ಇನ್​ಸ್ಟಾಗ್ರಾಂನಲ್ಲಿ ಬ್ರ್ಯಾಂಡ್​ ಪ್ರಮೋಟ್​ ಮಾಡಲು ಪ್ರಿಯಾಂಕಾ ಚೋಪ್ರಾ ಪಡೆಯುವ ಸಂಭಾವನೆ ಎಷ್ಟು ಗೊತ್ತಾ..?

Priynaka Instagram Post: ಬಾಲಿವುಡ್​ನಿಂದ ಹಾಲಿವುಡ್​ಗೆ ಪಯಣ ಬೆಳೆಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸಕ್ರಿಯವಾಗಿರುತ್ತಾರೆ. ಅದರಲ್ಲೂ ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ಪೋಸ್ಟ್​ಗಳನ್ನು ಮಾಡುತ್ತಲೇ ಇರುತ್ತಾರೆ. ಈಗ ಪಿಗ್ಗಿಯ ಇನ್​ಸ್ಟಾಗ್ರಾಂಗೆ ಸಂಬಂಧಪಟ್ಟ ವಿಷಯವೊಂದು ವೈರಲ್​ ಆಗುತ್ತಿದೆ. 

ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​

ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​

  • Share this:
ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್​ ಮಾಡಲು ಸಹ ಹಣ ಪಡೆಯುತ್ತಾರೆ ಅನ್ನೋದು ಗೊತ್ತಿದೆ. ಈ ಹಿಂದೆ ರಾತ್ರೋರಾತ್ರಿ ಸೆಲೆಬ್ರಿಟಿಯಾದ ಪ್ರಿಯಾ ವಾರಿಯರ್​ ಸಹ ಒಂದು ಪೋಸ್ಟ್​ಗೆ 8 ಲಕ್ಷ ಸಂಭಾವನೆ ಪಡೆಯುತ್ತಾರೆ ಅಂತ ಸುದ್ದಿಯಾಗಿತ್ತು. ಈಗ ಪ್ರಿಯಾಂಕಾ ಚೋಪ್ರಾ ವಿಷಯದಲ್ಲೂ ಸಹ ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದ ಅಪ್ಡೇಟ್​ ಒಂದು ಸುದ್ದಿಯಾಗುತ್ತಿದೆ.

ಬಾಲಿವುಡ್​ನಿಂದ ಹಾಲಿವುಡ್​ಗೆ ಪಯಣ ಬೆಳೆಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸಕ್ರಿಯವಾಗಿರುತ್ತಾರೆ. ಅದರಲ್ಲೂ ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ಪೋಸ್ಟ್​ಗಳನ್ನು ಮಾಡುತ್ತಲೇ ಇರುತ್ತಾರೆ. ಈಗ ಪಿಗ್ಗಿಯ ಇನ್​ಸ್ಟಾಗ್ರಾಂಗೆ ಸಂಬಂಧಪಟ್ಟ ವಿಷಯವೊಂದು ವೈರಲ್​ ಆಗುತ್ತಿದೆ.

  
View this post on Instagram
 

Unstoppable. Fierce. Determined. Hasina is all this and more. I met her during my visit to Ethiopia with @unicef. She blew me away with her grit and purpose, standing up for right to continue going to school and to decide her own future. When her brother-in-law’s friend asked her parents for her hand in marriage, Hasina knew she wasn’t ready for that yet. “How am I going to live marrying a person I don’t even know? Will I ever go back to school again?” She asked herself all these questions and one day, when the man was visiting her house, she escaped and went to one of the community-based prevention centres she had heard about at school. The community, along with the authorities, stepped in and stopped the marriage. Hasina is one of the many girls who dream of a future where every girl can be a girl - not a bride, not a victim of violence or discrimination. Nothing but a powerful, unstoppable girl ready to take on the world. It’s your turn… I’d love to hear your stories of girls you admire and why. Just post in the comments below or using the hashtags below. On #InternationalWomensDay… AND every day, let’s lift every girl up! #W4W #GenerationEquality #EndChildMarriage


A post shared by Priyanka Chopra Jonas (@priyankachopra) on


ಹೌದು, ಇನ್​ಸ್ಟಾಗ್ರಾಂನಲ್ಲಿ ಒಂದು ಬ್ರ್ಯಾಂಡ್​ ಪ್ರಮೋಟ್​ ಮಾಡಲು ಪ್ರಿಯಾಂಕಾ ಕೋಟಿ ಕೋಟಿ ಹಣ ಪಡೆಯುತ್ತಾರಂತೆ. ಒಂದು ಪ್ರಮೋಷನಲ್​ ಪೋಸ್ಟ್​ಗೆ 2 ಕೋಟಿ ಹಣ ಪಡೆಯುತ್ತಾರೆ ಎಂದು 'ಹಾಪರ್​ ಎಚ್​ಕ್ಯೂ' ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Yash-Ayra: ಗುಂಡು ಹೊಡೆಸಿದ್ದಕ್ಕೆ ಅಪ್ಪನನ್ನೇ ಗುರಾಯಿಸಿದ ಆಯ್ರಾ ..!

ಪ್ರಿಯಾಂಕಾಗೆ ಸದ್ಯ ಇನ್​ಸ್ಟಾಗ್ರಾಂನಲ್ಲಿ 50 ಮಿಲಿಯನ್​ ಹಿಂಬಾಲಕರಿದ್ದಾರೆ. ಪ್ರಿಯಾಂಕಾ ಬಾಲಿವುಡ್​ನಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ 'ಸ್ಕೈ ಇಸ್​ ಪಿಂಕ್​'. ಈ ಚಿತ್ರ ಬಾಕ್ಸಾಫಿಸ್​ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಸದ್ಯ ಪ್ರಿಯಾಂಕಾ ಹೋಳಿ ಹಬ್ಬಕ್ಕಾಗಿ ಗಂಡನ ಜೊತೆ ಭಾರತಕ್ಕೆ ಬಂದಿದ್ದಾರೆ.

Deepika Padukone: ಬೋಲ್ಡ್​ ಫೋಟೋಗಳ ಮೂಲಕ ಅಭಿಮಾನಿಗಳ ನಿದ್ದೆಗೆಡಿಸಿರುವ ದೀಪಿಕಾ ಪಡುಕೋಣೆ..!


First published: