮದಲ್ಲಿಯೂ ಸಹ ಕೆಲ ನಟ-ನಟಿಯರು ತಮ್ಮ ನಟನೆಯ ಜೊತೆಗೆ ಹಾಡುಗಳನ್ನು (Song) ಸಹ ಹಾಡಿರುತ್ತಾರೆ. ಇನ್ನೂ ಕೆಲ ನಟ ನಟಿಯರು ಹಾಡಲು ಇಷ್ಟವಿದ್ದರೂ ಸಹ ಅವರಿಗೆ ನಟನೆಯನ್ನು ಬಿಟ್ಟು ಹಾಡುಗಾರಿಕೆಯಲ್ಲಿ ತಮ್ಮ ಟ್ಯಾಲೆಂಟ್ ಅನ್ನು ತೋರಿಸುವುದಕ್ಕೆ ಸಾಧ್ಯವಾಗಿರುವುದಿಲ್ಲ. ಇನ್ನೂ ಕೆಲ ನಟ ನಟಿಯರಿಗೆ ಹಾಡುವ ಅವಕಾಶ (Opportunity) ಸಿಕ್ಕಿ ನಟನೆ ಮತ್ತು ಹಾಡುಗಾರಿಕೆ ಎರಡರಿಂದಲೂ ಜನಪ್ರಿಯರಾಗಿರುತ್ತಾರೆ.


ಇದೆಲ್ಲದರ ಬಗ್ಗೆ ಈಗೇಕೆ ನಾವು ಮಾತಾಡುತ್ತಿದ್ದೇವೆ ಅಂತ ನಿಮಗೆ ಪ್ರಶ್ನೆಯೊಂದು ಕಾಡಬಹುದು. ಇಲ್ಲಿಯೂ ಸಹ ಒಬ್ಬ ನಟಿ ಇದ್ದಾರೆ, ಈಕೆಗೆ ಹಾಡುವುದು ತುಂಬಾನೇ ಇಷ್ಟವಿದ್ದು, ಹಾಡುಗಳನ್ನು ತಾನೇ ಹಾಡಿ ರೆಕಾರ್ಡ್ ಮಾಡಿ ಇಟ್ಟಿದ್ದಾರಂತೆ.


ಇದನ್ನೂ ಓದಿ: 120 KG ಇದ್ದ ಸುಪ್ರಿತಾ ಇಷ್ಟೊಂದು ಫಿಟ್ ಆಗಿರೋದು ಹೇಗೆ, 8 ವರ್ಷದ ಮಗ ಇದ್ದಾನೆ ಅಂದ್ರೆ ನಂಬ್ತೀರಾ?


ಆದರೆ ಅವುಗಳನ್ನು ಎಲ್ಲಿಯೂ ರಿಲೀಸ್ ಮಾಡಿಲ್ವಂತೆ. ಯಾರಪ್ಪಾ ಇಷ್ಟೊಂದು ಟ್ಯಾಲೆಂಟ್ ಇರೋ ನಟಿ ಅಂತ ತಿಳಿದುಕೊಳ್ಳೋದಕ್ಕೆ ನೀವು ತುಂಬಾನೇ ಕಾತುರರಾಗಿರುತ್ತೀರಿ ಅಲ್ಲವೇ? ಆ ನಟಿ ಬೇರೆ ಯಾರೂ ಅಲ್ಲ, ಪ್ರಿಯಾಂಕಾ ಚೋಪ್ರಾ.


ಹಾಲಿವುಡ್ ಗೆ ಎಂಟ್ರಿ ಕೊಟ್ಟಾಗ ಪ್ರಿಯಾಂಕಾ ಕರಿಯರ್ ಶುರು ಮಾಡಿದ್ದು ನಟನೆಯಿಂದ ಅಲ್ವಂತೆ


ನಟಿ ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ ನಲ್ಲಿ ಮೊದಲು ತಮ್ಮ ಕರಿಯರ್ ಶುರು ಮಾಡಿದಾಗ ಅವರು ಸಂಗೀತಗಾರರಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರಂತೆ.


will.i.am, ಪಿಟ್ಬುಲ್ ಮುಂತಾದ ಹೆಸರುಗಳೊಂದಿಗೆ ಇವರು ಕೈ ಜೋಡಿಸಿದ್ದರು. ಆದರೆ ಶೀಘ್ರದಲ್ಲಿಯೇ ಇವರ ನಟನಾ ವೃತ್ತಿಜೀವನವು ಪ್ರಾರಂಭವಾಯಿತು ಮತ್ತು ಅವರ ಸಂಗೀತ ವೃತ್ತಿಜೀವನವು ತೆರೆಮರೆಯ ಹಿಂದೆ ಸರಿಯಿತು. ಪ್ರಿಯಾಂಕಾ ಅಕ್ಷರಶಃ ಸಂಗೀತವನ್ನು ತಮ್ಮ ಎರಡನೇ ವೃತ್ತಿಜೀವನ ಅಂತ ಕರೆದರು.


ಇದನ್ನೂ ಓದಿ: ನ್ಯೂ ಲುಕ್‍ನಲ್ಲಿ ಆಶಿಕಾ ರಂಗನಾಥ್, ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?


ಪ್ರಿಯಾಂಕಾ ಅವರ ನಟನಾ ವೃತ್ತಿಜೀವನವು ಟಿವಿ ಶೋ ಕ್ವಾಂಟಿಕೊದೊಂದಿಗೆ ಪ್ರಾರಂಭವಾಯಿತು, ಇದು ಅನೇಕ ಸೀಸನ್ ಗಳನ್ನು ಹೊಂದಿತ್ತು. ತನ್ನ ಸಂಗೀತ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ ನಟಿ ಸಂಗೀತಗಾರರು ಸ್ವತಃ ಅವರೇ ಹಾಡುಗಳನ್ನು ರಚಿಸುತ್ತಾರೆ, ಆದ್ದರಿಂದಲೇ ನನಗೆ ಸಂಗೀತದ ಬಗ್ಗೆ ಅಷ್ಟೊಂದು ಒಲವು ಅಂತ ಹೇಳಿದರು. ಅದೇ ನಟ-ನಟಿಯರು ಇತರರ ಕೆಲಸ ಮತ್ತು ನಿರ್ದೇಶನವನ್ನು ಅವಲಂಬಿಸುತ್ತಾರೆ ಅಂತ ಸಹ ಪ್ರಿಯಾಂಕಾ ಹೇಳಿದರು.


ಕೇವಲ 4 ಹಾಡುಗಳಷ್ಟೇ ರಿಲೀಸ್ ಅಗಿದ್ದಂತೆ


ಆದರೆ ಪ್ರಿಯಾಂಕಾ ಅವರು ತಮ್ಮ ಮೊದಲ ಹಾಡನ್ನು ಕೇಳಿದಾಗ ಇದು ತುಂಬಾ ವರ್ಷಗಳ ಕಾಲ ವೃತ್ತಿಜೀವನ ಮುಂದುವರೆಯುವುದಿಲ್ಲ ಅಂತ ಅವರು ಅರಿತುಕೊಂಡರಂತೆ. ತನ್ನ 22 ವರ್ಷಗಳ ವೃತ್ತಿಜೀವನದಲ್ಲಿ, ತನ್ನ ಸಂಕ್ಷಿಪ್ತ ಸಂಗೀತ ವೃತ್ತಿಜೀವನವು ಕೇವಲ 2 ಸೆಕೆಂಡುಗಳಂತೆ ಭಾಸವಾಯಿತು ಅಂತ ಖುದ್ದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ.
ಅವರು ಕೇವಲ 4 ಹಾಡುಗಳನ್ನು ಮಾತ್ರ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾದರು, ಆದರೆ ಅವರ ಲ್ಯಾಪ್‌ಟಾಪ್ ನಲ್ಲಿವೆ ಅಂತೆ ಇನ್ನೂ 40 ಹಾಡುಗಳು. ಅವುಗಳನ್ನು ಯಾರೂ ಕೇಳುವುದಿಲ್ಲ ಎಂದು ಅವರು ಹೇಳಿದ್ದಾರೆ.


ನಟಿ ಪ್ರಿಯಾಂಕಾ ಅವರ ‘ಇನ್ ಮೈ ಸಿಟಿ’, ‘ಎಕ್ಸೋಟಿಕ್’ ಮತ್ತು ‘ಐ ಕಾಂಟ್ ಮೇಕ್ ಯು ಲವ್ ಮಿ’ ಹಾಡುಗಳು ಯೂಟ್ಯೂಬ್ ನಲ್ಲಿ ಲಕ್ಷಾಂತರ ಹಿಟ್ಸ್ ಸಹ ಪಡೆದಿವೆ. ಆದರೆ ಇನ್ನೂ ಅವರ ಬಳಿ ಇಂತಹ 40 ಹಾಡುಗಳು ಇರುವುದು ಬಹುಶಃ ಯಾರಿಗೂ ಈ ಹಿಂದೆ ಗೊತ್ತಿರಲಿಕ್ಕಿಲ್ಲ.

First published: