ಬಾಲಿವುಡ್ನಲ್ಲಿ ಈಗಾಗಲೇ ಸಾಧನೆ ಮಾಡಿದ ಕ್ರೀಡಾಪಟುಗಳ ಜೀವನಾಧಾರಿತ ಸಿನಿಮಾಗಳು ತೆರೆಕಂಡಿವೆ. ಇನ್ನು ಕೆಲವರ ಸಿನಿಮಾಗಳು ಆರಂಭಿಕ ಹಂತದಲ್ಲಿವೆ. ಹೀಗಿರುವಾಗಲೇ ಟಾಲಿವುಡ್ನಲ್ಲಿ ಕರಣಂ ಮಲ್ಲೇಶ್ವರಿ ಅವರ ಬಯೋಪಿಕ್ ಸಿದ್ಧಗೊಳ್ಳುತ್ತಿದೆ.
ಕ್ರೀಡಾಪಟುಗಳಾದ ಸಚಿನ್, ಎಂ.ಎಸ್. ಧೋನಿ ಅವರ ಜೀವನಾಧಾರಿತ ಸಿನಿಮಾಗಳು ಈಗಾಗಲೇ ಬಿ-ಟೌನ್ನಲ್ಲಿ ತೆರೆಕಂಡಿವೆ. ಕಪಿಲ್ ದೇವ್ ಅವರ ಬಯೋಪಿಕ್ '83' ತೆರೆ ಕಾಣುವ ಹಂತದಲ್ಲಿದೆ. ಇನ್ನು ವಿರಾಟ್ ಕೊಹ್ಲಿ ಅವರ ಜೀವನಾಧಾರಿತ ಸಿನಿಮಾ ಬರಲಿದೆಯಂತೆ. ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ಅವರ ಬಯೋಪಿಕ್ ಸಹ ಸಿದ್ಧವಾಗುತ್ತಿದ್ದು 'ಶಹಬ್ಬಾಸ್ ಮಿಥು' ಎಂಬ ಟೈಟಲ್ ನೀಡಲಾಗಿದೆ. ಇದರಲ್ಲಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ.
![Priyanka Chopra may act in Karnam Malleshwari Biopic]()
ಕರಣಂ ಮಲ್ಲೇಶ್ವರಿ ಅವರ ಬಯೋಪಿಕ್ ಪೋಸ್ಟರ್
ಈಗ ಟಾಲಿವುಡ್ನಲ್ಲಿ ಕರಣಂ ಮಲ್ಲೇಶ್ವರಿ ಅವರ ಬಯೋಪಿಕ್ ನಿರ್ಮಾಣವಾಗುತ್ತಿದ್ದು, ಇದು ಸಹ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿದ್ಧಗೊಳ್ಳಲಿದೆ ಎಂದು ನಿರ್ಮಾಪಕರಾದ ಎವಿವಿ ಸತ್ಯನಾರಾಯಣ ಹಾಗೂ ಕೋನಾ ವೆಂಕಟೇಶ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜೂನ್ 1ರಂದು ಕರಣಂ ಮಲ್ಲೇಶ್ವರಿ ಅವರ ಹುಟ್ಟುಹಬ್ಬದಂದು ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಈಗ ನಾಯಕಿಯ ಹುಡುಕಾಟದಲ್ಲಿದೆಯಂತೆ.
ಇದನ್ನೂ ಓದಿ: ಯೂಟ್ಯೂಬ್ನಲ್ಲಿ ರಿಲೀಸ್ ಆಯ್ತು ವಿದ್ಯಾ ಬಾಲನ್ ನಿರ್ಮಿಸಿ ನಟಿಸಿರುವ ಕಿರುಚಿತ್ರ..!
ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣಕ್ಕೆ ನಾಯಕಿ ಪಾತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಮೇರಿ ಕೋಮ್ ಅವರ ಪಾತ್ರಕ್ಕೆ ಜೀವ ತುಂಬಿದ್ದ ಪ್ರಿಯಾಂಕಾ ಕರಣಂ ಮಲ್ಲೇಶ್ವರಿ ಬಯೊಪಿಕ್ಗೆ ಸರಿಯಾದ ಆಯ್ಕೆ ಎಂದೂ ಹೇಳಲಾಗುತ್ತಿದೆಯಂತೆ.
![Priyanka Chopra may act in Karnam Malleshwari Biopic]()
ಕರಣಂ ಮಲ್ಲೇಶ್ವರಿ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ
ಈಗಾಗಲೇ ಈ ಪಾತ್ರಕ್ಕಾಗಿ ಚಿತ್ರತಂಡ ಕಂಗನಾ ಅವರನ್ನು ಸಂಪರ್ಕಿಸಿದ್ದು, ಅವರು ಒಲ್ಲೆ ಎಂದಿದ್ದಾರಂತೆ. 'ಪಂಗಾ' ಸಿನಿಮಾಗಾಗಿ ಬೆವರಿಳಿಸಿದ್ದ ಕಂಗನಾ ಈಗ ಮತ್ತೆ ವರ್ಕೌಟ್ ಮಾಡಲಾಗುವುದಿಲ್ಲ ಎಂದು ನಿರಾಕರಿಸಿದ್ದಾರಂತೆ.
ಈಗಾಗಲೇ ಸಿನಿಮಾದ ನಿರ್ಮಾಪಕರು ಪ್ರಿಯಾಂಕಾ ಚೋಪ್ರಾ ಅವರನ್ನು ಭೇಟಿ ಮಾಡಿ ಕತೆ ಹೇಳಿದ್ದಾರಂತೆ. ಆದರೆ ಇನ್ನೂ ಪಿಗ್ಗಿ ಕಡೆಯಿಂದ ಉತ್ತರ ಸಿಕ್ಕಲ್ಲವಂತೆ. ಇನ್ನು ಸಂಜನಾ ರೆಡ್ಡಿ ನಿರ್ದೇಶನ ಮಾಡಲಿರುವ ಈ ಚಿತ್ರದ ಸ್ಕ್ರಿಪ್ಟ್ ಕೆಲಸ ಮುಗಿದಿದೆಯಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ