ಬಾಲಿವುಡ್ ಹಾಗೂ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ತಮ್ಮ ಸಿನಿಮಾ ಸಿಟೆಡಾಲ್ನ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಹಲವಾರು ಕಾರಣಗಳಿಂದಾಗಿ ನಟಿ ಸುದ್ದಿ ಮಾಡುತ್ತಲೇ ಇದ್ದಾರೆ. ಇದೀಗ ನಟಿಯ ತಾಯಿ ಮಧು ಚೋಪ್ರಾ ಅವರು ಮಗಳ ಸಿನಿಮಾ ಕೆರಿಯರ್ ಬಗ್ಗೆ ಹಾಗೂ ಮಗಳು ಕಳೆದುಕೊಂಡ ಸಿನಿಮಾ ಅವಕಾಶಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ತಮಿಳು ಸಿನಿಮಾ ತಮಿಳನ್ (2002)ರ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟರು. 2000ದಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ನಂತರ ಪ್ರಿಯಾಂಕ ಸಿನಿಮಾ ಅವಕಾಶವನ್ನು ಪಡೆದರು. ಬಾಲಿವುಡ್ನಲ್ಲಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ಎಂಬ ಸಿನಿಮಾದ (2003) ಮೂಲಕ ಸಿನಿಮಾ ಜರ್ನಿಯನ್ನು ಶುರು ಮಾಡಿದರು.
ನಾನು ಅವಳೊಂದಿಗೆ ಎಲ್ಲಾ ಕಡೆಗಳಿಗೂ ಹೋಗುತ್ತಿದ್ದೆ. ಮೀಟಿಂಗ್, ನರೇಷನ್ ಎಲ್ಲವನ್ನೂ ಅಟೆಂಡ್ ಮಾಡುತ್ತಿದ್ದೆ. ಒಂದು ದಿನ ಇಬ್ಬರೂ ನಿರ್ಧಾರ ಮಾಡಿ ಇಂದು ಯಾವುದೇ ಮೀಟಿಂಗ್ನಲ್ಲಿ ಭಾಗವಹಿಸುವುದಿಲ್ಲ. ಎಲ್ಲಿಗೂ ಹೋಗುವುದಿಲ್ಲ ಎಂಬ ತೀರ್ಮಾನ ಮಾಡಿದ್ದೆವು. ಪ್ರಿಯಾಂಕಾ ಈ ತೀರ್ಮಾನಕ್ಕೆ ಬದ್ಧಳಾಗಿ ನಿಂತಿದ್ದಳು. ಅವಳು ಅವಳಿಗೆ ಕಂಫರ್ಟಬಲ್ ಅಲ್ಲ ಅನಿಸುವುದನ್ನು ಯಾವುದನ್ನೂ ಮಾಡುತ್ತಿರಲಿಲ್ಲ. ಹಾಗಾಗಿ ಹಲವಾರು ಸಿನಿಮಾ ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತು ಎಂದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಸಿನಿಮಾ ಮಾಡುತ್ತಲೆ ಯಾವಾಗಲೂ ಅಗತ್ಯಬಿದ್ದರೆ ಬೇರೆ ಉದ್ಯೋಗ, ಕೆರಿಯರ್ನಲ್ಲಿ ತೊಡಗಿಸಿಕೊಳ್ಳಲು ರೆಡಿಯಾಗಿದ್ದಳು ಎನ್ನುವುದನ್ನು ಅವರ ತಾಯಿ ಮಧು ಚೋಪ್ರಾ ಇಯತ್ತೀಚೆಗೆ ರಿವೀಲ್ ಮಾಡಿದ್ದಾರೆ.
ಬಾಲಿವುಡ್ ತೊರೆದ ಬಗ್ಗೆ ಮಾತನಾಡಿದ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಸುದ್ದಿಯಾಗಿದ್ದರು. ನನ್ನನ್ನು ಸಿನಿಮಾದಲ್ಲಿ ಸೇರಿಸಲು ಇಷ್ಟಪಡದ ಜನರು ನನ್ನ ಸುತ್ತಮುತ್ತ ಇದ್ದರು. ಅಲ್ಲಿನ ರಾಜಕೀಯದಿಂದ ಬೇಸತ್ತಿದ್ದೆ. ಹಾಗಾಗಿ ನನಗೆ ಬ್ರೇಕ್ ಬೇಕಾಗಿತ್ತು ಎಂದಿದ್ದಾರೆ ನಟಿ.
ಪ್ರಿಯಾಂಕಾ ಚೋಪ್ರಾ ಕೊಟ್ಟ ಈ ಹೇಳಿಕೆ ವೈರಲ್ ಆಗಿತ್ತು. ನಟಿ ಕರಣ್ ಜೋಹರ್ ಅವರ ಹೆಸರು ಹೇಳದೆ ಅವರ ಬಗ್ಗೆಯೇ ಮಾತನಾಡಿದ್ದಾರೆ ಎನ್ನುವುದು ಕೂಡಾ ಎಲ್ಲರಿಗೂ ಗೊತ್ತಾಗಿದೆ.
ನಾನು ಸಾತ್ ಖೂನ್ ಮಾಫ್ ಸಿನಿಮಾ ಮಾಡುವಾಗ ದೇಸಿ ಹಿಟ್ಸ್ ಖ್ಯಾತಿಯ ಅಂಜುಲಾ ಆಚಾರಿಯಾ ಅವರು ನನಗೆ ಮ್ಯೂಸಿಕ್ ಆಲ್ಬಂ ಮಾಡುವ ಆಸಕ್ತಿ ಇದೆಯಾ ಎಂದು ಕೇಳಿದರು. ಅಮೆರಿಕಾದಲ್ಲಿ ಮ್ಯೂಸಿಕ್ ಕೆರಿಯರ್ ಆರಂಭಿಸುತ್ತೀಯಾ ಎಂದಿದ್ದರು. ಈ ಮ್ಯೂಸಿಕ್ ವಿಚಾರ ನನ್ನನ್ನು ಜಗತ್ತಿನ ಇನ್ನೊಂದು ಭಾಗಕ್ಕೆ ಪರಿಚಯಿಸಿತು ಎಂದಿದ್ದಾರೆ.
ಬಾಲಿವುಡ್ನಲ್ಲಿ ಸ್ಕೈ ಈಸ್ ಪಿಂಕ್ ಸಿನಿಮಾ ಮಾಡಿದ ನಂತರ ಪ್ರಿಯಾಂಕಾ ಚೋಪ್ರಾ ಯಾವುದೇ ಮೂವಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಸಿಟೆಡಾಲ್ನಂತಹ ಫೇಮಸ್ ಪ್ರಾಜೆಕ್ಟ್ನಲ್ಲಿ ನಟಿಸಿದ್ದಾರೆ.
top videos
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ