Priyanka Chopra & ನಿಕ್ ಜೋನಸ್ ದಾಂಪತ್ಯದಲ್ಲಿ ಬಿರುಕು..? ಸಮಂತಾರಂತೆ ಗುಟ್ಟು ಬಿಟ್ಟುಕೊಟ್ಟರಾ?

ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ. ಇದರೊಂದಿಗೆ ಪಿಗ್ಗಿ ನಿಕ್ ದಾಂಪತ್ಯದಲ್ಲಿ ಬಿರುಕು ಮೂಡಿರಬಹುದೇ, ಈ ಜೋಡಿಯೂ ಕೂಡ ವಿಚ್ಚೇದನ ಪಡೆಯಲಿದೆಯೇ ಎಂದು ಗುಸುಗುಸು ಶುರುವಾಗಿದೆ.

ನಿಕ್‌ ಜೊತೆ ಪಿಗ್ಗಿ

ನಿಕ್‌ ಜೊತೆ ಪಿಗ್ಗಿ

  • Share this:
    ಬಾಲಿವುಡ್‌ ನ ದೇಸಿ ಗರ್ಲ್‌, ಹಾಗೂ ಹಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ (Bollywood's Desi Girland Hollywood actress Priyanka Chopra) ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಪತಿ ನಿಕ್ ಜೋನಸ್ ಅವರ ಹೆಸರನ್ನು ತೆಗೆದುಹಾಕಿದ್ದು, ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ(break up) ಎಂಬ ಸುದ್ದಿ ಎಲ್ಲೆಡೆ ಭಾರಿ ವೇಗವಾಗಿ ಹರಿದಾಡುತ್ತಿದೆ. ಸುದ್ದಿ ಹರಿದಾಡುತ್ತಿದ್ದಂತೆ ಅಭಿಮಾನಿಗಳು ಇತ್ತೀಚೆಗೆ ಸಕತ್‌ ಗಮನ ಸೆಳೆದಿದ್ದ ಜೋಡಿ ಮೇಲೆ ಯಾರ ಕಣ್ಣು ಬಿತ್ತಪ್ಪ ಎಂದು ಕಮೆಂಟ್‌ ಮಾಡುತ್ತಿದ್ದಾರೆ. ವಯಸ್ಸಿನ ಅಂತರವಿದ್ರೂ ಪಾಪ್ ಸ್ಟಾರ್ ನಿಕ್ ಜೋನಾಸ್ (Nick Jonas')ಜೊತೆ ಸುಖಸಂಸಾರ ಮಾಡಿಕೊಂಡು ಹೋಗಿದ್ದ ಪ್ರಿಗ್ಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿ ಹಾಗು ಕನಸಿನ ಬಗ್ಗೆ ಸಾಕಷ್ಟು ಶೇರ್‌ ಮಾಡಿಕೊಂಡು ಸಂಭ್ರಮಪಟ್ಟಿದ್ದರು.

    ಇದನ್ನು ಓದಿ:ಭಾರತೀಯಳಾಗಿದ್ದರ ಲಾಭ ಏನು? ಪ್ರಶ್ನೆಗೆ Priyanka Chopra ಉತ್ತರ ಹೇಳಿದ ವಿಡಿಯೋ ವೈರಲ್

    ಅಭಿಮಾನಿಗಳಲ್ಲಿ ಆತಂಕ
    ಆದರೆ ಈಗ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ. ((Nick Jonas' name on their Instagram account are rampant)ಇದರೊಂದಿಗೆ ಪಿಗ್ಗಿ ನಿಕ್ ದಾಂಪತ್ಯದಲ್ಲಿ ಬಿರುಕು (break up)ಮೂಡಿರಬಹುದೇ, ಈ ಜೋಡಿಯೂ ಕೂಡ ವಿಚ್ಚೇದನ ಪಡೆಯಲಿದೆಯೇ ಎಂದು ಗುಸುಗುಸು ಶುರುವಾಗಿದೆ. ಭಾರತದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ಪ್ರಿಯಾಂಕಾ ಚೋಪ್ರಾ ಇನ್‍ಸ್ಟಾಗ್ರಾಂನಲ್ಲಿ(Instagram) ತಮ್ಮ ಹೆಸರಿನ ಜೊತೆಗೆ ಜೋನಾಸ್ ಎಂದು ಸೇರಿಸಿಕೊಂಡಿದ್ದರು. ಇಂದು ಜೋನಾಸ್ ಹೆಸರನ್ನು ತೆಗೆದುಹಾಕಿರುವುದು ತೀವ್ರ ಕುತೂಹಲ ಮೂಡಿಸಿದೆ. ಅಲ್ಲದೆ ಪ್ರಿಯಾಂಕ ಅವರ ಈ ನಡೆ ಸಾವಿರಾರು ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿದೆ.

    ವದಂತಿ ತಳ್ಳಿ ಹಾಕಿದ ತಾಯಿ(The mother who dismissed the rumor)
    ಈ ವದಂತಿ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಅವರು ಪ್ರತಿಕ್ರಿಯಿಸಿ ಇಬ್ಬರ ಮಧ್ಯೆ  ಬಿರುಕು ಉಂಟಾಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಸದ್ಯ ಪ್ರಿಯಾಂಕಾ ಅವರ ಇನ್‌ಸ್ಟಾಗ್ರಾಮ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಬದಲಿಗೆ ಅವರ ಮೊದಲ ಹೆಸರನ್ನು ಮಾತ್ರ ಹೊಂದಿದೆ. ಬದಲಾವಣೆಯ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ದೀಪಾವಳಿ ಆಚರಿಸಿದ ದಂಪತಿ(The couple celebrating Diwali)
    ಪ್ರಿಯಾಂಕಾ ಪಾಪ್ ಸ್ಟಾರ್ ನಿಕ್ ಜೋನಾಸ್ ಅವರನ್ನು 2018 ಡಿಸೆಂಬರ್ 1ರಂದು ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರಿಯಾಂಕಾ ಅಮೆರಿಕಾದಲ್ಲಿ ನೆಲಸಿದ್ದಾರೆ. ನಿಕ್‌ ನಿಶ್ಚಿತಾರ್ಥಕ್ಕಾಗಿ ಸುಮಾರು $2,00,000 ಬೆಲೆಯ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು. ಇತ್ತೀಚಿಗಷ್ಟೆ ಹೊಸ ಮನೆಯನ್ನು ಖರೀದಿಸಿ. ಅಲ್ಲಿ ಪ್ರಿಯಾಂಕಾ ದೀಪಾವಳಿಯನ್ನು ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿಯ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಈ ಬಾರಿಯ ದೀಪಾವಳಿ ತುಂಬಾ ಸ್ಪೆಷಲ್ ಎನ್ನುವ ಸಂದೇಶವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಇನ್ನು ನಿಕ್‌ ಕೂಡ ಭಾರತೀಯ ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಪರಿಚಯಿಸಿದ್ದಕ್ಕಾಗಿ ಪ್ರಿಯಾಂಕಾ ಅವರಿಗೆ ಧನ್ಯವಾದ ಅರ್ಪಿಸಿದ್ದರು. ಇದಲ್ಲದೇ ನ್ಯೂಯಾರ್ಕ್‍ನಲ್ಲಿ ರೆಸ್ಟೋರೆಂಟ್ ಆರಂಭಿಸಿ. ಸೋನಾ ಎಂದು ಹೆಸರು ಇಟ್ಟಿದ್ದಾರೆ. ಇದು ಕೇವಲ ರೆಸ್ಟೋರೆಂಟ್ ಮಾತ್ರವಲ್ಲ, ನನ್ನ ಕನಸು ಕೂಡ ಎಂದಿದ್ದರು.

    ಇದನ್ನು ಓದಿ:2 ಕೋಟಿ ಮೌಲ್ಯದ ನಿಶ್ಚಿತಾರ್ಥದ ಉಂಗುರ ಅಂದ್ರೆ Priyanka Chopra Jonasಗೆ ತುಂಬಾ ಇಷ್ಟ ಏಕೆ ಗೊತ್ತಾ..?

    ಸಮಾಂತ ಮಾಡಿದ್ದು ಹೀಗೆ(This is what Samantha did)
    ಇತ್ತೀಚಿಗೆ ಟಾಲಿವುಡ್‌ನಲ್ಲಿ ಭಾರಿ ಸದ್ದು ಮಾಡುದ್ದ ನಟ ನಾಗಚೈತನ್ಯ ಹಾಗೂ ನಟಿ ಸಮಂತಾದ ವಿಚ್ಚೇದನ ಪ್ರಕರಣ ಇದೇ ರೀತಿ ಸುದ್ದಿ ಮಾಡಿತ್ತು.ನಾಗಚೈತನ್ಯ ಅವರಿಂದ ವಿಚ್ಚೇದನ ಪಡೆದ ಸಮಂತಾ ಕೂಡಾ ತಮ್ಮ ವಿಷಯ ಬಹಿರಂಗಪಡಿಸುವ ಮೊದಲು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿನ ಹೆಸರಿನಿಂದ ನಾಗಚೈತನ್ಯ ಅವರ ಹೆಸರನ್ನು ತೆಗೆದು ಹಾಕಿದ್ದನ್ನು ಇಲ್ಲಿ ನೆನೆಪಿಸಿಕೊಳ್ಳಬೇಕು.
    Published by:vanithasanjevani vanithasanjevani
    First published: