ಅಬ್ಬಾ! ಒಂದು ಇನ್​ಸ್ಟಾಗ್ರಾಂ ಪೋಸ್ಟ್​ಗೆ Priyanka Chopra ತೆಗೆದುಕೊಳ್ಳುತ್ತಾರೆ ಕೋಟಿ ಕೋಟಿ ಹಣ!

Priyanka Chopra Jonas: ಬಾಲಿವುಡ್​ ಖ್ಯಾತ ನಟಿಯರಲ್ಲಿ Priyanka Chopra ಜೋನಸ್​ ಕೂಡ ಒಬ್ಬರು. ಇವರು ಸಿನಿಮಾದಲ್ಲಿ ಮಾತ್ರವಲ್ಲದೆ ಇನ್​ಸ್ಟಾಗ್ರಾಂ ಮೂಲಕವೂ ಸಂಪಾದನೆ ಮಾಡುತ್ತಾರೆ ಎಂಬುದು ಕೆಲವರಿಗೆ ಮಾತ್ರ ಗೊತ್ತು. ಆದರೆ ಅದರಲ್ಲೂ ಅವರು ಒಂದು ಪೋಸ್ಟ್​ಗೆ ಎಷ್ಟು ಸಂಪಾದಿಸುತ್ತಾರೆ ಎಂಬುದು ಹಲವರಿಗೆ ಗೊತ್ತಿಲ್ಲ. ಇದನ್ನು ತಿಳಿದರೆ ಅಚ್ಚರಿ ಆಗೋದರಲ್ಲಿ ನೋ ಡೌಟ್​​!.

ಯಾಂಕಾ ಚೋಪ್ರಾ

ಯಾಂಕಾ ಚೋಪ್ರಾ

 • Share this:
  ಇನ್​ಸ್ಟಾಗ್ರಾಂ ಬಹುಸಂಖ್ಯಾ ಬಳಕೆದಾರನ್ನು ಹೊಂದಿರುವ ಜನಪ್ರಿಯ ಮಾಧ್ಯಮ. ಇದರಲ್ಲಿ ಸಿನಿಮಾ ತಾರೆಯರು, ಕ್ರಿಕೆಟ್​, ಫುಟ್​ಬಾಲ್​ ತಾರೆಯರು,  ಬ್ಯುಸಿನೆಸ್​ ಮ್ಯಾನ್​ಗಳು ಹೀಗೆ ನಾನಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಇದ್ದಾರೆ. ಮಾತ್ರವಲ್ಲದೆ, ಇವೆರೆಲ್ಲರು ಇನ್​ಸ್ಟಾಗ್ರಾಂ ಮೂಲಕ ಸಂಪಾನೆ ಕೂಡ ಮಾಡುತ್ತಾರೆ. ಸದ್ಯ ಬಾಲಿವುಡ್​ ನಟಿ ನಟಿ  ಪ್ರಿಯಾಂಕಾ ಚೋಪ್ರಾ ಅವರು ಒಂದು ಐಜಿ ಫೋಸ್ಟ್​​ಗೆ ಎಷ್ಟು ಸಂಪಾದನೆ ಪಡೆಯುತ್ತಿದ್ದಾರೆ ಎಂಬ ಮಾಹಿತಿಯೊಂದು ರಟ್ಟಾಗಿದೆ.

  ಬಾಲಿವುಡ್​ ಖ್ಯಾತ ನಟಿಯರಲ್ಲಿ Priyanka Chopra ಜೋನಸ್​ ಕೂಡ ಒಬ್ಬರು. ಇವರು ಸಿನಿಮಾದಲ್ಲಿ ಮಾತ್ರವಲ್ಲದೆ ಇನ್​ಸ್ಟಾಗ್ರಾಂ ಮೂಲಕವೂ ಸಂಪಾದನೆ ಮಾಡುತ್ತಾರೆ ಎಂಬುದು ಕೆಲವರಿಗೆ ಮಾತ್ರ ಗೊತ್ತು. ಆದರೆ ಅದರಲ್ಲೂ ಅವರು ಒಂದು ಪೋಸ್ಟ್​ಗೆ ಎಷ್ಟು ಸಂಪಾದಿಸುತ್ತಾರೆ ಎಂಬುದು ಹಲವರಿಗೆ ಗೊತ್ತಿಲ್ಲ. ಇದನ್ನು ತಿಳಿದರೆ ಅಚ್ಚರಿ ಆಗೋದರಲ್ಲಿ ನೋ ಡೌಟ್​​!.

  2019ರಲ್ಲಿ ಸೋಷಿಯಲ್​ ಮೀಡಿಯಾ ಕಂಪನಿ ಹೋಪರ್​ ಹೆಚ್​ಕ್ಯೂ  ‘ಇನ್​ಸ್ಟಾಗ್ರಾಂನಲ್ಲಿ ಶ್ರೀಮಂತರ ಪಟ್ಟಿ’ಯನ್ನು ಪರಿಚಯಿಸಿತ್ತು. ಅದರಲ್ಲಿ ಪ್ರಿಯಾಂಕಾ ಅವರ ಹೆಸರು ಕೂಡ ಇದೆ. ಹಾಗಾಗಿ ಜನಪ್ರಿಯವಾದವರಿಗೆ ಇನ್​ಸ್ಟಾಗ್ರಾಂ ಉಚಿತ ಪೇಯ್ಡ್​ ಪೋಸ್ಟ್​ ನೀಡುತ್ತದೆ. ಮಾತ್ರವಲ್ಲದೆ, ಪ್ರಾಯೋಜಿತ ಪೋಸ್ಟ್​ ಅನ್ನು ಹಾಕಬಹುದಾಗಿದೆ.

  ಅದರಂತೆ ನಟಿ ಪ್ರಿಯಾಂಕಾ ಇನ್​ಸ್ಟಾಗ್ರಾಂನಲ್ಲಿ ಕೋಟಿ ಸಂಭಾವನೆ ದುಡಿಯುತ್ತಾರೆ. 2019ರ ಹೋಪರ್​​ ಹೆಚ್​ಕ್ಯೂ ಲೀಸ್ಟ್​ ತಿಳಿಸಿದಂತೆ ದೇಸಿ ಗರ್ಲ್ ಪಿಗ್ಗಿ ಒಂದು ಪೋಸ್ಟ್​ಗೆ ಬರೋಬ್ಬರಿ 1.80 ಕೋಟಿ ತೆಗೆದುಕೊಳ್ಳುತ್ತಾರಂತೆ. ಯಾಕೆಂದರೆ ಬಾಲಿವುಡ್​, ಹಾಲಿವುಡ್​ ಕ್ಷೇತ್ರದಲ್ಲಿ ಗುರುತಿಸುವ ಮೂಲಕ ಜಾಗತಿಕ ಐಕಾನ್​ ಆಗಿದ್ದಾರೆ. ಮಾತ್ರವಲ್ಲದೆ 63 ದಶಲಕ್ಷಕ್ಕೂ ಹೆಚ್ಚು ಫಾಲೊವರ್ಸ್​ ಹೊಂದಿದ್ದಾರೆ.

  ಇನ್ನು ವಿರಾಟ್ ಕೊಹ್ಲಿ, ಅಮಿತಾಭ್​ ಬಚ್ಚನ್​, ಶಾರುಖ್​ ಖಾನ್, ಅನುಷ್ಕಾ ಶರ್ಮಾ, ಆಲಿಯಾ ಭಟ್​ ಹೀಗೆ ನಾನಾ ತಾರೆಯರು ಕೂಡ ಇನ್​ಸ್ಟಾಗ್ರಾಂನಲ್ಲೂ ದುಡಿಯುತ್ತಾರೆ.
  Published by:Harshith AS
  First published: