Priyanka Chopra: ಪ್ರಿಯಾಂಕಾ ಛೋಪ್ರಾ ತಾಯಿಯಾಗ್ತಿದ್ದಾರಾ? ಈ ವಿಚಾರ ಅವರೇ ಹೇಳಿದ್ದು... ಅಭಿಮಾನಿಗಳು ಫುಲ್ ಖುಷ್!

Priyanka pregnancy announcement : ಪ್ರಿಯಾಂಕಾ ಹಾಗೂ ನಿಕ್ ವಿಚ್ಛೇದನದ ವದಂತಿಗಳು ಹಬ್ಬುತ್ತಿರುವ ಸಮಯದಲ್ಲಿಯೇ ಪ್ರಿಯಾಂಕಾ ಛೋಪ್ರಾ, ನನ್ನ ಹಾಗೂ ನಿಕ್ ನಡುವೆ ಎಲ್ಲವೂ ಸರಿ ಇದೆ ಅನ್ನೋದನ್ನ ಸೋಷಿಯಲ್ ಮೀಡಿಯಾದಲ್ಲಿ ಸಾಬೀತು ಮಾಡಿದ್ದಾರೆ.. ಇದರ ಜೊತೆಗೆ ನಿಕ್ ಹಾಗೂ ನಾನು ಶೀಘ್ರವೇ ಮಗು ಪಡೆಯಲಿದ್ದೇವೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ

ಪ್ರಿಯಾಂಕಾ

ಪ್ರಿಯಾಂಕಾ

 • Share this:
  ಗ್ಲೋಬಲ್ ಐಕಾನ್ (Global Icon) ಬಾಲಿವುಡ್ (Bollywood)ಬೆಡಗಿ ಪ್ರಿಯಾಂಕಾ(Priyanka Chopra) ಚೋಪ್ರಾ, ಹಾಗೂ ಅಮೆರಿಕಾದ (America) ಖ್ಯಾತ ಗಾಯಕ ನಿಕ್ ಜೋನ್ಸ್ (Nick Jonas) ಸೆಲೆಬ್ರಿಟಿ ಕಪಲ್ ಗಳಲ್ಲಿ (Celebrity Couple) ಒಬ್ಬರು.. ಪ್ರೀತಿಗೆ(Love) ವಯಸ್ಸಿನ ಹಂಗಿಲ್ಲ ಎನ್ನುವುದನ್ನ ಜಗತ್ತಿನ (World)ಮುಂದೆ ಸಾರಿದ ಈ ಜೋಡಿ ಸಾಕಷ್ಟು ಸಂಚಲನ ಎಬ್ಬಿಸಿತ್ತು.. ಇವರ ಮಧ್ಯೆ ಎಲ್ಲವೂ ಸರಿ ಇದೆ ಎನ್ನುವಾಗಲೇ ಕಳೆದ ಮೂರು ದಿನಗಳ ಹಿಂದೆ ಪ್ರಿಯಾಂಕಾ ತಮ್ಮ ಸೋಶಿಯಲ್ ಮೀಡಿಯಾ(Social Media) ಖಾತೆಯಲ್ಲಿ ತಮ್ಮ ಪತಿಯ ಹೆಸರನ್ನು ಕೈಬಿಟ್ಟಿದ್ದು ಹಲವು ಗೊಂದಲಗಳಿಗೆ ಕಾರಣವಾಗಿತ್ತು.. ಹೀಗಾಗಿ ಈ ದಂಪತಿಗಳು ವಿಚ್ಛೇದನ(Divorce) ಪಡೆಯಲಿದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿತ್ತು... ಈ ಅಂತೆ-ಕಂತೆಗಳಿಗೆ ಎಲ್ಲಾ ಬ್ರೇಕ್ ಹಾಕುವಂತೆ, ಪ್ರಿಯಾಂಕಾ ಚೋಪ್ರಾ ನಿಕ್ ಜೋನ್ಸ್ ನಡೆದುಕೊಳ್ಳುತ್ತಾ ಇದ್ರೂ, ಅಭಿಮಾನಿಗಳು ಮಾತ್ರ ಇವರ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುತ್ತಿದ್ದಾರೆ.. ಆದರೆ ಈ ಜೋಡಿ ಮಾತ್ರ ನಮ್ಮ ನಡುವೆ ಎಲ್ಲವೂ ಸರಿ ಇದೆ ಎನ್ನುವುದನ್ನು ಸಾಬೀತು ಮಾಡಿದೆ..

  ತಾಯಿ ಆಗುತ್ತಿದ್ದಾರೆ ಪ್ರಿಯಾಂಕ ಚೋಪ್ರಾ..!

  ನೆಟ್‌ಫ್ಲಿಕ್ಸ್‌ನಲ್ಲಿ ಜೋನಸ್ ಸಹೋದರರ ಹೊಸ ಕಾರ್ಯಕ್ರಮ ಆರಂಭ ಆಗಿದೆ. ಜೋನಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್‌ನಲ್ಲಿ ಹಾಡು, ನೃತ್ಯ, ಚೇಷ್ಟೆ ಎಲ್ಲವೂ ಇರುತ್ತೆ. ಹೀಗಾಗಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಭಾಗಿಯಾಗಿದ್ರು.. ಈ ಕಾರ್ಯಕ್ರಮದಲ್ಲಿ ಮೈಕ್ ಹಿಡಿದು ಸ್ಟೇಜ್ ಮೇಲೆ ಬಂದ ಪ್ರಿಯಾಂಕಾ ಚೋಪ್ರಾ ತಮ್ಮ ಪತಿಯ ಕಾಲೆಳೆಯಲು ಶುರುಮಾಡಿದ್ರು.. ಅಲ್ಲದೇ ಕೆಲವೇ ಹೊತ್ತಿನಲ್ಲಿ ನಮ್ಮ ಕುಟುಂಬದಲ್ಲಿ ಮಕ್ಕಳಿಲ್ಲದ ಏಕೈಕ ದಂಪತಿ ಅಂದ್ರೆ ನಾನು ಮತ್ತು ನಿಕ್.. ಆದರೆ ಸದ್ಯದಲ್ಲೇ ನಾವು ಮಕ್ಕಳನ್ನು ಪಡೆಯಲಿದ್ದೇವೆ ಅಂತ ಅನೌನ್ಸ್ ಮಾಡಿ ಪತಿಗೆ ಶಾಕ್ ನೀಡಿದ್ರು

  ಇದನ್ನೂ ಓದಿ :ಮುಖದ ಮೇಲಿನ ಕೂದಲು ತೆಗೆಯೋಕೆ ಪ್ರಿಯಾಂಕಾ ಛೋಪ್ರಾ ಗೋಧಿ ಹಿಟ್ಟು ಬಳಸ್ತಾರಂತೆ!

  ಪತಿ ಕಾಲೆಳೆಯಲು ಪ್ರಗ್ನೆಂಟ್ ಅಂದ  ಪ್ರಿಯಾಂಕಾ

  ಶೀಘ್ರವೇ ನಾವು ಮಗು ಪಡೆಯಲಿದ್ದೇವೆ ಎಂಬ ಮಾತುಗಳನ್ನು ಪ್ರಿಯಾಂಕಾ ಬಾಯಲ್ಲಿ ಕೇಳುತ್ತಿದ್ದಂತೆ , ಒಂದು ಕ್ಷಣ ಗಾಬರಿಗೊಂಡ ನಿಕ್ ಇನ್ನೇನು ತನ್ನ ಖುಷಿ ವ್ಯಕ್ತಪಡಿಸಬೇಕು ಅನ್ನೋವಾಗ್ಲೇ, ಜೋರಾಗಿ ನಕ್ಕ ಪ್ರಿಯಾಂಕಾ ತಮಾಷೆಗಾಗಿ ಹೇಳಿದ್ದು ಎಂದು ಶಾಕ್ ನೀಡಿದ್ದಾರೆ..

  ಮದುವೆ ವಿವಾದ ಹಾಗೂ ನಿಕ್ ಜೊತೆಗಿನ ಸಂಬಂಧದ ಬಗ್ಗೆಯೂ ಪ್ರಿಯಾಂಕಾ ಮಾತು

  2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ವಯಸ್ಸಿನ ಅಂತರದಿಂದಾಗಿ ತೀವ್ರ ವಿವಾದಕ್ಕೆ ಒಳಪಟ್ಟಿದ್ದರು.. ಇದರ ಬಗ್ಗೆಯೂ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ ವಯಸ್ಸಿನ ಅಂತರ ಎಷ್ಟು ಪರಿಣಾಮ ಬೀರಿದೆ ಅನ್ನೋದನ್ನು ಕೂಡ ಹೇಳಿದ್ರು. 90ರ ದಶಕದಲ್ಲಿ ಪಾಪ್ ಸಂಸ್ಕೃತಿ ಹೇಗಿತ್ತು ಎನ್ನೋದು ಅರ್ಥ ಆಗೋದಿಲ್ಲ , ನಾನು ಅದನ್ನ ಅವನಿಗೆ ಕಲಿಸಬೇಕಾಯಿತು.. ನನಗೆ ಹೊಸ ಜಮಾನದ ಟಿಕ್ ಟಾಕ್ ಹೇಗೆ ಬಳಸಬೇಕು ಅನ್ನೋದನ್ನ ನಿಕ್ ಕಲಿಸಿದ. ಅಲ್ಲದೆ ಒಬ್ಬ ಯಶಸ್ವಿ ನಟನಾ ವೃತ್ತಿ ಜೀವನ ಹೇಗಿರುತ್ತದೆ ಎಂದು ಅವರಿಗೆ ನಾನು ಕಲಿಸಿದೆ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರ ಮೊಗದಲ್ಲಿ ಪ್ರಿಯಾಂಕ ನಗೂ ಮೂಡಿಸಿದರು..

  ಇದನ್ನೂ ಓದಿ :ತನ್ನ ಹೆಸರಿನ ಮುಂದೆ Nick Jonas ಹೆಸರು ಕೈಬಿಡಲು ಅಸಲಿ ಕಾರಣ ಇದು!

  ಇನ್ನು ಈ ಎಲ್ಲ ವಿವಾದಗಳ, ಹಾಗೂ ಕೌತುಕಗಳ ನಡುವೆಯೂ ಪ್ರಿಯಾಂಕಾ ನಟನೆಯ ಸಾಲು ಸಾಲು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿದೆ.. ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಸಿಟಾಡೆಲ್ ಅನ್ನು ಮುಗಿಸಿದ್ದಾರೆ. ಮ್ಯಾಟ್ರಿಕ್ಸ್ ಸೀರೀಸ್‌ನ ನಾಲ್ಕನೇ ಭಾಗವಾಗಿ, ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್‌ನಲ್ಲಿ ಸದ್ಯಕ್ಕೆ ಪ್ರಿಯಾಂಕಾ ಬ್ಯುಸಿಯಾಗಿದ್ದು ಡಿಸೆಂಬರ್ ನಲ್ಲಿ ಸಿನಿಮಾ ತೆರೆಗೆ ಬರಲಿದೆ..
  Published by:ranjumbkgowda1 ranjumbkgowda1
  First published: