Priyanka Chopra: ಪ್ರಿಯಾಂಕ, ನಿಕ್‌ ಮಗುವಿನ ಫೋಟೋ ವೈರಲ್​! ಇವ್ರದ್ದಲ್ಲಾ ಅಂದ್ರೆ ಮತ್ತಿನ್ಯಾರದ್ದು ಈ ಪಾಪು?

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಅವರ ಮಗಳು ದಕ್ಷಿಣ ಕ್ಯಾಲಿಫೋರ್ನಿಯಾ ಆಸ್ಪತ್ರೆಯಲ್ಲಿ 12 ವಾರಗಳ ಮುಂಚಿತವಾಗಿ ಜನಿಸಿದೆ ಎಂದು ವರದಿಯಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬಾಲಿವುಡ್ ಹಾಟ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ(Priyanka Chopra) ತಾಯಿಯಾಗಿದ್ದು, ಪ್ರಿಯಾಂಕಾ ಅವರ ಪತಿ ನಿಕ್​​ ಜೋನಾಸ್ (Nick Jonas) ಅವರು "ನಾವು ನಮ್ಮ ಮಗುವನ್ನು ಸ್ವಾಗತಿಸಿದ್ದೇವೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದು ಅಭಿಮಾನಿಗಳಿಗೆ ಸಂತೋಷದ ಜೊತೆಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದರೆ ತಪ್ಪಾಗುವುದಿಲ್ಲ. ಆದರೆ ವಾಸ್ತವಾಗಿ, ಸ್ವತಃ ಪ್ರಿಯಾಂಕಾ ಚೋಪ್ರಾ ತಮ್ಮ ಮಗುವಿಗೆ ಜನ್ಮ ನೀಡಲಿಲ್ಲ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್​​ ದಂಪತಿ ಬಾಡಿಗೆ ತಾಯಿಯ (Surrogate Mother) ಮೂಲಕ ತಮ್ಮ ಮಗುವನ್ನು ಪಡೆದಿದ್ದಾರೆ. ಇದರೊಂದಿಗೆ ಅವರು ಪೋಷಕರಾಗಿ ಬಡ್ತಿ ಪಡೆದಿದ್ದಾರೆ. 39 ವರ್ಷದ ನಟಿ ಪ್ರಿಯಾಂಕಾ ಮತ್ತು 29 ವರ್ಷದ ನಿಕ್ ಜನವರಿ 22 ರಂದು ಮಧ್ಯರಾತ್ರಿ ತಮ್ಮ ಇನ್‌ಸ್ಟಾಗ್ರಾಮ್ (Instagram) ಖಾತೆಯ ಪುಟದಲ್ಲಿ ಈ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದರು. ಇದೆಲ್ಲವೂ ನಿಮಗೆ ಈಗಾಗಲೇ ತಿಳಿದಿರುವ ಸುದ್ದಿಯೇ ಆಗಿದೆ ಅಲ್ಲವೇ? ಇವರಿಬ್ಬರ ದಂಪತಿಗಳ ಮಗುವನ್ನು ನೀವು ನೋಡಲು ತುಂಬಾನೇ ಕಾತುರರಾಗಿರುತ್ತೀರಿ.

ಗೌಪ್ಯತೆಗೆ ವಿನಂತಿ
ಬಾಡಿಗೆ ತಾಯಿಯ ಮೂಲಕ ಮಗುವನ್ನು ಸ್ವಾಗತಿಸಿದ್ದೇವೆ ಎಂದು ದೃಢೀಕರಿಸಲು ನಮಗೆ ತುಂಬಾ ಸಂತೋಷವಾಗಿದೆ" ಎಂದು ದಂಪತಿಗಳ ಜಂಟಿ ಹೇಳಿಕೆಯನ್ನು ನೀಡಿದ್ದರು. ಈ ವಿಶೇಷ ಸಮಯದಲ್ಲಿ ದಂಪತಿಗಳು ಮಾಧ್ಯಮದವರಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವಂತೆ ವಿನಂತಿಸಿದ್ದಾರೆ. "ನಾವು ನಮ್ಮ ಕುಟುಂಬದ ಮೇಲೆ ಗಮನ ಕೇಂದ್ರೀಕರಿಸುವುದರಿಂದ ಈ ವಿಶೇಷ ಸಮಯದಲ್ಲಿ ನಾವು ಗೌರವಯುತವಾಗಿ ಗೌಪ್ಯತೆಯನ್ನು ವಿನಂತಿಸುತ್ತಿದ್ದೇವೆ. ತುಂಬಾ ಧನ್ಯವಾದಗಳು," ಎಂದು ಅವರು ಬರೆದುಕೊಂಡಿದ್ದರು.

ಪ್ರಿಯಾಂಕಾ ಮತ್ತು ನಿಕ್ ತಮ್ಮ ಮಗುವಿನ ಲಿಂಗವನ್ನು ಬಹಿರಂಗಪಡಿಸದೇ ಇದ್ದರೂ, ಅಂತರರಾಷ್ಟ್ರೀಯ ಮನರಂಜನಾ ವೆಬ್‌ಸೈಟ್‌ಗಳಲ್ಲಿ ಅನೇಕ ವರದಿಗಳು ಇವರಿಬ್ಬರು ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ ಎಂದು ಸೂಚಿಸಿವೆ. ಜನವರಿ 22 ರಂದು ದಂಪತಿಗಳು ತಮ್ಮ ಮಗುವಿನ ಜನನವನ್ನು ಘೋಷಿಸಿದಾಗಿನಿಂದ, ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಏನನ್ನೂ ಹಂಚಿಕೊಂಡಿಲ್ಲ.

ಇದನ್ನೂ ಓದಿ: Priyanka Chopra: ಬದಲಾದ Surname ಕುರಿತ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟ ಪ್ರಿಯಾಂಕಾ ಚೋಪ್ರಾ

ಪೋಟೊ ವೈರಲ್
ಆದಾಗ್ಯೂ, ನಿಕ್ ಜೊನಾಸ್ ಮತ್ತು ಪ್ರಿಯಾಂಕಾ ಚೋಪ್ರಾ ಮಗುವನ್ನು ಹಿಡಿದಿರುವ ಒಂದೆರಡು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ, ಅದು ನಿಕ್ ಮತ್ತು ಪ್ರಿಯಾಂಕಾ ಅವರ ನವಜಾತ ಶಿಶುವೇ ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ.










View this post on Instagram






A post shared by Priyanka (@priyankachopra)






ಆದಾಗ್ಯೂ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ ನೀವು ನೋಡುತ್ತಿರುವ ಮಗು ಕೃಷ್ಣ ಸ್ಕೈ ಸರ್ಕಿಸಿಯನ್, ಅವರು ಪ್ರಿಯಾಂಕಾ ಅವರ ಸೋದರ ಸೊಸೆ. ಕೃಷ್ಣ ನಟಿ ಪ್ರಿಯಾಂಕಾ ಅವರ ಸೋದರ ಸಂಬಂಧಿ ದಿವ್ಯಾ ಜ್ಯೋತಿ ಅವರ ಮಗು. ಪ್ರಿಯಾಂಕಾ ಮಗುವನ್ನು ಹಿಡಿದಿರುವ ಮತ್ತೊಂದು ಫೋಟೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಮನರಂಜನಾ ಮಾಧ್ಯಮದ ವರದಿಯ ಪ್ರಕಾರ, ಇದು ನಿಕ್ ಮತ್ತು ಪ್ರಿಯಾಂಕಾ ಇಬ್ಬರ ವಿವಾಹದ ನಂತರ 2018 ರಲ್ಲಿ ತೆಗೆಸಿಕೊಂಡ ಫೋಟೋ ಇದಾಗಿದೆ ಎಂದು ಹೇಳಲಾಗುತ್ತಿದೆ.

ಮುಂಚಿತವಾಗಿ ಜನಿಸಿದ ಮಗು
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಅವರ ಮಗಳು ದಕ್ಷಿಣ ಕ್ಯಾಲಿಫೋರ್ನಿಯಾ ಆಸ್ಪತ್ರೆಯಲ್ಲಿ 12 ವಾರಗಳ ಮುಂಚಿತವಾಗಿ ಜನಿಸಿದೆ ಎಂದು ವರದಿಯಾಗಿದೆ. ಮಗು ದಂಪತಿಗಳೊಂದಿಗೆ ಆರೋಗ್ಯವಾಗಿ ಮನೆಗೆ ಮರಳುವವರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೇ ಇರಲಿದೆ ಎಂದು ಮೂಲಗಳು ಸುದ್ದಿ ಮಾಧ್ಯಮಕ್ಕೆ ಮಾಹಿತಿ ನೀಡಿವೆ.

ಇದನ್ನೂ ಓದಿ: Priyanka Chopra: ತಾಯಿಯಾದ ನಟಿ ಪ್ರಿಯಾಂಕಾ ಚೋಪ್ರಾ, ಅಭಿಮಾನಿಗಳಿಗೆ ಬಿಗ್​ ಸರ್ಪ್ರೈಸ್​

ದಂಪತಿಗಳು ಏಪ್ರಿಲ್‌ನಲ್ಲಿ ತಮ್ಮ ಮಗುವಿನ ಆಗಮನವನ್ನು ನಿರೀಕ್ಷಿಸುತ್ತಿದ್ದರು ಮತ್ತು ಪ್ರಿಯಾಂಕಾ ತಾಯ್ತನವನ್ನು ಸ್ವೀಕರಿಸಲು ತಮ್ಮ ಕೆಲಸದ ವೇಳಾಪಟ್ಟಿಯನ್ನು ಸಹ ತೆರವುಗೊಳಿಸಿದ್ದರು ಎಂದು ವರದಿಯಾಗಿದೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಡಿಸೆಂಬರ್ 1, 2018 ರಂದು ಜೋಧಪುರದ ಉಮೈದ್ ಭವನ್ ಅರಮನೆಯಲ್ಲಿ ಮದುವೆಯಾದರು. ದಂಪತಿಗಳು ತಮ್ಮ ಕುಟುಂಬಗಳ ಸಂಪ್ರದಾಯಗಳನ್ನು ಗೌರವಿಸಲು ಕ್ರಿಶ್ಚಿಯನ್ ಮತ್ತು ಹಿಂದೂ ಧರ್ಮದ ಪ್ರಕಾರ ಎರಡು ವಿಧಾನದಲ್ಲಿ ಮದುವೆ ಸಮಾರಂಭಗಳನ್ನು ಹಮ್ಮಿಕೊಂಡಿದ್ದರು.
Published by:vanithasanjevani vanithasanjevani
First published: