ಇತ್ತೀಚೆಗೆ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ತನ್ನ ಅಡುಗೆ ಕೆಲಸಗಾರ್ತಿ ಸಾಮಿ ಉಡೆಲ್ (Sami Udell) ಜೊತೆಗೆ ತನ್ನ ಲಾಸ್ ಏಂಜಲೀಸ್ ನಿವಾಸದಲ್ಲಿ ಆರತಿ ಬೆಳಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ದೃಶ್ಯವು ಕಳೆದ ವರ್ಷದ ದೀಪಾವಳಿಯಂದು ಆಚರಿಸಲಾದ ಲಕ್ಷ್ಮೀ ಪೂಜೆಗೆ(Lakshmi Puja) ಸಂಬಂಧಿಸಿದ್ದು ಎಂದು ತಿಳಿದು ಬಂದಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಸಾಮಿ ಉಡೆಲ್ ಯಾರು ಎಂದು ಅನೇಕರು ಪ್ರಶ್ನಿಸಿದ ಬೆನ್ನಿಗೇ ಪಾಕಪ್ರವೀಣೆಯಾದ ಆಕೆ ಲಾಸ್ ಏಂಜಲೀಸ್‌ನಲ್ಲಿ (Los Angeles) ಸ್ವಯಂ ತಾರೆಯಾಗಿಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ. 2020ರಲ್ಲಿ 'ವೋಗ್'ಗೆ ನೀಡಿರುವ ಸಂದರ್ಶನದಲ್ಲಿ ನಾನು ಕೇವಲ ಅದೃಷ್ಟದ ಬಲದಿಂದ ಚೋಪ್ರಾ-ಜೋನಸ್ ಕುಟುಂಬದ ಭಾಗವಾಗಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದರು.
ಸಾಮಿ ಉಡೆಲ್ ಅಭಿನಂದನೆ
ಸಮಾರಂಭವೊಂದರಲ್ಲಿ ಆಹಾರ ಸರಬರಾಜು ಮಾಡುತ್ತಿದ್ದ ಸಾಮಿ ಉಡೆಲ್ ಚೋಪ್ರಾರ ಸಹಾಯಕನ ಕಣ್ಣಿಗೆ ಬಿದ್ದಿದ್ದಾಳೆ. ಇದಾದ ನಂತರ ಕೆಲವು ದಿನಗಳ ಕಾಲ ಚೋಪ್ರಾ-ಜೋನಸ್ ಕುಟುಂಬದೊಂದಿಗೆ ಕೆಲಸ ಮಾಡಿದ ನಂತರ ಆಕೆಗೆ ಕೆಲಸ ತೊರೆಯಲು ಸಾಧ್ಯವಾಗಲೇ ಇಲ್ಲ. ಚೋಪ್ರಾ-ಜೋನಸ್ ದಂಪತಿಗಳ ಮೇಲೆ ಅಭಿನಂದನೆಯ ಮಳೆ ಸುರಿಸಿರುವ ಸಾಮಿ ಉಡೆಲ್, ಅವರ ಸಂಬಂಧದ ಕುರಿತೂ ಸಂದರ್ಶನದಲ್ಲಿ ಮಾತನಾಡಿದ್ದಾಳೆ.
ಇದನ್ನೂ ಓದಿ: Priyanka Chopra-Nick Jonas: ಹೊಸ ವರ್ಷಕ್ಕೆ ಪಿಗ್ಗಿ-ನಿಕ್ ಜೋನಸ್ ರೊಮ್ಯಾಂಟಿಕ್ ಡೇಟ್: ಫೋಟೋಗಳು ವೈರಲ್!
ಪ್ರಿಯಾಂಕಾ ಚೋಪ್ರಾ ಜೋನಸ್‌ಗೆ ನಿಮ್ಮಲ್ಲಿ ಕುಟುಂಬದ ಸದಸ್ಯರ ಭಾವನೆ ಬರಿಸುವಂತಹ ಸಾಮರ್ಥ್ಯವಿದೆ. ಪ್ರಿಯಾಂಕಾ ಕುರಿತ ನನ್ನ ಪ್ರೀತಿಯ ಕುರಿತು ಹೇಳುವುದಾದರೆ, ಆಕೆಯ ಬಗ್ಗೆ ನಾನು ನೂರು ಮಿಲಿಯನ್ ಪುಸ್ತಕಗಳನ್ನು ಬರೆಯಬಲ್ಲೆ. ಆಕೆ ತುಂಬಾ ದಯಾಮಯಿ ಮತ್ತು ಕಠಿಣ ಪರಿಶ್ರಮಿ. ಆಕೆ ಜನರ ಬಗ್ಗೆ ನೈಜ ಕಾಳಜಿ ವಹಿಸುತ್ತಾರೆ. ಆಕೆ ಯಾವುದಾದರೂ ಕೋಣೆಗೆ ನಡೆದು ಬಂದರೆ, ನೀವು ರೋಮಾಂಚನಗೊಳ್ಳದಿರುವುದು ಅಸಾಧ್ಯ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ.
ಭಾರತೀಯ ಅಡುಗೆ ಕುರಿತು ಅನ್ವೇಷಣೆ
ಇಷ್ಟು ಮಾತ್ರವಲ್ಲ; ಸಾಮಿ ಉಡೆಲ್ ಪ್ರಕಾರ, ಪ್ರಿಯಾಂಕಾ ಚೋಪ್ರಾ ಭಾರತೀಯ ಅಡುಗೆ ಕುರಿತು ಆಕೆಗೆ ಸಮರ್ಪಕವಾಗಿ ಪರಿಚಯ ಮಾಡಿಕೊಟ್ಟರಂತೆ. ದೋಸೆಗಾಗಿ ಹಿಟ್ಟು ರುಬ್ಬುವಾಗ ಸಾಮಿ ಉಡೆಲ್‌ಗೆ ಭಾರತೀಯ ಅಡುಗೆ ಕುರಿತು ಅನ್ವೇಷಣೆ ಮಾಡಲು ಪ್ರೇರೇಪಿಸಿತಂತೆ. ಅಪಾರ ಸಂಶೋಧನೆಯ ನಡೆಸಿದ ನಂತರ ಎಲ್ಲರಿಗೂ ಸೂಕ್ತವಾಗುವ ಫಲಿತಾಂಶ ದೊರೆಯಿತಾದರೂ ಆಕೆಗೆ ಮಾತ್ರ ಒಗ್ಗಲಿಲ್ಲವಂತೆ. "ನಾನು ನನ್ನ ಕೈಯಲ್ಲಿ ಸಾಧ್ಯವಿರುವ ಎಲ್ಲವನ್ನೂ ನೀಡಿದೆ.
ವಿಡಿಯೋ ನೋಡಿ:
View this post on Instagram
ಆಹಾರ ಸರಬರಾಜು ಕಂಪನಿಯ ಸಂಸ್ಥಾಪಕಿ
ಇದಕ್ಕೂ ಮುನ್ನ ಅಮೆರಿಕದ ಎನ್‌ಬಿಎ ಸೂಪರ್ ಸ್ಟಾರ್ ಡಿಮರ್ಕಸ್ ಕುಸಿನ್ಸ್ ಹಾಗೂ ರ‍್ಯಾಪ್ ತಾರೆಯರಾದ ಟುಚಿನ್ಜ್ ಮತ್ತು ಲುಡಾಕ್ರಿಸ್ ಜೋಡಿಯೊಂದಿಗೆ ಕೆಲಸ ಮಾಡಿದ್ದರು. ಸಾಮಿ ಉಡೆಲ್ ಹೋಲ್‌ಸಮ್ ಎಂಬ ಆಹಾರ ಸರಬರಾಜು ಕಂಪನಿಯ ಸಂಸ್ಥಾಪಕಿಯಾಗಿದ್ದು, ಕುಟುಂಬಗಳಿಗೆ ಖಾಸಗಿ ಅಡುಗೆ ತಯಾರಕರನ್ನು ಪೂರೈಸುತ್ತದೆ. ಈ ಕಂಪನಿಯನ್ನು ತನ್ನ ವ್ಯಾವಹಾರಿಕ ಪಾಲುದಾರನಾದ ರೋಸ್ ಕೈಯೊಂದಿಗೆ ಆಕೆ ಪ್ರಾರಂಭಿಸಿದಳು. ರೋಸ್ ಕೈ ಆರೋಗ್ಯಕಾರಿ ಆಹಾರ ಪೂರೈಕೆಯ ದೃಷ್ಟಿ ಹೊಂದಿರುವ ಟ್ರಕ್ ಚಾಲಕರಾಗಿದ್ದಾರೆ.
ಪ್ರಿಯಾಂಕಾ ಭೇಟಿ
ಆಕೆ ತನ್ನ ವೃತ್ತಿಜೀವನವನ್ನು ತನ್ನ ಸಹೋದರ ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ಆಹಾರ ಪೂರೈಕೆ ಮಾಡುವ ಮೂಲಕ ಪ್ರಾರಂಭಿಸಿದಳು. ಇದೇ ಸಮಾರಂಭದಲ್ಲಿ ಆಕೆ ಅಮೆರಿಕದ ನಟ ಹಾಗೂ ರ‍್ಯಾಪ್ ಸಿಂಗರ್ ಲುಡಾಕ್ರಿಸ್ ಅವರ ಆಪ್ತ ಸಹಾಯಕ ಜೋಶ್‌ನನ್ನು ಭೇಟಿ ಮಾಡಿದ್ದಳು. ಉಡೆಲ್‌ಗೆ ಮೊದಲಿಗೆ ಲುಡಾಕ್ರಿಸ್ ಆಪ್ತ ಸಹಾಯಕ ಜೋಶ್ ಬಳಿ ಕೆಲಸ ದೊರೆಯಿತು. ನಂತರ ಜೋಶ್ ರ‍್ಯಾಪ್ ಸಿಂಗರ್ ಲುಡಾಕ್ರಿಸ್ ಆಕೆಯ ಆಹಾರವನ್ನು ಇಷ್ಟಪಡಬಹುದು ಎಂದು ಭಾವಿಸಿದ.
ದಂಪತಿಗಳಿಗೆ ಶಿಫಾರಸು
ಇದಾದ ನಂತರ ಅವಿವಾಹಿತರು ಏರ್ಪಡಿಸಿದ್ದ ಸಂತೋಷ ಕೂಟವೊಂದರಲ್ಲಿ ಪ್ರಿಯಾಂಕಾ ಚೋಪ್ರಾರ ಸಹಾಯಕನನ್ನು ಸಾಮಿ ಉಡೆಲ್ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಅಡುಗೆ ಕೆಲಸಗಾರ್ತಿಗಾಗಿ ಹುಡುಕುತ್ತಿದ್ದ ಜೋನಸ್ ದಂಪತಿಗಳಿಗೆ ಶಿಫಾರಸು ಮಾಡಬಹುದಾದ ಅಭ್ಯರ್ಥಿಗಳ ಪೈಕಿ ಸಾಮಿ ಉಡೆಲ್ ಕೂಡಾ ಒಬ್ಬಳಾಗಿದ್ದಳು.
ಇದನ್ನೂ ಓದಿ: Priyanka Chopra: ಮನೆ ಹೊರಗೆ ಗಂಟೆಗಟ್ಟಲೆ ಕಾಯುತ್ತಿದ್ದ ಯುವ ಅಭಿಮಾನಿ ಬಗ್ಗೆ ನಟಿ ಪಿಗ್ಗಿ ಹೇಳಿದ್ದೇನು ಗೊತ್ತೇ.!
ಸಾಮಿ ಉಡೆಲ್ ಜೋನಸ್ ಸಹೋದರರಿಗಾಗಿ ಸಾಂದರ್ಭಿಕವಾಗಿ ಅಡುಗೆ ಮಾಡಲು ಪ್ರಯಾಣಿಸುತ್ತಿದ್ದಳು. ಹಾಗೆಯೇ ಕೆಲವು ಸಂದರ್ಭಗಳಲ್ಲಿ ಲಾಸ್ ಏಂಜಲೀಸ್‌ನ ಕೆಲವು ತಾರೆಯರಿಗೂ ಆಹಾರ ಪೂರೈಸಿದ್ದಳು. ಇನ್ನು, ಸಾಮಿ ಉಡೆಲ್ ಪತ್ರಿಕೋದ್ಯಮ/ಜಾಹೀರಾತು ಪದವಿಯನ್ನು ಅಮೆರಿಕದ ಕೊಲೊರಾಡೋ ಬೌಲ್ಡರ್‌ನ ವಿಶ್ವವಿದ್ಯಾಲಯವೊಂದರಿಂದ ಪಡೆದಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ