'ಭಾರತ್' ಸಿನಿಮಾಗಾಗಿ ನಟಿ ಪ್ರಿಯಾಂಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ !

news18
Updated:July 4, 2018, 4:09 PM IST
'ಭಾರತ್' ಸಿನಿಮಾಗಾಗಿ ನಟಿ ಪ್ರಿಯಾಂಕಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ !
news18
Updated: July 4, 2018, 4:09 PM IST
-ನ್ಯೂಸ್ 18 ಕನ್ನಡ

ಬಾಲಿವುಡ್​ ಹಾಟೆಸ್ಟ್​ ಬೆಡಗಿ ಪ್ರಿಯಾಂಕಾ ಚೋಪ್ರಾ 'ಭಾರತ್' ಚಿತ್ರದ ಮೂಲಕ ಕಂಬ್ಯಾಕ್ ಮಾಡುತ್ತಿರುವುದು ಗೊತ್ತಿರುವ ವಿಷಯ. ಆದರೆ ಹೊಸ ವಿಷಯ ಏನಾಪ್ಪ ಅಂದರೆ ಈ ಚಿತ್ರಕ್ಕಾಗಿ ಪಿಗ್ಗಿ ಪಡೆಯುತ್ತಿರುವ ಸಂಭಾವನೆ. ಹೌದು, ಸಲ್ಮಾನ್ ಖಾನ್ ನಾಯಕನಾಗಿ ನಟಿಸಲಿರುವ 'ಭಾರತ್'​ ಚಿತ್ರಕ್ಕಾಗಿ ಪ್ರಿಯಾಂಕಾ ಪಡೆಯುತ್ತಿರುವ ಸಂಭಾವನೆ ಮೊತ್ತ ಬರೋಬ್ಬರಿ 6.5 ಕೋಟಿ.

ಎರಡು ವರ್ಷಗಳ ಬಳಿಕ ಬಾಲಿವುಡ್​ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕಾ ಅವರಿಗೆ ಸಿಕ್ಕಿರುವ ಸಂಭಾವನೆ ನೋಡಿ ಬಿಟೌನ್​ನ ಇತರೆ ನಟಿಯರು ನಿಬ್ಬೆರಗಾಗಿದ್ದಾರೆ.

'ಭಾರತ್'​ಗಾಗಿ ಭರ್ಜರಿ ಸಂಭಾವನೆ ಗಿಟ್ಟಿಸಿರುವ ಪ್ರಿಯಾಂಕಾ, ಸದ್ಯ ಬಾಲಿವುಡ್​ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಟಾಪ್ ನಟಿಯರಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಚಿತ್ರಕ್ಕಾಗಿ 12 ಕೋಟಿ ಪಡೆದಿರುವ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಮೊದಲ ಸ್ಥಾನದಲ್ಲಿದ್ದರೆ, ನಟಿ ಕಂಗನಾ ರಣಾವತ್ 'ಸಿಮ್ರಾನ್' ಮತ್ತು 'ರಂಗೂನ್' ಚಿತ್ರಗಳಾಗಿ 11 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

2014 ರಲ್ಲಿ ತೆರೆಕಂಡ ಕೊರಿಯನ್ ಚಿತ್ರ 'ಒಡ್ ಟು ಮೈ ಫಾದರ್​' ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿರುವ 'ಭಾರತ್' ಚಿತ್ರದ ಮೂಲಕ ಪಿಗ್ಗಿ ಬಾಲಿವುಡ್​ಗೆ ಕಂಬ್ಯಾಕ್ ಮಾಡುತ್ತಿದ್ದಾರೆ. 2016ರಲ್ಲಿ ತೆರೆಕಂಡ 'ಜೈ ಗಂಗಾಜಲ್' ಚಿತ್ರದಲ್ಲಿ ಪ್ರಿಯಾಂಕಾ ಕೊನೆಯ ಬಾರಿ ಅಭಿನಯಿಸಿದ್ದರು. ಇದಾದ ಬಳಿಕ ಹಾಲಿವುಡ್​​ನ 'ಕ್ವಿಂಟಿಕೊ' ಸಿರೀಸ್​ ಧಾರಾವಾಹಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

'ಗ್ಲೋಬಲ್ ಟಿವಿ ಶೋ ಮೂಲಕ ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಪ್ರಿಯಾಂಕಾ ಬಾಲಿವುಡ್​ನ ಶ್ರೇಷ್ಠ ಕಲಾವಿದೆ. ನಮ್ಮ ಚಿತ್ರಕಥೆಯ ನಾಯಕಿಯಾಗಿ ಪ್ರಿಯಾಂಕಾ ಅವರು ಸರಿ ಹೊಂದುವುದರಿಂದ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದ್ದೇವೆ' ಎಂದು ನಿರ್ದೇಶಕ ಅಲಿ ಅಬ್ಬಾಸ್ ತಿಳಿಸಿದ್ದಾರೆ.

ಈಗಾಗಲೇ 'ಭಾರತ್' ಸಿನಿಮಾದ ಸಿದ್ದತೆಗಳು ಲಂಡನ್​ನಲ್ಲಿ ಪ್ರಾರಂಭವಾಗಿದ್ದು, ಶೀಘ್ರದಲ್ಲೇ ಸ್ಪೇನ್, ಪೋಲ್ಯಾಂಡ್, ಪೋರ್ಚುಗಲ್​ ಮತ್ತು ಮಾಲ್ಟಾಗೆ ಲೋಕೆಶನ್​ಗಳಿಗಾಗಿ ಚಿತ್ರತಂಡ ತೆರಳಲಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಐದು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅದರಲ್ಲಿ ಒಂದು ಲುಕ್  'ಕರಣ್ ಅರ್ಜುನ್' ಚಿತ್ರದ ಸಲ್ಮಾನ್​ ಖಾನ್​ರನ್ನು ಹೋಲಲಿದೆ ಎಂದು ಹೇಳಲಾಗುತ್ತಿದೆ.
Loading...

ನಟಿ ಪ್ರಿಯಾಂಕಾ ಮತ್ತು ನಿರ್ದೇಶಕ ಅಲಿ ಅಬ್ಬಾಸ್ ಜಫರ್ ಈ ಹಿಂದೆ 'ಗುಂಡೆ' ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ.  'ಮುಜ್ಸೆ ಶಾದಿ ಕರೋಗಿ' ಸಿನಿಮಾದ ಬಳಿಕ ಪ್ರಿಯಾಂಕಾ ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ಗೆ ನಾಯಕಿಯಾಗಿ ಬಣ್ಣ ಹಚ್ಚುತ್ತಿರುವುದು ವಿಶೇಷವಾಗಿದೆ. ಉಳಿದಂತೆ ಈ ಚಿತ್ರದಲ್ಲಿ ಹಿರಿಯ ನಟಿ ಟಬು, ಹಾಸ್ಯನಟ ಸುನಿಲ್ ಗ್ರೋವರ್ ಕಾಣಿಸಿಕೊಳ್ಳುತ್ತಿದ್ದು, 'ಧೋನಿ' ಚಿತ್ರದ ಮೊದಲಾರ್ಧದ ನಾಯಕಿ ದಿಶಾ ಪಠಾಣಿ ಇಲ್ಲಿ ಸಲ್ಮಾನ್ ಸಹೋದರಿಯಾಗಲಿದ್ದಾರೆ.

'ಸುಲ್ತಾನ್', 'ಟೈಗರ್ ಜಿಂದಾ ಹೈ' ಸಿನಿಮಾಗಳ ಬಳಿಕ 'ಭಾರತ್' ಚಿತ್ರದೊಂದಿಗೆ ಒಂದಾಗುತ್ತಿರುವ ಸಲ್ಲು- ಅಲಿ ಜೋಡಿ ಬಿಟೌನ್​ನಲ್ಲಿ ಹ್ಯಾಟ್ರಿಕ್ ಗೆಲುವು ಪಡೆಯುವ ನಿರೀಕ್ಷೆಯಲ್ಲಿದೆ.
First published:July 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...