ಇತ್ತೀಚೆಗೆ ಈ ಸೆಲೆಬ್ರಿಟಿಗಳು (Celebrities) ತಮ್ಮ ಪುಟ್ಟ ಮಕ್ಕಳ ಫೋಟೋಗಳನ್ನು (Children Photos) ಸ್ವಲ್ಪ ದೊಡ್ಡವರಾಗುವವರೆಗೂ ಬಹಿರಂಗವಾಗಿ ಎಲ್ಲಿಯೂ ಹಂಚಿಕೊಳ್ಳುವುದಿಲ್ಲ ಮತ್ತು ಆ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿಕೊಂಡರೂ ಆ ಮುಖಗಳಿಗೆ ಎಮೋಜಿಗಳನ್ನು ಹಾಕುತ್ತಾರೆ. ಅಭಿಮಾನಿಗಳಿಗಂತೂ ತಮ್ಮ ನೆಚ್ಚಿನ ಸೆಲೆಬ್ರಿಟಿಯ ಮಗುವಿನ ಮುಖವನ್ನು ಬಹಿರಂಗಪಡಿಸುವ ಒಂದು ಫೋಟೋ ನೋಡಿದರೂ ಸಾಕು ಅಂತ ತುಂಬಾನೇ ಕಾತುರತೆಯಿಂದ ಕಾಯುತ್ತಿರುತ್ತಾರೆ ಅಂತ ಹೇಳಬಹುದು. ಇಲ್ಲೊಬ್ಬ ಬಾಲಿವುಡ್ ನಟಿ (Bollywood Actress) ಸಹ ತನ್ನ ಪುಟ್ಟ ಮಗುವಿನ ಮುಖವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ.
ಮಗಳ ಮುಖವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ ನಟಿ
ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ತಮ್ಮ ಮಗಳು ಮಾಲ್ಟಿ ಮೇರಿಯ ಮುಖವನ್ನು ಇದುವರೆಗೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಗಳಲ್ಲಿ ಮರೆಮಾಚುತ್ತಲೇ ಬಂದಿದ್ದಾರೆ. ಜನವರಿ 30 ರಂದು ಎಂದರೆ ನಿನ್ನೆ ಈ ದಂಪತಿಗಳು ಮೊದಲ ಬಾರಿಗೆ ಪುಟ್ಟ ಮಾಲ್ತಿ ಮೇರಿಯ ಮುಖವನ್ನು ಕ್ಯಾಮೆರಾ ಎದುರು ಬಹಿರಂಗಪಡಿಸಲು ನಿರ್ಧರಿಸಿದರು.
ನಿಕ್ ಮತ್ತು ಅವರ ಸಹೋದರರು ಹಾಲಿವುಡ್ ವಾಕ್ ಆಫ್ ಫೇಮ್ ಸ್ಟಾರ್ಸ್ ಪ್ರಶಸ್ತಿಗಳನ್ನು ಸ್ವೀಕರಿಸಿದರು ಮತ್ತು ಪ್ರಿಯಾಂಕಾ ತನ್ನ ಒಂದು ವರ್ಷದ ಮಗಳು ಮಾಲ್ಟಿಯೊಂದಿಗೆ ಅವರನ್ನು ಹುರಿದುಂಬಿಸಿದರು. ಈಗ ಈ ಪುಟ್ಟ ಮಗುವಿನ ಫೋಟೋಗಳು ಮತ್ತು ವೀಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿವೆ ಅಂತ ಹೇಳಬಹುದು.
ಈ ಹಿಂದೆ ಮಗಳೊಂದಿಗೆ ಫೋಟೋಶೂಟ್ ಮಾಡಿಸಿಕೊಂಡ ನಟಿ
ಇತ್ತೀಚೆಗೆ, ನಟಿ ಪ್ರಿಯಾಂಕಾ ತಮ್ಮ ಮಗಳು ಮಾಲ್ಟಿ ಅವರೊಂದಿಗೆ ತನ್ನ ಮೊದಲ ಫೋಟೋಶೂಟ್ ಅನ್ನು ಮಾಡಿಸಿಕೊಂಡಿದ್ದರು. ಬಾಡಿಗೆ ತಾಯ್ತನವನ್ನು ಆರಿಸಿಕೊಳ್ಳುವ ಬಗ್ಗೆ ಮತ್ತು ಮಾಲ್ಟಿ ಆ ಸಮಯವನ್ನು ಹೇಗೆ ಸಮರ್ಥವಾಗಿ ಎದುರಿಸಿದಳು ಎಂಬುದರ ಬಗ್ಗೆ ಪ್ರಿಯಾಂಕಾ ಅವರು ಮಾತನಾಡಿದರು.
ನಿಕ್ ಮತ್ತು ಅವರ ಸಹೋದರರು ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಫೋಟೋವನ್ನು ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ ಮತ್ತು "ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ.. ನನ್ನ ಪ್ರೀತಿ ಮತ್ತು ಅಭಿನಂದನೆಗಳು ನಿಮಗೆ" ಎಂದು ಬರೆದುಕೊಂಡಿದ್ದಾರೆ.
ಅವರು ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಮಾಲ್ಟಿಯನ್ನು ತನ್ನ ತೋಳುಗಳಲ್ಲಿ ಹಿಡಿದಿರುವುದನ್ನು ಮತ್ತು ನಿಕ್ ಭಾಷಣ ಮಾಡುತ್ತಿರುವುದನ್ನು ಕಾಣಬಹುದು.
ಪ್ರಶಸ್ತಿ ಪಡೆದ ನಂತರ ನಿಕ್ ಹೇಳಿದ್ದಾದ್ರೂ ಏನು?
ತಮ್ಮ ಭಾಷಣದಲ್ಲಿ, ನಿಕ್ ಅವರು ಪ್ರಿಯಾಂಕಾ ಮತ್ತು ಮಗಳು ಮಾಲ್ಟಿಗೆ ಧನ್ಯವಾದ ಅರ್ಪಿಸಿದರು. "ನನ್ನ ಸುಂದರ ಹೆಂಡತಿಯನ್ನು ಮದುವೆಯಾಗಿರುವ ಕ್ಷಣವನ್ನು ತುಂಬಾನೇ ಇಷ್ಟಪಡುತ್ತೇನೆ.
ಅದು ನನ್ನ ಜೀವನದಲ್ಲಿಯೇ ಅತ್ಯಂತ ದೊಡ್ಡ ಉಡುಗೊರೆಯಾಗಿತ್ತು. ಅಷ್ಟೇ ಅಲ್ಲದೆ ನಾನು ಪೋಷಕರಾಗಲು ಸಹ ಇಷ್ಟಪಟ್ಟೆ. ಆದ್ದರಿಂದ ಮಾಲ್ಟಿ ಮೇರಿ ನಮ್ಮ ಜೀವನದಲ್ಲಿ ಬಂದಳು.
ಮಾಲ್ಟಿ ಬೇಬಿ 15 ವರ್ಷಗಳ ನಂತರ ಮತ್ತೆ ನಾನು ನಿನ್ನೊಂದಿಗೆ ಇಲ್ಲಿಗೆ ಬಂದು ನಿನ್ನ ಸ್ನೇಹಿತರ ಮುಂದೆ ನಿನ್ನನ್ನು ಮುಜುಗರಕ್ಕೀಡು ಮಾಡಲು ನಾನು ಕಾಯಲು ಸಾಧ್ಯವಿಲ್ಲ” ಎಂದು ಹೇಳಿದರು.
ಬಾಡಿಗೆ ತಾಯ್ತನವನ್ನು ಆರಿಸಿಕೊಂಡಿದ್ದರ ಬಗ್ಗೆ ಪ್ರಿಯಾಂಕಾ ಹೇಳಿದ್ದೇನು?
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಜನವರಿ 2022 ರಲ್ಲಿ ಬಾಡಿಗೆ ತಾಯಿಯ ಮೂಲಕ ಸುಂದರ ಮಗಳನ್ನು ಸ್ವಾಗತಿಸಿದರು. ಪುಟ್ಟ ಮಗು ತನ್ನ ಅವಧಿಗೆ ಮುಂಚಿತವಾಗಿ ಜನಿಸಿದ್ದರಿಂದ ಎನ್ಐಸಿಯುನಲ್ಲಿ 100ಕ್ಕೂ ಹೆಚ್ಚು ದಿನಗಳನ್ನು ಕಳೆದಳು.
ಇತ್ತೀಚೆಗೆ, ಅವರು ಬಾಡಿಗೆ ತಾಯ್ತನವನ್ನು ಏಕೆ ಆರಿಸಿಕೊಂಡರು ಎಂದು ವೋಗ್ ಗೆ ತಿಳಿಸಿದರು. "ನನಗೆ ವೈದ್ಯಕೀಯ ತೊಂದರೆಗಳಿದ್ದವು. ಇದು ತುಂಬಾನೇ ಅಗತ್ಯವಾದ ನಿರ್ಧಾರವಾಗಿತ್ತು ಮತ್ತು ನಾನು ಅಂದುಕೊಂಡ ಹಾಗೆಯೇ ಎಲ್ಲವೂ ನಡೆದಿದ್ದರಿಂದ ನಾನು ತುಂಬಾ ಕೃತಜ್ಞಳಾಗಿದ್ದೇನೆ" ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ