ಟಾಲಿವುಡ್ ನಟಿ ಸಮಂತಾ ನಂತರ ಸಾಮಾಜಿಕ ಜಾಲತಾಣದಲ್ಲಿ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿದ್ದ ಪತಿಯ ಮನೆಯ ಹೆಸರನ್ನು (Priyanka Chopra Remove Surname) ತೆಗೆದು ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ . ಅಷ್ಟೇ ಅಲ್ಲ ಪತಿಯ ಮನೆಯ ಹೆಸರಿನ ಜೊತೆಗೆ ಚೋಪ್ರಾ ಹೆಸರನ್ನೂ ತೆಗೆದು ಹಾಕಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಸ್ ಅವರಿಂದ ವಿಚ್ಛೇದನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಪ್ ಗಾಯಕ ನಿಕ್ ಜೋನಸ್ ಹಾಗೂ ಪ್ರಿಯಾಂಕಾ ಚೋಪ್ರಾ ಅವರ ದಾಂಪತ್ಯದಲ್ಲಿ (Priyanka Nick Relation) ಏನೂ ಸರಿಯಿಲ್ಲ ಅನ್ನೋ ಮಾತುಗಳೂ ಆಗಾಗ ಕೇಳಿ ಬರುತ್ತಲೇ ಇವೆ.
ಪ್ರಿಯಾಂಕಾ ಚೋಪ್ರಾ ಅವರ ದಾಂಪತ್ಯ ವಿಚ್ಛೇದನದಲ್ಲಿ ಅಂತ್ಯವಾಗಲಿದೆ ಎಂದು ಹೇಳಲಾಗುತ್ತಿರುವ ಈ ಸಮಯದಲ್ಲೇ ಪ್ರಿಯಾಂಕಾ ಚೋಪ್ರಾ ಅವರು ತಾವೇ ಈ ಎಲ್ಲ ಸುದ್ದಿಗಳಿಗೆ ಸಂಬಂಧಿಸಿದಂತೆ ಒಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೋಡಿದ್ರೆ ಸಾಕು ಅವರ ದಾಂಪತ್ಯ ಉಳಿಯುತ್ತಾ ಅಥವಾ ಮುರಿಯುತ್ತಾ ಅನ್ನೋದು ತಿಳಿಯಲಿದೆ.
ಹೌದು, ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಸ್ ಅವರ ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡಿದ್ದಾರೆ. ಈ ಸೆಲೆಬ್ರಿಟಿ ದಂಪತಿ ಆಗಾಗ ಒಬ್ಬರ ಪೋಸ್ಟ್ಗಳಿಗೆ ಮತ್ತೊಬ್ಬರು ಕಮೆಂಟ್ ಮಾಡುತ್ತಿರುತ್ತಾರೆ. 11 ಗಂಟೆಗಳ ಹಿಂದೆ ನಿಕ್ ಜೋನಸ್ ಮಾಡಿರುವ ಪೋಸ್ಟ್ಗೆ ಪ್ರಿಯಾಂಕಾ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ರಿವೀಲ್ ಆಯ್ತು Nikhil Kumaraswamy ಅಭಿನಯದ Rider ಚಿತ್ರದ ರಿಲೀಸ್ ಡೇಟ್..!
ನಿಕ್ ಜೋನಸ್ ತಮ್ಮ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ಪ್ರಿಯಾಂಕಾ ಡ್ಯಾಮ್ ಐ ಜಸ್ಟ್ ಡೈಡ್ ಇನ್ ಯುರ್ ಆರ್ಮ್ಸ್ ಎಂದು ಬರೆದುಕೊಂಡಿದ್ದಾರೆ. ನಿನ್ನ ತೋಳಿನಲ್ಲೇ ಈಗಷ್ಟೆ ಜೀವ ಬಿಟ್ಟೆ ಅನ್ನೋದು ಇದರ ಅರ್ಥ. ಅಂದರೆ ಜೀವನ ಪರ್ಯಂತ ಪತಿಯ ಜೊತೆಯೇ ಇರಬೇಕು ಹಾಗೂ ಅವರ ತೋಳುಗಳಲ್ಲೇ ಜೀವ ಬಿಡಬೇಕು ಅನ್ನೋ ಆಸೆ ವ್ಯಕ್ತಪಡಿಸಿದ್ದಾರೆ ಪ್ರಿಯಾಂಕಾ ಚೋಪ್ರಾ.
![]()
ನಿಕ್ ಜೋನಸ್ ಪೋಸ್ಟ್ಗೆ ಕಮೆಂಟ್ ಮಾಡಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ಅವರ ಈ ಕಮೆಂಟ್ ನೋಡಿದ ಅಭಿಮಾನಿಗಳಿಗೆ ಕೊಂಚ ನಿರಾಳವಾಗಿದೆ. ಎಲ್ಲಿ ತಮ್ಮ ನೆಚ್ಚಿನ ನಟಿಯ ವೈವಾಹಿಕ ಜೀವನ ಹೀಗೆ ಅಂತ್ಯವಾಗುತ್ತೋ ಅನ್ನೋ ಆತಂಕದಲ್ಲಿದ್ದರು. ಆದರೆ ಪ್ರಿಯಾಂಕಾ ಅವರ ಕಮೆಂಟ್ ಅವರ ಫ್ಯಾನ್ಸ್ಗಳಿಗೆ ಕೊಂಚ ನೆಮ್ಮದಿ ಕೊಟ್ಟಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಇವರನ್ನೇ ವಿಚ್ಛೇದನದ ಬಗ್ಗೆ ಪ್ರಶ್ನಿಸುತ್ತಿದ್ದಾರೆ.
ನೆಟ್ಟಿಗರು ಹಾಗೂ ಅಭಿಮಾನಿಗಳು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ. ಈ ವದಂತಿ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಅವರು ಪ್ರತಿಕ್ರಿಯಿಸಿ ಇಬ್ಬರ ಮಧ್ಯೆ ಬಿರುಕು ಉಂಟಾಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ: 2 ಕೋಟಿ ಮೌಲ್ಯದ ನಿಶ್ಚಿತಾರ್ಥದ ಉಂಗುರ ಅಂದ್ರೆ Priyanka Chopra Jonasಗೆ ತುಂಬಾ ಇಷ್ಟ ಏಕೆ ಗೊತ್ತಾ..?
ಪ್ರಿಯಾಂಕಾ ಚೋಪ್ರಾ ಅವರು ಪ್ರೀತಿಸಿದ ಪಾಪ್ ಸ್ಟಾರ್ ನಿಕ್ ಜೋನಾಸ್ ಅವರನ್ನು 2018 ಡಿಸೆಂಬರ್ 1ರಂದು ವಿವಾಹವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಪ್ರಿಯಾಂಕಾ ಅಮೆರಿಕಾದಲ್ಲಿ ನೆಲಸಿದ್ದಾರೆ. ನಿಕ್ ಅವರು ನಿಶ್ಚಿತಾರ್ಥಕ್ಕಾಗಿ ಸುಮಾರು 2 ಕೋಟಿ ಮೌಲ್ಯದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರು.
ಇತ್ತೀಚೆಗಷ್ಟೆ ಹೊಸ ಮನೆಯನ್ನು ಖರೀದಿಸಿ. ಅಲ್ಲಿ ಪ್ರಿಯಾಂಕಾ ದೀಪಾವಳಿಯನ್ನು ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಪತಿಯ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಈ ಬಾರಿಯ ದೀಪಾವಳಿ ತುಂಬಾ ಸ್ಪೆಷಲ್ ಎನ್ನುವ ಸಂದೇಶವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಇನ್ನು ನಿಕ್ ಕೂಡ ಭಾರತೀಯ ಸಂಪ್ರದಾಯಗಳು ಮತ್ತು ಹಬ್ಬಗಳನ್ನು ಪರಿಚಯಿಸಿದ್ದಕ್ಕಾಗಿ ಪ್ರಿಯಾಂಕಾ ಅವರಿಗೆ ಧನ್ಯವಾದ ಅರ್ಪಿಸಿದ್ದರು. ಇದಲ್ಲದೇ ನ್ಯೂಯಾರ್ಕ್ನಲ್ಲಿ ರೆಸ್ಟೋರೆಂಟ್ ಆರಂಭಿಸಿ. ಸೋನಾ ಎಂದು ಹೆಸರು ಇಟ್ಟಿದ್ದಾರೆ. ಇದು ಕೇವಲ ರೆಸ್ಟೋರೆಂಟ್ ಮಾತ್ರವಲ್ಲ, ನನ್ನ ಕನಸು ಕೂಡ ಎಂದಿದ್ದರು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ