• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಎಲ್ಲೆ ಹೋದ್ರೂ.. ಎಲ್ಲೇ ಇದ್ರೂ.. ನಾನು ಭಾರತೀಯೆ: ದೇಶಪ್ರೇಮ ಮೆರೆದ ಪ್ರಿಯಾಂಕ ಚೋಪ್ರಾ!

ಎಲ್ಲೆ ಹೋದ್ರೂ.. ಎಲ್ಲೇ ಇದ್ರೂ.. ನಾನು ಭಾರತೀಯೆ: ದೇಶಪ್ರೇಮ ಮೆರೆದ ಪ್ರಿಯಾಂಕ ಚೋಪ್ರಾ!

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

ನಾನು ಎರಡೂ ಇಂಡಸ್ಟ್ರಿಗಳನ್ನು ಸಮತೋಲನಗೊಳಿಸಲು ಬಯಸುತ್ತೇನೆ ಏಕೆಂದರೆ ಜಗತ್ತಿನಲ್ಲಿ ಕೆಲವೇ ಕೆಲವು ನಟರಿಗೆ ಹಾಗೇ ಮಾಡಲು ಸಾಧ್ಯವಾಗಿದೆ ಎಂದು ಪಿಗ್ಗಿ ಹೇಳಿದ್ದಾರೆ

  • Share this:

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ಸದಾ ತನ್ನ ಬೇರುಗಳಿಗೆ ನಿಷ್ಠರಾಗಿರುವ ಮತ್ತು ತಾನು ಹೋದಲೆಲ್ಲಾ ಭಾರತೀಯ ಸಂಸ್ಕೃತಿಯಿಂದ (Indian culture) ಹೇಗೆ ಸುತ್ತುವರೆಯಲ್ಪಟ್ಟಿದ್ದೇನೆ ಎಂಬ ಕುರಿತು ಮಾತನಾಡಿದ್ದಾರೆ. ತನ್ನ ತಾಯಿ ಮಧು ಚೋಪ್ರಾ ಜೊತೆಗಿನ ಸಾಂಗತ್ಯ ಮತ್ತು ತನ್ನ ‘ಮಂದಿರ’ (ಪೂಜಾಪೀಠ) (Pujapeet) ಮತ್ತು ಉಪ್ಪಿನಕಾಯಿಗಳನ್ನು (Pickles) ಸದಾ ಜೊತೆಗೆ ತೆಗೆದುಕೊಂಡುವುದರ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ‘ಎರಡೂ ಇಂಡಸ್ಟ್ರಿಗಳನ್ನು(Balance both industries) ಸಮತೋಲನಗೊಳಿಸಲು ಬಯಸುತ್ತೇನೆ’ ಎಂದೂ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


ಟ್ರಿನಿಟಿ ಪಾತ್ರ
ಪ್ರಿಯಾಂಕಾ ಚೋಪ್ರಾ ತಮ್ಮ ಮುಂದಿನ ದ ಮೆಟ್ರಿಕ್ಸ್ ರಿಸರೆಕ್ಷನ್ಸ್‌ ಸಿನಿಮಾದ ಪ್ರಚಾರದಲ್ಲಿ ವ್ಯಸ್ಥರಾಗಿದ್ದಾರೆ. ಅವರು ಈ ಸಿನಿಮಾದಲ್ಲಿ ಸಾಟಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಮಾವನ್ನು ಲಾನಾ ವಚಾವ್‍ಸ್ಕಿ ನಿರ್ದೇಶಿಸಿದ್ದಾರೆ. ದ ಮೆಟ್ರಿಕ್ಸ್ ರೆಸರೆಕ್ಷನ್‍ನಲ್ಲಿ ನಿಯೋ ಪಾತ್ರದಲ್ಲಿ ಕಿಯನೋ ರೀವ್ಸ್ ಮತ್ತು ಕ್ಯಾರಿ ಅನ್ನೆ ಮೋಸ್ ಟ್ರಿನಿಟಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಇದನ್ನೂ ಓದಿ: Priyanka Chopra: ನಿಕ್​ ಜೋನಸ್​ ಹೆಂಡ್ತಿ ಎಂದಿದ್ದಕ್ಕೆ ಸಿಟ್ಟಾದ ದೇಸಿ ಗರ್ಲ್​ ಪ್ರಿಯಾಂಕ!


ನನ್ನ ಉಪ್ಪಿನಕಾಯಿ ಯಾವಾಗಲೂ ಜೊತೆ ಇರಲಿದೆ
ನೀವು ನನ್ನನ್ನು ಭಾರತದಿಂದ ಹೊರಗೆ ಕರೆದುಕೊಂಡು ಹೋಗಬಹುದು. ಆದರೆ, ಭಾರತವನ್ನು ನನ್ನೊಳಗಿಂದ ಹೊರಗೆ ತೆಗೆಯಲು ಸಾಧ್ಯವಿಲ್ಲ. ನನ್ನ ಸಂಸ್ಕೃತಿ ನಾನೆಲ್ಲೇ ಇದ್ದರೂ ನನ್ನೊಂದಿಗೆ ಇರುತ್ತದೆ. ನನಗೆ ಮನೆಯಿಂದ ದೂರ ಇದ್ದೇನೆ ಎಂದು ಯಾವತ್ತೂ ಅನಿಸಲೇ ಇಲ್ಲ. ನನ್ನ ಮನೆ ಯಾವಾಗಲೂ ನನ್ನೊಂದಿಗೆ ಇರುತ್ತದೆ, ನನ್ನ ಮಂದಿರ (ಪೂಜಾ ಪೀಠ) ಸದಾ ನನ್ನ ಜೊತೆಗಿರುತ್ತದೆ, ಅಮ್ಮ ಯಾವಾಗಲೂ ನನ್ನ ಜೊತೆಗಿರುತ್ತಾರೆ, ನನ್ನ ಉಪ್ಪಿನಕಾಯಿ ಯಾವಾಗಲೂ ಜೊತೆ ಇರುತ್ತದೆ. ನಾನು ಉತ್ತಮಳು ಎಂದು ನಿಮಗೆ ಗೊತ್ತಿದೆ. ನನಗೆ ಯಾವತ್ತೂ ಹಾಗೆ ಅನಿಸುವುದಿಲ್ಲ” ಎಂದು ಪ್ರಿಯಾಂಕಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.


ಡಿಸೆಂಬರ್ 22ರಂದು ಬಿಡುಗಡೆ
ಮತ್ತು ನನಗೆ ಇದು ತುಂಬಾ ತುಂಬಾ ಕಾರ್ಯತಂತ್ರ ಹೊಂದಿದೆ ಎಂದನಿಸುತ್ತದೆ ಹಾಗೂ ನಾನು ಎರಡೂ ಇಂಡಸ್ಟ್ರಿಗಳನ್ನು ಸಮತೋಲನಗೊಳಿಸಲು ಬಯಸುತ್ತೇನೆ, ಏಕೆಂದರೆ ಜಗತ್ತಿನಲ್ಲಿ ಕೆಲವೇ ಕೆಲವು ನಟರಿಗೆ ಹಾಗೇ ಮಾಡಲು ಸಾಧ್ಯವಾಗಿದೆ” ಎಂದು ಅವರು ಹೇಳಿದ್ದಾರೆ. ದ ಮೆಟ್ರಿಕ್ ರಿಸರೆಕ್ಷನ್ಸ್‌ನ ಈ ನಾಲ್ಕನೇ ಅವತರಣಿಕೆಯು ಡಿಸೆಂಬರ್ 22ರಂದು ಬಿಡುಗಡೆ ಆಗಲಿದ್ದು, ಯಾಹ್ಯ ಅಬ್ದುಲ್ ಮಟೀನ್ ಸೆಕೆಂಡ್, ಜೆಡಾ ಪಿಂಕೆಟ್ ಸ್ಮಿತ್, ಜೆಸಿಕಾ ಹೆನ್ವಿಕ್, ಕ್ರಿಸ್ಟೀನಾ ರಿಕ್ಕಿ, ನೀಲ್ ಪ್ಯಾಟ್ರಿಕ್ ಹ್ಯಾರಿಸ್ ಮತ್ತು ಜೊನಾಥನ್ ಗ್ರೊಫ್ ಮತ್ತಿತರ ತಾರೆಯರು ಅಭಿನಯಿಸಿದ್ದಾರೆ.


ನಿಕ್ ಜೋನಾಸ್ ಪತ್ನಿ
ಇತ್ತೀಚೆಗೆ ಅವರು, ತಮ್ಮನ್ನು ‘ನಿಕ್ ಜೋನಾಸ್ ಪತ್ನಿ’ ಎಂದು ಉಲ್ಲೇಖಿಸಿದ್ದ ಮಾಧ್ಯಮ ವರದಿ ಒಂದರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ವರದಿಯನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಅವರು, ಇದು ಈಗಲೂ ಮಹಿಳೆಯರ ಮೇಲೆ ಏಕೆ ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿದ್ದೇನೆ ಎಂದು ಹೇಳಿದ್ದರು.


ಅತ್ಯಂತ ಆಸಕ್ತಿಯ ವಿಷಯವೆಂದರೆ, ನಾನು ಸರ್ವಕಾಲಿಕ ಅಪ್ರತಿಮ ಸಿನಿಮಾದ ಭಾಗಗಳಲ್ಲಿ ಒಂದರ ಪ್ರಚಾರ ಮಾಡುತ್ತಿದ್ದೇನೆ ಮತ್ತು ನನ್ನನ್ನು ಇನ್ನೂ ‘ಇಂತವರ ಹೆಂಡತಿ. . .’ಎಂದು ಉಲ್ಲೇಖಿಸಲಾಗುತ್ತದೆ. “ ಇದು ಮಹಿಳೆಯರಿಗೆ ಈಗಲೂ ಹೇಗೆ ನಡೆಯುತ್ತಿದೆ ಎಂಬುದನ್ನು ದಯವಿಟ್ಟು ವಿವರಿಸಿ? ನಾನು ನನ್ನ ಬಯೋಗೆ ಐಎಂಡಿಬಿ ಲಿಂಕ್ ಸೇರಿಸಬೇಕೆ?” ಎಂದು ಆಕೆ ಹೇಳಿದ್ದರು.


ಪತ್ತೇದಾರಿ ಸರಣಿ
ಇತ್ತೀಚೆಗೆ ಯುಕೆಯಿಂದ ಯುಎಸ್‍ಗೆ ಹೋಗಿರುವ ಪ್ರಿಯಾಂಕಾ, ಈ ವಾರದ ಆರಂಭದಿಂದ ಕಾರ್ಯಕ್ರಮಗಳು ಮತ್ತು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಪತ್ತೇದಾರಿ ಸರಣಿ ಸಿಟಡೆಲ್‍ನ ಚಿತ್ರೀಕರಣ ಮುಗಿಸಿದ್ದಾರೆ.


ಇದನ್ನೂ ಓದಿ: The Matrix Resurrections ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾದ Priyanka Chopra


ಜಿಮ್ ಸ್ಟ್ರೌಸ್ ಅವರ ಟೆಕ್ಸ್ಟ್‌ ಫಾರ್ ಯು ಸೇರಿದಂತೆ ಹಲವಾರು ಪ್ರಾಜೆಕ್ಟ್‌ಗಳು ಪ್ರಿಯಾಂಕಾ ಕೈಯಲ್ಲಿ ಇವೆ. ಅವರು ಫರ್ಹಾನ್ ಅಖ್ತರ್ ಅವರ ಜೀ ಲೇ ಜರಾ ಸಿನಿಮಾದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಪ್ರಿಯಾಂಕಾ ನಿಕ್ ಜೊತೆಗೆ ಚಿಕನ್ ಅಂಡ್ ಬಿಸ್ಕಿಟ್ಸ್‌ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.

Published by:vanithasanjevani vanithasanjevani
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು