ಗೂಗಲ್ನಲ್ಲಿ ಹೆಚ್ಚು ಸರ್ಜ್ ಆದ ನಟಿಮಣಿಯರು; ಯಾರಿಗೆ ನಂ.1 ಸ್ಥಾನ?
ಸರ್ಚ್ ಇಂಜಿನ್ ದೈತ್ಯ ಗೂಗಲ್ನಲ್ಲಿ ಈ ಬಾರಿ ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಹೆಸರನ್ನು ಹೊರಬಿದ್ದಿದೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರಿಗಿಂತ ಈ ಬಾರಿ ನಟಿಮಣಿಯರ ಹೆಸರು ಹೆಚ್ಚು ಸರ್ಜ್ ಆಗಿದೆ.
news18-kannada Updated:May 9, 2020, 5:25 PM IST

.
- News18 Kannada
- Last Updated: May 9, 2020, 5:25 PM IST
ಸರ್ಚ್ ಇಂಜಿನ್ ದೈತ್ಯ ಗೂಗಲ್ನಲ್ಲಿ ಈ ಬಾರಿ ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಹೆಸರನ್ನು ಹೊರಬಿದ್ದಿದೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರಿಗಿಂತ ಈ ಬಾರಿ ನಟಿಮಣಿಯರ ಹೆಸರು ಹೆಚ್ಚು ಸರ್ಜ್ ಆಗಿದೆ.
ಗ್ಲೋಬಲ್ ಡಾಟಾ ವಿಶ್ಲೇಷನಾ ಸಂಸ್ಥೆ (ಎಸ್ಇಎಂ ಸ್ಟಡಿ ) ಭಾರತದಲ್ಲಿ ಗೂಗಲ್ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಗಳ ಹೆಸರನ್ನು ತೆರೆದಿಟ್ಟಿದೆ. ಇದರ ಪ್ರಕಾರ ಈ ಬಾರಿ ಅತಿ ಹೆಚ್ ಸರ್ಚ್ ಆಗಿರುವ ಸೆಲೆಬ್ರಿಟಿಗಳ ಪೈಕಿ ಪ್ರಿಯಾಂಕಾ ಚೋಪ್ರಾ ನಂಬರ್ 1 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿ ಸನ್ನಿ ಲಿಯೋನ್ ಇದ್ದಾರೆ. ಕಳೆದ ವರ್ಷ ನಂಬರ್ 1 ಸ್ಥಾನದಲ್ಲಿ ನಟಿ ಸನ್ನಿಲಿಯೋನ್ ಅವರ ಹೆಸರು ಕಾಣಿಸಿಕೊಂಡಿತ್ತು. ಈ ಬಾರಿ ಮಾತ್ರ ಪ್ರಿಯಾಂಕಾ ಅವರನ್ನು ಜನರು ಹೆಚ್ಚು ಸರ್ಚ್ ಮಾಡಿದ್ದಾರೆ ಎನ್ನಲಾಗಿದೆ. ಮಾತ್ರವಲ್ಲದೆ ಅತಿ ಹೆಚ್ಚು ಸರ್ಚ್ ಆಗುತ್ತಿರುವ ವಿರಾರ್ಟ್ ಕೊಹ್ಲಿ ಮತ್ತು ಸಲ್ಮಾನ್ ಖಾನ್ ಅವರನ್ನು ಹಿಂದಿಕ್ಕಿ ಪ್ರಿಯಾಂಕಾ ನಂಬರ್ 1 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುದರ ಜೊತೆಗೆ ಹಾಲಿವುಡ್ನತ್ತ ಕೂಡ ಮುಖ ಮಾಡಿದ್ದರು. ಇದರ ಜೊತೆಗೆ ಕಳೆದ ವರ್ಷ ನಿಕ್ ಅವರನ್ನು ಮದುವೆ ಆಗಿದ್ದಾರೆ. ಹಾಗಾಗಿ ಗೂಗಲ್ನಲ್ಲಿ ಇವರ ಹೆಸರು ಹೆಚ್ಚು ಸರ್ಚ್ ಆಗಿದೆ. ಈ ವರ್ಷ ಸುಮಾರು 39 ಲಕ್ಷ ಬಾರಿ ಗೂಗಲ್ನಲ್ಲಿ ಪ್ರಿಯಾಂಕಾ ಅವರ ಹೆಸರು ಸರ್ಚ್ ಆಗಿದೆ ಎಂದು ತಿಳಿದು ಬಂದಿದೆ.
ಇನ್ನು ಯುವಕರ ಹಾಟ್ ಫೇವರೇಟ್ ನಟಿ ಸನ್ನಿ ಲಿಯೋನ್ ಅವರನ್ನು ಗೂಗಲ್ನಲ್ಲಿ 31 ಲಕ್ಷ ಬಾರಿ ಹುಡುಕಾಡಿದ್ದಾರೆ. ಅದರಂತೆ ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅವರನ್ನು 21 ಲಕ್ಷ ಬಾರಿ ಹುಡುಕಾಡಿದ್ದರೆ, ವಿರಾಟ್ ಕೊಹ್ಲಿ ಹೆಸರನ್ನು 20 ಲಕ್ಷ ಬಾರಿ ಸರ್ಚ್ ಮಾಡಲಾಗಿದೆ ಎಂದು ಎಸ್ಇಎಂ ಸ್ಟಡಿ ಹೇಳಿದೆ. ಇನ್ನು ರೋಹಿತ್ ಶರ್ಮಾ, ಅಲ್ಲು ಅರ್ಜುನ್, ಶಾರುಖ್ ಖಾನ್, ಟೈಗರ್ ಶ್ರಾಫ್, ವಿಜಯ್ ದೇವರಕೊಂಡ, ಧೋನಿ, ಮಹೇಶ್ ಬಾಬು ಕೂಡ ಗೂಗಲ್ನಲ್ಲಿ ಹೆಚ್ಚು ಸರ್ಚ್ ಆಗಿದ್ದಾರೆ.
ನಟಿಯರಲ್ಲಿ ಪ್ರಿಯಾಂಕ ಚೋಪ್ರಾ ಮತ್ತು ಸನ್ನಿ ಲಿಯೋನ್ ಅವರನ್ನು ಬಿಟ್ಟರೆ ಕತ್ರಿನಾ ಕೈಪ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ದಿಶಾ ಪಟಾಣಿ, ಸಾರಾ ಆಲಿ ಖಾನ್, ಕರೀನಾ ಕಪೂರ್, ಶ್ರದ್ಧಾ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅವರ ಹೆಸರು ಹೆಚ್ಚು ಸರ್ಚ್ ಆಗಿದೆ.
Sachin Tendulkar: ಬಡವರ ಪಾಲಿಗೆ ದೇವರಾದ ಸಚಿನ್ ತೆಂಡೂಲ್ಕರ್; 4,000 ದೀನ ದಲಿತ ಬಡವರಿಗೆ ಆರ್ಥಿಕ ಸಹಾಯ
ಗ್ಲೋಬಲ್ ಡಾಟಾ ವಿಶ್ಲೇಷನಾ ಸಂಸ್ಥೆ (ಎಸ್ಇಎಂ ಸ್ಟಡಿ ) ಭಾರತದಲ್ಲಿ ಗೂಗಲ್ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಗಳ ಹೆಸರನ್ನು ತೆರೆದಿಟ್ಟಿದೆ. ಇದರ ಪ್ರಕಾರ ಈ ಬಾರಿ ಅತಿ ಹೆಚ್ ಸರ್ಚ್ ಆಗಿರುವ ಸೆಲೆಬ್ರಿಟಿಗಳ ಪೈಕಿ ಪ್ರಿಯಾಂಕಾ ಚೋಪ್ರಾ ನಂಬರ್ 1 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿ ಸನ್ನಿ ಲಿಯೋನ್ ಇದ್ದಾರೆ.