ಬಿಗ್​ ಬಜೆಟ್​ ಟಿವಿ ಶೋನಿಂದ ಪಿಗ್ಗಿ ಔಟ್​​: ಪ್ರಿಯಕರನಿಗಾಗಿ ಪ್ರಿಯಾಂಕ ತ್ಯಾಗವೇನು ಗೊತ್ತೇ?

news18
Updated:August 4, 2018, 9:01 PM IST
ಬಿಗ್​ ಬಜೆಟ್​ ಟಿವಿ ಶೋನಿಂದ ಪಿಗ್ಗಿ ಔಟ್​​: ಪ್ರಿಯಕರನಿಗಾಗಿ ಪ್ರಿಯಾಂಕ ತ್ಯಾಗವೇನು ಗೊತ್ತೇ?
news18
Updated: August 4, 2018, 9:01 PM IST
ರಕ್ಷಾ ಜಾಸ್ಮಿನ್​, ನ್ಯೂಸ್​ 18 ಕನ್ನಡ

ಬೆಂಗಳೂರು (ಆಗಸ್ಟ್​ 4): ಸದ್ಯ ಬಾಲಿವುಡ್‍ನಲ್ಲಿ ಪ್ರಿಯಾಂಕ ಛೋಪ್ರಾ  ಬ್ಯೂಟಿಯದ್ದೆ ಸದ್ದು. ಬಾಲಿವುಡ್ ಗಲ್ಲಿ ಗಲ್ಲಿಯಲ್ಲೂ ಈ ನಟಿಯ ವಿಚಾರದ ಬಗ್ಗೆ ಬಿಸಿ ಬಿಸಿ ಚರ್ಚೆಗಳಾಗುತ್ತಿವೆ. ಇದರಲ್ಲಿ ಹೊಸತೇನಿದೆ ಅಂತ ಕೇಳ್ತೀರಾ? ಪ್ರಿಯಾಂಕ ಹೊಸ ಸಿನೆಮಾಗೆ ಸಹಿ ಹಾಕಿದ್ದಾರೆ ಅಥವಾ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ರೀತಿಯ ವಿಚಾರಗಳಿಗೆ ಸುದ್ದಿಯಾಗುತ್ತಿದ್ದ ಪಿಗ್ಗಿ, ಈಗ ಸಿನೆಮಾಗಳಿಂದ ಹಿಂದೆ ಸರಿಯುತ್ತಿರುವ ವಿಚಾರಕ್ಕೆ ಮಾತಾಗುತ್ತಿದ್ದಾರೆ.

ಪ್ರಿಯಾಂಕ ಛೋಪ್ರಾ ಮತ್ತು ನಿಕ್​ ಜೋನಾಸ್​ ಇಬ್ಬರ ನಡುವಿನ ಪ್ರೇಮ್​ ಕಹಾನಿಯ ಬಗ್ಗೆ ಇಡೀ ಬಾಲಿವುಡ್​ಗೆ ತಿಳಿದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇಬ್ಬರೂ ಮದುವೆಯಾಗುತ್ತಾರೆ ಎಂಬ ಅಂಶವನ್ನು ಭಾರತ್​ ಸಿನೆಮಾದ ನಿರ್ದೇಶಕ ಆಲಿ ಅಬ್ಬಾಸ್​ ಝಾಫರ್​ ಪರೋಕ್ಷವಾಗಿ ತಿಳಿಸಿದ್ದರು. ಭಾರತ್​ ಸಿನೆಮಾದಿಂದ ಪ್ರಿಯಾಂಕ ಆಚೆ ಹೋಗಿದ್ದಾರೆ, ಆದರೆ ಅದಕ್ಕೆ ಅವರು ನೀಡಿರುವ ಕಾರಣದಿಂದ ಸಂತಸವಾಗಿದೆ, ಪಿಗ್ಗಿ ಜೀವನದ ಮುಂದಿನ ಹೆಜ್ಜೆಗಳು ಚೆನ್ನಾಗಿರಲಿ ಎಂದು ಅವರು ಟ್ವಿಟ್ಟರ್​ನಲ್ಲಿ ಹಾರೈಸಿದ್ದರು.

ಬಾಳ ಸಂಗಾತಿಯಾಗಲಿರುವ ಹಾಲಿವುಡ್​ ಸಿಂಗರ್​ ನಿಕ್​ ಜೋನಾಸ್​ಗೋಸ್ಕರ ಪ್ರಿಯಾಂಕ ಛೋಪ್ರಾ ಒಂದಾದರ ನಂತರ ಒಂದು ತ್ಯಾಗವನ್ನು ಮಾಡುತ್ತಿದ್ದಾರೆ. ನಿಕ್​ ಜೋನಾಸ್​ ಜತೆ ಹೆಚ್ಚಿನ ಸಮಯ ಕಳೆಯುವ ಸಲುವಾಗಿ ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳನ್ನು ಪಿಗ್ಗಿ ಕೈ ಬಿಡುತ್ತಿದ್ದಾರೆ.  ನಿಕ್​ ಜೋನಾಸ್​ ಜತೆ ಪಿಗ್ಗಿ ಡೇಟಿಂಗು, ಔಟಿಂಗು, ಮೀಟಿಂಗು ಅಂತ ಶುರು ಹಚ್ಕೊಂಡ್ರೋ, ಅಲ್ಲಿಂದ ಇಲ್ಲಿವರೆಗೂ ಫುಲ್ ಟಾಕ್‍ನಲ್ಲಿದ್ದಾರೆ ಪಿಗ್ಗಿ.

ಇಷ್ಟೆ ಆಗಿದ್ದರೆ ಅದೇನೋ ಅವ್ರ ವೈಯಕ್ತಿಕ ವಿಚಾರ ಅನ್ನಬಹುದಿತ್ತು. ಅವ್ರಿಷ್ಟದಂತೆ ಇರಲಿ ಅನ್ನಬಹುದಿತ್ತು. ಆದರೆ ಈಗ ಆಗ್ತಿರೋದೆ ಬೇರೆ. ಇನ್ನೇನು ನಿಕ್ ಜೊತೆ ಹೊಸ ಬಾಳಿಗೆ ಕಾಲಿಡಲಿದ್ದಾರೆ, ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಳ್ತಾರೆ ಅಂತ ಸಿಪ್ ಸಿಪ್ ಗಾಸಿಪ್‍ಗಳು ಹರಿದಾಡ್ತಾನೆ ಇತ್ತು. ಅದರಂತೆ ಪಿಗ್ಗಿ ಕೂಡ ಇತ್ತೀಚೆಗೆ ಸಲ್ಲು ಅಭಿನಯದ ಭಾರತ್ ಚಿತ್ರದಿಂದ ಹೊರ ಬಂದಿದ್ದರು. ಇದಕ್ಕೆ ನಿಕ್ ಕಾರಣ ಅಂತಲೂ ಹೇಳಲಾಗಿತ್ತು. ಅದರಂತೆ ಈಗಿನ ಅಪ್‍ಡೇಟ್ ಏನಂದ್ರೆ ಪಿಗ್ಗಿ ಮತ್ತೊಂದು ಬಿಗ್ ಬಡ್ಜೆಟ್ ಟಿ.ವಿ ಶೋ ನಿಂದಲೂ ಹೊರನಡೆದಿದ್ದಾರೆ.

ಪಿಗ್ಗಿ ಅಮೇರಿಕಾದ ಟಿ ವಿ ಶೊ ಕ್ವಾಂಟಿಕೊ ಸೀರಿಸ್‍ನಿಂದ ಹೊರಬಂದಿದ್ದಾರೆ.  ಬಹುನಿರೀಕ್ಷಿತ ಈ ಸೀರಿಸ್‍ನಿಂದ ಹೊರ ಬಂದಿರೋ ಇವರು, ಸ್ವತಃ ಅದನ್ನ ಅಧಿಕೃತವಾಗಿ ಘೋಷಿಸಿದ್ದಾರೆ. ಆದ್ರೆ ಕಾರಣ ಏನು ಅನ್ನೋದನ್ನ ತಿಳಿಸದ ಪಿಗ್ಗಿ ಸೈಲೆಂಟ್ ಆಗಿದ್ದಾರೆ. ಆದರೆ ಬಿ ಟೌನ್ ಅಂಗಳದಲ್ಲಿ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಪಿಗ್ಗಿಯ ಮುಂದಿನ ನಡೆ, ನಿರ್ದಾರದ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ. ಆದರೆ ಒಳಗೊಳಗೆ ಪ್ರಿಯತಮ ನಿಕ್ ಅವರೇ ಇದಕ್ಕೆಲ್ಲ ಕಾರಣ ಅನ್ನೋ ಗುಸು ಗುಸು ಸಹ ಶುರುವಾಗಿದೆ.
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...