ನ್ಯೂಯಾರ್ಕ್​ನಲ್ಲಿ ಭಾರತೀಯ ರೆಸ್ಟೊರೆಂಟ್​ ತೆರೆದ ಪ್ರಿಯಾಂಕಾ ಚೋಪ್ರಾ​: ಇದರ ವಿಶೇಷತೆಗಳೇನು ಗೊತ್ತಾ?

ನಟಿ, ನಿರ್ಮಾಪಕಿ, ಉದ್ಯಮಿ, ಬರಹಗಾರ್ತಿ, ಹೇರ್​ ಬ್ರ್ಯಾಂಡ್​ ಉದ್ಯಮಿ ಮತ್ತು ಈಗ ರೆಸ್ಟೊರೆಂಟ್​​ನ ಒಡತಿಯಾಗಿ ಪ್ರಿಯಾಂಕ ಚೋಪ್ರಾ ಸಾಕಷ್ಟು ಹಿರಿಮೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆಕೆ ಅದ್ಭುತ ಮಹಿಳೆಯಾಗಿದ್ದು, ಇನ್ನಿತರ ಮಹಿಳೆಯರಿಗೂ ಮಾದರಿಯಾಗಿದ್ದಾರೆ.

ಪ್ರಿಯಾಂಕಾ ಚೋಪ್ರಾ, ನಿಕ್​ಜೋನಾಸ್

ಪ್ರಿಯಾಂಕಾ ಚೋಪ್ರಾ, ನಿಕ್​ಜೋನಾಸ್

  • Share this:
ಪ್ರಿಯಾಂಕಾ ಚೋಪ್ರಾ ಅವರ ಭಾರತೀಯ ರೆಸ್ಟೋರೆಂಟ್​ ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಈವೆಂಟ್‌ ಮ್ಯಾನೇಜರ್‌ ಮತ್ತು ರೆಸ್ಟೋರೆಂಟ್ ಪರಿಣಿತ ಮನೀಷ್ ಗೋಯೆಲ್ ಮತ್ತು ಪ್ರಿಯಾಂಕಾ ಚೋಪ್ರಾ ಸಹಯೋಗದಲ್ಲಿ ನ್ಯೂಯಾರ್ಕ್​ನಲ್ಲಿ ಸೋನಾ ರೆಸ್ಟೋರೆಂಟ್ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

ನಟಿ, ನಿರ್ಮಾಪಕಿ, ಉದ್ಯಮಿ, ಬರಹಗಾರ್ತಿ, ಹೇರ್​ ಬ್ರ್ಯಾಂಡ್​ ಉದ್ಯಮಿ ಮತ್ತು ಈಗ ರೆಸ್ಟೊರೆಂಟ್​​ನ ಒಡತಿಯಾಗಿ ಪ್ರಿಯಾಂಕ ಚೋಪ್ರಾ ಸಾಕಷ್ಟು ಹಿರಿಮೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆಕೆ ಅದ್ಭುತ ಮಹಿಳೆಯಾಗಿದ್ದು, ಇನ್ನಿತರ ಮಹಿಳೆಯರಿಗೂ ಮಾದರಿಯಾಗಿದ್ದಾರೆ. 'ಇವತ್ತಿನ ಸವಾಲುಗಳು ನಮ್ಮ ಕನಸ್ಸುಗಳನ್ನು ತಲುಪಲು ನಮ್ಮ ತಡೆಯದಿರಲಿ' ಎನ್ನುವ ಮಾತನ್ನು ಪ್ರಿಯಾಂಕಾ ನಿಜ ಮಾಡಿದ್ದಾರೆ. ಸಿನಿಮಾಗಳಲ್ಲಿ ತಮ್ಮ ಅಭಿನಯದಿಂದ ಅಭಿಮಾನಿಗಳನ್ನು ರಂಜಿಸಿದ್ದಾರೆ. ಯಾವಾಗಲೂ ತಮ್ಮ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುವುದರಲ್ಲೇ ಬದುಕಿನ ಉತ್ಸಾಹ ಕಾಣುವವರು ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ. ಈಗ ಈ ಗ್ಲೋಬಲ್ ನಟಿ ಸೋನಾ ರೆಸ್ಟೊರೆಂಟ್​ ಮೂಲಕ ಆಹಾರ ಮತ್ತು ಆತಿಥ್ಯದ ಕ್ಷೇತ್ರದಲ್ಲಿ ತಮ್ಮ ರೆಕ್ಕೆಯನ್ನು ವಿಸ್ತರಿಸಿಕೊಂಡಿದ್ದಾರೆ.

ಸೋನಾ ಇದು ನ್ಯೂಯಾರ್ಕ್​​ನ ಫೈನ್ ಡೈನ್ ರೆಸ್ಟೋರೆಂಟ್​​. ಈ ಸ್ಥಳ ಭಾರತೀಯ ಆಹಾರ ಪ್ರಿಯರಿಗೆ ಮೆಚ್ಚಿನ ತಾಣವಾಗಿದೆ. ಸೋನಾ ರೆಸ್ಟೋರೆಂಟ್ ಓಪನಿಂಗ್​ನ ಕೆಲವು ಚಿತ್ರಗಳನ್ನು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಭಾರತೀಯ ಆಹಾರದ ಮೇಲಿನ ಅವರ ಸರಳ ಬಯಕೆಯೂ ಈಗ ಪ್ರೀತಿಯ ಕೆಲಸದ ಶ್ರಮವಾಗಿ ಬದಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಿಯಾಂಕಾ ಚೋಪ್ರಾ ಅವರ ಭಾರತೀಯ ರೆಸ್ಟೋರೆಂಟ್​ ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ರೆಸ್ಟೋರೆಂಟ್​ಗೆ ಮನೀಷ್ ಗೋಯೆಲ್ ಮತ್ತು ಪ್ರಿಯಾಂಕ ಚೋಪ್ರಾ ಸಹಯೋಗವಿದ್ದು, ಈ ಇಬ್ಬರು ಕುಟುಂಬದವರು ಮತ್ತು ಸ್ನೇಹಿತರು ಸೇರಿ ರೆಸ್ಟೋರೆಂಟ್​ನಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಮನೀಷ್​ ಅವರು ಪೂಜಾ ಸಮಾರಂಭದ ಕೆಲವು ಚಿತ್ರಗಳನ್ನು ಶೇರ್​ ಮಾಡಿದ್ದು, 2020 ರಲ್ಲೇ ರೆಸ್ಟೋರೆಂಟ್ ತೆರೆಯುವ ಪ್ಲಾನ್ ಇತ್ತು. ಆದರೆ ಕೋವಿಡ್ 19 ಪರಿಸ್ಥಿತಿಯಿಂದಾಗಿ ನಿಧಾನವಾಯ್ತು' ಎಂದು ತಿಳಿಸಿದ್ದಾರೆ. ಅಲ್ಲದೇ ಇಂತಹದೊಂದು ಮಹತ್ತರ ದಿನದ ಆರಂಭವಾಗಿದ್ದಕ್ಕೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ನೀವು ಸೋನಾ ರೆಸ್ಟೋರೆಂಟ್​ನ ಅಧಿಕೃತ ವೆಬ್​ಸೈಟ್​ಗೆ ತೆರಳಿದರೆ ರೆಸ್ಟೊರೆಂಟ್​ನ ಒಂದು ಝಲಕ್ ಕಾಣಿಸುತ್ತದೆ. ಮಾಡರ್ನ್​ ಮಿನಿಮಲಿಸ್ಟಿಕ್ ಲುಕ್ ನಿಂದ ನಿಮ್ಮನ್ನು ಬರಮಾಡಿಕೊಳ್ಳುತ್ತದೆ. ಆಕ್ಸೆಂಟ್​ ಲೈಟ್ಸ್​ ಅಂದರೆ ಸ್ಟಾಟ್​ಲೈಟ್​ ರೀತಿ ಕೆಲವು ವಸ್ತುಗಳ ಮೇಲೆ ಮಾತ್ರ ಬೆಳಕು ಚೆಲ್ಲುವಂತಹ ಲೈಟಿಂಗ್​ ವ್ಯವಸ್ಥೆ ಇದ್ದು ಬಹಳ ನಿರಾಳತೆಯನ್ನು ನೀಡುತ್ತದೆ. ಬ್ರೌನ್ ಮತ್ತು ಚಿನ್ನದ ಬಣ್ಣವನ್ನು ಸೋಫಾ ಕಲರ್​ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ ಪ್ರಿಯಾಂಕಾ. ಅಲ್ಲದೇ ಇಲ್ಲಿ ಬಾರ್​ ಕೂಡ ಇದ್ದು, ಖಾಸಗಿಯಾಗಿ ನೃತ್ಯ ಮಾಡಲು ಸ್ಥಳಾವಕಾಶವಿದೆ. 30 ಜನ ಅತಿಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

2019ರ ಕನಸ್ಸು 2021ರಲ್ಲಿ ನನಸ್ಸು


ಮನೀಷ್​​ ಸೋನಾ ರೆಸ್ಟೋರೆಂಟ್ ಬಗ್ಗೆ ಒಂದು ಭಾವನಾತ್ಮಕ ಬರಹವನ್ನು ಬರೆದಿದ್ದಾರೆ. ' ಈ ದಿನ ಬೆಳಗ್ಗೆ ನಾವು ಸೋನಾ ದಲ್ಲಿ ಸಣ್ಣ ಪೂಜಾ ಸಮಾರಂಭ ಏರ್ಪಡಿಸಿ ದೇವರ ಆಶೀರ್ವಾದವನ್ನು ಪಡೆದುಕೊಂಡೆವು. ನಾವು ನಮ್ಮ ಮೊದಲ ಅತಿಥಿಗಳನ್ನು ಬಹು ಬೇಗ ಬರಮಾಡಿಕೊಳ್ಳಲಿದ್ದೇವೆ. ಇದು ನನಗೂ ಮತ್ತು ಪ್ರಿಯಾಂಕ ಚೋಪ್ರಾರಿಗೂ ಬಹಳ ಮುಖ್ಯವಾಗಿದ್ದು, ನಾವು ನಮ್ಮ ಸೋನಾವನ್ನು ಅಧಿಕೃತವಾಗಿ ತೆರೆಯುವ ಮುನ್ನ ಒಂದು ಪೂಜೆಯನ್ನು ಇಟ್ಟುಕೊಂಡಿದ್ದೆವು. ಸೋನಾ ನ್ಯೂಯಾರ್ಕ್​ ರೆಸ್ಟೋರೆಂಟ್​​ ಭಾರತದಿಂದ ಲಂಡನ್​ ಮತ್ತು ಕ್ಯಾಲಿಫೋರ್ನಿಯಾವರೆಗೆ ಚಾಚಿಕೊಂಡಿರುವ ಸ್ನೇಹವರ್ಗ , ಪ್ರೋತ್ಸಾಹಕರ ವರ್ಗವನ್ನು ಒಳಗೊಂಡ ಸಣ್ಣ ಸಮಾರಂಭವಾಗಿತ್ತು' ಎಂದು ಬರೆದುಕೊಂಡಿದ್ದಾರೆ.

'ಇವತ್ತು ಬೆಳಗ್ಗೆ ಮಾಡಿದ್ದ ಪೂಜೆಯು ಬಹಳ ಮುಖ್ಯವಾಗಿತ್ತು. ನಾವು ಸೆಪ್ಟೆಂಬರ್ 2019 ರಿಂದ ರೆಸ್ಟೊರೆಂಟ್​ ಕಟ್ಟುವುದಕ್ಕಿಂತಲೂ ಮುಂಚಿನಿಂದಲೂ ಈ ಖಾಲಿ ಸ್ಥಳದಲ್ಲಿ ಪೂಜೆಯನ್ನು ಮಾಡುತ್ತಲೇ ಬಂದಿದ್ದೆವೆ. ಆಗ ನಾವು 2020 ರ ಬೇಸಿಗೆಯಲ್ಲಿ ರೆಸ್ಟೊರೆಂಟ್ ಆರಂಭಿಸಲು ಯೋಚಿಸಿದ್ದೆವು. ಆದರೆ 2020 ನಮಗಾಗಿ ಏನೆಲ್ಲಾ ಕಾದಿರಿಸಿತ್ತು ಅನ್ನೋದು ಆ ನಂತರ ತಿಳಿಯಿತು. ನಾವು ಒಂದೂವರೆ ವರ್ಷಗಳ ಹಿಂದೆ ಪೂಜೆ ಮಾಡಿ ಪಡೆದ ಆಶೀರ್ವಾದ ಈಗ ನಿಜವಾಗುತ್ತಿದ್ದು, ಸೋನಾ ಸಿದ್ಧವಾಗಿರುವುದು ಬಹಳ ಸಂತಸವನ್ನು ತಂದಿದೆ. ಇದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ' ಎಂದಿದ್ದಾರೆ.

ಖಾಸಗಿ ಡೈನಿಂಗ್​​ ಸ್ಥಳಕ್ಕೆ 'ಮಿಮಿ' ಎಂದು ಹೆಸರಿಟ್ಟಿದ್ದಾರೆ

ಇನ್ನೂ ಪ್ರಿಯಾಂಕಾ ಖಾಸಗಿ ಡೈನಿಂಗ್ ಸ್ಥಳವನ್ನು ಪರಿಚಯಿಸಿದ್ದು, ಅದಕ್ಕೆ 'ಮಿಮಿ' ಎಂದು ಹೆಸರಿಟ್ಟಿದ್ದಾರೆ. ಇದು ಪ್ರಿಯಾಂಕಾ ಅವರ ಅಡ್ಡ ಹೆಸರು ಕೂಡ. ಈ ರೆಸ್ಟೋರೆಂಟ್ ಸುಂದರ್​ ಲ್ಯಾಂಡ್​​ನೊಂದಿಗೆ ಪಾಲುದಾರಿಕೆ ಹೊಂದಿದ್ದು, ಭಾರತೀಯ ಕಲೆಯನ್ನು ಪ್ರದರ್ಶಿಸುವ ಆಶಯವನ್ನು ಹೊಂದಿದೆ. ಇದರಲ್ಲಿ ಆಧುನಿಕ ಮತ್ತು ಸಮಕಾಲೀನ ಕಲಾವಿದರ ಕೈ ಚಳಕ ಕಾಣಬಹುದು.

ಮುಂಬೈನ ಆರ್ಟ್​ ಡೆಕೋ ಪೀರಿಯಡ್ ಶೇಡ್ಸ್​

ಇನ್ನು, ಆರ್ಕಿಟೆಕ್ಚುರಲ್​ ಡೈಜೆಸ್ಟ್​ನ ಪ್ರಕಾರ ​ ಮೆಲಿಸ್ಸಾ ಬ್ರೌಸರ್​​ ಅವರು ವಿನ್ಯಾಸಗೊಳಿಸಿದ ರೆಸ್ಟೊರೆಂಟ್​ನ ಈ ಡೆಕೊರೇಷನ್ 1930ರ ದಶಕದ ಮುಂಬೈನ ಆರ್ಟ್​ ಡೆಕೋ ಪೀರಿಯಡ್​ ಅನ್ನು ನೆನಪಿಸುವಂತಿದೆ. ಅಲ್ಲದೇ ಸಮಕಾಲೀನ ಮತ್ತು ಆಧುನಿಕ ಕಲಾವಿದರು ಸೇರಿದಂತೆ ಪ್ರಸಿದ್ಧ ಭಾರತೀಯ ಕಲಾವಿದರ ಭವ್ಯವಾದ ಕಲಾಕೃತಿಗಳನ್ನು ರೆಸ್ಟೊರೆಂಟ್​ನ ಗೋಡೆಗಳ ಮೇಲೆ ಇರಿಸಲಾಗಿದೆ. ರಾಜನ್​ ಕೃಷ್ಣ ಅವರ ತಾಳೆ ಮರದ ಚಿತ್ರಕಲೆ, ರಘು ರೈ ಅವರ ಫೋಟೋಗಳು, ಜಗದೀಶ್ ಸ್ವಾಮಿನಾಥನ್ ಅವರ ಜಿಯೋಮಿಟ್ರಿಕ್ ಕ್ಯಾನ್ವಸ್ ಎಲ್ಲರ ಗಮನ ಸೆಳೆಯುತ್ತದೆ. ಅಲ್ಲದೇ ಈ ಆರ್ಟ್ ವರ್ಕ್​ಗಳನ್ನು ಕೊಳ್ಳಲೂಬಹುದು.

ಇನ್ನೂ ಪ್ರಿಯಾಂಕಾ ಚೋಪ್ರಾ ಇನ್​ಸ್ಟಾ ಗ್ರಾಂನಲ್ಲಿ ಕೆಲವು ಆಹಾರ ಪದಾರ್ಥಗಳ ಪೋಸ್ಟ್​ ಅನ್ನು ಶೇರ್​ ಮಾಡಿದ್ದು, ಬಾಣಸಿಗರಾದ ಹರಿನಾಯಕ್ ಅವರು ಸಿದ್ಧಪಡಿಸಿದ ಕೆಲವು ದೇಸಿ ಸಿಹಿ ಪದಾರ್ಥಗಳ ಚಿತ್ರಗಳು ಬಾಯಲ್ಲಿ ನೀರೂರಿಸುತ್ತವೆ. ಅಷ್ಟೇ ಅಲ್ಲದೇ 'ನಾವು ನಿಮಗಾಗಿ ಕಾಯುತ್ತಿದ್ದೇವೆ' ಎನ್ನುತ್ತಾ ದೋಸೆ, ಇನ್ನಿತರ ಸ್ನ್ಯಾಕ್ಸ್‌​ಗಳ ಫೋಟೋ ಪೋಸ್ಟ್​ ಮಾಡಿದ್ದಾರೆ . ಅಲ್ಲದೇ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
'ತಾನು ರೆಸ್ಟೋರೆಂಟ್​ನ ಗ್ರ್ಯಾಂಡ್​ ಓಪನಿಂಗ್​ ದಿನದಂದು ಅಲ್ಲಿರಲೂ ಸಾಧ್ಯವಾಗಲಿಲ್ಲ, ಆದರೆ ನನ್ನ ಮನಸ್ಸು ಅಲ್ಲಿದೆ' ಎಂದು ಸ್ಪೆಷಲ್ ನೋಟ್ ಬರೆದಿದ್ದಾರೆ. ಸದ್ಯ ಪ್ರಿಯಾಂಕಾ ಲಂಡನ್​ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಕೆಲವು ದಿನಗಳಿಂದ ಯುಕೆಯಲ್ಲಿಯೇ ನೆಲೆನಿಂತಿದ್ದಾರೆ.

ರೆಸ್ಟೋರೆಂಟ್​ ವಿಡಿಯೋಗೆ ಅಭಿಮಾನಿಗಳ ಪ್ರಶಂಸೆ

ಸೋನಾ ನ್ಯೂಯಾರ್ಕ್ ರೆಸ್ಟೋರೆಂಟ್​ ​ ಇನ್​ಸ್ಟಾಗ್ರಾಂ ಅಧಿಕೃತ ಪೇಜ್​ನಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದೆ. ಈ ಟೈಂ ಲ್ಯಾಪ್ಸ್​ ವೀಡಿಯೋದಲ್ಲಿ ರೆಸ್ಟೊರೆಂಟ್​ನ ಚಿತ್ರಣವಿದೆ. ಅಲ್ಲದೇ ಈ ರೆಸ್ಟೊರೆಂಟ್​ಗೆ ಸೋನಾ ಎನ್ನುವ ಹೆಸರಿಟ್ಟಿದ್ದು ಪ್ರಿಯಾಂಕಾ ಚೋಪ್ರ ಅವರ ಪತಿ ನಿಕ್​ ಜೋನಾಸ್​.

ಸೋನಾ ಎಂದು ಹೆಸರಿಸಿಟ್ಟಿದ್ದು ಪ್ರಿಯಾಂಕಾ ಪತಿ ನಿಕ್​ ಜೋನಾಸ್

ಒಂದು ದಿನ ಮನೀಷ್ ಗೋಯೆಲ್ ಅವರ ಅಪಾರ್ಟ್​ಮೆಂಟ್​ನಲ್ಲಿ ಟೇಸ್ಟಿಂಗ್ ಸೆಷನ್ ನಡೆಯುತ್ತಿತ್ತು. ಈ ಸಮಯದಲ್ಲಿ ನಿಕ್​ ಜೋನಾಸ್ ಮತ್ತು ಅವರ ಸಹೋದರರೆಲ್ಲರೂ ಒಟ್ಟಾಗಿ ಸೇರಿದ್ದರು. ಈ ಸಂದರ್ಭದಲ್ಲಿ ನಿಕ್ ಜೋನಾಸ್ ರೆಸ್ಟೊರೆಂಟ್​ಗೆ ಸೋನಾ ಎಂದು ಹೆಸರಿಟ್ಟರೆ ಹೇಗೆ? ಎಂದು ಕೇಳಿದ್ದಾರೆ. ಆಗ ಅಲ್ಲಿದ್ದವರೆಲ್ಲಾ ಆಶ್ಚರ್ಯದಿಂದ ಅವರನ್ನು ನೋಡಿ, ನಿಮಗೆ ಈ ಪದ ತಿಳಿದಿದ್ದಾದ್ರೂ ಹೇಗೆ? ಎಂದು ಕೇಳಿದ್ದಾರೆ. ಆಗ ಜೋನಾಸ್ ತನ್ನ ಮದುವೆಯಲ್ಲಿ ಈ ಪದವನ್ನು ಕೇಳಿದ್ದಾಗಿ ಹೇಳಿದ್ದಾರೆ. ಅಲ್ಲದೇ ಇನ್ನಷ್ಟು ಭಾರತೀಯ ಪದಗಳನ್ನು ತಮ್ಮ ಮದುವೆ ಸಮಯದಲ್ಲಿ ಕಲಿತುಕೊಂಡಿದ್ದಾರಂತೆ ಜೋನಾಸ್. ಆ ಪ್ರಕಾರ ಸೋನಾ ಎಂದರೆ ಚಿನ್ನ ಎನ್ನುವ ಅರ್ಥವಿರುವ ಕಾರಣ ಈ ಹೆಸರನ್ನು ಇರಿಸಲಾಗಿದೆ ಎಂದು ಪ್ರಿಯಾಂಕಾ ಇನ್​ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಮೀನಾಕ್ಷಿ ಗೋಯೆಲ್, ಡೇವಿಡ್​ರಾಬಿನ್ ಹರಿನಾಯಕ್ ಮತ್ತು ಮ್ಯಾಬ್​ ಮುಂತಾದವರು ಸೋನಾ ಟೀಂನಲ್ಲಿದ್ದಾರೆ.

ಸೋನಾ ರೆಸ್ಟೋರೆಂಟ್​ ಹುಟ್ಟಿದ ರೋಚಕ ಕಥೆ!

ಮನೀಷ್​ ಗೋಯೆಲ್ ಅವರು ಈವೆಂಟ್​ ಮ್ಯಾನೆಜ್ಮೆಂಟ್​ನಲ್ಲಿದ್ದು, ಪ್ರಿಯಾಂಕಾ ಚೋಪ್ರಾ ಅವರ ಕ್ವಾಂಟಿಕೋ ಶೋ ಸಮಯದಲ್ಲಿ ಇಬ್ಬರಿಗೂ ಸ್ನೇಹ ಶುರುವಾಗಿದೆ. ಕ್ವಾಂಟಿಕೋ ಶೂಟಿಂಗ್​ ಸಮಯದಲ್ಲಿ ಪ್ರಿಯಾಂಕ ಚೋಪ್ರಾ ಅವರು ಭಾರತೀಯ ಆಹಾರಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಸಾಕಷ್ಟು ಹೊಟೇಲ್​ಗಳನ್ನು ಹುಡುಕಿಕೊಂಡು ಸಹ ಹೋಗಿದ್ದಾರೆ. ಆದರೆ ಎಲ್ಲೂ ಸಹ ಭಾರತೀಯ ಆಹಾರದ ಸರಿಯಾದ ರುಚಿ ಸಿಕ್ಕಿರಲಿಲ್ಲವೆಂದು ಮನೀಷ್​ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದನ್ನೆಲ್ಲಾ ಗಮನಿಸಿದ ಮನೀಷ್ ನ್ಯೂಯಾರ್ಕ್​ನಲ್ಲಿ ಇಂಡಿಯನ್ ರೆಸ್ಟೊರೆಂಟ್ ತೆರೆಯುವ ಮನಸ್ಸು ಮಾಡಿದ್ದಾರೆ. ಇದನ್ನು ಪ್ರಿಯಾಂಕಾ ಅವರ ಮುಂದೆ ಇಟ್ಟು ರೆಸ್ಟೋರೆಂಟ್ ಪಾರ್ಟ್‌ನರ್‌​ ಆಗುವಂತೆ ಕೇಳಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಸೋನಾ ಆರಂಭವಾಗಿದೆ.

ಬಾಣಸಿಗ ಹರಿನಾಯಕ್​ ಸಾರಥ್ಯದ ಕಿಚನ್

ಇನ್ನು ಹರಿನಾಯಕ್​ ಅವರ ಸಾರಥ್ಯದಲ್ಲಿ ಅಡುಗೆ ಮನೆಯಲ್ಲಿ ಖಾದ್ಯಗಳು ತಯಾರಾಗುತ್ತದೆ. ಹರಿನಾಯಕ್ ಬೆಂಗಳೂರಿನ ಆಲ್​ಕೆಮಿ, ಬ್ಯಾಂಕಾಕ್​ನ ಜೆಎಚ್​ಓಎಲ್​, ಕ್ಯೂಲಿನರಿ ಕೆಫೆ ಸ್ಪೇಸ್​ನಲ್ಲಿ ತಮ್ಮ ಕೈಚಳಕ ಮೆರೆದಿದ್ದಾರೆ. ಮುಂಬೈ ಸ್ಟ್ರೀಟ್​ ಫುಡ್​ ಮತ್ತು ಗೋವಾದ ಆಹಾರಗಳ ರುಚಿ ಈ ರೆಸ್ಟೋರೆಂಟ್​ನಲ್ಲಿದೆ. ದಹಿ ಕಚೋರಿ, ಕೋಫ್ತಾ ಕುರ್ಮಾ, ಕ್ರ್ಯಾಬ್​ ಪೂರಿ, ಬೆಳ್ಳುಳ್ಳಿ ಮತ್ತು ಬೆಣ್ಣೆಯಿಂದ ತಯಾರಿಸುವ ಕ್ರ್ಯಾಬ್​ ಪೂರಿ ಮುಂಬೈ ಶೈಲಿಯ ಖಾದ್ಯ, ಇದು ಪ್ರಿಯಾಂಕಾ ಅವರ ಫೇವರಿಟ್ ಕೂಡ. ಇನ್ನೂ ಗೋಲ್ಗಪ್ಪಾ ವಿತ್​ ಶಾಟ್ಸ್​ ಇದು ಪ್ರಿಯಾಂಕ ಅವರದ್ದೇ ಕಲ್ಪನೆಯಾಗಿದೆ. ಇನ್ನೂ ನಿಕ್ ಜೋನಾಸ್​ ಅವರಿಗೆ ಕ್ಯಾರೆಟ್​ ಹಲ್ವಾ ಬಹು ಪ್ರಿಯವಾಗಿದೆ ಎಂದು ಹರಿನಾಯಕ್ ಅವರು ಹೇಳಿದ್ದಾರೆ.

ಶೆಫ್​ ನೆನಪಿನಲ್ಲಿ ತಯಾರಾಗುವ ಗೋವಾ ಫಿಶ್​ ಕರ್ರಿಗೆ ಭಾವುಕರಾಗಿದ್ದ ನಿಕ್ ಜೊನಾಸ್
ಬಕ್​ವೀಟ್​ ಬೇಲ್​, ಜೇನಿನ ಬುಟ್ಟಿ ನೆನಪಿಸುವಂತಹ ಪಾಪಡ್​ನ ಕಾಂಬಿನೇಷನ್​ ನಿಕ್ ಅವರ ಪ್ರಿಯವಾದ ತಿನಿಸು. ಫ್ಲಾಯ್ಡ್​ ಗೋವಾ ಫಿಶ್​ ಕರ್ರಿ ವಿಶೇಷವಾಗಿದ್ದು. ಇದು ನಿಕ್​ ಜೋನಾಸ್​ ಅವರ ಸ್ನೇಹಿತ ಮತ್ತು ಮೆಂಟರ್ ಶೆಫ್ ಫ್ಲಾಯ್ಡ್ ಕಾರ್ಡೋಜ್ ಅವರ ನೆನಪಿನಲ್ಲಿ ತಯಾರಿಸಲಾಗಿದ್ದ ಖಾದ್ಯವಾಗಿದೆ. ಫ್ಲಾಯ್ಡ್​ ಅವರು ಸಾಂಕ್ರಾಮಿಕ ಸಮಯದಲ್ಲಿ ತೀರಿಕೊಂಡಿದ್ದರು. ಆದ್ದರಿಂದ ಈ ಕರ್ರಿ ಬಗ್ಗೆ ಜೋನಾಸ್​ ಭಾವುಕರಾಗುತ್ತಾರೆ. ಇನ್ನು ಮಂಗಳವಾರ, ಗುರುವಾರ ಮತ್ತು ಶನಿವಾರ ಡಿನ್ನರ್ ಸರ್ವ್​ ಮಾಡಲಾಗುತ್ತದೆ ಎಂದು ವೆಬ್​ಸೈಟ್​ನಲ್ಲಿ ತಿಳಿಸಿದೆ. ಅಲ್ಲದೇ ನ್ಯೂಯಾರ್ಕ್​ ಸಿಟಿ ಮತ್ತು ನ್ಯೂಯಾರ್ಕ್​​ ಸ್ಟೇಟ್​ ತಿಳಿಸಿರುವಂತೆ ಕೋವಿಡ್​ನ ಎಲ್ಲಾ ಗೈಡ್​ಲೈನ್ಸ್ ಫಾಲೋ ಮಾಡಲಾಗುತ್ತಿದೆ ಎಂದು ಪ್ರಿಯಾಂಕಾ ಚೋಪ್ರಾ ತಿಳಿಸಿದ್ದಾರೆ.

ಟೆಕ್ಸಾಸ್​ನಲ್ಲಿ ಮೊದಲ ಭಾರತೀಯ ರೆಸ್ಟೊರೆಂಟ್ ಆರಂಭಿಸಿದ ಮನೀಷ್ ತಂದೆ

ಪಂಜಾಬ್​ನಿಂದ ಬಂದು 1970 ರಲ್ಲಿ ಟೆಕ್ಸಾಸ್​​​ನಲ್ಲಿ ಮೊದಲ ಭಾರತೀಯ ರೆಸ್ಟೋರೆಂಟ್​ ತೆರೆದ ಗೋಯೆಲ್ ಅವರ ತಂದೆಯ ನೆನಪಿನಲ್ಲಿ ಬಟರ್​ ಚಿಕನ್ ಮಾಡಲಾಗಿತ್ತು. ಅಲ್ಲದೇ ಗೋಯೆಲ್ ಅವರು ಇಂಡಿಯನ್ ಹೌಸ್ ಎನ್ನುವ ರೆಸ್ಟೋರೆಂಟ್​ನಲ್ಲೇ ಬೆಳೆದರು. ಈಗ ಸಂಪೂರ್ಣ ಹೊಟೆಲ್ ಉದ್ಯಮಕ್ಕೆ ಸೇರಿದವರಾಗಿದ್ದಾರೆ ಎಂದು ತಮ್ಮ ಕಥೆಯನ್ನು ಸಹ ತೆರೆದಿಟ್ಟಿದ್ದಾರೆ.
Published by:Harshith AS
First published: