News18 India World Cup 2019

ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರಂತೆ ನಟಿ ಪ್ರಿಯಾಂಕಾ ಚೋಪ್ರಾ..!

ನಟಿ ಪ್ರಿಯಾಂಕಾ ಚೋಪ್ರಾ ಲೈಂಗಿಕ ಕಿರುಕುಳ ಎದುರಿಸಿದ್ದಾರಾ..? ಹಾಗಿದ್ದರೆ ಅದು ಬಾಲಿವುಡ್​ನಲ್ಲಾ..? ಹಾಲಿವುಡ್​ನಲ್ಲಾ..? ಅದಕ್ಕೆ ಪಿಗ್ಗಿ ಕೊಟ್ಟ ಪ್ರತಿಕ್ರಿಯೆ ಇಲ್ಲಿದೆ ಓದಿ.

Anitha E | news18
Updated:April 15, 2019, 5:26 PM IST
ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರಂತೆ ನಟಿ ಪ್ರಿಯಾಂಕಾ ಚೋಪ್ರಾ..!
ನಟಿ ಪ್ರಿಯಾಂಕಾ ಚೋಪ್ರಾ
Anitha E | news18
Updated: April 15, 2019, 5:26 PM IST
ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ನ್ಯೂಯಾರ್ಕ್​ನಲ್ಲಿ 10th Annual Women in the world summitನಲ್ಲಿ ಭಾಗವಹಿಸಿದ್ದರು. ಅಲ್ಲಿ ನೆರೆದಿದ್ದವರೊಂದಿಗೆ ತಮಗಾಗಿದ್ದ ಅನುಭವಗಳನ್ನೂ ಅವರು ಹಂಚಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಲೈಂಗಿಕ ಶೋಷಣೆ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಪ್ರಿಯಾಂಕಾ, ನೇರವಾಗಿ ತಮ್ಮ ಮೇಲೆ ಲೈಂಗಿಕ ಕಿರುಕುಳ ಆಗಿದೆ ಎಂದು ಹೇಳಲಿಲ್ಲವಾದರೂ, ಬಹುತೇಕ ಎಲ್ಲರಿಗೂ ಲೈಂಗಿಕ ಕಿರುಕುಳವಾಗಿರುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ತೋಟದ ಮನೆಯಲ್ಲಿ ಹಿಂಡಿ-ಬೂಸಾ​ ಸಿಗುತ್ತೆ ಅಷ್ಟೆ: ಡಿಬಾಸ್​ ದರ್ಶನ್​

ಪ್ರಿಯಾಂಕಾ ಚೋಪ್ರಾರ ಜತೆ ಯಾವುದಾದರೂ ಇಂತಹ ಘಟನೆ ನಡೆದಿದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, '#MeToo ಅಂತಹ ಅಭಿನಯಾನಗಳು ನಡೆಯುತ್ತಿರುವಾಗ ನಾವು ನಮ್ಮ ಅನುಭವ ಹಾಗೂ ಘಟನೆಗಳ ಬಗ್ಗೆ ಮಾತನಾಡಬಹುದಾಗಿದೆ. ಅಲ್ಲದೆ ನಾವು ನಮ್ಮ ಕತೆ ಹೇಳುವಾಗ ನಾವೊಬ್ಬರೇ ಇದನ್ನೆಲ್ಲ ಅನುಭವಿಸಿಲ್ಲ ಎನ್ನುವ ಭಾವ ಮೂಡುತ್ತದೆ' ಎನ್ನುತ್ತಾರೆ.

10th Annual Women in the world summit ಭಾಗವಹಿಸುವ ಮುನ್ನ ತೆಗೆದ ಪ್ರಿಯಾಂಕಾರ ಚಿತ್ರಗಳು


Loading...

'ಈ ಕೊಠಡಿಯಲ್ಲಿರುವ ಎಲ್ಲ ಮಹಿಳೆಯರೂ ಲೈಂಗಿಕ ಕಿರುಕುಳವನ್ನು ಅನುಭವಿಸಿರುವವರೇ. ಮಹಿಳೆ ಎನ್ನುವ ಪದದೊಂದಿಗೇ ಲೈಂಗಿಕ ಕಿರುಕುಳ ಎನ್ನುವ ಪದಗಳು ಸಹ ಸೇರಿಕೊಂಡು ಬರುತ್ತವೆ. ಮೊದಲು ನಮ್ಮ ಧ್ವನಿಯನ್ನು ಯಾರಿಗೂ ಕೇಳದಂತೆ ತುಳಿಯಲಾಗುತ್ತಿತ್ತು. ಆದರೆ ಈಗ ಒಬ್ಬರಿಗೊಬ್ಬರು ಬೆಂಬಲ ನೀಡುತ್ತಿರುವ ಕಾರಣಕ್ಕೆ ನಮ್ಮ ಧ್ವನಿ ಎಲ್ಲೆಡೆ ಕೇಳುವಂತಾಗಿದೆ. ಇದರಿಂದಾಗಿ ನಮಗೆ ಮತ್ತಷ್ಟು ಶಕ್ತಿ ಹಾಗೂ ಧೈರ್ಯ ಸಿಗುತ್ತಿದೆ' ಎಂದಿದ್ದಾರೆ ಪಿಗ್ಗಿ.

ಇದನ್ನೂ ಓದಿ: ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟ ರಶ್ಮಿಕಾ​: ಕಿರಿಕ್​ ಹುಡುಗಿ ತಿರುಚಿಗೆ ಪ್ರಯಾಣ ಬೆಳೆಸಲು ಕಾರಣ ಗೊತ್ತಾ..!

ಪ್ರಿಯಾಂಕಾ ತಮ್ಮೊಂದಿಗೆ ನಡೆದ ಯಾವುದೋ ಘಟನೆ ಬಗ್ಗೆ ಹೇಳುವ ಬದಲಾಗಿ ಅಲ್ಲಿ ನೆರಿದಿದ್ದವರಲ್ಲಿ ತಾನೂ ಓರ್ವ ಸಂತ್ರಸ್ತಳು ಎಂದು ಭಾವಿಸಿ ಮಾತನಾಡಿದ್ದಾರೆ. 'ನನ್ನ ಪ್ರಕಾರ ಇಲ್ಲಿರುವ ಎಲ್ಲ ಮಹಿಳೆಯರೊಂದಿಗೆ ಒಂದಲ್ಲಾ ಒಂದು ರೀತಿಯ ಕಹಿ ಅನುಭವಗಳು ಆಗಿರುತ್ತವೆ. ನಾವು ಅದರ ವಿರುದ್ಧವೂ ದನಿಯೆತ್ತುತ್ತಿದ್ದೆವು. ಆದರೆ ಆಗ ಬೆಂಬಲ ಸಿಗುತ್ತಿರಲಿಲ್ಲ. ಆದರೆ ಈಗ ನಮಗೆ ಬೆಂಬಲವಿದೆ. ಈಗ ನನ್ನ ಬಳಿ ಇಂತಹ ಘಟನೆ ಕುರಿತಾದ ಕತೆ ಇದ್ದರೂ ನಾನು ಒಂಟಿಯಲ್ಲ' ಎಂದು ವಿವರಿಸಿದ್ದಾರೆ ಪ್ರಿಯಾಂಕಾ. ಚೋಪ್ರಾ

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ ಪೂಜಾ ಹೆಗ್ಡೆ ಬಿಕಿನಿ ಫೋಟೋ

PHOTOS: ಬಿಕಿನಿಯಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ಕನ್ನಡತಿ ಪೂಜಾ ಹೆಗ್ಡೆ

First published:April 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...