Priyanka Chopra: ಬದಲಾದ Surname ಕುರಿತ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟ ಪ್ರಿಯಾಂಕಾ ಚೋಪ್ರಾ

ನನ್ನ ಪ್ರತಿ ಟ್ವೀಟ್ ಬಗ್ಗೆ ಬಳಕೆದಾರರು ಈ ರೀತಿಯಾಗಿ ವರ್ತಿಸುವುದು ನಿಜಕ್ಕೂ ಖಂಡನೀಯ ಯಾವುದಾದರೂ ಫೋಟೋವನ್ನು ಅಪ್‌ಲೋಡ್ ಮಾಡಿದರೆ ತಮ್ಮದೇ ಆದ ಆಲೋಚನೆ ಅಡಿಯಲ್ಲಿ ಊಹಿಸಲು ಶುರುಮಾಡುತ್ತಾರೆ ಎಂದು ಪಿಗ್ಗಿ ಅಸಮಾಧಾನ ಹೊರಹಾಕಿದ್ದಾರೆ

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ

  • Share this:
ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ (Priyanka Chopra) ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಹೆಸರು ಬದಲಾವಣೆಯ (Name Change) ಬಗ್ಗೆ ಸದಾ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಚೋಪ್ರಾ ಎಂಬ ಹೆಸರನ್ನು ಬದಲಾಯಿಸಿ ತನ್ನ ಪತಿಯಾದ ನಿಕ್ ಜೋನಸ್ (Nick Jonas) ಎಂಬ ಹೆಸರಿನಲ್ಲಿ ಜೋನಸ್ ಎಂಬ ಹೆಸರನ್ನು ಮಾತ್ರ ಉಳಿಸಿಕೊಂಡಿದ್ದರು.ಕಳೆದ ವರ್ಷ ಇ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಿಯಾಂಕಾ ಚೋಪ್ರಾ, "ನನಗೆ ಗೊತ್ತಿಲ್ಲ. ನನ್ನ ಟ್ವಿಟ್ಟರ್‌ ಖಾತೆಯ (Twitter account) ಹೆಸರು ಬದಲಾವಣೆ ಮಾಡಲು ನಾನು ಬಯಸುತ್ತೇನೆ, ನನ್ನ ಖಾತೆಯ ಹೆಸರಿನ ಬದಲಾವಣೆ ಜನರಿಗೆ ಯಾಕೆ ಇಷ್ಟು ದೊಡ್ಡ ವಿಚಾರವಾಗಿ ಮಾರ್ಪಟ್ಟಿದೆ ಎಂಬುದು ನನಗೆ ತಿಳಿದಿಲ್ಲ. ನನಗೆ ಈ ಎಲ್ಲಾ ಸಂಗತಿಗಳು ತಮಾಷೆಯಾಗಿ ಕಾಣುತ್ತಿವೆ ಎಂದು ಅಭಿಮಾನಿಗಳ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರ ವರ್ತನೆ(Disgusted) ಮೇಲೆ ಅಸಮಾಧಾನ ಹೊರಹಾಕಿದ್ದರು.

ನಿಜಕ್ಕೂ ಖಂಡನೀಯ
ಹುಡುಗರೇ, ಇದು ಸಾಮಾಜಿಕ ಮಾಧ್ಯಮ..ಸುಮ್ಮನೆ ಶಾಂತವಾಗಿರಿ ಎಂದು ಹೇಳಿದ ಪ್ರಿಯಾಂಕಾ ಚೋಪ್ರಾ ವ್ಯಾನಿಟಿ ಫೇರ್‌ನ ಮುಖಪುಟದಲ್ಲಿ ಕಾಣಿಸಿಕೊಂಡಾಗ, ಸಾಮಾಜಿಕ ಮಾಧ್ಯಮದಲ್ಲಿ ಹೆಸರು ಬದಲಾವಣೆಯ ಊಹಾಪೋಹಗಳ ಬಗ್ಗೆ ಮಾತನಾಡಿ ಎಲ್ಲಾ ವಿಚಾರಗಳಿಗೂ ತೆರೆ ಎಳೆದಿದ್ದರು ಮತ್ತು ಇತ್ತೀಚಿಗೆ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ ನನ್ನ ಪ್ರತಿ ಟ್ವೀಟ್ ಬಗ್ಗೆ ಬಳಕೆದಾರರು ಈ ರೀತಿಯಾಗಿ ವರ್ತಿಸುವುದು ನಿಜಕ್ಕೂ ಖಂಡನೀಯ.

ಯಾವುದಾದರೂ ಫೋಟೋವನ್ನು ಅಪ್‌ಲೋಡ್ ಮಾಡಿದರೆ ನನ್ನ ಮೇಲೆ ಜನರು ತಮ್ಮ ಗಮನವನ್ನು ಕೇಂದ್ರಕರಿಸುತ್ತಾರೆ ಮತ್ತು ಜನರು ತಮ್ಮದೇ ಆದ ಆಲೋಚನೆ ಅಡಿಯಲ್ಲಿ ಊಹಿಸಲು ಶುರುಮಾಡುತ್ತಾರೆ'' ಎಂದು ಬಳಕೆದಾರರ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: Priyanka Chopra: ಮೇರಿ ಕೋಮ್ ಪಾತ್ರದಲ್ಲಿ ಆ ನಟಿ ನಟಿಸಬೇಕಿತ್ತು ಎಂದ ಪ್ರಿಯಾಂಕಾ ಛೋಪ್ರಾ..! ಯಾಕೆ ಅಂತ ಇಲ್ಲಿದೆ ನೋಡಿ..

ಜೀವನ ಮುಖ್ಯ
ಇದು ಕೇವಲ ವೃತ್ತಿಪರ ಅಪಾಯವಾಗಿದೆ. ಸಾಮಾಜಿಕ ಮಾಧ್ಯಮದ ಶಬ್ದವು ನಮ್ಮ ಜೀವನದಲ್ಲಿ ವ್ಯಾಪಾಕವಾಗಿ ಹರಡಿರುವ ಕಾರಣ ಜೀವನಕ್ಕಿಂತ ಸಾಮಾಜಿಕ ಮಾಧ್ಯಮ ಪ್ರಪಂಚ ದೊಡ್ಡದಾಗಿದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಿಜ ಜೀವನ ಸಾಮಾಜಿಕ ಮಾಧ್ಯಮಕ್ಕಿಂತ ನಂಬಿಕೆಯ ಮೇಲಿದೆ. ಹಾಗಾಗಿ ನಮಗೆ ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಸಾಮಾಜಿಕ ಮಾಧ್ಯಮಕ್ಕಿಂತ ಜೀವನ ಮುಖ್ಯ ಎಂದು ಭಾವಿಸುತ್ತಾರೆ ಚೋಪ್ರಾ.

ಊಹೆಗಳಿಗೆ ಫುಲ್ ಸ್ಟಾಪ್
ನಟಿ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಿಂದ ತನ್ನ ಉಪನಾಮ ಚೋಪ್ರಾ ಮತ್ತು ಪತಿ ನಿಕ್ ಜೋನಾಸ್ ಅವರ ಉಪನಾಮ ಜೋನಾಸ್ ಅನ್ನು ಕೈಬಿಟ್ಟ ನಂತರ, ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಲು ಪ್ರಾರಂಭವಾದವು. ಆದಾಗ್ಯೂ, ಅವರು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರಿಗೂ ಖಚಿತತೆಯ ಸಂದೇಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚುವ ಮೂಲಕ ವಿಚ್ಛೆದನದ ಮೇಲಿನ ಜನರ ಊಹೆಗಳಿಗೆ ಫುಲ್ ಸ್ಟಾಪ್ ಇಟ್ಟರು.

ಇದನ್ನೂ ಓದಿ: Priyanka Chopra: ಪ್ರಿಯಾಂಕಾ, ನಿಕ್ ಜೊತೆ ಆರತಿ ಬೆಳಗಿದ ಮಹಿಳೆಯ ಮಾಹಿತಿ ಇಲ್ಲಿದೆ

ನವೆಂಬರ್‌ನಲ್ಲಿ, ಪ್ರಿಯಾಂಕಾ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಪ್ರಿಯಾಂಕಾ ಮತ್ತು ನಿಕ್ ಅವರ ವಿಚ್ಛೇದನದ ಬಗ್ಗೆ ವದಂತಿಗಳನ್ನು ಉದ್ದೇಶಿಸಿ ನ್ಯೂಸ್ 18 ಗೆ ಪ್ರತಿಕ್ರಿಯಿಸಿದ ಅವರು,"ಇದೆಲ್ಲವೂ ಸುಳ್ಳು, ವದಂತಿಗಳನ್ನು ಹರಡಬೇಡಿ'' ಎಂದು ಮನವಿ ಮಾಡಿದ್ದರು.

ಪ್ರಿಯಾಂಕಾ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್‌ನಲ್ಲೂ ಸಹ ತಮ್ಮ ನಟನೆಯ ಛಾಪನ್ನು ಒತ್ತುತ್ತಿದ್ದಾರೆ. ಹೊಸ ವರ್ಷದ ಸಂಭ್ರಮವನ್ನು ತಮ್ಮ ಪತಿ ನಿಕ್ ಜೋನಸ್ ಜೊತೆ ಆಚರಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಅಲ್ಲದೇ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಮಹಿಳೆ ಎಂಬ ಖ್ಯಾತಿಗೂ ಇವರು ಪಾತ್ರರಾಗಿದ್ದರು
Published by:vanithasanjevani vanithasanjevani
First published: