ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ (Priyanka Chopra) ಇಂದು ವಿಶ್ವ ಕಂಡ ಅತ್ಯಂತ ಖ್ಯಾತನಟಿಯಾಗಿ ಹೆಸರು ಮಾಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಗಾಢ್ ಫಾದರ್ ಇಲ್ಲದೆಯೇ ಹೆಜ್ಜೆ ಹಾಕಿದ ಈ ನಟಿ ಇಂದು ವಿಶ್ವದ ಮೂಲೆ ಮೂಲೆಗಳಲ್ಲೂ ಹೆಸರುವಾಸಿಯಾಗಿದ್ದಾರೆ. ಎಬಿಸಿಯ ಪ್ರಮುಖ ಅಮೇರಿಕನ್ ಥ್ರಿಲ್ಲರ್ ಸರಣಿ "ಕ್ವಾಂಟಿಕೋ" ನಿಂದ ಆರಂಭಿಸಿ ಪ್ರೈಮ್ ವಿಡಿಯೋದ (Prime Video) ಜಾಗತಿಕ ಸ್ಪೈ ಥ್ರಿಲ್ಲರ್ ಸರಣಿ "ಸಿಟಾಡೆಲ್" ನಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿರುವ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ, ಹಾಲಿವುಡ್‌ನಲ್ಲಿ ಅದ್ಭುತ ಯಶಸ್ಸನ್ನು ಕಂಡಿದ್ದಾರೆ. ಆಕೆಯ ಅಂತಾರಾಷ್ಟ್ರೀಯ ಯಶಸ್ಸಿಗೆ ಆಕೆಯ ಮ್ಯಾನೇಜರ್ (Manager) ಅಂಜುಲಾ ಆಚಾರ್ಯ ಕಾರಣ ಎಂದರೆ ನೀವು ಹುಬ್ಬೇರಿಸುವುದು ಖಂಡಿತ.
ಹಾಲಿವುಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಮಹೋನ್ನತ ಯಶಸ್ಸಿನ ಹಿಂದಿರುವ ವ್ಯಕ್ತಿ ಅವರ ಮ್ಯಾನೇಜರ್ ಆಗಿರುವ ಅಂಜುಲಾ ಆಚಾರ್ಯ. ಈಕೆ ಯಾರು? ಪ್ರಿಯಾಂಕಾ ಯಶಸ್ಸಿಗೂ ಇವರಿಗೂ ಏನು ನಂಟು? ಹೀಗೆ ನೀವು ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.
1. ಸೆಲೆಬ್ರಿಟಿ ಮ್ಯಾನೇಜರ್ ಆಗಿ ಅಂಜುಲಾ ಆಚಾರ್ಯ
ದಕ್ಷಿಣ ಏಷ್ಯಾದವರನ್ನು ಪ್ರಮುಖ ಗುರಿಯಾಗಿಸಿಕೊಂಡು ಮನರಂಜನಾ ಕಂಟೆಂಟ್ ನಿರ್ಮಾಣ ಮಾಡುವ ಹಾಗೂ ವಿತರಿಸುವ ಬಹು-ಮಾಧ್ಯಮ ಕಂಪನಿ ದೇಸಿ ಹಿಟ್ಸ್‌ನ ಸಹ-ಸಂಸ್ಥಾಪಕರಾಗಿರುವ ಅಂಜುಲಾ ಆಚಾರ್ಯ,ಲೇಡಿ ಗಾಗಾ ಮತ್ತು ಬ್ರಿಟ್ನಿ ಸ್ಪಿಯರ್ಸ್ ಅವರಂತಹ ಕಲಾವಿದರನ್ನು ಉದಯೋನ್ಮುಖ ಜಾಗತಿಕ ಮಾರುಕಟ್ಟೆಗಳಿಗೆ, ವಿಶೇಷವಾಗಿ ಭಾರತಕ್ಕೆ ಪರಿಚಯಿಸಿದವರು ಅಂತೆಯೇ ಪ್ರಿಯಾಂಕಾ ಚೋಪ್ರಾಗೆ ಹಾಲಿವುಡ್ ಆಫರ್ ಕೊಡಿಸಿದ ವಿಶೇಷ ವ್ಯಕ್ತಿ ಎಂದೆನ್ನಿಸಿದ್ದಾರೆ. ಒಂದು ರೀತಿಯಲ್ಲಿ ನೋಡುವುದಾದರೆ ಹಾಲಿವುಡ್‌ನಲ್ಲಿ ಪ್ರಿಯಾಂಕ ಅವರ ಸಿನಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡಿದ ವ್ಯಕ್ತಿಯಾಗಿದ್ದಾರೆ.ಕಳೆದ ಹಲವು ವರ್ಷಗಳಿಂದ ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯರನ್ನು ಇಂಡಸ್ಟ್ರಿಗೆ ಪರಿಚಿಸಿದ ಕೀರ್ತಿ ಅಂಜುಲಾ ಆಚಾರ್ಯಗೆ ಸಲ್ಲುತ್ತದೆ .
2. ಪ್ರಿಯಾಂಕಾ ಬೇಡ ಆಕೆ ಉತ್ತಮ ನಟಿಯಲ್ಲ ಎಂಬ ಟೀಕೆಗಳ ಹೊರತಾಗಿಯೂ ಅಂಜುಲಾ ಆಕೆಯನ್ನೇ ಏಕೆ ಆಯ್ಕೆಮಾಡಿಕೊಂಡರು
ನಾನು ಹಾಗೂ ನನ್ನ ಸಂಗಾತಿ ಜಿಮ್ಮಿ ಲೊವೈನ್ ಮೇಲೆ ವಿಶ್ವಾಸವಿರಿಸಲು ನಾನು ಪ್ರಿಯಾಂಕಾರಲ್ಲಿ ಕೇಳಿಕೊಂಡೆ, ಆಕೆಗೆ ಮಾತ್ರವೇ ಇದನ್ನು ಮಾಡಲು ಸಾಧ್ಯ ಎಂದು ನನ್ನ ಒಳಮನಸ್ಸು ಹೇಳುತ್ತಿತ್ತು ಎಂದು ಅಂಜುಲಾ ತಿಳಿಸಿದ್ದಾರೆ. ನಾನು ಹೆಚ್ಚಿನ ಬಾರಿ ನನ್ನ ಮನಸ್ಸು ಏನು ಹೇಳುತ್ತದೆಯೋ ಅದನ್ನೇ ಕೇಳುತ್ತೇನೆ ಹಾಗೂ ಅನುಸರಿಸುತ್ತೇನೆ. ನನ್ನ ಸಂಗಾತಿ ಎಮಿನಮ್‌ಗೆ ಸಹಿಮಾಡುವಾಗಲೂ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದೆ ಎಂಬ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು ಹಾಗಾಗಿ ಇದು ನನಗೆ ಸಾಕಷ್ಟು ಸ್ಥೈರ್ಯ ಹಾಗೂ ಬೆಂಬಲವನ್ನು ನೀಡಿತು ಎಂದು ಅಂಜುಲಾ ತಿಳಿಸಿದ್ದಾರೆ.
3. ಬಾಲಿವುಡ್‌ನ ಅನೇಕರು ಪ್ರಿಯಾಂಕಾರನ್ನು ಅಂಜುಲಾ ಆಯ್ಕೆಮಾಡಿಕೊಂಡಿದ್ದು ಸಮಯ ವ್ಯರ್ಥ ಎಂದೇ ಉಲ್ಲೇಖಿಸಿದ್ದರು
2021 ರಲ್ಲಿ ಫೋರ್ಬ್ಸ್‌ನೊಂದಿಗೆ ಅನಿಸಿಕೆ ವ್ಯಕ್ತಪಡಿಸಿದ್ದ ಅಂಜುಲಾ, ಪ್ರಿಯಾಂಕಾ ಬಗ್ಗೆ ಹಾಗೂ ಅವರ ಅಭಿನಯದ ಕುರಿತು ತುಂಬಾ ನಕಾರಾತ್ಮಕ ಅನಿಸಿಕೆಗಳನ್ನು ನೀಡಿದ್ದ ಉದ್ಯಮದ ಕೆಲವು ಪ್ರಮುಖರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಅವರು ಪ್ರಿಯಾಂಕಾ ಕುರಿತು ಇಲ್ಲಸಲ್ಲದ ಆಪಾದನೆಗಳನ್ನು ಈ ಪ್ರಮುಖರು ಹೊರಿಸಿದ್ದನ್ನು ತಿಳಿಸಿದ್ದ ಅಂಜುಲಾ ಪ್ರಿಯಾಂಕಾ ಸರಿಯಾದ ಆಯ್ಕೆಯಲ್ಲ ಅವರು ಉತ್ತಮವಾಗಿ ಕೆಲಸ ಮಾಡುವುದಿಲ್ಲ ಎಂದೇ ತಿಳಿಸಿದ್ದರು ಎಂದು ಹೇಳುತ್ತಾರೆ. ನೀವು ನಿಮ್ಮ ಸಮಯವನ್ನು ಸುಮ್ಮನೆ ವ್ಯರ್ಥ ಮಾಡುತ್ತಿದ್ದೀರಿ ಎಂಬ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಅದು ನಿಜವಾಗಿಯೂ ನೋವು ಉಂಟುಮಾಡಿತ್ತು ಎಂಬುದು ಅಂಜುಲಾ ಮಾತಾಗಿದೆ.
ನಾನು ನನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದೇನೆಯೇ? ಹಾಗೂ ಇದು ಹುಚ್ಚು ಕನಸು ಎಂದು ತೋರುತ್ತದೆ? ಎಂಬ ಹಲವು ಪ್ರಶ್ನೆಗಳು ನನ್ನನ್ನು ಕಾಡಲು ಶುರಮಾಡಿದವು ಆದರೆ ನಾನು ಪ್ರಿಯಾಂಕಾ ಅವರ ಕಣ್ಣುಗಳನ್ನು ನೋಡಿದಾಗ ಅದಕ್ಕೆಲ್ಲಾ ಉತ್ತರ ಸಿಕ್ಕಿತ್ತು ಎಂದು ತಮ್ಮ ಅನುಭವವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
4. ಪ್ರಿಯಾಂಕಾ ಚೋಪ್ರಾ ಅವರ ಇತ್ತೀಚಿನ ರೆವೆಲೆಶನ್ಸ್ ಅನ್ನು ಅಂಜುಲಾ ಆಚಾರ್ಯ ಬೆಂಬಲಿಸಿದ್ದಾರೆ
ಇತ್ತೀಚೆಗಿನ ಪಾಡ್‌ಕಾಸ್ಟ್‌ನಲ್ಲಿ, ಪ್ರಿಯಾಂಕಾ ತನ್ನನ್ನು ಮೂಲೆಗುಂಪು ಮಾಡುತ್ತಿರುವ ವಿಷಯವನ್ನು ಮತ್ತು ಬಾಲಿವುಡ್‌ನ ಜನರೊಂದಿಗೆ 'ಗೋಮಾಂಸ' ಸೇವಿಸಿರುವ ಆಪಾದನೆ ಮಾಡಿರುವುದಾಗಿ ಹಂಚಿಕೊಂಡಿದ್ದರು. ಯುಎಸ್‌ನಲ್ಲಿ ಸಂಗೀತ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಆಸಕ್ತಿ ಇದೆಯೇ ಎಂದು ಅಂಜುಲಾ ಅವರು ಪ್ರಿಯಾಂಕಾರನ್ನು ಕೇಳಿದಾಗ, ನಾನು ಅಲ್ಲಿ ನನ್ನ ಸಿನಿ ಜೀವನವನ್ನು ಆರಂಭಿಸಲು ನಿರ್ಧರಿಸಿರುವೆ ಎಂದು ಅಂಜುಲಾಗೆ ತಿಳಿಸಿದೆ ಎಂದು ಹೇಳಿಕೊಂಡಿದ್ದಾರೆ.
ಈ ಸಂದರ್ಶನ ವೈರಲ್ ಆದ ಸಮಯದಲ್ಲಿ, ಟೀಕೆ ಟಿಪ್ಪಣಿ ಮಾಡುವವರು ಬರೇ ಬಾಯಲ್ಲಿ ಮಾತ್ರ ಶಬ್ಧ ಹೊರಡಿಸುತ್ತಾರೆ!ಅದರಲ್ಲಿ ಬೇಕಾದ್ದನ್ನು ಮಾತ್ರವೇ ಆರಿಸಿಕೊಳ್ಳಬೇಕು ಪ್ರಿಯಾಂಕಾ ಒಬ್ಬ ಅದ್ಭುತ ನಟಿ ಆಕೆಯಿಂದ ಏನೂ ಸಾಧನೆಗೈಯ್ಯಲು ಸಾಧ್ಯವಿಲ್ಲ ಎಂಬ ಮಾತನ್ನು ನಾವು ಸುಳ್ಳು ಮಾಡಿದ್ದೇವೆ. ಆಕೆಯನ್ನು ನಾನು ಮೊದಲ ಬಾರಿಗೆ ಟಿವಿಯಲ್ಲಿ ವೀಕ್ಷಿಸಿದಾಗಲೇ ಆಕೆ ಜಾಗತಿಕ ಸ್ಟಾರ್ ಆಗುತ್ತಾಳೆ ಎಂಬುದು ನನಗರಿವಾಗಿತ್ತು ಎಂದು ಅಂಜುಲಾ ಟ್ವೀಟ್ ಮಾಡಿದ್ದಾರೆ.
5. ಏಂಜೆಲ್ ಹೂಡಿಕೆದಾರರಾಗಿ ಅಂಜುಲಾ ಆಚಾರ್ಯ
ಮಹಿಳೆಯರೇ ಪ್ರಧಾನವಾಗಿ ಹೂಡಿಕೆ ಮಾಡಿರುವ ಬಿಲಿಯನ್ ಡಾಲರ್ ಉದ್ಯಮಗಳಾದ ಬಂಬಲ್, ಕ್ಲಾಸ್‌ಪಾಸ್ ಹಾಗೂ ಯಾಮಿಯಂತಹ ಸಂಸ್ಥೆಗಳನ್ನೊಳಗೊಂಡ A-ಸರಣಿ ಹೂಡಿಕೆಗಳನ್ನು ಹೊಂದಿದ್ದಾರೆ. ಬಜ್‌ಫೀಡ್, ಹೂಕ್ಡ್, ಬುಲೆಟ್‌ಪ್ರೂಫ್ ಕಾಫಿ ಹಾಗೂ ಗೋಬಲ್‌ನಂತಹ ಹೆಚ್ಚಿನ ಕಂಪನಿಗಳೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಎಲ್ಲೆ ಮ್ಯಾಗಜೀನ್‌ನ ಪವರ್ ವುಮೆನ್ ಇನ್ ಟೆಕ್ ಮತ್ತು ಅಡ್‌ವೀಕ್‌ನ ಡಿಸ್ಟ್ರಪ್ಟರ್ ಲಿಸ್ಟ್‌ನಲ್ಲಿ ಉತ್ಸಾಹಿ ಉದ್ಯಮಿ ಹಾಗೂ ಪಾಪ್ ಸಂಸ್ಕೃತಿಯ ಆರಾಧಕಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ