• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Priyanka Chopra: ಮನೆ ಹೊರಗೆ ಗಂಟೆಗಟ್ಟಲೆ ಕಾಯುತ್ತಿದ್ದ ಯುವ ಅಭಿಮಾನಿ ಬಗ್ಗೆ ನಟಿ ಪಿಗ್ಗಿ ಹೇಳಿದ್ದೇನು ಗೊತ್ತೇ.!

Priyanka Chopra: ಮನೆ ಹೊರಗೆ ಗಂಟೆಗಟ್ಟಲೆ ಕಾಯುತ್ತಿದ್ದ ಯುವ ಅಭಿಮಾನಿ ಬಗ್ಗೆ ನಟಿ ಪಿಗ್ಗಿ ಹೇಳಿದ್ದೇನು ಗೊತ್ತೇ.!

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

ಕೆಲವು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ ಪ್ರಿಯಾಂಕಾ, ಮುಂಬೈನಲ್ಲಿ ವಾಸಿಸುತ್ತಿದ್ದಾಗ ಹೇಗೆ ಒಬ್ಬ ಯುವ ಅಭಿಮಾನಿ ತನ್ನ ಸ್ನೇಹಿತರಾಗಿದ್ದ ಎಂಬುದರ ಬಗ್ಗೆ ನೆನಪಿಸಿಕೊಂಡು ಆ ಘಟನೆಯನ್ನು ಹೇಳಿಕೊಂಡಿದ್ದಾರೆ

  • Share this:

ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ಚಿತ್ರ ನಟ ನಟಿಯರನ್ನು (Actresses) ನೋಡಬೇಕೆಂಬ (Fans Waiting) ಹಂಬಲದಿಂದ ಅವರ ಮನೆಯ ಮುಂದೆ ಬಂದು ಗಂಟೆಗಟ್ಟಲೆ ಕಾಯುವುದನ್ನು ನಾವೆಲ್ಲಾ ಕೇಳಿರುತ್ತೇವೆ ಮತ್ತು ನೋಡಿಯೂ ಇರುತ್ತೇವೆ. ಇಲ್ಲೊಬ್ಬ ನಟಿಗೆ ಹೀಗೆ ಕಾಯುತ್ತಿರುವ ಹುಡುಗನೊಬ್ಬ ಒಳ್ಳೆಯ ಸ್ನೇಹಿತನಾದ (Good friend) ಘಟನೆ ಇದು.ಈ ಘಟನೆಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದು ಬೇರೆ ಯಾರು ಅಲ್ಲ, ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ. (Priyanka Chopra) ಇಷ್ಟು ವರ್ಷಗಳ ಬಳಿಕ ಈ ನಟಿ ತನ್ನ ಹಳೆಯ ಯುವ ಅಭಿಮಾನಿಯ ಬಗ್ಗೆ ನೆನಪಿಸಿಕೊಂಡಿದ್ದಾರೆ ಮತ್ತು ಅವರಿಬ್ಬರ ಆ ಸ್ವಾರಸ್ಯಕರ ಭೇಟಿಯ ಬಗ್ಗೆ ಸಂದರ್ಶನವೊಂದರಲ್ಲಿ( Interview) ಹಂಚಿಕೊಂಡಿದ್ದಾರೆ ನೀವೇ ನೋಡಿ.


ಯುವ ಅಭಿಮಾನಿ


ಕೆಲವು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿದ ಪ್ರಿಯಾಂಕಾ, ಮುಂಬೈನಲ್ಲಿ ವಾಸಿಸುತ್ತಿದ್ದಾಗ ಹೇಗೆ ಒಬ್ಬ ಯುವ ಅಭಿಮಾನಿ ತನ್ನ ಸ್ನೇಹಿತರಾಗಿದ್ದ ಎಂಬುದರ ಬಗ್ಗೆ ನೆನಪಿಸಿಕೊಂಡು ಆ ಘಟನೆಯನ್ನು ಹೇಳಿಕೊಂಡಿದ್ದಾರೆ ಕೇಳಿ.


ಇದನ್ನೂ ಓದಿ: ಎಲ್ಲೆ ಹೋದ್ರೂ.. ಎಲ್ಲೇ ಇದ್ರೂ.. ನಾನು ಭಾರತೀಯೆ: ದೇಶಪ್ರೇಮ ಮೆರೆದ ಪ್ರಿಯಾಂಕ ಚೋಪ್ರಾ!


ಇತ್ತೀಚೆಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ನಟಿ ಪ್ರಿಯಾಂಕಾ ತಮ್ಮ ಆ ಯುವ ಅಭಿಮಾನಿ ಬಗ್ಗೆ ಹೇಳಿಕೊಂಡಿದ್ದಾರೆ. "ನಾನು ಮುಂಬೈನಲ್ಲಿ ವಾಸಿಸುತ್ತಿದ್ದಾಗ, ಬೋರ್ಡಿಂಗ್ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತಿದ್ದಂತಹ ಹುಡುಗನೊಬ್ಬ ವಾರಾಂತ್ಯದಲ್ಲಿ ತನ್ನ ಕುಟುಂಬವನ್ನು ಭೇಟಿಯಾಗಲಿದ್ದೇನೆ ಎಂದು ಶಾಲೆಯಲ್ಲಿ ಹೇಳಿ, ಅವರ ಪೋಷಕರಿಗೆ ಅವನು ತನ್ನ ಸ್ನೇಹಿತರೊಂದಿಗೆ ಹೊರಗೆ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿ ನನ್ನ ಅಪಾರ್ಟ್‌ಮೆಂಟ್‌ ಹೊರಗೆ ಬಂದು ನಿಲ್ಲುತ್ತಿದ್ದನು. ಆ ಹುಡುಗನು ನನ್ನ ಕಾರು ಬರುವ ನಿರೀಕ್ಷೆಯಲ್ಲಿ ಗಂಟೆಗಟ್ಟಲೆ ಅಲ್ಲಿಯೇ ನಿಂತು ಕಾಯುತ್ತಿರುತ್ತಿದ್ದನು” ಎಂದು ಹೇಳಿದರು.


ಪ್ರತಿ ವಾರಾಂತ್ಯ ಆಗಮನ


ನಂತರ ಒಂದು ದಿನ ಸೆಕ್ಯೂರಿಟಿಯವರು ನನಗೆ ಕರೆ ಮಾಡಿ ಈ ಹುಡುಗ ಪ್ರತಿ ವಾರಾಂತ್ಯದಲ್ಲಿ ಇಲ್ಲಿ ಬಂದು ನಿಂತಿರುತ್ತಾನೆ ಮತ್ತು ಅವನು ಇದನ್ನು ಒಂದು ತಿಂಗಳಿನಿಂದ ಪ್ರತಿ ವಾರಾಂತ್ಯಗಳಲ್ಲಿ ಇದನ್ನೇ ಮಾಡುತ್ತಿದ್ದಾನೆ ಎಂದು ಹೇಳಿದರು. ನಂತರ ನಾನು ಅವನಿಗೆ ನನ್ನ ಮನೆಗೆ ಬರುವಂತೆ ಹೇಳಿ ಅವನ ಬಗ್ಗೆ ಅರಿತುಕೊಂಡೆ" ಎಂದು ನಟಿ ಹೇಳಿದರು.


ಒಳ್ಳೆಯ ಸ್ನೇಹಿತರಾದೆವು


"ಆ ಹುಡುಗನ ಜೊತೆಗೆ ಮಾತಾಡಿದಾಗ ನನಗೆ ಅವನು ನಿಮ್ಮಂತೆ ಆಗಲು ಬಯಸುತ್ತೇನೆ, ನಿಮ್ಮೊಂದಿಗೆ ಸುತ್ತಾಡಲು ಬಯಸುತ್ತೇನೆ ಎಂದು ಅವನು ಹೇಳಿಕೊಂಡನು. ಟಿವಿಯಲ್ಲಿ ನನ್ನ ಸಂದರ್ಶನಗಳು ಮತ್ತು ಚಿತ್ರಗಳನ್ನು ನೋಡುವುದರಿಂದ ನನ್ನನ್ನು ಅಷ್ಟೊಂದು ಇಷ್ಟ ಪಡುತ್ತಾನೆ ಎಂದು ನಾವಿಬ್ಬರೂ ಒಳ್ಳೆಯ ಸ್ನೇಹಿತರಾದೆವು. ಅವನು ನನ್ನೊಂದಿಗೆ ಇರುವಾಗ ನಾನು ಅವನ ಪೋಷಕರಿಗೆ ಕರೆ ಮಾಡಿ ನಿಮ್ಮ ಹುಡುಗ ನನ್ನ ಜೊತೆಯೇ ಇದ್ದಾನೆ, ಅವನು ಸುರಕ್ಷಿತವಾಗಿದ್ದಾನೆ ಎಂದು ನಾನು ಅವರಿಗೆ ತಿಳಿಸುತ್ತಿದ್ದೆ. ಹೀಗೆ ನಾವು ಇಬ್ಬರು ಒಂದೆರಡು ವರ್ಷಗಳ ಕಾಲ ಸಂಪರ್ಕದಲ್ಲಿದ್ದೆವು ಮತ್ತು ಅದು ತುಂಬಾನೇ ಸುಮಧುರ ಕ್ಷಣ” ಎಂದು ಪ್ರಿಯಾಂಕಾ ಹೇಳಿಕೊಂಡರು.


ಇದನ್ನೂ ಓದಿ: Priyanka Chopra: ನಿಕ್​ ಜೋನಸ್​ ಹೆಂಡ್ತಿ ಎಂದಿದ್ದಕ್ಕೆ ಸಿಟ್ಟಾದ ದೇಸಿ ಗರ್ಲ್​ ಪ್ರಿಯಾಂಕ!


ಪ್ರಿಯಾಂಕಾ ಚೋಪ್ರಾ ತಮ್ಮ ಸಂದರ್ಶನದಲ್ಲಿ ‘ದಿ ಮ್ಯಾಟ್ರಿಕ್ಸ್’ ಚಿತ್ರದ ಬಗ್ಗೆ ಮಾತನಾಡಿ  ನನ್ನ ಕುಟುಂಬವು ಚಿತ್ರದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ನನ್ನ ಪತಿ ನಿಕ್ ಜೊನಾಸ್ ಸಹ ಮ್ಯಾಟ್ರಿಕ್ಸ್ ಬಗ್ಗೆ ಅತೀ ಹೆಚ್ಚು ಉತ್ಸುಕರಾಗಿದ್ದಾರೆ. ಇವರು ಭಾರತಕ್ಕೆ ಹಿಂದಿರುಗಿದ ನಂತರ ಫರ್ಹಾನ್ ಅಖ್ತರ್ ನಿರ್ದೇಶನದ ‘ಜೀ ಲೆ ಝರಾ’ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

top videos
    First published: