ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಂಡ ಗ್ಲೋಬಲ್ ಸ್ಟಾರ್ (Global Star) ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ನಿಕ್ ಜೋನಾಸ್ (Nick Jonas) ತಮ್ಮ ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಾಸ್ (Malti Meri Chopra Jonas) ಎಂದು ಹೆಸರಿಟ್ಟು ನಾಮಕರಣ ಮಾಡಿದ್ದಾರೆ. ಮೂರು ತಿಂಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ದಂಪತಿ ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡು ಸುದ್ದಿಯಾಗಿದ್ದರು, ಇದೀಗ ತಮ್ಮ ಮಗಳಿಗೆ ವಿಭಿನ್ನವಾದ ಹೆಸರಿಡುವ ಮೂಲಕ ಟ್ರೋಲ್ (Troll) ಆಗಿದ್ದಾರೆ. ಪಿಗ್ಗಿಯ ಮಗಳ ಹೆಸರು ಸಾಮಾಜಿಕ ಜಾಲತಾಣ (Social Media) ದಲ್ಲಿ ಟ್ರೋಲ್ ಆಗುತ್ತಿದ್ದು, ಹಾಸ್ಯಭರಿತ ಮೀಮ್ಸ್ಗಳು ಹರಿದಾಡುತ್ತಿವೆ.
ಸರೋಗಸಿ ಮೂಲಕ ಮಗು ಪಡೆದಿದ್ದ ಪಿಗ್ಗಿ-ನಿಕ್!
ಕಳೆದ ಜನವರಿ 22ರಂದು ಸೋಶಿಯಲ್ ಮೀಡಿಯಾ ಮೂಲಕ ಮಗಳ ಜನನದ ಕುರಿತು ದಂಪತಿಗಳು ಬಹಿರಂಗಪಡಿಸಿದ್ದರು, "ಸರೋಗಸಿ ಮೂಲಕ ನಾವು ನಮ್ಮ ಮಗುವನ್ನು ಸ್ವಾಗತಿಸಿದ್ದೇವೆ. ಈ ವಿಶೇಷ ಸಮಯದಲ್ಲಿ ನಾವು ನಮ್ಮ ಕುಟುಂಬದ ಮೇಲೆ ಕೇಂದ್ರೀಕರಿಸಲು ಮತ್ತು ಗೌಪ್ಯತೆ ಕಾಪಾಡಲು ಸಹಕರಿಸಿ” ಅಂತಾ ಪ್ರಿಯಾಂಕಾ ತಮ್ಮ ಪೋಸ್ಟ್ನಲ್ಲಿ ಕೇಳಿಕೊಂಡಿದ್ದರು.
ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಎಂದು ಹೆಸರಿಟ್ಟ ನಟಿ!
ಪ್ರಿಯಾಂಕ ಮಗಳ ಜನನ ಪ್ರಮಾಣಪತ್ರದ ಪ್ರಕಾರ, ಜನವರಿ 15ರಂದು ರಾತ್ರಿ 8 ಗಂಟೆಗೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ ಎಂದು ತಿಳಿದುಬಂದಿದೆ. ಈವರೆಗೂ ದಂಪತಿಗಳು ಅವರು ಮಗುವಿನ ಫೋಟೋವನ್ನು ಎಲ್ಲೂ ಬಹಿರಂಗ ಪಡಿಸಿಲ್ಲ. ಬಾಡಿಗೆ ತಾಯಿ ಮೂಲಕ ಹೆಣ್ಣು ಮಗು ಪಡೆದಿರುವ ಅವರು ತಮ್ಮ ಮುದ್ದು ಮಗಳಿಗೆ ನಾಮಕರಣ ಮಾಡಿದ್ದಾರೆ ಎನ್ನಲಾಗಿದೆ. ಪ್ರಿಯಾಂಕಾ ಚೋಪ್ರಾ ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರು ಇಟ್ಟಿದ್ದಾರೆ ಎಂದು ಹಲವೆಡೆ ವರದಿಯಾಗಿದೆ. ನೆಟ್ಟಿಗರು ಮಾಲ್ತಿ ಮೇರಿ ಚೋಪ್ರಾ ಜೋನಸ್ ಹೆಸರಿನ ಬಗ್ಗೆ ಸದ್ಯ ಹಾಸ್ಯಭರಿತವಾಗಿ ಟ್ರೋಲ್ ಮಾಡುತ್ತಿದ್ದಾರೆ.
'ಪಿನ್ಕೋಡ್ ಕೂಡ ಸೇರಿಸಿ’ ಎಂದ ನೆಟ್ಟಿಗರು
ಒಬ್ಬರು ನೆಟ್ಟಿಗರು ಮಾಲ್ತಿ ಮೇರಿ ಚೋಪ್ರಾ ಜೋನಸ್ ಒಳ್ಳೆಯ ಹೆಸರಾಗಿದ್ದು, ಹೆಸರಿನ ಜೊತೆ ಪಿನ್ ಕೋಡ್ ಸೇರಿಸಿದರೆ ಪೂರ್ತಿ ವಿಳಾಸವೇ ಆಗಿ ಬಿಡುತ್ತದೆ ಎಂದಿದ್ದಾರೆ. ಹೆಸರು ತುಂಬಾ ಉದ್ದವಾಗಿದೆ, ಅಪ್ಪ, ಅಮ್ಮನ ಹೆಸರು ಸೇರಿಕೊಂಡಿದೆ ಜೊತೆಗೆ ಪಿನ್ ಕೋಡ್ ಒಂದನ್ನು ಹಾಕಿದರೆ ಪೂರ್ತಿ ವಿಳಾಸವೇ ಸಿಗುತ್ತದೆ ಎಂಬ ಅರ್ಥದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ದಕ್ಷಿಣದ ಈ ತಿಂಡಿ ಅಂದ್ರೆ ಶಾಹಿದ್ಗೆ ಪಂಚಪ್ರಾಣ, ಮೂರು ಹೊತ್ತು ಇದನ್ನೇ ಕೊಟ್ರು ತಿಂತಾರಂತೆ!
ಇನ್ನೊಂದು ಮೀಮ್ಸ್ನಲ್ಲಿ ಹೆಸರಿನ ಅರ್ಥ ಸ್ವಲ್ಪ ಹೇಳಿ ಎಂದು ಬರೆದಿದ್ದಾರೆ. ಮತ್ತೊಂದು ಮೀಮ್ಸ್ನಲ್ಲಿ ಹೆಸರನ್ನು ಬಹು ಆಯ್ಕೆಯ ಪ್ರಶ್ನೆಯ ರೀತಿ ಉಲ್ಟಾ ಪಲ್ಟಾ ಕೇಳುವ ರೀತಿಯಲ್ಲಿದೆ. ಇನ್ನೊಂದು ಟ್ರೋಲ್ ಪ್ರಿಯಾಂಕಾ ಮಗಳು ದೊಡ್ಡವಳಾದ ಮೇಲೆ ಅವಳು ತನ್ನ ಹೆಸರಿನ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬುದನ್ನು ತೋರಿಸಿದೆ. ಹೀಗೆ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಪ್ರಿಯಾಂಕಾ ಮತ್ತು ನಿಕ್ ಮಗಳ ಮಾಲ್ತಿ ಮೇರಿ ಚೋಪ್ರಾ ಜೋನಸ್ ಹೆಸರು ಟ್ರೋಲ್ ಆಗುತ್ತಿದೆ.
ಮಾಲ್ತಿ ಮೇರಿ ಚೋಪ್ರಾ ಜೋನಸ್ ಹೆಸರಿನ ಅರ್ಥವೇನು?
ಮಾಲ್ತಿಯು ಸಂಸ್ಕೃತ ಮೂಲದ ಪದವಾಗಿದ್ದು, ಹೂವಿನ ಸುವಾಸನೆ, ಬೆಳದಿಂಗಳು ಎಂಬರ್ಥವಿದೆ. ಮೇರಿ ಎಂದರೆ ಲ್ಯಾಟಿಲ್ ಸ್ಟೆಲ್ಲಾ ಮೇರಿಸ್ ಎಂದರ್ಥ, ಅಂದರೆ ಸಮುದ್ರದ ತಾರೆ. ಫ್ರೆಂಚ್ನಲ್ಲಿ ಜೀಸಸ್ ತಾಯಿ ಎಂಬರ್ಥ ಕೂಡ ಇದೆ. ಮಾಲ್ತಿ ಪ್ರಿಯಾಂಕಾ ಅವರ ತಾಯಿ ಮಧು ಚೋಪ್ರಾ ಅವರ ಹೆಸರಿನ ಭಾಗವಾಗಿದೆ ಎಂದು ಸಹ ಹೇಳಲಾಗುತ್ತಿದೆ.
ಇದನ್ನೂ ಓದಿ: ಈ ಯುವ ನಟನ ಜೊತೆ ಅಮಿತಾಭ್ ಬಚ್ಚನ್ ಮೊಮ್ಮಗಳು ಡೇಟಿಂಗ್? ವಿಷಯ ಗೊತ್ತಾದ್ರೆ ಸುಮ್ನೆ ಬಿಡ್ತಾರಾ?
ಅವಧಿಪೂರ್ವವಾಗಿ ಜನಿಸಿತ್ತು ಮಗು
ಸ್ವತಃ ಗರ್ಭ ಧರಿಸಲು ಪ್ರಿಯಾಂಕಾ ಚೋಪ್ರಾ ಅವರಿಗೆ ದೈಹಿಕವಾಗಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಪ್ರಿಯಾಂಕಾ ಮತ್ತು ನಿಕ್ ದಂಪತಿಗಳು ಬಹಳ ಸಮಯದಿಂದ ಮಗುವನ್ನು ಪಡೆಯಲು ಬಯಸಿದ್ದರೂ ಸಹ ಅವರ ಬ್ಯುಸಿ ಶೆಡ್ಯೂಲ್ನಿಂದ ಇದು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು SoCal ಏಜೆನ್ಸಿಯನ್ನು ಸಂಪರ್ಕಿಸಿದ್ದರು. ಬಾಡಿಗೆ ತಾಯಿಯು ಏಪ್ರಿಲ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೂರು ತಿಂಗಳು ಮುಂಚಿತವಾಗಿ ಅಂದರೆ ಜನವರಿಯಲ್ಲಿ ಅವಧಿಪೂರ್ವವಾಗಿ ಈ ಮಗು ಜನಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ