Priyanka Chopra: ಮೇರಿ ಕೋಮ್ ಪಾತ್ರದಲ್ಲಿ ಆ ನಟಿ ನಟಿಸಬೇಕಿತ್ತು ಎಂದ ಪ್ರಿಯಾಂಕಾ ಛೋಪ್ರಾ..! ಯಾಕೆ ಅಂತ ಇಲ್ಲಿದೆ ನೋಡಿ..

ಬಾಕ್ಸಿಂಗ್ ಕಲಿಯಲು ಸಹ ಪ್ರಿಯಾಂಕಾ ಸುಮಾರು ಐದು ತಿಂಗಳ ತರಬೇತಿಯನ್ನು ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಏಕೆಂದರೆ ಆ ಕ್ರೀಡಾಪಟುವಿನ ದೇಹದ ಆಕಾರಕ್ಕೆ ಹೋಲುವುದಕ್ಕೆ ತನ್ನ ದೇಹವನ್ನು ದೈಹಿಕವಾಗಿ ಬದಲಾಯಿಸಿಕೊಳ್ಳಬೇಕಾಗಿತ್ತು.

ನಟಿ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ

  • Share this:
ಬಾಲಿವುಡ್ ನ ಹೆಸರಾಂತ (Bollywood celebrity) ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಅವರು ‘ಮೇರಿ ಕೋಮ್’ ಚಿತ್ರದಲ್ಲಿ ಮೇರಿ ಕೋಮ್(Mary Kom) ಪಾತ್ರದಲ್ಲಿ ಅಭಿಮಾನಿಗಳ ಮನ ಮುಟ್ಟುವಂತೆ ಮಾಡಿದ ಅಭಿನಯವನ್ನು ಯಾರು ತಾನೇ ಸುಲಭವಾಗಿ ಮರೆಯಲು ಸಾಧ್ಯ ಹೇಳಿ. ಈ ಪಾತ್ರಕ್ಕೆ ಯಾರು ಸೂಕ್ತ ಎಂದು ಕೇಳಿದಾಗ ಬಹುಶಃ ನಮಗೆ ನಟಿ ಪ್ರಿಯಾಂಕಾ ಚೋಪ್ರಾ ಹೊರತು ಪಡಿಸಿ ಬೇರೆ ಯಾವುದೇ ಹೆಸರುಗಳು ಊಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಅಭಿನಯವಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಿಸ್ಸಂದೇಹವಾಗಿ ಅಂತರರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಪಾತ್ರವನ್ನು ತುಂಬಾನೇ ನಿಖರವಾಗಿ ಅಭಿನಯಿಸಿದ್ದರು ಎಂದು ಹೇಳಬಹುದು. ಆದರೆ ಖುದ್ದು ನಟಿ ಪ್ರಿಯಾಂಕಾ ಅವರೇ ಈ ಪಾತ್ರದ ಬಗ್ಗೆ ಇತ್ತೀಚೆಗೆ ನೀಡಿದ ಒಂದು ಸಂದರ್ಶನದಲ್ಲಿ(Interview) ಏನು ಹೇಳಿದ್ದಾರೆ ನೋಡಿ.

ಈಶಾನ್ಯ ಭಾಗದ ನಟಿಗೆ ಹೋಗಬೇಕಿತ್ತು
ಇತ್ತೀಚಿನ ಸಂದರ್ಶನವೊಂದರಲ್ಲಿ, 'ಬೇವಾಚ್' ನಟಿ ಮೇರಿ ಕೋಮ್ ನಲ್ಲಿನ ತನ್ನ ಪಾತ್ರದ ಬಗ್ಗೆ ಮಾತನಾಡುತ್ತಾ “ಆ ಪಾತ್ರವು ಈಶಾನ್ಯ ಭಾರತದ ಯಾವುದಾದರೂ ನಟಿಗೆ ಹೋಗಬೇಕಾಗಿತ್ತು ಎಂದು ಹೇಳಿದರು. ಚಿತ್ರವನ್ನು ತೆಗೆದುಕೊಳ್ಳಲು ನಾನು ಮೊದಲಿಗೆ ಹಿಂಜರಿಯುತ್ತಿದ್ದೆ, ಆದರೆ ನಂತರದಲ್ಲಿ ಒಬ್ಬ ನಟಿಯಾಗಿ ದುರಾಸೆ ಹೊಂದಿರುವುದರಿಂದ ನಾನು ಆ ಪಾತ್ರವನ್ನು ಮಾಡಲು ಒಪ್ಪಿಕೊಂಡೆ” ಎಂದು ನಟಿ ಪ್ರಿಯಾಂಕಾ ಹೇಳಿದ್ದಾರೆ.

39 ವರ್ಷದ ನಟಿ ಮೇರಿ ಕೋಮ್ ಚಿತ್ರದಲ್ಲಿನ ನಾಯಕಿ ಪಾತ್ರವನ್ನು ನಿರ್ವಹಿಸುವಾಗ ಆರಂಭದಲ್ಲಿ ಅದನ್ನು ಆಯ್ಕೆ ಮಾಡುವ ಬಗ್ಗೆ ಅನುಮಾನ ಹೊಂದಿದ್ದರು, ಏಕೆಂದರೆ ಅವರೊಬ್ಬ ಕ್ರೀಡಾ ಐಕಾನ್ ಮತ್ತು ಮೇರಿ ಕೋಮ್ ಅನೇಕ ಕ್ರೀಡಾಪಟುಗಳಿಗೆ ಸ್ಪೂರ್ತಿ ಆಗಿದ್ದಾರೆ ಎಂದು ಹಂಚಿಕೊಂಡರು. ಈ ಪಾತ್ರವನ್ನು ತೆಗೆದುಕೊಳ್ಳುವ ಬಗ್ಗೆ ಅನುಮಾನವಿತ್ತು ಎಂದು ಪ್ರಿಯಾಂಕಾ ಹೇಳಿರುವುದಕ್ಕೆ ಒಂದು ಕಾರಣವಿದೆ. ಬನ್ನಿ ಹಾಗಾದರೆ ನಟಿ ಹೇಳಿದ ಕಾರಣ ಏನು ಅಂತ ನೋಡೋಣ.

ಇದನ್ನೂ ಓದಿ: Priyanka Chopra: ಪ್ರಿಯಾಂಕಾ, ನಿಕ್ ಜೊತೆ ಆರತಿ ಬೆಳಗಿದ ಮಹಿಳೆಯ ಮಾಹಿತಿ ಇಲ್ಲಿದೆ

ನಾನು ಮಿಸ್ ಮಾಡಿಕೊಳ್ಳಲಿಲ್ಲ
ಪ್ರಿಯಾಂಕಾ ಮತ್ತು ಮೇರಿ ಕೋಮ್ ಗೂ ಯಾವುದೇ ದೈಹಿಕ ಹೋಲಿಕೆಗಳಿಲ್ಲ, ಮೇರಿ ಕೋಮ್ ಅವರು ಈಶಾನ್ಯ ಭಾಗದಿಂದ ಬಂದವರು ಮತ್ತು ಪ್ರಿಯಾಂಕಾ ಅವರು ಉತ್ತರ ಭಾರತದ ನಟಿ. ಹೀಗೆ ಅನೇಕ ಸಂಗತಿಗಳನ್ನು ಗಮನಿಸಿದಾಗ "ಈ ಮೇರಿ ಕೋಮ್ ಪಾತ್ರವನ್ನು ಬಹುಶಃ ಈಶಾನ್ಯದಿಂದ ಬಂದವರಿಗೆ ಹೋಗಬೇಕಾಗಿತ್ತು" ಎಂದು ಅವರು ಭಾವಿಸುತ್ತಾರೆ ಎಂದು ಪ್ರಿಯಾಂಕಾ ಹಂಚಿಕೊಂಡರು. “ಆದರೆ ಒಬ್ಬ ನಟಿಯಾಗಿ ನಾನು ಅವಳ ಕಥೆಯನ್ನು ಹೇಳಲು ಪಡೆಯುವ ಅವಕಾಶವನ್ನು ನಾನು ಮಿಸ್ ಮಾಡಿಕೊಳ್ಳಲಿಲ್ಲ” ಎಂದು ಅವರು ಹೇಳಿದರು.

ವಿಶ್ವ ಚಾಂಪಿಯನ್ ಶಿಪ್
ಮೇರಿ ಕೋಮ್ ಅವರು ಒಬ್ಬ ಭಾರತೀಯ ಮಹಿಳೆಯಾಗಿ, ಕ್ರೀಡಾಪಟುವಾಗಿ ನನಗೆ ತುಂಬಾ ಸ್ಫೂರ್ತಿ ನೀಡಿದರು. ಚಲನಚಿತ್ರ ನಿರ್ಮಾಪಕರು ನಾನು ಅವರ ಪಾತ್ರವನ್ನು ಮಾಡಬೇಕೆಂದು ಒತ್ತಾಯಿಸಿದಾಗ ನಾನು ಅದನ್ನು ಮಾಡುತ್ತೇನೆ ಎಂದು ಒಪ್ಪಿಕೊಂಡೆ” ಎಂದು ಹೇಳಿದರು. ಒಮುಂಗ್ ಕುಮಾರ್ ನಾಯಕತ್ವದ ಈ ಚಿತ್ರವು ಮಣಿಪುರದ ಹೆಸರಾಂತ ಬಾಕ್ಸರ್ ಅವರ ಜೀವನದ ಕಥೆಯನ್ನು ಆಧರಿಸಿದೆ, ಅವರು ಒಲಿಂಪಿಕ್ ಪದಕ ಮತ್ತು ಅನೇಕ ವಿಶ್ವ ಚಾಂಪಿಯನ್ ಶಿಪ್ ಟ್ರೋಫಿಗಳು ಸೇರಿದಂತೆ ದೇಶಕ್ಕೆ ಹಲವಾರು ಬಾರಿ ಗೌರವವನ್ನು ತಂದು ಕೊಟ್ಟಿದ್ದಾರೆ. ಈ ಚಿತ್ರವು 2014 ರಲ್ಲಿ ಬಿಡುಗಡೆಯಾಯಿತು.

ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ
ತೀವ್ರ ಬಾಕ್ಸಿಂಗ್ ತರಬೇತಿಯಿಂದ ಹಿಡಿದು ಮೇರಿ ಮತ್ತು ಅವರ ಕುಟುಂಬದೊಂದಿಗೆ ಸಮಯ ಕಳೆಯುವವರೆಗೆ, ನಟಿ ಈ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಿದ್ದರು ಎಂದು ಹಂಚಿಕೊಂಡರು. ನಟಿ ತಾನು ಮೇರಿಯನ್ನು ಭೇಟಿಯಾಗಿರುವುದಾಗಿ, ಅವರ ಕುಟುಂಬ ಮತ್ತು ಮಕ್ಕಳೊಂದಿಗೆ ಅವರ ಮನೆಯಲ್ಲಿಯೇ ಸಮಯ ಕಳೆದಿದ್ದೇನೆ ಎಂದು ಹಂಚಿಕೊಂಡರು. ಬಾಕ್ಸಿಂಗ್ ಕಲಿಯಲು ಸಹ ಪ್ರಿಯಾಂಕಾ ಸುಮಾರು ಐದು ತಿಂಗಳ ತರಬೇತಿಯನ್ನು ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಏಕೆಂದರೆ ಆ ಕ್ರೀಡಾಪಟುವಿನ ದೇಹದ ಆಕಾರಕ್ಕೆ ಹೋಲುವುದಕ್ಕೆ ತನ್ನ ದೇಹವನ್ನು ದೈಹಿಕವಾಗಿ ಬದಲಾಯಿಸಿಕೊಳ್ಳಬೇಕಾಗಿತ್ತು.

ಇದನ್ನೂ ಓದಿ: Virat Kohli: ಅಬ್ಬಾ..! ಒಂದು Instagram Postನಿಂದ ಎಷ್ಟೊಂದು ಹಣ ಸಂಪಾದನೆ ಮಾಡ್ತಾರೆ ಗೊತ್ತಾ...?

ಪ್ರಿಯಾಂಕಾ ಆಯ್ಕೆ ಜನಾಂಗೀಯ
ಚಿತ್ರದ ಬಿಡುಗಡೆಯಾದ ನಂತರ ಮೇರಿ ಕೋಮ್ ಪಾತ್ರದಲ್ಲಿ ಈಶಾನ್ಯದ ನಟಿಯನ್ನು ಆಯ್ಕೆ ಮಾಡುವ ಬದಲಿಗೆ ಪ್ರಿಯಾಂಕಾ ಅವರನ್ನು ಚಿತ್ರದಲ್ಲಿ ಹಾಕಿಕೊಂಡಿರುವ ನಿರ್ಧಾರವನ್ನು 'ಜನಾಂಗೀಯ' ಎಂದು ಕರೆದರು. 2014 ರಲ್ಲಿ, ಮೇರಿ ಕೋಮ್ ಮನರಂಜನೆಯನ್ನು ಒದಗಿಸಿದ ಅತ್ಯುತ್ತಮ ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ಈ ಚಿತ್ರಕ್ಕಾಗಿ ಪ್ರಿಯಾಂಕಾ ಅವರಿಗೂ ಸಹ ಸ್ಕ್ರೀನ್ ಅವಾರ್ಡ್, ಪ್ರೊಡ್ಯೂಸರ್ಸ್ ಗಿಲ್ಡ್ ಫಿಲ್ಮ್ ಅವಾರ್ಡ್ ಮತ್ತು ಸ್ಟಾರ್ ಡಸ್ಟ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದವು.
Published by:vanithasanjevani vanithasanjevani
First published: